Uncategorized

ಮಾತುಗಳು ಸಾಯುತ್ತದೆ ಸಂಬಂಧಗಳ ಕತ್ತು ಹಿಸುಕಿದಾಗ…!

“ನಿರಾಳತೆ” ಎಂಬ ಪದಕ್ಕೆ ಆಗಷ್ಟೇ ಅರ್ಥ ಕಂಡು ಕೊಂಡಿದ್ದೆ.ಅದಕ್ಕೆ ಸಾಕ್ಷಿಯಾಗಿ ಒಂದು ಕಂಪನಿಯಲ್ಲಿ ಕೆಲಸವೂ ಗಿಟ್ಟಿಸಿಕೊಂಡೆ.ಏನ್ ಮಾಡಲೀ ಲೈಫ್ ನ ಎಷ್ಟೇ ಬ್ಯುಸಿ ಮಾಡ್ಕೊಂಡ್ರೂ ಒಂದು ಚುಕ್ಕೆ ನಿನ್ನ ನೆನಪಿನ ಹೆಸರಿನಲ್ಲಿ ಒಡೆತನ ಮಾಡ್ತಾ ಇದೆ. “ಆದ ಘಟನೆಗಳೆಲ್ಲಾ ಒಂದು ಚಿಕ್ಕ “ಕನಸು” ಅಂತ ನೀನೇನೋ ಹೇಳ್ಬಿಟ್ಟೆ..ನಾನೂ ಅದಕ್ಕೋಸ್ಕರ ತುಂಬಾನೇ ಕಷ್ಟ ಪಟ್ಟೆ ,ಜಯಿಸಿದೆ ಆದರೆ ಅದೂ ಬಾಹ್ಯವಾಗಿ. ಆಂತರಿಕವಾಗಿ ಎಲ್ಲೋ ಮನದ ಮನೆ ಮೂಲೆಯಲ್ಲಿ ನೀನು ಹಚ್ಚಿಟ್ಟ ದೀಪ ಇವತ್ಗೂ ಒಂದೊಂದ್ ಸಲ ಬಿಸಿ ತಾಗಿಸ್ತಾ ಇರತ್ತೆ..

ತುಂಬಾ ಸಲ ಅಂದ್ಕೊಂಡಿದೀನಿ ಕಣೆ ಆ ವಯಸಲ್ ನಿನ್ ಹಿಂದೆ ಬೀಳ್ಬೆಕಿತ್ತಾ ಅಂತ? ತಾಳ್ಮೆ ಬೇಕಿತ್ತು ನಮ್ಮಿಬ್ಬರಿಗೆ..ಹಸಿ ಯೌವ್ವನವೆಂಬ ಪವಿತ್ರ ಭೂಮಿಯಲ್ಲಿ ತುಳಸಿ ಗಿಡ ಬೆಳೆಸ್ಲಾ ಕಳ್ಳಿ ಗಿಡ ಬೆಳೆಸಲಾ ಅಂತ ಕನ್‌ಫ್ಯೂಸ್ ಆಗಿ ಹೋಗಿತ್ತು…ಆದರೂ ನಿನೊಂಥರಾ ಸುಂದರ ನೆನಪು ಕಣೇ…ಅವತ್ತು ಸಾವಿರ ಮುಖಗಳ ಮುಖಗಳ ಮಧ್ಯೆ ಇಟ್ಟ ಕಣ್ಣು ನೆಟ್ಟ ದೃಷ್ಟಿ ಕೀಳಲಾಗದೇ ಇರೋ ಥರ ಮನದ ಭೂಮಿಯಲ್ಲಿ ಉಳುಮೆ ಮಾಡಿತ್ತು ನಿನ್ನ ರೆಪ್ಪೆಯೊಳಗಿನ ಪುಟ್ಟ ಪ್ರಪಂಚ…ಯಾವತ್ತೂ ದೇವಸ್ಥಾನದ ಕಡೆ ನನ್ನ ಶಿರನೂ ಬಾಗಿಸದೇ ಇರೋನು ಆವತ್ತು ಗೆಳೆಯನ ಒತ್ತಾಯಕ್ಕೆ ಅಂತ ದೇವಸ್ಥಾನದ ಬಾಗಿಲ ಒಳಗೆ ಬಂದೆ.

