ಅಟಲ್ ಗೆ ಭಾರತ ರತ್ನ ಕೊಡಬಾರದು ಎನ್ನುವುದಕ್ಕೆ ನಾಲ್ಕು ಕಾರಣಗಳು ಹೀಗೊಂದು ವ್ಯರ್ಥ ಪ್ರಲಾಪ ಅಂತರ್ಜಾಲದಲ್ಲಿ ಹರಿದಾಡುತ್ತಿದೆ… ಇಂಡಿಯನ್ ಟುಡೇ ಪತ್ರಕರ್ತ ಮಹಾಶಯನೊಬ್ಬ ಅಟಲ್ ಜೀ ಗೆ ಯಾಕೆ ಭಾರತ ರತ್ನ ಕೊಡಬಾರದಿತ್ತು ಅಂತ ಪಟ್ಟಿ ಮಾಡುತ್ತಾ ಸಾಗುತ್ತಾನೆ.
ಹಾರ್ ನಹೀ ಮಾನೂಂಗಾ
ರಾರ್ ನಹೀ ಠಾನೂಂಗ
ಕಾಲ್ ಕೇ ಕಪಾಲ್ ಪರ್
ಲಿಖ್ ತಾ – ಮಿಟಾತಾ ಹೂಂ
ಗೀತ್ ನಯಾ ಗಾತಾ ಹೂಂ!
80 ರ ಹರೆಯದಲ್ಲೂ ‘ಗೀತ್ ನಯಾ ಗಾತಾ ಹೂಂ’ ಎನ್ನುತ್ತಾ, ಜೀವನೋತ್ಸಾಹದಿಂದ ತುಂಬಿದ್ದ, ರಾಜಕಾರಣಿ ರೂಪದಲ್ಲಿದ್ದ, ಕವಿ, ಕನಸುಗಾರ, ದೇಶದ ಭದ್ರತೆಗೆ ಒಂದಿಷ್ಟು ಒತ್ತು ಕೊಟ್ಟು ಸಾಕಾರಗೊಳಿಸಿದವರೇ ಅಟಲ್ ಬಿಹಾರಿ ವಾಜಪೇಯಿ. ಇಂತಹಾ ಮಹಾನ್ ವ್ಯಕ್ತಿಯ ಬಗ್ಗೆ ಏನೋ ಒಂದು ಬಾಯಿಗೆ ಬಂದಂತೆ ಹೇಳಿದರೆ ಯಾರಿಗೆ ತಾನೇ ಸಹ್ಯವಾದೀತು?
ಇಂಡಿಯನ್ ಟುಡೇ ಪತ್ರಕರ್ತ MD Hussain Rahmani ಎಂಬಾತ “Four Reasons Why Vajapeyi doesn’t deserve Bharath Rathna” ಎಂದು ಪಟ್ಟಿ ಮಾಡುತ್ತಾನೆ.
