X

ಕವನ: ಭಾವಶೂನ್ಯ

ಮೃದುವಾದ ನಾಲಗೆಯಲ್ಲೂ
ಒರಟಾಗಿದೆ ಪದಗಳು…
ಚರ್ಮದ ಹೊದಿಕೆಯೊಳಗೂ
ಕಲ್ಲಿನ ಹೃದಯಗಳು..!

ಭಾವಶೂನ್ಯತೆಯ ನಡುವೆ
ಭಾವುಕತೆಗೆಲ್ಲಿದೆ ಬೆಲೆ…
ಭಾವನೆಗಳೇ ಸತ್ತಮೇಲೆ
ಹುಟ್ಟುವುದೇ ಪ್ರೀತಿಯ ಸೆಲೆ..?

ಹಂಗಿಸುವ ಮನಸುಗಳ ಮಧ್ಯೆ
ಬತ್ತಿ ಹೋಗುತಿದೆ ಸುಖದ ಒರತೆ…
ಕುಹಕ ನಗೆಯ ಮುಸುಕಿನೊಳಗೆ
ನಗಿಸುವ ಮುಖಗಳದೇ ಕೊರತೆ..!

ಬರಡಾದ ಒಣಹೃದಯಗಳಲಿ
ಕ್ಷಯಿಸಿಹೋದ ಭಾವಸಂಪತ್ತು..
ಸಮಯಸಾಧಕರ ನಡುವೆಯೂ
ಸಮಯಸವೆಸುವ ನಿಗೂಢ ಜಗತ್ತು.!

 

Udayabhaskar, Sullia

Photo by timies_art

Facebook ಕಾಮೆಂಟ್ಸ್

Udayabhaskar Sullia: ಮಡಿಕೇರಿ ತಾಲೂಕಿನ ಪೆರಾಜೆಯಲ್ಲಿ ಜನಿಸಿದ್ದು ಪ್ರಸ್ತುತ ಸುಳ್ಯದಲ್ಲಿ ವಾಸ್ತವ್ಯ. ಜೀವನ ನಿರ್ವಹಣೆಗಾಗಿ ಸ್ವ ಉದ್ಯೋಗ ಹೊಂದಿರುತ್ತೇನೆ. ದೇಶಭಕ್ತಿಯ ಭಾಷಣ, ಅಧ್ಯಾತ್ಮಿಕ ಪ್ರವಚನಗಳನ್ನು ಕೇಳುವುದು, ಹಳೆಯ ಸಿನೆಮಾ ಹಾಡು, ಭಾವಗೀತೆ, ಭಕ್ತಿಗೀತೆಗಳನ್ನು ಆಲಿಸುವುದು, ಸಮಾಜಸೇವೆ, ಸದ್ವಿಚಾರ ಪ್ರಸಾರ... ಇವು ನನ್ನ ಆಸಕ್ತಿಯ ಕ್ಷೇತ್ರಗಳು. ಭಜನೆ ಹಾಡುವುದು, ಕವನ ರಚನೆ, ಸಾಮಾಜಿಕ-ದೇಶಭಕ್ತಿ- ಸಂಸ್ಕೃತಿಗಳ ಕುರಿತಾದ ಚಿಕ್ಕಪುಟ್ಟ ಲೇಖನಗಳನ್ನು ಬರೆಯುವುದು ಹಾಗೂ ಬೌದ್ಧಿಕ ಮಟ್ಟವನ್ನು ಹೆಚ್ಚಿಸುವ ಸದ್ಗ್ರಂಥಗಳ ಅಧ್ಯಯನ.. ಇವು ನನ್ನ ಹವ್ಯಾಸ.
Related Post