X

ಬ್ರಾಹ್ಮಣರೇ ಇಂದಿನ ಸಮಾಜದ ನಿಜವಾದ ದಲಿತರು

ನಿಜ. ಇದು ನಿಮಗೆ ಆಶ್ಚರ್ಯವಾದರೂ ಇದೆ ಸತ್ಯ. ಖ್ಯಾತ ಅಂಕಣಕಾರರಾದ ಫ್ರಾಂಕಾಯ್ಸ್ ಗೊತ್ಹಿಯರ್ ಬರೆದ ಅಂಕಣ ಹೇಳುವುದು ಇದನ್ನೇ ಬ್ರಾಹಣರ ಮೊದಲಿನ ಸ್ಥಿತಿ ಈಗ ಇಲ್ಲ ಅವರು ಜನಸಂಖ್ಯೆ, ವೋಟು ಬ್ಯಾಂಕ್ ದೃಷ್ಟಿಯಿಂದ ಹಾಗು ಆರ್ಥಿಕವಾಗಿಯೂ ಅವರು ಸಬಲರಲ್ಲ ಎಂಬುದನ್ನು ಹೇಳುತ್ತಾರೆ.

ಅವರು ಕೊಟ್ಟಿರುವ ಅಂಕಿ ಅಂಶದ ಪ್ರಕಾರ ದೆಹಲಿಯಲ್ಲಿರುವ ಸುಲಭ ಶೌಚಾಲಯಗಳನ್ನು ನೋಡಿಕೊಳ್ಳುತ್ತಿರುವ ಬಹುತೇಕರಲ್ಲಿ ಬ್ರಾಹ್ಮಣರೇ ಹೆಚ್ಚಿನವರು. ದೆಹಲಿ ಮತ್ತು ಬನಾರಸದಲ್ಲಿ ಅತಿ ಹೆಚ್ಚು ರಿಕ್ಷಾವಾಲಗಳು ಬ್ರಾಹ್ಮಣರೇ. ಬಹುತೇಕ ಹಳ್ಳಿಗಳಲ್ಲಿ ಬ್ರಾಹ್ಮಣರು ಅಲ್ಪಸಂಖ್ಯಾತರಾಗಿದ್ದಾರೆ. ಇನ್ನು ಬ್ರಾಹ್ಮಣರನ್ನು ರಾಜಕೀಯ ಸ್ಥಿತಿ ದೇವರಿಗೆ ಬಲ್ಲ. ಸಮೀಕ್ಷೆಯ ಪ್ರಕಾರ ೪೪% ಬ್ರಾಹ್ಮಣ ವಿಧ್ಯಾರ್ಥಿಗಳು ಪ್ರಾಥಮಿಕ ಹಂತದಲ್ಲಿಯೇ ಶಿಕ್ಷಣ ಬಿಡುತ್ತಿದ್ದಾರೆ ಕಾರಣ ಅವರಿಗಿರುವ ಬಡತನ. ಎಷ್ಟೋ ದೇವಸ್ಥಾನಗಳಲ್ಲಿ ಬ್ರಾಹ್ಮಣರು ಇನ್ನು ೫೦೦ ರುಪಾಯಿ ಸಂಬಳಕ್ಕೆ ದುಡಿಯುತ್ತಿದ್ದಾರೆ. ಒಟ್ಟಿನಲ್ಲಿ ಬ್ರಾಹ್ಮಣರ ಸ್ಥಿತಿ ಯಾವ ದಲಿತನಿಗು ಕಡಿಮೆಯಿಲ್ಲ ಎಂಬುದನ್ನು ವಿವರಿಸಿದ್ದಾರೆ.