ಮೊದಲನೇ ಕಾರಣ ನೋಡಿ, Bharath Rathna only for being a Prime Minister.! ಭಾರತ ರತ್ನವೆಂದು ಬಹಳ ಶ್ರೇಷ್ಟ ಗೌರವ, ಕೇವಲ ಪ್ರಧಾನ ಮಂತ್ರಿಯಾದ ಮಾತ್ರಕ್ಕೆ ವಾಜಪೇಯಿಗೆ ಇದು ಸಲ್ಲುವುದು ಸರಿಯಲ್ಲವೆಂಬುದು ನಿಮ್ಮ ತಗಾದೆ. ಹಾಗಿದ್ದರೆ, 1971 ರಲ್ಲಿ ಇಂದಿರಾ ಗಾಂಧಿಗೆ, 1991 ರಲ್ಲಿ ರಾಜೀವ್ ಗಾಂಧಿಗೆ ಭಾರತ ರತ್ನ ಸಂದಿದ್ದು ಎಷ್ಟರ ಮಟ್ಟಿಗೆ ಸರಿ ಸ್ವಾಮೀ?? ಪತ್ರಕರ್ತರೇ, ಇವರುಗಳಿಗೆ ಭಾರತ ರತ್ನ ಗೌರವ ಸಂದಿದ್ದಕ್ಕೆ ನಮ್ಮದೇನು ಆಕ್ಷೇಪವಿಲ್ಲ, ಆದರೆ ನಿಮಗೆ ನೆನಪಿಸಿದೆ, ಅವರುಗಳೂ ಭಾರತದ ಪ್ರಧಾನ ಮಂತ್ರಿಗಳಾಗಿದ್ದರಷ್ಟೇ ಎಂದು. ಬಹುಶಃ, ನಿಮ್ಮ ನಿಲುವು ದೇಶ ಕಟ್ಟಿದವನನ್ನು ಗದ್ದಾರ್ ಎಂದ ಪರಕೀಯಳಿಗೆ ಭಾರತ ರತ್ನ ಸಲ್ಲಬೇಕೆಂದೇನೋ. ಅಷ್ಟಕ್ಕೂ ಅಟಲ್ ಗಾಂಧಿ ಕುಟುಂಬದವರಂತೆ ಸುಖಾ ಸುಮ್ಮನೆ ಪ್ರಧಾನಿಯಾದವರಲ್ಲ. ಅದರ ಹಿಂದೆ ನಲುವತ್ತು ವರ್ಷಗಳ ಮಹತ್ತರ ಹೋರಾಟವಿತ್ತು. ನೆನಪಿರಲಿ.. ಅಟಲ್ ಅಧಿಕಾರಾವಧಿಯಲ್ಲಿ ನಮ್ಮ ವಿದೇಶಿ ವಿನಿಮಯ ಮೀಸಲು ನಿಧಿ 105 ಶತಕೋಟಿ ಡಾಲರ್ ಮೀರುವ ಮೂಲಕ, ಭಾರತ ಸಾಲ ನೀಡುವ ಸಾಮರ್ಥ್ಯ ಪಡೆದಿತ್ತು. ಜಗತ್ತಿನ 6ನೇ ಮುಂಚೂಣಿ ರಾಷ್ಟ್ರವಾಗಿ ಭಾರತ ಹೊರಹೊಮ್ಮಿತ್ತು.
ಅಟಲ್, “ಭಿಕ್ಷುಕರ ನಾಡು ನಮ್ಮದಲ್ಲ, ಕೈ ಚಾಚುವ ಪಾಡು ಎಮಗಿಲ್ಲ” ಎಂಬುದನ್ನು ಅಕ್ಷರಶಃ ನಿರೂಪಿಸಿದರು.
Let’s go back in Time Machine, Fasten Your Seat belts.. Get Set and Go…
1996 ರಲ್ಲಿ 13 ದಿನಗಳಲ್ಲಿ ರಾಜೀನಾಮೆ, ಕೆಲವೇ ದಿನಗಳ ಅಧಿಕಾರಾವಧಿಯಲ್ಲಿ ತನ್ನ ಸ್ಥಾನ ಭದ್ರತೆಯ ಕುರಿತು ತಲೆಗೆಡಿಸಿಕೊಳ್ಳದ ಪ್ರಧಾನಿ ಅಣ್ವಸ್ತ್ರ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರು. 1998 ರಲ್ಲಿ ಮೆಜಾರಿಟಿಯಲ್ಲಿ ಗೆದ್ದು, ಪ್ರಧಾನಿಯಾಗಿ ಬಂದ ಬಳಿಕ ಭಾರತ ಕಂಡಿದ್ದು ಅಭಿವೃದ್ಧಿಯ ದಿನಗಳನ್ನು ಮಾತ್ರ.
