X

ಕುಲಭೂಷಣ್ ಜಾಧವ್’ಗೆ ಗಲ್ಲುಶಿಕ್ಷೆ – ತನ್ನ ನಿಜ ಬಣ್ಣವನ್ನು ಮತ್ತೊಮ್ಮೆ ತೋರಿಸುತ್ತಿರುವ ಪಾಕಿಸ್ತಾನ

ಪಾಕಿಸ್ತಾನ ತಾನೊಂದು ವಿಶ್ವಾಸಾರ್ಹ ಹಾಗೂ ಜವಾಬ್ದಾರಿಯುತ ದೇಶವಲ್ಲ ಎನ್ನುವುದನ್ನ ಮತ್ತೊಮ್ಮೆ ತೋರಿಸುತ್ತಿದೆ. ಭಾರತದೊಂದಿಗಿನ ತನ್ನ ಸಂಬಂಧವನ್ನು ಸರಿಪಡಿಸಿಕೊಳ್ಳುವ ಯಾವ ಇಚ್ಛೆಯೂ ಇಲ್ಲ ಎನ್ನುವುದನ್ನು ಮತ್ತೆ ಸಾರಿದಂತಿದೆ. ಪಾಕಿಸ್ತಾನದ ನ್ಯಾಯಂಗ ವ್ಯವಸ್ಥೆಯೇ ಅರ್ಥವಾಗುವುದಿಲ್ಲ. ಭಯೋತ್ಪಾದನೆಯ ಬೀಜವನ್ನು ಬಿತ್ತುತ್ತಿರುವ ಹಾಫಿಜ್ ಸೈಯೀದ್, ಮೌಲಾನ ಮಸೂದ್ ಅಜ಼ರ್, ಸೈಯ್ಯದ್ ಸಲಾಹುದೀನ್, ದಾವೂದ್ ಇಬ್ರಾಹಿಂ’ನಂತಹ ವ್ಯಕ್ತಿಗಳಿಗೆ ಆಶ್ರಯ ಕೊಟ್ಟು, ಪೋಷಣೆ ಮಾಡುವುದು, ಮಾಜಿ ನೌಕಾದಳ ಸೈನಿಕ ಕುಲಭೂಷಣ್ ಜಾಧವ್ ಅಂಥವರನ್ನು ಸೆರೆ ಹಿಡಿದು, ಹಿಂಸಿಸಿ, ಮರಣದಂಡನೆಯನ್ನು ಕೊಡುವುದು.!!

ಭಾರತ ಸರ್ಕಾರ ೧೩ ಬಾರಿ ಕನ್ಸ್ಯುಲಾರ್ ಆಕ್ಸೆಸ್’ಗಾಗಿ ಕೇಳಿಕೊಂಡರು ಕೂಡ ಒಪ್ಪದೆ, ಅಂತರಾಷ್ತ್ರೀಯ ಕಾನೂನುಗಳನ್ನೆಲ್ಲ ಉಲ್ಲಂಘಿಸಿ ಇಂತಹ ತೀರ್ಪನ್ನು ನೀಡಿದೆ. ಈ ತೀರ್ಪು ನೀಡಿದ್ದು ಫೀಲ್ಡ್ ಜನರಲ್ ಕೋರ್ಟ್ ಮಾರ್ಷಿಯಲ್ (FGCM), ಪಾಕಿಸ್ತಾನಿ ಆರ್ಮಿ ಆಕ್ಟ್ ಪ್ರಕಾರ.! ಸೈನ್ಯದಿಂದ ನಿವೃತ್ತಿ ಪಡೆದ ಕುಲಭೂಷಣ್ ತನ್ನ ಬ್ಯುಸಿನೆಸ್ ಕೆಲಸಗಳಿಗಾಗಿ ಇರಾನ್’ಗೆ ಹೋದಾಗ ಅಲ್ಲಿಂದ ಸೆರೆ ಹಿಡಿದು ತಂದಿದ್ದರೂ, ಕುಲಭೂಷಣ್ ಒಬ್ಬ ಬೇಹುಗಾರ, ಆತನನ್ನು ಬಲೂಚಿಸ್ತಾನ್’ನಲ್ಲಿ ಹಿಡಿಯಲಾಗಿದೆ ಎನ್ನುತ್ತಿದೆ ಪಾಕಿಸ್ತಾನ.!