ಆವತ್ತೇ ನಿನ್ನ ಮೊದಲ ನೋಟ..ಲಕ್ಷ ದೀಪದ ಹಣತೆಯೂ ಆವತ್ತು ನಿನ್ ನೋಡಿ ನಾಚ್ಕೊಂಡು ಆರಿ ಆರಿ ಉರಿಯುತ್ತಿತ್ತು….ದೇವಸ್ಥಾನದ ಬಾಗಿಲ ಒಳಗೆ ಹೋಗಿ ಹೃದಯದ ಬಾಗಿಲು ತೆಗೆದಂಥ ಅನುಭವ ಆಯಿತು…”Some ಬಂಧಗಳೇ ಹಾಗೆ ಕೆಲವೊಂದು ಸೆರೆಗಂಟಾದರೆ ಇನ್ನು ಕೆಲವು ಅರೆಗಂಟು” ಅವತ್ತು ರೂಮಿಗ್ ಬಂದೋನು ಫಸ್ಟ್ ಟೈಮ್ ಸೊಳ್ಳೆ ಕಾಟ ಇಲ್ದಿದ್ರೂ ನಿದ್ದೆ ಬಂದಿಲ್ಲ..ಕಣ್ಣು ಮುಚ್ಚಿದ್ರೆ ಸಾಕು ನಿನ್ನ ನಗುವೇ ಭಗ್ಗನೇ ಬರುತ್ತಿತ್ತು…ನೀನೊಂಥರಾ Keypad ಮೊಬೈಲ್ಗೆ android ಟಚ್ ಕೊಟ್ಟಂಗಾಯ್ತು ನನ್ ಲೈಫ್’ಗೆ….

ಮರುದಿನ ಬೆಳಿಗ್ಗೆ ಎದ್ರೂ ಏಳದಿದ್ದಂಗೆ ಕಾಲೇಜ್’ಗೆ ಹೋದೆ ಅದೇ ಲೆಕ್ಚರ್ರರ್ರು ಸಮುದ್ರ ಲೆವಲ್ ಸಿಲೆಬಸ್’ನ ಡ್ರಾಪ್ ಬೈ ಡ್ರಾಪ್ ಆಗಿ ನಮ್ ಮೈಂಡ್’ಗೆ ಇಳಿಸೋಕೆ ಹೆಣಗಾಡ್ತಾ ಇದ್ದೆ …”ಇಲ್ಲ ಇವತ್ಯಾಕೋ ಕ್ಲಾಸ್ ಬಗ್ಗೆ ಕೇಳಕೇ ಆಗ್ತಾ ಇಲ್ಲ ಈಗಲೇ ಭಾಷಾ ಬಾಯ್ ಟೀ ಶಾಪ್’ಗೆ ಹೋಗಿ ಒಂದ್ ಸ್ವಲ್ಪ ಹೊಗೆ ಬಿಡಣಾ” ಅಂತ ಅಂದ್ಕೊಂಡ್ ಹೋದೆ…ಯಾಕೋ ಭಾಯ್ ಶಾಪ್ ತೆಗ್ದಿರಲಿಲ್ಲ..ಇನ್ನೆನ್ ಕಿತ್ತಾಕಣಾ ಅಂತ ನೋಡ್ತಾ ಇರೊವಾಗಲೇ ಸ್ಕೂಟಿಯೊಂದು “ಪೆಟರ್ ಪೆಟರ್”ಅಂತ ಅಳ್ತಾ ಇರೋದು ಕೇಳಸ್ತು. ಯಾರೋ ಕಷ್ಟ ಪಡ್ತಾ ಇದಾರೆ ಅಂತ ನೊಡ್ದರೆ ಅದೇ ರೆಪ್ಪೆ ….ಅದೇ ಕಣ್ಣು …ನ್ಯೂಡಲ್ಸ್ ಹೇರ್ಕಾಲು  ಮಾತೇ ಕೇಳಿಲ್ಲ ಓಡ್ಹೋಗಿ ನಿನ್ನ ಪಕ್ಕ ಬ್ರೇಕ್ ಹಾಕಿತ್ತು..