1998 ರಲ್ಲಿ ನಡೆದ ಪೋಕ್ರಾನ್ ಅಣು ಪರೀಕ್ಷೆ ಅದೊಂದು “ನ ಭೂತೋ ನ ಭವಿಷ್ಯತಿ”
ಆಗಲೇ ಹೇಳಿದಂತೆ ಸಮಯದ ಯಂತ್ರದಲ್ಲಿ ಸ್ವಲ್ಪ ಹಿಂದಕ್ಕೆ ಹೋಗುತ್ತಿದ್ದೇನೆ.. 1964, ಚೀನಾ ತನ್ನ ಪ್ರಥಮ ಅಣ್ವಸ್ತ್ರ ಪರೀಕ್ಷೆ ನಡೆಸಿತ್ತು. ಅದಕ್ಕೆ ಪಾರ್ಲಿಮೆಂಟಿನಲ್ಲಿ ವಾಜಪೇಯಿ ಪ್ರತಿಕ್ರಿಯೆ ಇಷ್ಟೇ “An answer to an Atom Bomb is an Atom Bomb Alone” ಸಂಪೂರ್ಣ ಪಾರ್ಲಿಮೆಂಟಿನಲ್ಲಿ ಮಿಂಚಿನ ಸಂಚಾರವಾದ ಕ್ಷಣವದು. ಇಲ್ಲಿಯೇ ಭವ್ಯ ಭಾರತ ಕನಸುಗಾರನೊಬ್ಬನ ದರ್ಶನವಾಯಿತು.
ಕನಸು ನನಸಾದ ಕ್ಷಣ…
1998 ಎಪ್ರೀಲ್ 6 ರಂದು ಪಾಕಿಸ್ತಾನ ಎಂಬ ಮಿಸೈಲ್ ಪರೀಕ್ಷೆ ನಡೆಸಿತ್ತು. ಪಾಕಿಸ್ತಾನಕ್ಕೆ ಭಾರತ ಏನೆಂಬುದನ್ನು ತೋರಿಸಬೇಕೆಂಬ ಹಠ ಅಟಲ್ ಗೆ. ಏಪ್ರೀಲ್ 8 ರಂದು ವಾಜಪೇಯಿ, ಕಲಾಂ ಆರ್ ಚಿದಂಬರಂ ಹಾಗು ಅನಿಲ್ ಕಾಕ್ಕೋಡ್ಕರ್ ಅವರುಗಳ ಬಳಿ ಅಣ್ವಸ್ತ್ರ ಪರೀಕ್ಷೆಯ ಸಿದ್ಧತೆಗಳನ್ನು ನಡೆಸಲು ಆದೇಶಿಸುತ್ತಾರೆ. ವಿಷಯವಿರುವುದು ಪರೀಕ್ಷೆ ನಡೆಸಿದ್ದರಲ್ಲಿ ಅಲ್ಲ. ವಿಶ್ವಕ್ಕೆ ದೊಡ್ಡಣ್ಣ ಎನಿಸಿದ್ದ ಅಮೇರಿಕಾದ ಗವರ್ನಮೆಂಟ್ ಗುಪ್ತಚರ ಇಲಾಖೆ CIA (Central Intelligence Agency)ಯ ಕಣ್ತಪ್ಪಿಸಿ,ಅಣ್ವಸ್ತ್ರ ಪರೀಕ್ಷೆ ನಡೆಸಿದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಎಂತಹ ವಿರೋಧಗಳು ವ್ಯಕ್ತವಾಗಬಹುದು ಎಂಬುದು ತಿಳಿದಿದ್ದೂ ಇಂತಹಾ ರಿಸ್ಕ್ ತೆಗೆದುಕೊಂಡು ದೇಶದ ಭದ್ರತೆಗೆ ಒತ್ತುಕೊಟ್ಟು ವಾಜಪೇಯಿ ತನ್ನನ್ನೇ ರಿಸ್ಕ್ ಗೆ ಒಡ್ಡಿಕೊಂಡಿದ್ದರು.