ಇಷ್ಟೆಲ್ಲ ಏತಕ್ಕಾಗಿ ಹೇಳಬೇಕಾಯಿತೆಂದರೆ ಮೊನ್ನೆ ಫೇಸ್ಬುಕ್’ನಲ್ಲಿ ಒಂದು ಸ್ಟೇಟಸ್ ನೋಡಿದೆ. ಅದರಲ್ಲಿ ಬ್ರಾಹ್ಮಣರು ಅಹಂಕಾರ ಇರುವವರು, ಏನೇನೋ ಮಂತ್ರ ಹೇಳಿ ಹಣ ಗಳಿಸುವವರು, ಬುರುಡೆ ಜೋತಿಷ್ಯ ಬಿಡುವವರು, ಬ್ರಾಹ್ಮಣರಿಂದ ಹಿಂದೂ ಧರ್ಮಕ್ಕೆ ಕಳಂಕ, ಹಿಂದೂ ಧರ್ಮಕ್ಕೆ ಅವರ ಕೊಡುಗೆ ಏನು ಇಲ್ಲ, ಜಾತಿಗಳನ್ನು ಮಾಡಿ ಹಿಂದೂ ಸಮಾಜವನ್ನು ಒಡೆದವರು ಅವರೇ ಎಂದು ಬರೆದಿತ್ತು. ಇದನ್ನು ಯಾರೋ ಒಬ್ಬ ಬುದ್ಧಿಜೀವಿ, ಸಾಹಿತಿ ಬರೆದಿದ್ದರೆ ಸುಮ್ಮನಾಗಿ ಬಿಡಬಹುದಿತ್ತು ಆದರೆ ಬರೆದವರು ಹಿಂದುತ್ವ ಹೋರಾಟಗಾರ! ಯಾಕೋ ಕಳವಳವಾಯಿತು, ಹಿಂದುತ್ವವೇ ಹಿಂದು ಧರ್ಮವನ್ನು ಒಡೆಯುತ್ತಿದೆ ಎಂದೆನಿಸಿತು. ಅದಕ್ಕೆ ಈ ಲೇಖನ ಆದರೆ ಇದು ನಮ್ಮ ಅಹಂಕಾರದ ಮಾತಲ್ಲ, ಸತ್ಯ ತೆರೆದಿಡುವ ಪ್ರಯತ್ನ ಅಷ್ಟೇ ಹೊರತು ಯಾವುದೇ ಒಂದು ಜಾತಿಯ ವೈಭವಿಕರಣವಲ್ಲ.

ಅಸ್ಪ್ರಶ್ಯತೆ ಹಿಂದೂ ಧರ್ಮಕ್ಕಂಟಿರುವ ಕಳಂಕ ಅನುಮಾನವೇ ಇಲ್ಲ, ಇದು ಇನ್ನು ಸ್ವಲ್ಪ ಆಚರಣೆಯಲ್ಲಿದೆ. ಬ್ರಾಹ್ಮಣರು ಇದರ ಆಚರಣೆಯಲ್ಲಿ ತೊಡಗಿದ್ದಾರೆ, ಇತರ ಜಾತಿಗಳವರು ಇದನ್ನು ಪಾಲಿಸುತ್ತಿದ್ದಾರೆ ಆದರೆ ಒಂದು ನಿರ್ದಿಷ್ಟ ಜಾತಿಯವರನ್ನು ದೂರುವುದು ಎಷ್ಟು ಸರಿ. ಬಸವಣ್ಣನವರು ಸೃಷ್ಟಿಸಿದ ವೀರಶೈವ ಧರ್ಮದಲ್ಲಿಯೇ ಎಷ್ಟೋ ಉಪ ಜಾತಿಗಳು ಸೃಷ್ಟಿಯಾಗಿವೆ, ಅವುಗಳ ನಡುವೆ ಮದುವೆ ನಡೆಯುವುದು ತುಂಬ ಕಷ್ಟ. ಉಪಜಾತಿಗಳಲ್ಲಿಯೆ ಇಷ್ಟು ಭೇಧಭಾವ ಇದನ್ನೆನು ಬ್ರಾಹ್ಮಣರು ಸೃಷಿಸಿದ್ದಾ? ಎಷ್ಟು ಮೇಲ್ವರ್ಗದ ದಲಿತರು ಕೆಳವರ್ಗದ ದಲಿತರ ಮನೆಗೆ ಹೋಗುವುದಿಲ್ಲ, ಸಂಬಂಧ ಬೆಳೆಸುವುದಿಲ್ಲ ಸಮಾನತೆ ಬೇಕು ಎನ್ನುವ ದಲಿತ ಮುಖಂಡರುಗಳು ಎಷ್ಟು ಬಡ ದಲಿತ ಸಂಬಂಧ ಬೆಳೆಸಿ ಸಮಾನತೆ ಮೆರೆದಿದ್ದಾರೆ? ತಮ್ಮ ತಮ್ಮಲ್ಲಿಯೆ ಮೇಲು ಕೀಳು ಜಾತಿಗಳನ್ನು ಸೃಷ್ಟಿಸಿ ಕೊಂಡಿದ್ದಾರೆ ಇದು ಹಿಂದೂ ಧರ್ಮಕ್ಕೆ ಕಳಂಕವಲ್ಲವೆ? ನಾನು ಇಲ್ಲಿ ಜಾತಿ ಪದ್ಧತಿಯನ್ನು ಸರಿ ಎಂದು ಹೇಳುತ್ತಿಲ್ಲ ಆದರೆ ಬ್ರಾಹ್ಮಣರಿಗಷ್ಟೆ ಏಕೆ ದೂಷಣೆ?