“ಏನಾಯ್ತು?” ಅಂದೆ.ಶುರು ಆಯ್ತು ನೋಡು, ಜಿಂದಗಿಯಲ್ಲೇ ಇಷ್ಟು ಮಾತಾಡಿದ್ದು ನೋಡಿರ್ಲೇ ಇಲ್ಲ… ಪಟಪಟ ಅಂತ ಪುಟಿಯೋ ಚೆಂಡಿನ ಥರ ಕಂಡೆ ಬಾಯಲ್ಲಿ ಮಾತಿನ್ ಮಳೆನೇ ಸುರಿಸ್ ಬಿಟ್ಟೆ ಅವತ್ತು ನೀನು…ಅಪ್ಪ ಅಮ್ಮ ನೂರ್ ಕೇಳ್ದರೆ ನಾನೊಂದಕ್ಕೆ ಹುಂ ಅನ್ನೋನ್ ನಾನು. ಆಗಲಿಲ್ಲ ಕಣೆ ಮಾತಾಡಕೆ, ನಿಂತ್ ಬಿಟ್ಟೆ..”ಹೊಯ್ ಏನೋ ದೊಡ್ಡದಾಗ್ ಗಾಡಿ ರೆಡಿ ಮಾಡೋನ್ ಥರಾ ಪೋಸ್ ಕೊಟ್ರಲ್ರಿ ಇವಾಗ ನೋಡ್ದರೆ ಹಿಂಗೆ ಪೆಕ್ರನ ಥರ ನೋಡ್ತಾ ಇದೀರಾ” ಅಂದಾಗಲೇ ಈ ಲೋಕಕ್ಕೆ ಲ್ಯಾಂಡ್ ಆಗಿದ್ದು..ಹ್ಯಾಂಗೂ ಮ್ಯೆಕಾನಿಕಲ್ ಇಂಜಿನಿಯರಿಂಗ್ ನಂದು ಸರಿ ಮಾಡ್ಬಿಟ್ಟೆ…ಆ ಟೈಮಲ್ಲಿ ನೀನು ಥ್ಯಾಂಕ್ಸ್ ಹೇಳದ್ಯೊ ಇಲ್ವೋ ಗೊತ್ತೇ ಆಗ್ಲಿಲ್ಲ.. ಸುಂಯ್ ಅಂತ ಗಾಳಿ ಹೋದಾಗೆ ಹೊಗ್ಬಿಟ್ಟೆ… ಮನದ ಮುಗಿಲಲ್ಲಿ ಮೊಹಬ್ಬತ್ ಶುರು ಆಗಿದ್ದೇ ಆಗ…ಯಾಕೋ ಸಿರಿಯಸ್ ಆಗಿ ಹಾಳಾಗೊದ್ನಲ್ಲ ಅಂತ ಬೇಜಾರಿಂದ ಒಂದ್ ಹೊಗೆ ಬಿಟ್ಟು …

