ವ್ಯಾಘ್ರ-ಮನಸ್ಸು
ಕಾನನದ ಕ್ರೂರ ವ್ಯಾಘ್ರಕ್ಕೂ ಇರುವುದೊಂದು ಮುಗ್ಧತೆ
ಬುದ್ಧಿ ಜೀವಿಯಾದ ಮಾನವನಿಗೇಕಿಲ್ಲ ಇಂದು ಮಾನವೀಯತೆ?
ಹೊಟ್ಟೆ ತುಂಬಿದ ಮೇಲೆ ಹುಲಿಗೆ ಬೇಕಿಲ್ಲ ಬೇಟೆ
ಖಜಾನೆ ತುಂಬಿ ತುಳುಕಿದರೂ ನಿಲ್ಲುವುದಿಲ್ಲ ಮಾನವನ ಹಣದ ಬೇಟೆ
ವ್ಯಾಘ್ರನ ಮನವ ಸೋಲಿಸಿತ್ತು ಪುಣ್ಯಕೋಟಿ
ಮಾನವನ ಮನಕ್ಕೆ ಸಾಲುವುದಿಲ್ಲ ಸಾವಿರ ಕೋಟಿ
ಹುಲಿಗಿಲ್ಲ ನಾಳಿನ ಊಟದ ಚಿಂತೆ
ಹಣವಿದ್ದ ಸಿರಿವಂತನಿಗೆ ಕನಸಲ್ಲೂ ಕಾಣುವುದು ದುಡ್ಡಿನ ಕಂತೆ
ಅದನ್ನು ಇಮ್ಮಡಿಗೊಳಿಸುವ ಚಿಂತೆ
ಹುಲಿಯ ಕ್ರೌರ್ಯತೆ ಆಹಾರಕ್ಕಾಗಿ
ಮಾನವನ ಕ್ರೌರ್ಯತೆ ದುರಾಸೆಗಾಗಿ
ಆದರೂ ಮಾನವನ ದೃಷ್ಟಿಯಲ್ಲಿ ಹುಲಿಯು ಕ್ರೂರ
ಮಾನವನ ಎದುರು ಹುಲಿಯ ಕ್ರೂರತೆ ಬಲು ಹಗುರ ಬಹು ದೂರ
– Skanda K N
Facebook ಕಾಮೆಂಟ್ಸ್