ಈ ಕುರಿತು ಪ್ರತಿಕ್ರಿಯಿಸಿ, ಕುಲಭೂಷಣ್ ಜಾಧವ್’ರನ್ನು ‘ಭಾರತದ ಪುತ್ರ’ ಎಂದು ಕರೆದಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಈ ತೀರ್ಪನ್ನು ವಿರೋಧಿಸಿದ್ದಲ್ಲದೆ, ಇದನ್ನು ‘ಪೂರ್ವಯೋಚಿತ ಕೊಲೆ’ ಎಂದು ಪರಿಗಣಿಸಲಾಗುವುದು ಎಂದಿದ್ದಾರೆ. ಅಲ್ಲದೇ ಈ ನಡೆ ದ್ವಿಪಕ್ಷೀಯ ಒಪ್ಪಂದಗಳ ಮೇಲೆ ಪರಿಣಾಮ ಬೀರುವುದು ಎಂದು ಖಡಾಖಂಡಿತವಾಗಿ ಉತ್ತರಿಸಿದ್ದಾರೆ.

ವಿದೇಶಾಂಗ ಕಾರ್ಯದರ್ಶಿಯಾಗಿರುವ ಜೈಶಂಕರ್ ಅವರು ಪಾಕ್ ಹೈಕಮಿಷನರ್’ಗೆ ಹಸ್ತಾಂತರಿಸಿದ ನಡೆವಳಿ(Demarche)ಯಲ್ಲಿ ಈ ಅಂಶಗಳಿವೆ:

೧. ಭಾರತೀಯ ನಾಗರಿಕ, ಕುಲಭೂಷಣ್ ಜಾಧವ್’ಗೆ ಪಾಕಿಸ್ತಾನಿ ಮಿಲಿಟರಿ ಕೋರ್ಟ್ ಮಾರ್ಷಲ್’ನಿಂದ ಮರಣದಂಡನೆ ವಿಧಿಸಿದ ವಿಚಾರವನ್ನು ISPR ನ ಪ್ರೆಸ್ ರಿಲೀಸ್’ನಲ್ಲಿ ನೋಡಿದ್ದೇವೆ.

೨. ಕುಲಭೂಷಣ್ ಜಾಧವ್’ರನ್ನು ಕಳೆದ ವರ್ಷ ಇರಾನ್’ನಿಂದ ಅಪಹರಿಸಿದ್ದು,ಅವರು ಪಾಕಿಸ್ತಾನದಲ್ಲಿದ್ದರು ಎನ್ನುವುದನ್ನ ನಂಬಲರ್ಹ ರೀತಿಯಲ್ಲಿ ವಿವರಿಸಿಲ್ಲ.  ಅಂತರಾಷ್ಟ್ರೀಯ ಕಾನೂನಿನನ್ವಯ ಭಾರತ ಸರ್ಕಾರ, ಇಸ್ಲಾಮಬಾದ್’ನಲ್ಲಿರುವ ಹೈ ಕಮಿಷನ್ ಮೂಲಕ ಕನ್ಸ್ಯುಲಾರ್ ಆಕ್ಸೆಸ್’ಗಾಗಿ ಪ್ರಯತ್ನಿಸಿದೆ. ೨೫ ಮಾರ್ಚ್ ೨೦೧೬ರಿಂದ ೩೧ ಮಾರ್ಚ್ ೨೦೧೭ರ ತನಕ ೧೩ ಬಾರಿ ಕನ್ಸ್ಯುಲಾರ್ ಆಕ್ಸೆಸ್’ಗಾಗಿ ಪ್ರಯತ್ನಿಸಿದರೂ ಪಾಕಿಸ್ತಾನ ಅಧಿಕಾರಿಗಳು ಇದಕ್ಕೆ ಅನುಮತಿ ನೀಡಿಲಿಲ್ಲ.