ಎಕ್ಸೈಟ್ ಮೆಂಟಲ್ಲಿ ಹೆಸರೇ ಕೇಳಿಲ್ವಲ್ಲ ಅಂತ ನನಗ್ ನಾನ್ ಆ ದಿನ ಎಷ್ಟ್ ಉಗ್ದಿದ್ದೀನೋ ನೆನಪಿಲ್ಲ.. “ಥೂ ಹಾಳಾದವನಿಗೆ ಹುಡುಗೀರ ಬಗ್ಗೆ ನಾಲ್ಕಾಸು ನಾಲೆಡ್ಜ್ ಇಲ್ಲ ಬಡ್ಡಿ ಹೈದ” ಅಂತ ಅಂದ್ಕೊಂಡು ಕ್ಲಾಸಿಗ್ ವಾಪಸ್ ಬಂದೆ…ಆದರೂ ನಿನ್ನ ಕಣ್ಣು ಮಾತ್ರ ನನ್ನ ಎಲ್ಲೋ ಸೆಳಕಂಡು ಹೋಗಿತ್ತು…ಮರುದಿನ ಹಾಂಗೆ ಕ್ಲಾಸಿಗೆ ಹೋಗಿ ಕೂತೆ, ಡೆಸ್ಕ್ ಮೇಟ್ “ಮಗ ಕ್ಲಾಸಿಗೆ ಯಾರೋ ಹೊಸ ಅಡ್ಮೀಷನ್ ಅಂತೆ ಮಗಾ ಹೆಸ್ರು ಗೊತ್ತಿಲ್ಲ ಕಲಾ” ಅಂದ… “ಹೋಗ್ಲಿ ಬಿಡಲೇ ಯಾರಾದ್ರೆ ನಮಗೇನು ಫಸ್ಟ್ ಕ್ಲಾಸಿಗೆ ಬರಲಿ ಆಮೇಲ್ ಕೇಳನಾ” ಅಂತ ಕೂತೆ…. ಆವಾಗಾಯ್ತು ನಿನ್ನ ಪ್ರವೇಶ ಆವಾಗ್ಲೆ  ನನಗೆ ಕ್ಲಾಸ್ ರೂಮ್ ಸ್ವರ್ಗ ಥರ ಕಂಡಿದ್ದು…”ಅಯ್ಯಪೊ ಇವಳಾ” ಅಂತ ಬಾಯಿಂದ ಹಾಂಗೆ ಹೊರಗೆ ಬಿತ್ತು…

ನೀನು ಸಾದಾ ಸೀದಾ ಆಗೇ ಕ್ಲಾಸ್ ಗೆ ಬಂದ್ ಕೂತೆ. ಮನಸ್ಸು ಫಿಕ್ಸ್ …”ದಿಲ್ ಕೀ ದಡಕನ್ ಮಿಲ್ ಗಯಾ” ಅಂತ ಹಾರಾಡ್ತಾ ಇತ್ತು..ಡಿಸೈಡ್ ಮಾಡ್ಬಿಟ್ಟೆ.. ಮಾತ್ ಜಾಸ್ತಿ ಆಡದಿದ್ರೂ ಅನಸಿದ್ದನ್ನಾ ಆಡೋನು ನಾನು.. ಆ ದಿನ ಕ್ಲಾಸ್ ಮುಗ್ದಿದ್ದೇ ತಡ.ಮಾಡಲಿಲ್ಲ  ಸೀದಾ ಹೋಗಿ “ನನ್ನ ನೊಡ್ದರೆ ನಿಮಗೇನನಸತ್ತೆ “ಅಂತ ಕೇಳ್ದೆ.. “ನೀವು ನಿನ್ನೆ ನನ್ ಸ್ಕೂಟಿ ರೆಡಿ ಮಾಡ್ಕೊಟ್ರಲ್ಲಾ ಅವ್ರಲ್ವಾ..? “ಇರಬಹುದೇನಪ್ಪಾ. ಅದ್ ಬಿಡಿ ನನ್ನ ನೊಡ್ದರೆ ನಿಮಗೆ ಏನನ್ನಸತ್ತೆ..?” “ನಿಮ್ಮನ್ನಾ ನೊಡ್ದರೆ ಏನ್ರೀ ಅನಸ್ಬೇಕು, ಒಬ್ಬ ಮಾಮೂಲಿ ಹುಡುಗನ ಥರಾ ಕಾಣ್ತೀದೀರಾ, ಯಾಕೆ ಅಲ್ವೇನು?(ನಗು) ” “ರೀ ನಿಜ ಹೇಳ್ತೀನಿ ನಿನ್ನೆ ದೇವಸ್ಥಾನದಲ್ಲಿ ನೋಡ್ದಾಗ ಫೀದಾನೇ ಆಗೊದೆ, ಇವಾಗ ನಿಮ್ಮ ಮಾತ್ ಕೇಳಿ ಸತ್ತೇ ಹೋದೆ…ನೇರ ವಿಷಯಕ್ಕೆ ಬರ್ತೀನಿ ಐ ಲವ್ ಯೂ”

