ದೇವಲೋಕದ ಬನದಿ ಬಿರಿದ ಬಿಳಿಮಲ್ಲಿಗೆ
ನನ್ನ ಹರಕೆಗೆ ಮಣಿದು ಬಿತ್ತೆನ್ನ ಮಡಿಲಿಗೆ
ಹುಣ್ಣಿಮೆಯ ಕಡಲಲೆಯಂತೆ ನಿನ್ನ ನಗುವು,
ಕಣ್ಣು ಸಣ್ಣಗೆ ಮಾಡಿ ನೀನತ್ತರೂ ಚೆಲುವು;
ಅರಿವಿಗೂ ಮೀರಿದ ಲೋಕ ಕಾಣುವಾ ನಯನ
ಯೋಗನಿದ್ರೆಯಲಿರೆ ನೀ ಶ್ರೀಅನಂತಶಯನ
ನೀನಾಡುವಾಟಗಳು ಶ್ರೀ ಕೃಷ್ಣ ಲೀಲೆ
ತೊದಲ್ನುಡಿಗಳೋ ಹೊಸ ಭಾಷೆಯ ಟಂಕಸಾಲೆ
ಮುಂಗಾಲು ಪುಟಿಗೆಯಲಿ ಓಡುವಾ ಸೊಗಸು
ಹಣ್ಣೆಲೆಗೂ ಕಾಡಿದೆ ಚಿಗುರುವಾ ಮನಸು
ನಿನ್ನ ಸವಿ ನಗುವೇ ಎನ್ನ ಮನೆಯಲಂಕಾರ
ನಿನ್ನ ಪರಿತೋಷವೇ ಎನ್ನ ಜೀವನ ಸಾರ
-ಚಿತ್ತರಂಜನ
Facebook ಕಾಮೆಂಟ್ಸ್