ಬ್ರಾಹ್ಮಣರು ಹೇಡಿಗಳು, ಹಿಂದೂ ಸಮಾಜಕ್ಕೆ ಬ್ರಾಹ್ಮಣರು ಏನು ಮಾಡಿಲ್ಲ ಹಿಂದೂ ಧರ್ಮ ರಕ್ಷಣೆಯಾಗಿದ್ದು ಶೂದ್ರ ಮತ್ತು ಕ್ಷತ್ರಿಯರಿಂದ ಮಾತ್ರ ಎಂದು ಹೇಳುತ್ತಾರೆ. ಇಲ್ಲಿ ಒಂದು ಮಾತು ನೆನಪಿಟ್ಟುಕೊಳ್ಳಬೇಕಾದ್ದು ಏನೆಂದರೆ ದೇಶ ರಕ್ಷಿಸುವುದೆಂದರೆ ಬರಿ ಯುದ್ಧವಲ್ಲ, ಸನ್ಮಾರ್ಗದಲ್ಲಿ ದೇಶವನ್ನು ಮುನ್ನಡೆಸುವುದು ದೇಶ ರಕ್ಷಣೆಯೆ, ಸಮಾಜಕ್ಕೆ ಕೊಡುಗೆ ಕೊಟ್ಟವರಲ್ಲಿ ಬ್ರಾಹ್ಮಣರ ಸಂಖ್ಯೆ ಕಡಿಮೆಯಿಲ್ಲ, ಇನ್ನು ಹಿಂದುತ್ವಕ್ಕಾಗಿ ಪ್ರಾಣ ಕೊಟ್ಟವರು ಶೂದ್ರರಂತೆ ಬುದ್ಧಿ ಜೀವಿಗಳು ಬ್ರಾಹ್ಮಣರಂತೆ ಹಾಗಾದರೆ ಜಾತಿ ಬೇಧ ಬೇಡ ಹಿಂದೂಗಳೆಲ್ಲರೂ ಒಂದಾಗಿ ಎಂದು ಕರೆ ಕೊಟ್ಟು ಸಾರ್ವಜನಿಕ ಪ್ರದೇಶಗಳಲ್ಲಿ ಗಣಪತಿ ಸಮಾರಂಭ ಮಾಡಲು ಅಡಿಪಾಯ ಹಾಕಿದ ತಿಲಕರು ಬ್ರಾಹ್ಮಣರೇ, ದೇಶ ಸುತ್ತಿ ತನ್ನ ಡಿಗ್ರಿಗಳನ್ನೂ ಬದಿಗೊತ್ತಿ ಸ್ವದೇಶೀ ಅಭಿಯಾನಕ್ಕೆ ನಿಂತ ರಾಜೀವ್ ದೀಕ್ಷಿತರು ಬ್ರಾಹ್ಮಣರೇ, ದೇಶದ ರಾಜಕೀಯವನ್ನು ಬದಲಿಸಿದ ವಾಜಪೇಯಿ ಬ್ರಾಹ್ಮಣ, ಮೋದಿಯ ಜೊತೆ ತನ್ನ ಜೀವವನ್ನು ಲೆಕ್ಕಿಸದೆ ಕಾಶ್ಮೀರದಲ್ಲಿ ಬಾವುಟ ಹಾರಿಸಿದ ಮುರಳಿ ಮನೋಹರ್ ಜೋಶಿ ಬ್ರಾಹ್ಮಣ, ಅಬ್ದುಲ್ ಕಲಾಂರನ್ನು ರೂಪಿಸಿದ್ದು ಬ್ರಾಹ್ಮಣ ಕುಟುಂಬ, ಅಂಬೇಡ್ಕರ ಅವರಿಗೆ ಆ ಹೆಸರು ಬರಲು ಕಾರಣವೇ ಒಬ್ಬ ಬ್ರಾಹ್ಮಣ, ಇಂದಿನ RSS ಸರ ಸಂಘ ಚಾಲಕರು ಬ್ರಾಹ್ಮಣ, ಒಂದು ಜಗತ್ತು ಒಂದು ಕುಟುಂಬ ಎಂದು ಜಗತ್ತಿಗೆ ಸಾರಿ ಹೇಳುತ್ತಿರುವ ರವಿಶಂಕರ್ ಗುರೂಜಿ ಬ್ರಾಹ್ಮಣ. ವೀರತ್ವದಲ್ಲೂ ಬ್ರಾಹ್ಮಣರು ಹಿಂದೆ ಬಿದ್ದಿಲ್ಲ ಬಾಜಿರಾವ್ ಪೇಶ್ವೆ, ಝಾನ್ಸಿ ರಾಣಿ ಲಕ್ಷ್ಮಿ ಭಾಯಿ, ಮಂಗಲ ಪಾಂಡೆ ಬ್ರಾಹ್ಮಣರೇ, ಶಿವಾಜಿಯ ಗುರು ಬ್ರಾಹ್ಮಣ, ವಿಜಯನಗರ ಸಾಮ್ರಾಜ್ಯಕ್ಕೆ ಪ್ರೇರಣೆ ನೀಡಿದ ಗುರುಗಳು ಬ್ರಾಹ್ಮಣರೇ. ಇವರ ಬಗ್ಗೆ ಯಾರು ಮಾತನಾಡುವುದಿಲ್ಲ. ಅದು ನಿಮ್ಮ ತಪ್ಪಲ್ಲ ಬಿಡಿ ಮೇಲಿನ ಯಾವ ನಾಯಕನು ಸಹ ತನ್ನನ್ನು ತಾನು ಬ್ರಾಹ್ಮಣನೆಂದು ಗುರುತಿಸಿಕೊಂಡಿಲ್ಲ ಬದಲಿಗೆ ಹಿಂದೂ ಎಂದು ಹೆಮ್ಮೆಯಿಂದ ಹೇಳುತ್ತಾರೆ.

