ಊರಿನಲ್ಲಿರುವ ಕಲ್ಲು ದೇವರಿಗೆಲ್ಲ ವಿಧವಿಧ ಸೀರೆ ಉಡಿಸುತ್ತಾ ಮಾಡುವೆ ನೀ ನಮನ!
ನಿನ್ನ ಮನೆಯಲ್ಲಿರುವ ನಿಜವಾದ ದೇವತೆಯ ಕಡೆ ನೀ ಹರಿಸಲಾರೆ ಕೊಂಚ ಗಮನ !
ಬೇಕಾದಷ್ಟು ಖರ್ಚು ಮಾಡಿ ದೇಗುಲದ ನಿರ್ಮಾಣಕ್ಕೆ ಮಿತಿಯಿಲ್ಲದೆ ಕೊಡುವೆ ಕೊಡುಗೆ!
ದೇವರಂಥ ತಂದೆತಾಯಿಗಳ ಮನೆಯೆನ್ನುವ ದೇವಾಲಯದಿಂದ ವೃದ್ಧಾಶ್ರಮಕ್ಕೆ ಅಟ್ಟಿ ಆಚರಿಸುವೆ ನೀ ಬೀಳ್ಕೂಡುಗೆ!
ನಿನಗೆ ಕೈತುತ್ತ ಹಾಕಿದ್ದರೂ ಅವರನುಸರಿಸಿ ಒಪ್ಪತ್ತು!
ತುತ್ತು ಕೊಟ್ಟ ಕೈಗಳಿಗೆ ನೀ ತರುವೆ ಆಪತ್ತು!
ನೀ ನೋವು ತಾಳಲಾಗದೆ ಚೂರು ಕಣ್ಣೀರಾಕಿದರೆ ಸಾಕು ಒಡೆದೇ ಹೋಗುತಿತ್ತು ಅವರ ಹೃದಯ!
ನೀ ಈಗ ಅವರಿಗೆ ಅಪಾರ ನೋವು ನೀಡುತ್ತಾ ಕಣ್ಣೀರಾಕಿಸಿ ಚೂರು-ಚೂರು ಮಾಡುತ್ತಿರುವೆಯಲ್ಲಾ ಅವರ ಮನಸೆಂಬ ಮನೆಯ?
ಬಡತನದ ಬೇಗೆಯಲ್ಲೂ ನಿನ್ನ ಹೊಟ್ಟೆ ತುಂಬಿಸಲು ಅವರು ಸುರಿಸಿದರು ಲೆಕ್ಕವಿಲ್ಲದಷ್ಟು ಬೆವರು!
ನೀ ಸುಖದ ಸುಪ್ಪತ್ತಿಗೆಯಲ್ಲಿರುವಾಗ ಅವರ ಹೊಟ್ಟೆ ತುಂಬಿಸಲು ಗೊಣಗಾಡುತ್ತ ಹಾಕಿಸುವೆಯಲ್ಲಾ ಅವರಿಗೆ ಕಣ್ಣೀರು!
ಮೆ(ಮ)ರೆಯದಿರು…
ನಿನಗೂ ಇಂತಹ ಸ್ಥಿತಿ ಬಂದೇ ಬರುವುದು!
ಯೌವ್ವನ ಚಿರಕಾಲ ಉಳಿಯದು.
ವೃದ್ಧಾಪ್ಯದಲಿ ನಿನ್ನ ತಪ್ಪು ಅರಿವಾಗಿ ಹಿಂದೆ ತಿರುಗಿ ನೋಡಿದರೆ ಕೇವಲ ನಿನ್ನ ತಂದೆತಾಯಿಯರ ಕಣ್ಣೀರೇ ನಿನಗೆ ಕಾಣುವುದು!
ಆದರೆ ಆ ಕಣ್ಣೀರಿನ ಧಾರೆಯ ನಡುವೆಯೂ ನಿನ್ನ ಬಗ್ಗೆ ಅವರಿಗಿದ್ದ ಅತೀವ ಪ್ರೀತಿ ಮಾತ್ರ ನಿನಗೆ ಗೋಚರಿಸುವುದು!
ಈಗಲಾದರೂ ನೀ ತಿದ್ದಿಕೊಂಡು ಬದಲಾದರೆ ವೃದ್ದಾಶ್ರಮಕ್ಕೆ ಹೋಗುವ ಮುಗ್ಧ ತಂದೆತಾಯಿಯಂದಿರ ಸಂಖ್ಯೆ ಕಡಿಮೆಯಾಗುವುದು!
ನಿನ್ನ ತಂದೆತಾಯಿಯ ಖುಷಿಯ ನಿಟ್ಟುಸಿರು ನಿನ್ನ ಮನೆಯಂಗಳವ ತಂಪಾಗಿಸುವುದು!
-ಅಕಾಂಕ್ಷಾ ಶೇಖರ್
Facebook ಕಾಮೆಂಟ್ಸ್