ಸಾಟಲೈಟ್ ಗಳಿಂದ ತಪ್ಪಿಸಿಕೊಂಡು ಅಣ್ವಸ್ತ್ರ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವುದು ಸುಲಭದ ಮಾತಲ್ಲ. ನಮ್ಮ ಚತುರ ರಾಜಕಾರಣಿ ಹಾಗೂ ಡಿ ಆರ್ ಡಿ ಓ ದ ಮೇಧಾವಿ ವಿಜ್ಞಾನಿಗಳ ತಂಡ ನಡೆಸಿದ ಚಾಕಚಕ್ಯತೆಯ ಕೆಲಸ ನಮ್ಮನ್ನು ಬೆರಗಾಗಿಸದೇ ಇರದು. ಮೊದಲಿಗೆ, ಯಾವಾಗ ಸಿಐಎ ಯ ಸ್ಪೈ ಸಾಟಲೈಟ್ ಪೋಕ್ರಾನ್ ಗೆ ಫೋಕಸ್ ಆಗುತ್ತದೆ ಎಂದು ಅಧ್ಯಯನ ನಡೆಸಿ, ಸ್ಪೈ ಸಾಟಲೈಟ್ ಆಕ್ಟಿವಿಟಿ ಪೋಕ್ರಾನ್ ಮೇಲಿರುವುದಿಲ್ಲವೋ ಆಗ ನಡೆಯಿತು ಈ ಸಿದ್ಧತೆ. ಇವೆಲ್ಲದರ ಹಿಂದಿನ ಬೆಂಬಲ, ಮಾಸ್ಟರ್ ಮೈಂಡ್ ನಮ್ಮ ಅಟಲ್ ಜೀ. ಅವರು ಮನಸ್ಸು ಮಾಡದಿದ್ದರೆ ಇದ್ಯಾವುದೂ ನಡೆಯುತ್ತಿರಲಿಲ್ಲ ಬಿಡಿ. ಪುನಃ ನೆನಪಿಸುತ್ತಿದ್ದೇನೆ, 1996ರಲ್ಲಿ ಅಣ್ವಸ್ತ್ರ ಪರೀಕ್ಷೆಗೆ ಸಿದ್ಧತೆಗೊಳಿಸುತ್ತಿದ್ದುದು ಸಿಐಎ ಗೆ ತಿಳಿದು ಭಾರತಕ್ಕೆ ವಾರ್ನ್ ಮಾಡಿದ್ದಲ್ಲದೇ, ತನ್ನ ಗುಪ್ತಚರ ಕಾರ್ಯವನ್ನು ಹೆಚ್ಚಿಸಿತ್ತು. ಇಂತಹಾ ಸಮಯದಲ್ಲಿ ಯಾರಿಗೂ ತಿಳಿಯದಂತೆ ಈ ಕೆಲಸವನ್ನು ಮಾಡುವುದು ಎಂತಹಾ ಕಷ್ಟದ ಕೆಲಸ ಎಂದು ಊಹಿಸಿಕೊಳ್ಳಿ. ಇವೆಲ್ಲವನ್ನೂ ಮೀರಿ ನಿಂತರು ಅಟಲ್. ಮೇ 11, 3.43.44 pm (ಭಾರತೀಯ ಕಾಲಮಾನ) ರಂದು ಅಣ್ವಸ್ತ್ರ ಸ್ಪೋಟವಾಯಿತು. ಅಟಲ್ ಅವರ ಮಾತುಗಳಲ್ಲೇ ಕೇಳಿ.
ವಿಶ್ವವೇ ನಿಬ್ಬೆರಗಾಯಿತು, ವಿಜ್ಞಾನಿಗಳು ಹಾಗೂ ಅಟಲ್ ಜೀ ಗೆಲುವಿನ – ಹೆಮ್ಮೆಯ ನಗೆ ಬೀರಿದರು, ಅಮೇರಿಕಾಕ್ಕೆ ಶಾಕ್ ನಿಂದ ಹೊರಬರಲು ಕಷ್ಟ ಸಾಧ್ಯವಾಯಿತು. “An answer to an Atom Bomb is an Atom Bomb Alone” ಮಾತು ನಿಜವಾಯಿತು. ಭಾರತೀಯರು ತಮ್ಮ ಕನಸಿನ ಪ್ರಧಾನಿ ಬಂದರಲ್ಲಾ ಎಂದು ಸಂಭ್ರಮಿಸಿದರು.