ಇನ್ನು ಬ್ರಾಹ್ಮಣರಿಗೆ ಅನ್ಯಾಯವಾದಾಗ ಎಷ್ಟು ಹಿಂದೂಗಳು ಬೆನ್ನಿಗೆ ನಿಂತಿದ್ದಿರಿ? ಸ್ವತಂತ್ರ ಬಂದ ಮೇಲೆ ಮೊದಲು ಪೆಟ್ಟು ಬಿದ್ದಿದ್ದೆ ಬ್ರಾಹ್ಮಣನಿಗೆ. ಭೂ ಸುಧಾರಣೆ ಕಾಯ್ದೆಯಡಿ ಬ್ರಾಹ್ಮಣನ ಜಮೀನುಗಳು ಇತರರ ಪಾಲಾದವು, ಸಮಾನತೆ ದೃಷ್ಟಿಯಿಂದ ಈ ಯೋಜನೆ ಒಳ್ಳೆಯದಾದರು ಬಡ ಬ್ರಾಹ್ಮಣನಿಗೆ ಇದು ಯಾವುದೇ ಸಮಾನತೆ ಸಿಗಲಿಲ್ಲ. ಕಡೆ ಪಕ್ಷ ಬಡವರ ಹಾಗು ವಿಧವೆಯರಿಗೆ ತಮ್ಮ ಜಮೀನನ್ನು ಇರಿಸಿಕೊಳ್ಳುವ ಹಕ್ಕನ್ನು ಕೊಡಿ ಎಂದರು ಸರ್ಕಾರ ಸ್ಪಂದಿಸಲೇ ಇಲ್ಲ. ಬ್ರಾಹ್ಮಣರನ್ನು ಶೋಷಿಸುವುದೇ ಸಂವಿಧಾನದ ಸಮಾನತೆಯೇ ಗೊತ್ತಾಗುತ್ತಿಲ್ಲ.

