X

ಹನಿಗವನಗಳು

ಎಲ್ಲ ಕಾಲಕ್ಕೂ 

ನೋಡುತ್ತಾರೆ ಪಂಚಾಂಗದಲ್ಲಿ
ರಾಹು ಕಾಲ ,ಗುಳಿಕ ಕಾಲ
ಈಗೀಗ ಎಲ್ಲರೂ ತಪ್ಪದೆ
ನೋಡಲೇಬೇಕು
(ತಮ್ಮ ) ಅಂಗಾಂಗಗಳಿಗೆ
“ಗುಳಿಗೆ ” ಕಾಲ !

 

ಲಂಚಾಯಣ

ಅವನು ನೌಕರಿ
ಸೇರಿದ ಹೊಸತು
ತಲೆತುಂಬ ಕೂದಲು
ಬಾಚಿಕೊಂಡ ;
ಕಾಲಕ್ರಮೇಣ
ಕೈ ತುಂಬಾ
ಬಾಚಿಕೊಂಡ !

 

ಇಲ್ಲಿ ತನಕ

ನನ್ನ ಹಿಡಿತಕ್ಕೂ ಸಿಗದೆ
ಹಿಂದುರುಗಿಯೂ  ನೋಡದೆ
ಏರುತ್ತಲೆ ಹೋಯಿತು
ಇಲ್ಲಿ ತನಕ …
ಇಳಿಸಬೇಕೆಂದರೂ ಇಳಿಯದ
ನನ್ನ ತೂಕ !

 

ಕ್ಷೀರಾಭಿಷೇಕ 

ಗುಡಿಯಲ್ಲಿ ನಿತ್ಯವೂ
ದೇವರಿಗೆ ಕ್ಷೀರಾಭಿಷೇಕ
ನಮ್ಮ ಮನೆಯಲ್ಲಿ
ಒಲೆಗೇ ಕ್ಷೀರಾಭಿಷೇಕ !

 

ಪ್ರೀತಿಗಾಗಿ 

ಪ್ರಿಯೆ ! ನಿನ್ನ ಪ್ರೀತಿಗಾಗಿ
ಹೇಳು ಏನು ಮಾಡಲಿ ?
ಇಗೋ ಈ ಸಾಗರದಲ್ಲಿ
ಮುಳುಗಲೂ ನಾ ರೆಡಿ
ಅದರೇನು ಮಾಡಲಿ
ನನಗೀಗ ನೆಗಡಿ !

 

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post