ಕಾರ್ಗಿಲ್ ಯುದ್ಧದ ವಿಜಯದ ಮೂಲಕ, “ಪ್ರಧಾನಿ ಗ್ರಾಮ ಸಡಕ್ ಯೋಜನೆ” ಹರಿಕಾರನಾಗಿ ಹಳ್ಳಿ ಹಳ್ಳಿಗೂ ರಸ್ತೆಗಳ ಮೂಲಕ ತಲುಪಿದ, “ಸರ್ವ ಶಿಕ್ಷಣ ಅಭಿಯಾನದ”ದಿಂದ ಅಕ್ಷರ ದಾಸೋಹ ಉಣಬಡಿಸಿದ, ವಿದೇಶಿ ರಾಷ್ಟ್ರಗಳೊಡನೆ ದೇಶದ ಸೌಹಾರ್ದ ಬಾಂಧವ್ಯ ಹೆಚ್ಚಿಸಿದ, 22 ವರ್ಷಗಳಲ್ಲಿ ಭಾರತಕ್ಕೆ ಭೇಟಿ ನೀಡದೇ ಇದ್ದ ಅಮೆರಿಕಾ ಅಧ್ಯಕ್ಷ ಭಾರತಕ್ಕೆ ಭೇಟಿ ನೀಡುವ ಮನಸ್ಸು ಮಾಡುವಂತೆ ಮಾಡಿದ, 13 ದಿನಗಳಲ್ಲಿ ರಾಜೀನಾಮೆ ನೀಡಬೇಕಾದ ಸಂದರ್ಭ ಬಂದಾಗಲೂ ‘ಶಾರ್ಟ್ ಕಟ್’ ದಾರಿ ಬಳಸದೇ ಇದ್ದ, ಯಾವುದೇ ಹಗರಣಗಳ ಸರಮಾಲೆ ಸೃಷ್ಟಿಸದೇ, ಒಂದೆರಡಲ್ಲ ಬರೋಬ್ಬರಿ 24 ಪಕ್ಷಗಳನ್ನು ಸಂಘಟಿಸಿ ಸಮರ್ಥ ಭಾರತವನ್ನು ಸೃಷ್ಟಿಸಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಗೆ ಭಾರತ ರತ್ನ ಗೌರವ ನೀಡಿದ್ದು ತಪ್ಪೆಂದಾದರೆ, ಇನ್ಯಾರಿಗೆ ನಿಮಗೆ ಸಲ್ಲಬೇಕಿತ್ತೇ ಈ ಗೌರವ???
ಇನ್ನು.. Architect of Babri Masjid Demolition
ಆಹಾ…ಅದೆಂತಹಾ ‘ಬಿರುದು’ ಕೊಟ್ಟುಬಿಟ್ಟಿರಿ ಪತ್ರಕರ್ತರೇ?? ನಿಮ್ಮ ಮಾತಿನ ಧಾಟಿಯಲ್ಲೇ ನಿಮಗೂ ಪ್ರೂಫ್ ಕೊಡುತ್ತಿದ್ದೇನೆ ನೋಡಿ. “Vajapayee’s name was not there in Conspiracy. His name was there only in one of the list” ಈ ಮಾತು ಹೇಳಿದ್ದು ಇನ್ಯಾರು ಅಲ್ಲ, 2009 ಡಿಸೆಂಬರ್ ನಲ್ಲಿ ಯೂನಿಯನ್ ಮಿನಿಸ್ಟರ್ ಆಗಿದ್ದ ಸಲ್ಮಾನ್ ಖುರ್ಷೀದ್ ಅದೂ ಪವಿತ್ರ ಪಾರ್ಲಿಮೆಂಟಿನಲ್ಲಿ. ಅಂದ ಹಾಗೆ ಇದರ ರಿಪೋರ್ಟ್ ನೀವೀಗ ಉದ್ಯೋಗ ಮಾಡುತ್ತಿರುವ ಇಂಡಿಯಾ ಟುಡೇ ಪತ್ರಿಕೆಯಲ್ಲೂ ಬಂದಿದೆ ಸ್ವಾಮಿ! (ವೀಡಿಯೋ ಲಿಂಕ್1, ಲಿಂಕ್2)