ಔರಂಗಜೇಬ್ ಸುಮಾರು 5 ಲಕ್ಷ ಬ್ರಾಹಣರನ್ನು ಕೊಂದ್ದಿದ, ಟಿಪ್ಪು 1 ಲಕ್ಷ ಮೇಲುಕೋಟೆ ಬ್ರಾಹ್ಮಣರನ್ನು ಕೊಲ್ಲುವಾಗ ಎಲ್ಲಿ ಹೋಗಿದ್ದರು ಕ್ಷತ್ರಿಯರು? ಇದನ್ನೆಲ್ಲಾ ಹೇಳಿ ನಾನು ಯಾರನ್ನು ಹಂಗಿಸುತ್ತಿಲ್ಲ ಆದರೆ ಇಷ್ಟೆಲ್ಲಾ ಅನ್ಯಾಯ ನಡೆದರೂ ಬ್ರಾಹ್ಮಣರು ಯಾರನ್ನಾದರು ದೂರಿದ್ದಾರಾ? 2 ಲಕ್ಷ ಕಾಶ್ಮೀರಿ ಪಂಡಿತರು ತಮ್ಮದೇ ದೇಶದಲ್ಲಿ ನಿರ್ಗತಿಕಾರಾದಗ ಯಾರು ಬರಲಿಲ್ಲ. ಕ್ರಿಶ್ಚಿಯನ್ ಮಿಷನರಿಗಳಿಂದ ತಮ್ಮ ಪ್ರಾಣಕ್ಕೆ ಅಪಾಯವಿದ್ದರು ಮತಾಂತರವಾಗದೆ ಬದುಕು ಕಟ್ಟಿಕೊಂಡ ಸ್ವಾಭಿಮಾನಿಗಳು ಇಂದಿನ GSB ಗಳು.

ಬ್ರಾಹ್ಮಣರು ಎಲ್ಲರನ್ನು ತುಚ್ಚವಾಗಿ ಕಾಣುತ್ತಾರೆ, ಅವಮಾನ ಮಾಡುತ್ತಾರೆ ಎನ್ನುವರಿಗೆ ಬಹುತೇಕ ಸಿನಿಮಾಗಳಲ್ಲಿ ಬ್ರಾಹ್ಮಣರೇ ಕಾಮಿಡಿ ಸರಕುಗಳು. ಎಷ್ಟು ಚಲನಚಿತ್ರಗಳಲ್ಲಿ ಬ್ರಾಹ್ಮಣರನ್ನು ಹೀಯಾಳಿಸಿಲ್ಲ ಪುಳಿಚಾರು, ಬೆಲ್ಟು, ಆಚಾರಿ, ಭಟ್ಟ, ಇವು ನಮ್ಮ ಬಿರುದುಗಳು ಇದು ನಮಗಾದ ಅವಮಾನವಲ್ಲವೆ? ಇನ್ನು ಕೆಲವರು ಹೇಳುತ್ತಾರೆ ಜ್ಞಾನದಿಂದ ಬ್ರಾಹ್ಮಣರಾಗಬೇಕಂತೆ ಇಂದಿನ ಜಾತಿ ಕಾಲದಲ್ಲಿ ಇದು ಸಾಧ್ಯವಾ? ಹಾಗಾದರೆ ಎಷ್ಟು ಜನ ಬಸವಣ್ಣನವರ ಹಾದಿಯಲ್ಲಿ ನಡೆಯುತ್ತಿದ್ದಾರೆ ? ಎಷ್ಟು ಜನ ಕುರುಬರು ಕನಕದಾಸರನ್ನು ಅನುಸರಿಸಿ ಹಿಂದೂ ಧರ್ಮ ಉದ್ಧಾರ ಮಾಡುತ್ತಿದ್ದಾರೆ ? ಎಷ್ಟು ಜನ ಉದ್ಧಾರವಾದ ದಲಿತರು ಮೀಸಲಾತಿ ಬಿಟ್ಟಿದ್ದಾರೆ ? ಬರಿ ಬ್ರಾಹ್ಮಣರಿಗೆ ಏಕೆ ನಿಯಮ?