೩. ಕುಲಭೂಷಣ್ ಜಾಧವ್ ವಿರುದ್ಧ ನಂಬಲರ್ಹ ಸಾಕ್ಷಿಗಳಿಲ್ಲದಿದ್ದರೂ ಇಂತಹ ತೀರ್ಪು ಬರುವಂತೆ ನಡೆದ ವಿಚಾರಣೆ ಒಂದು ಪ್ರಹಸನದಂತಿದೆ. ಜಾಧವ್’ರನ್ನು ಟ್ರಯಲ್’ಗೆ ಒಳಪಡಿಸಲಾಗುತ್ತಿದೆ ಎಂಬ ವಿಷಯವನ್ನು ನಮ್ಮ ಹೈ ಕಮಿಷನ್’ಗೆ ಸೂಚಿಸದೇ ಇದ್ದದ್ದು ಗಮನೀಯ.  ಹಿರಿಯ ಪಾಕಿಸ್ತಾನಿ ಮುಖಂಡರು ಕೂಡ ಅಗತ್ಯ ಸಾಕ್ಷಿ ಇರುವುದರ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ  ISPR ನ ಪ್ರೆಸ್ ರಿಲೀಸ್’ನಲ್ಲಿ ಹೇಳಿರುವಂತೆ ಶ್ರೀ ಜಾಧವ್ ಅವರಿಗೆ ಟ್ರಯಲ್’ನ ಸಮಯದಲ್ಲಿ ಡಿಫೆಂಡಿಂಗ್ ಆಫಿಸರ್’ನ್ನು  ನೀಡಲಾಗಿತ್ತು ಎನ್ನುವುದು ಖಂಡಿತವಾಗಿ ಅಸಂಬದ್ಧ.

೪. ಕಾನೂನು ಹಾಗೂ ನ್ಯಾಯಸಂಹಿತೆಯ ಮೂಲಭೂತ ರೂಢಿಗಳನ್ನು ಪರಿಗಣಿಸದೇ, ಭಾರತೀಯ ನಾಗರಿಕನ ವಿರುದ್ಧ ಈ ತೀರ್ಪನ್ನು ಜರುಗಿಸಿದ್ದೇ ಆದಲ್ಲಿ ಭಾರತ ಸರ್ಕಾರ ಹಾಗೂ ಭಾರತದ ಜನತೆ ಇದನ್ನು ’ಪೂರ್ವಯೋಚಿತ ಕೊಲೆ’ ಎಂದು ಪರಿಗಣಿಸುವುದು.

ಕುಲಭೂಷಣ್ ಜಾಧವ್ ೬೦ ದಿನಗಳೊಳಗಾಗಿ ಮತ್ತೆ ಮನವಿ ಸಲ್ಲಿಸಬಹುದು. ಆದರೆ ಪಾಕಿಸ್ತಾನದ ಟ್ರ್ಯಾಕ್ ರೆಕಾರ್ಡ್ ನೋಡಿದರೆ ಜಾಧವ್’ಗೆ ಪ್ರಾಮಾಣಿಕವಾದ ಟ್ರಯಲ್ ಸಿಗಬಹುದು ಎನ್ನುವುದು ಕೂಡ ಕಷ್ಟವೇ. ಮೋದಿ ಮತ್ತು ನವಾಜ್ ಷರೀಫ಼್ ನಡುವಿನ ಮಾತುಕತೆಯಿಂದ ಏನಾದರೂ ಸಾಧ್ಯವಾಗಬಹುದೇ ಎಂಬ ಕೆಲ ಊಹೆಗಳಿವೆ ಆದರೆ ಅಲ್ಲಿ  ನವಾಜ್ ಷರೀಫ಼್ ಮಾತು ನಡೆಯುವುದೇ ಎಂಬುದನ್ನ ಯೋಚಿಸಬೇಕಗುತ್ತದೆ?!!. ಕಳೆದ ವರ್ಷ ಡಿಸೆಂಬರ್’ನಲ್ಲಿ ಪಾಕಿಸ್ತಾನ ಪಾರ್ಲಿಮೆಂಟ್’ನಲ್ಲಿ ಸರ್ತಾಜ್ ಅಜೀಜ್ ಜಾಧವ್ ವಿರುದ್ಧ ಯಾವುದೇ ಕನ್’ಕ್ಲುಸಿವ್ ಎವಿಡೆನ್ಸ್ ಇಲ್ಲ ಎಂದು ಒತ್ತಿಹೇಳಿದ್ದರು.

