X

ಸುಬ್ಬಂಣನ ತ್ರಿಪದಿಗಳು

೧.ಭಿನ್ನ ಅಭಿರುಚಿಯ ಪತಿ|ತನ್ನತನವಿರದ ಸತಿ
ಸನ್ನಡತೆಯಿರದವರ ಸಹವಾಸದಲಿ ಶಾಂತಿ
ಶೂನ್ಯ ಕಾಣಯ್ಯ ಸುಬ್ಬಂಣ

೨.ತ್ಯಾಗವಿಲ್ಲದ ಯಾಗ|ರಾಗವಿಲ್ಲದ ಭೋಗ
ಮೇಘವಿರದಾಷಾಢದಾಕಾಶದಿಂದ
ಉಪಯೋಗವಿಲ್ಲೆಂದ ಸುಬ್ಬಂಣ

೩.ಬಂಗಾರ ಕಂಡಾಗ | ಅಂಗನೆಯು ತಾನೊಲಿಗು
ಸಿಂಗರದಿ ನಲಿಗು ಬಲು ತೆರದಿ ಪತಿ ಬಡವನಿರೆ
ಹಂಗಿಸುವಳೆಂದ ಸುಬ್ಬಂಣ

೪.ಕವಿಯ ಬಾಳಿನ ಬಗೆಯ |ಸವಿಯೆಂದು ತಿಳಿಯದಿರು
ಸವಿಯ ಪರರಿಂಗುಣಿಸಿ ಕಹಿಯ ತಾನನುದಿನವು
ಸವಿಯುವನು ಕವಿಯು ಸುಬ್ಬಂಣ

೫.ಕಳ್ಳು ಕುಡಿಯುವ ಜನರ| ಸುಳ್ಳನ್ನು ನುಡಿವವರ
ಕಳ್ಳತನ ಮಾಡುವರ ಸಂಗವದು ಮಾನಕ್ಕೆ
ಮುಳ್ಳಿನಂತಿಕ್ಕು ಸುಬ್ಬಂಣ

– ಬಲ್ನಾಡು ಸುಬ್ಬಣ್ಣ ಭಟ್

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post