ಮತ್ತೊಂದು.. ಸ್ವಾತಂತ್ರ್ಯ ಹೋರಾಟದಲ್ಲಿ ವಾಜಪೇಯಿ ಹೋರಾಟ ಪ್ರಶ್ನಾರ್ಥಕವಾಗಿದೆ ಎಂದು.. ಸ್ವತಃ ವಾಜಪೇಯಿ ಅವರೇ ಉಲ್ಲೇಖಿಸುತ್ತಾರೆ, “1942 ರಲ್ಲಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಹೋರಾಟದಲ್ಲಿ ಭಾಗಿಯಾಗಿ ಜೈಲು ಸೇರಿದ್ದೆ. 16ನೇ ವಯಸ್ಸಿನಲ್ಲಿ ಹೋರಾಟದ ಫಲವಾಗಿ ತಮ್ಮ ಹುಟ್ಟೂರಿನಲ್ಲಿ ಸೆರೆಮನೆವಾಸ ಅನುಭವಿಸಿದ್ದೆ” ಎಂದು. ಸರಿ, ನಿಮಗೆ ಇದರಲ್ಲಿ ನಂಬಿಕೆ ಇಲ್ಲ ಎಂದೇ ಇಟ್ಟುಕೊಳ್ಳೋಣ, ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಅಟಲ್ ಗೆ ವಿಶ್ವಾಸ ಇರಲಿಲ್ಲವೇನೋ, ಎಲ್ಲರಿಗೂ ಎಲ್ಲಾ ಹೋರಾಟದಲ್ಲೂ ವಿಶ್ವಾಸ ಇರಬೇಕೆಂದೇನೂ ಇಲ್ಲ. ಆದ್ದರಿಂದಲೇ ಅವರು ನೀವು ಪ್ರಸ್ತಾಪಿಸಿದ ವಿಷಯ ಹೇಳಿದ್ದಿರಬಹುದು. ಯಾಕೆ ಈ ಆಯಾಮದಲ್ಲಿ ನೀವು ಯೋಚಿಸಬಾರದು?? ಅಷ್ಟಕ್ಕೂ ಹೋರಾಟದಲ್ಲಿ ಭಾಗಿಯಾಗಿಲ್ಲ ಎಂದ ಮಾತ್ರಕ್ಕೇ ದೇಶದ್ರೋಹಿ ಆಗಲೂ ಸಾಧ್ಯವಿಲ್ಲ.
ಕೊನೆಯದಾಗಿ ನೀವು ಹೇಳಿದಂತೆ ವಾಜಪೇಯಿ ಎಂಬ ಕೋಮುವಾದಿ… ಭಾರತದ ಮುಸಲ್ಮಾನ ಬಾಂಧವರ ಜೊತೆ ಅದೆಷ್ಟು ಸ್ನೇಹ ಬಾಂಧವ್ಯವಿತ್ತು ಎಂಬುದು ನಿಮಗೆ ಬಹುಶಃ ತಿಳಿದಿಲ್ಲ. ಸರಿ, ಹಾಗಿದ್ದರೆ ಮುಸ್ಲಿಂ ಪ್ರಮುಖರೊಬ್ಬರ ಮಾತುಗಳಲ್ಲಿಯೇ ಕೇಳಿ ನಿಮ್ಮ ಪ್ರಶ್ನೆಗುತ್ತರ: ಅಟಲ್ ಗೆ ಭಾರತ ರತ್ನ ಘೋಷಣೆಯಾದ ಸಂದರ್ಭ ಖಲೀದ್ ರಶೀದ್ ಫಿರಂಗಿ ಅವರ ಮಾತುಗಳಿವು “ಅಟಲ್ ಜೀಗೆ ಭಾರತ ರತ್ನ ಗೌರವವನ್ನು ನಾವೆಂದಿಗೂ ಸ್ವಾಗತಿಸುತ್ತೇನೆ. ನಾನು ಅವರಿಂದ ಬಹಳಷ್ಟು ಕಲಿತಿದ್ದೇನೆ. ಎಂದಿಗೂ ಕೊನೆಯಾಗದ ಜೀವನ ಪಾಠಗಳನ್ನು ನನ್ನೊಳಗೆ ಬಿತ್ತಿದ್ದಾರೆ ಅಟಲ್, ಯುಪಿಯ ಆಡಳಿತ ಸಮಯದಲ್ಲೇ ಬರಬೇಕಿತ್ತು ಈ ಗೌರವ” (“We welcome the government’s decision to honour Atalji. He has done a commendable job as prime minister of the country. I have learnt good lessons from his personality and these will have a lasting imprint on me. He should have been bestowed the Bharat Ratna during the UPA government itself,”) ಸ್ವಾಮೀ ಈ ಮಾತು ಯಾವುದೇ “ಹಿಂದೂ ಕೋಮುವಾದಿ” ಹೇಳಿದ್ದಲ್ಲ.