“ಶಟ್ ಅಪ್” ಅಂತ ಎತ್ ಕೆನ್ನೆಗೆ ಬಿಟ್ಟೆ…ಬಿಟ್ಟಿದ್ದೇ  ಸ್ಕೂಟಿ ಎತ್ಕೊಂಡ್ ಹೋಗೇ ಬಿಟ್ಟೆ…ಯಾಕೋ ತುಂಬಾ ದುಡುಕ್ ಬಿಟ್ನೆನೋ ಅನಸ್ ಬಿಡ್ತು. ಬೇಜಾರಾಯ್ತು…ಛೇ ಎಂಥಾ ಕೆಲಸ ಮಾಡ್ಬಿಟ್ಟೆ..ಅಯ್ಯೋ ಏನ್ ಮಾಡದ್ ಇವಾಗ…”ಯೆಸ್” ಓಡಿ ಹೋಗಿ ಮಹೇಶಣ್ಣ ಪ್ಯೂನ್ ಹತ್ರ ಅಡ್ಜಸ್ಟ್ ಮಾಡಿ ಕಾಲೇಜ್ ರಿಜಿಸ್ಟರ್ ಇಂದ ನಿನ್ ಫೋನ್ ನಂಬರ್ ಕಲೆಕ್ಟ್ ಮಾಡಿದೆ… ರಾತ್ರಿಯೇ ಮಸೇಜ್ ಕಳ್ಸಿ ಸಾರಿ ಅಂದೆ….

ಆವಾಗ ನೀನು ರಿಪ್ಲೈ ಮಾಡಿಲ್ಲ… ನನ್ನ ನಿರಂತರ ಪ್ರಯತಕ್ಕೆ ಅಂತೂ ಕೊನೆಯಲ್ಲಿ ನೀನ್ ಗ್ರೀನ್ ಸಿಗ್ನಲ್ ಕೊಟ್ಟೆ . ಎಲ್ಲಾರ್ ಲೈಫ್ ಅಲ್ಲೂ ಲವ್ ಸ್ಟೋರಿ ಹ್ಯಾಗಾಗುತ್ತೋ ನಮದೂ ಹಾಗೆ ಆಯ್ತು ಪಾರ್ಕ್, ಮಾಲ್,ಥಿಯೇಟರ್ ಅಲ್ಲಿ ಇಲ್ಲಿ ಅಂತ ಜೀವನ ಹೋಗ್ತಾ ಇತ್ತು…