“ಭಾರತದ ಬೇಹುಗಾರ ಕುಲಭೂಷಣ್ ಜಾಧವ್ ವಿರುದ್ಧ ಇರುವುದು ಕೇವಲ ಹೇಳಿಕೆಗಳಷ್ಟೇ, ಯಾವುದೇ ಕನ್’ಕ್ಲೂಸಿವ್ ಎವಿಡೆನ್ಸ್ ಇಲ್ಲ. ಕಡತದಲ್ಲಿರುವ ವಿಷಯಗಳು ಸಾಕಾಗುವುದಿಲ್ಲ. ಏಜೆಂಟ್ ಕುರಿತು ಇನ್ನಷ್ಟು ಮಾಹಿತಿ ಕಲೆ ಹಾಕುವುದಕ್ಕೆ ಇನ್ನೆಷ್ಟು ಸಮಯ ತೆಗೆದುಕೊಳ್ಳುತ್ತಾರೆ ಎನ್ನುವುದು ಸಂಬಂಧಪಟ್ಟ ಅಧಿಕಾರಿಗಳಿಗೆ ಬಿಟ್ಟಿದ್ದು..” ಎಂದಿದ್ದರು. ಇದನ್ನು ಪಾಕಿಸ್ತಾನದ ಜಿಯೋ ಟಿ.ವಿ. ಪ್ರಸಾರ ಮಾಡಿತ್ತು ಕೂಡ. ಇದಾಗಿ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನಿ ಸಂಸ್ಥೆ ಅಜೀಜ್ ಅವರ ಹೇಳಿಕೆಯನ್ನು ಸಂಪೂರ್ಣವಾಗಿ ಅಲ್ಲಗಳೆದು, ಅದಕ್ಕೆ ವಿರುದ್ಧವಾದ ಹೇಳಿಕೆಯನ್ನು ನೀಡಲಾಯಿತು. ಅಲ್ಲಿ ನಡೆಯುವುದೆಲ್ಲ ಮಿಲಿಟರಿಯವರ ಅಣತಿಯಂತೆ!!ಅಂದಹಾಗೆ, ಕುಲಭೂಷಣ್ ಜಾಧವ್’ಗೆ ಮರಣ ದಂಡನೆಯ ತೀರ್ಪು ಬಂದಿದ್ದು ಮೋದಿ ಹಾಗೂ ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಕ್ ಹಸೀನಾ ಅವರ ಭೇಟಿಯ ಮರುದಿನವೇ ಎನ್ನುವುದು ಗಮನಿಸಬೇಕಾದ ಅಂಶ!!

ಕುಲಭೂಷಣ್ ವಿಚಾರದಲ್ಲಿ ಪ್ರತಿಕ್ರಿಯಿಸಿರುವ ಸರಬ್ಜಿತ್’ನ ಸಹೋದರಿ ದಲ್ಬೀರ್ ಕೌರ್, “ಪಾಕಿಸ್ತಾನಿಯರ ಈ ನಡೆ ಹೊಸದೇನಲ್ಲ. ಈ ರೀತಿ ಒಬ್ಬ ವ್ಯಕ್ತಿಯನ್ನು ಜೈಲಿನಲ್ಲಿಡಲು, ಹಿಂಸಿಸಲು, ಮರಣ ದಂಡನೆ ವಿಧಿಸಲು ಅವರಿಗೆ ಯಾವುದೇ ಸಾಕ್ಷಿ ಬೇಕಿಲ್ಲ, ಆತ ಒಬ್ಬ ಭಾರತೀಯ ಎಂಬ ಒಂದೇ ಒಂದು ಕಾರಣ ಸಾಕು!” ಎಂದು ಹೇಳಿ, ಕುಲಭೂಷಣ್ ಇನ್ನೊಬ್ಬ ಸರಬ್ಜಿತ್ ಆಗದಿರಲಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದರ ಮಧ್ಯೆಯೇ ದೇಶದ ಕೆಲವೆಡೆ ನವಾಜ್ ಷರೀಫ಼್ ಪ್ರತಿಕೃತಿ ದಹನ ಹಾಗೂ “ಪಾಕಿಸ್ತಾನ್ ಮುರ್ದಾಬಾದ್” ಎಂಬ ಕೂಗು ಕೂಡ ಕೇಳಿಬರುತ್ತಿದೆ. ಜೊತೆಗೆ ಅಫ್ಜಲ್’ಗಾಗಿ ಬೀದಿಗಿಳಿಯುವ ಬುದ್ಧಿಜೀವಿಗಳು ಈಗೆಲ್ಲಿ ಹೋಗಿದ್ದಾರೆ ಎಂದು ಕೇಳುತ್ತಿದ್ದಾರೆ ಸಾಮಾನ್ಯ ಜನ.

ಮಾಹಿತಿ ಕೃಪೆ: ಫಸ್ಟ್ ಪೋಸ್ಟ್

Facebook ಕಾಮೆಂಟ್ಸ್

Readoo Staff: Tailored news content, just for you.
Related Post