ಎಲ್ಲ ಜಾತಿಯವರು ತಮ್ಮ ತಮ್ಮ ಜಾತಿಯ ನಾಯಕನಿಗೆ ಓಟ್ ಮಾಡುವಾಗ ಯಾವ ರಾಜಕೀಯ ಪಕ್ಷ ಬಂದರೂ ತನ್ನ ಸಮುದಾಯಕ್ಕೆ ಯಾವುದೇ ಲಾಭವಿಲ್ಲ ಎಂದು ಗೊತ್ತಿದ್ದರೂ ಸಂಸ್ಕೃತಿಯ ಉಳಿವಿಗಾಗಿ 70% ಮೇಲೆ ಬಿಜೆಪಿಗೆ ಓಟ್ ಮಾಡುವವರು ಬ್ರಾಹ್ಮಣರೇ.

ನಿಜ ಇನ್ನು ಕೆಲವು ಬ್ರಾಹ್ಮಣರು ಅಸ್ಪೃಶ್ಯತೆ ಮಾಡುತ್ತಿದ್ದಾರೆ, ಪಂಕ್ತಿಭೇಧ ನಡೆಯುತ್ತಿದೆ, ಉಡುಪಿಯಲ್ಲಿ ಬಂಟ ಸಮುದಾಯದ ಮಹಿಳೆಯನ್ನು ಊಟದಿಂದ ಎಬ್ಬಿಸಿದ್ದು ಸರಿಯಲ್ಲ, ಆದರೆ ಬ್ರಾಹ್ಮಣರಿಗೆ ತಮ್ಮ ಸಂಪದ್ರಾಯಗಳ ಅನುಸಾರವಾಗಿ ಊಟ ಮಾಡುವ ಹಕ್ಕು ಇಲ್ಲವಾ? ಬ್ರಾಹ್ಮಣರಿಗೂ ಕೆಲವು ಸಂಪ್ರದಾಯಗಳಿವೆ ತಲಾತಲಾಂತರಗಳಿಂದ ಬೆಳೆದ ನಂಬಿಕೆಗಳಿವೆ ಅವುಗಳನ್ನು ಅನುಸರಿಸಲು ಬಿಡಿ. ಅಸ್ಪೃಶ್ಯತೆ ಯಾರು ಮಾಡಿಫ಼ರೂ ತಪ್ಪು ಆದರೆ ಅದನ್ನು ಬ್ರಾಹ್ಮಣರಷ್ಟೆ ಅಲ್ಲ, ಲಿಂಗಾಯಿತ ಒಕ್ಕಲಿಗರಿಂದ ಹಿಡಿದು ಮೇಲ್ವರ್ಗದ ದಲಿತರೂ ಮಾಡುತ್ತಿದ್ದಾರೆ. ಅದನ್ನು ಪ್ರಶ್ನಿಸಿ.