ಇರಲಿ, ನೀವು ಹೇಳಿದಿರೆಂದು ನಾವ್ಯಾರೂ ತಲೆಕೆಡಿಸಿಕೊಳ್ಳಲ್ಲ. ಅಟಲ್ ಪ್ರತಿಷ್ಟೆಯೇನೇನೂ ಕಮ್ಮಿಯಾಗಲ್ಲ. ಕಮ್ಮಿಯಾಗುವುದೇನಾದರೂ ಇದ್ದರೆ ಅದು ನಿಮ್ಮದೇ(ಇದ್ದರೆ ಮಾತ್ರ). ಪ್ರಧಾನಿ ಸ್ಥಾನ ರಾಷ್ಟ್ರದ ಅತ್ಯಂತ ಪ್ರಭಾವಿ ಹಾಗೂ ಪವಿತ್ರ ಸ್ಥಾನ, ಭದ್ರತೆಯ ಗೌಪ್ಯ ಮಾಹಿತಿಗಳ ಭಂಡಾರವದು. ಇವೆಲ್ಲದಕ್ಕೂ ಸಂಪೂರ್ಣ ನ್ಯಾಯ ಒದಗಿಸಿದವರೇ ಅಟಲ್ ಬಿಹಾರಿ ವಾಜಪೇಯಿ.
ಈಗ ನೀವೇ ಹೇಳಿ, ದೇಶವೆಲ್ಲ ಮಾತ್ರವಲ್ಲ, ಪಾಕಿಸ್ತಾನದ ಮುಷ್ರಫ್ ಕೂಡಾ ಅಟಲ್ ಜಪ ಮಾಡುವಂತೆ ಮಾಡಿ ಗಡಿಯಲ್ಲೊಂದಿಷ್ಟು ದಿಟ್ಟ ಉತ್ತರಗಳನ್ನು ನೀಡಿದ, ಆರ್ಥಿಕ ಕ್ಷೇತ್ರದಲ್ಲಿ ಭಾರತದ ಸ್ಥಾನವನ್ನು ಹಿಂದೆಂದೂ ಇಲ್ಲದಂತೆ ಉತ್ತಮಗೊಳಿಸಿದ, 80 ರ ಯೌವ್ವನದಲ್ಲಿ ದೇಶವನ್ನೇ ಪ್ರೀತಿಯಿಂದ ಉನ್ನತಿಗೊಳಿಸಿದ ಅಟಲ್ ಮೇಲ್ಯಾಕೆ ನಿಮಗೆ ಕೆಟ್ಟ ಕಣ್ಣು?? ಅಷ್ಟಕ್ಕೂ ನೀವೇನೋ ಅಂದಕೂಡಲೇ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಮೇಲಿನ ನಮ್ಮ ಗೌರವವಾಗಲೀ, ಅವರ ಕಾರ್ಯ ಸಾಧನೆಗಳಿಗಾಗಲೀ ಧಕ್ಕೆ ಬರದು.
ಆದರೂ ಒಂದು ಪ್ರಶ್ನೆ, ನೀವೆಲ್ಲಾ ಬದಲಾಗುವುದೆಂದು????
Facebook ಕಾಮೆಂಟ್ಸ್