ಆವತ್ತು ರಾತ್ರಿ “ಲೋ ನಾಳೆ ನಮ್ ಫ್ಯಾಮಿಲಿ ಜೊತೆ ಟ್ರಿಪ್ ಹೋಗ್ತಾ ಇದೀನಿ ಧರ್ಮಸ್ಥಳಕ್ಕೆ ಎರಡ್ ದಿನ ನಿನ್ ಹ್ಯಾಂಗ್ ಬಿಟ್ಟಿರ್ಲೋ” “ಹೆಯ್ ಏನೂ ಅಂತ ಮಾತಾಡ್ತಿಯಾ ಫ್ಯಾಮಿಲಿ ಫಸ್ಟ್ ಅವರೇ ನಮಗೆ ಎಲ್ಲಾ ಹೋಗಿ ಬಾ” ಅಂತ ಖುಷಿಯಿಂದ ಕಳಿಸಿಕೊಟ್ಟೆ ನಿನ್ನ… ಅದೇ ಲಾಸ್ಟ್, ದೇವರ ದರ್ಶನಕ್ಕೆ ಹೋದೆ..ಬಹುಶಃ ಆ ದೇವರಿಗೂ ನೀನ್ ತುಂಬಾ ಇಷ್ಟ ಆದೆ ಅನ್ಸತ್ತೆ… ಆಕ್ಸಿಡೆಂಟ್ ನೆಪ ಮಾಡಿ ಅವಳನ್ನ ತನ್ನ ಮುಡಿಗೆ ಸೇರಸ್ಕೊಂಡ್ ಬಿಟ್ಟ… ಆದರೆ ನೀನಾಡಿದ ಒಂದು ಮಾತಿಗೆ ಬೆಲೆ ಕೊಟ್ಟು ಇವತ್ತಿಗೂ ನಿನ್ನ ಅಗಲುವಿಕೆಯ ಸಲುವಾಗಿ ಒಂದು ಹನಿ ಕಣ್ಣೀರಿಡಲಿಲ್ಲ…

“ಮುಂದೆ ನಾನು ನೀನು ಮದ್ವೆ ಆಗಿ ನನ್ನ ಮೊಮ್ಮಕ್ಕಳನ್ನೆಲ್ಲಾ ಆಟ ಆಡಸ್ಕೊಂಡು ಇರೋ ಟೈಮಲ್ಲಿ ನಾನೇನಾದ್ರೂ ಗೊಟಕ್ ಅಂದರೆ ಅಪ್ಪಿ ತಪ್ಪಿನೂ ಚೈಲ್ಡ್’ಗಳ್ ಥರಾ ಅಳಬೇಡಾ ನಂಗ್ ತುಂಬಾ ಕೋಪ ಬರುತ್ತೆ”

ನೀನ್ ನನ್ನ ಜೀವನದಲ್ಲಿ ಬರೋಕು ಮುಂಚೆ ಜಾಸ್ತಿ ಮಾತಾಡಕ್ಕೇ ನಂಗೆ ಇಷ್ಟ ಆಗ್ತಿರ್ಲಿಲ್ಲ.. ಆದರೆ ಇವಾಗ…..? ಮಾತಾಡಕೇ ನೀನೇ ಇಲ್ಲ… ಆ ದೇವರು ನನ್ ಪ್ರೀತಿನಾ ಕತ್ತು ಹಿಸುಕಿದ …ಮಾತು ಸತ್ತು ಹೋಯ್ತು…. ಕಣ್ಣೀರು ಮಂಜುಗಡ್ಡೆ ಆಯ್ತು… ಬಾಳು ಸತ್ತ ಸ್ವರ್ಗ ಜೀವಂತ ನರಕ ಆಯ್ತು…. ಮನಸ್ಸು ನೋವಿನ ಸೆಲೆಗಳನ್ನಾ ತುಂಬ್ ಕೊಂಡ್ತು ನಾನೂ ಕಾಯ್ತಾ ಇದೀನಿ ದೇವರಿಗೆ ನನ್ ಮೇಲೆ ಯಾವಾಗ ಪ್ರೀತಿ ಬರುತ್ತೋ…ನಾನ್ಯಾವಾಗ ನಿನ್ನ ಸೇರ್ತಿನೋ ಅಂತ….

ನಿನ್ನ ಹೆಸರು ನನ್ನ ರಾತ್ರಿ ಎರಡೂ ಒಂದೇ…..

ಅದೇ “ಕನಸು”

ಮಿಸ್ ಯೂ..

ಆದಿತ್ಯ ಭಾಗ್ವತ್

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!