ಹಿಂದೂ ಧರ್ಮಕ್ಕೆ ಎಲ್ಲರು ಅವಶ್ಯಕ ಹಿಂದೂ ಧರ್ಮವನ್ನು ಉಳಿಸುವಲ್ಲಿ ಶೂದ್ರರ ಪಾತ್ರ ಮಹತ್ವದ್ದು. ಬ್ರಾಹ್ಮಣರು ತಪ್ಪೇ ಮಾಡಿಲ್ಲ ಎಂದು ನಾನು ಹೇಳುತ್ತಿಲ್ಲ, ಒಂದು ಜಾತಿಯನ್ನು ನಿಂದಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಒಂದಾಗಿ ಹಿಂದೂ ಧರ್ಮ ಕಟ್ಟೋಣ. ಬ್ರಾಹ್ಮಣರು ಆಧುನಿಕಕತೆಗೆ ತೆರದುಕೊಳ್ಳುತ್ತಿದ್ದಾರೆ. 50 ವರ್ಷಗಳ ಹಿಂದಿನ ಪರಿಸ್ಥಿತಿ ಈಗ ಇಲ್ಲ. ಕಾಲವು ಬಹಳಷ್ಟು ಬದಲಾಗಿದೆ, ಇನ್ನು ಇದೆಲ್ಲವನ್ನು ನಾನು ಅಹಂಕಾರದಿಂದ ಹೇಳುತ್ತಿಲ್ಲ, ಎಲ್ಲ ಜಾತಿಗಳಲ್ಲೂ ಒಳ್ಳೆಯವರು ಕೆಟ್ಟವರು ಎರಡು ಇದ್ದಾರೆ. ನಿರ್ದಿಷ್ಟ ಸಮುದಾಯದ ಮೇಲೆ ಅಪವಾದ ಬೇಡ, ಎಲ್ಲರು ಒಂದಾಗಿ ನಮ್ಮ ಸಂಸ್ಕೃತಿ ಉಳಿಸೋಣ. ಹಳೆ ತಲೆಮಾರು ಮರೆಯಾಗುವ ಮೊದಲೇ ನಮ ಪೂರ್ವಜರು ಮಾಡಿಟ್ಟ ಅಪಾರ ಜ್ಞಾನವನ್ನು ಪಡೆದುಕೊಂಡು ಮುಂದಿನ ಪೀಳಿಗೆಗೆ ಪಸರಿಸೋಣ. ವಿದೇಶಿಯರು inner teachings of Bhagavd Gita, Ramayana, ಕುಂಡಲಿನಿ, ಯೋಗ ಎಂಬುದರ ಬಗ್ಗೆ ಸಂಶೋಧನೆ ಮಾಡುತ್ತಿದ್ದರೆ, ನಾವುಗಳು ರಾಮ ಸರಾಯಿ ಕುಡಿದ, ಹೆಂಡತಿಯನ್ನು ಅವಮಾನಿಸಿದ್ದ ಎಂಬುದರ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಎಲ್ಲರು ಒಗ್ಗೂಡುವ ಸಮಯ ಬಂದಿದೆ, ದಲಿತರನ್ನು ಹಾದಿ ತಪ್ಪಿಸಿ ಹಿಂದೂ ಧರ್ಮದ ವಿರುದ್ಧ ಎತ್ತಿಕಟ್ಟಿ ಹಿಂದೂ ಧರ್ಮ ಒಡೆಯುವ ಷಡ್ಯಂತ್ರ ನಡೆಯುತ್ತಿದೆ, ಇದರ ವಿರುದ್ಧ ಹೋರಾಡೊಣ. ಭಾರತ ಒಂದು ರಾಷ್ಟ್ರ ಹಿಂದುತ್ವ ಅದರ ಆತ್ಮ ಎಂದು ವಿವೇಕಾನಂದರು ಹೇಳಿದ್ದರು. ಹಿಂದುತ್ವದ ಅರ್ಥವಿರುವುದು ನಮ್ಮ ಪೂರ್ವಜರ ನಂಬಿಕೆಗಳಲ್ಲಿ, ನಮ್ಮ ಸಂಸ್ಕೃತಿಯಲ್ಲಿ, ನಾವು ನಾವೇ ಕಚ್ಚಾಡಿಕೊಂಡರೆ ಭಾರತದ ಆತ್ಮಬಲವೇ ನಶಿಸುತ್ತದೆ. ಬನ್ನಿ ಇನ್ನಾದರು ಎಲ್ಲರೂ ಒಗ್ಗೂಡೋಣ .

– ಪ್ರಲ್ಹಾದ್ ಜೋಶಿ

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post