X

ಜೀವನ

ಬಗೆಹರಿಯದ ಒಗಟು, ದಡವರಿಯದಾ ಯಾನ..

ಈ ಎಲ್ಲ ಮನುಜಕುಲ ಬಿಡಿಸುವಲಿ ತಲ್ಲೀನ…

ಬರಿಯ ಸಂತಸವಲ್ಲ ಕುಡಿದಂತೆ ಸವಿಪಾನ

ನೋವಿನ ಮುಗಿಲಲ್ಲ ಸಿಹಿಕಹಿಯ ಲೇಪನ…

ಎಲ್ಲ ತೊಂದರೆಗಳಿಗೂ ಸಿಗದಿಲ್ಲಿ ಕಾರಣ

ದಾಟಬೇಕಿದೆ ಶರಧಿ ಹತ್ತಿಕ್ಕಿ ತಲ್ಲಣ

ಕ್ಲೇಶದ ಬೆಟ್ಟಗಳ ಏರುತಲಿ ದಿನದಿನ

ಮುಗಿಸಲೇ ಬೇಕು ಈ ಬದುಕೆಂಬ ಚಾರಣ

ಕಂಡೆಲ್ಲ ಸ್ವಪ್ನಗಳ ಸಾಕಾರಗೊಳಿಸಲು

ಈಜಲೇ ಬೇಕಿಂದು ಈ ಬಾಳಕಡಲು

ಏರಲು ಹವಣಿಸುತ ಸಾಧನೆಯ ತೊಟ್ಟಿಲು

ಕಣ್ತುಂಬ ತುಂಬಿರುವ ಕನಸಿನ ಮೆಟ್ಟಿಲು

ನಿಂತ ನೀರಂತಲ್ಲ ಹರಿಯುತಲೇ ಇರುವುದು

ತೋರಿಸುತ ಹೊಸತಿರುವು ಬದಲಾವಣೆ ತರುವುದು

ಕಳೆದು ಹೋಗಿಹ ಕಾಲ ಬೇಕೆಂದರೂ ಸಿಗದು

ಸಾಗಲೇ ಬೇಕಲ್ಲ ನೆನಪೊಂದೆ ತೊರೆದು

ಸ್ವಪ್ತಸ್ವರ ಹೊಮ್ಮಿಸುವ ಸಂಗೀತ ತನನ

ನವರಸವೂ ತುಂಬಿರುವ ನಾಟಕ, ನರ್ತನ

ಇಹಲೋಕದಲೇ ನಾಕ ನರಕಗಳ ದರ್ಶನ

ಸರ್ವ ವಿಧ ರುಚಿಯಿರುವ ಈ ನಮ್ಮ ಜೀವನ

 -Tejas Kumar Hegde

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post