ಕಾದಂಬರಿ

ಕಾದಂಬರಿ

ಆತ್ಮ ಸಂವೇದನಾ ಅಧ್ಯಾಯ 10

ಆತ್ಮ ತನ್ನ ಸೃಷ್ಟಿಯು ಗಾಜಿನ ಬೀಕರಿನಲ್ಲಿ ಘಟ್ಟಿಯಾಗುತ್ತಿರುವುದನ್ನು ನೋಡುತ್ತ ಐದು ತಾಸುಗಳಿಂದ ಅಲ್ಲಿಯೇ ಕುಳಿತಿದ್ದ. ಹಸಿವೆ, ನಿದ್ದೆಗಳ ಪರಿವೆಯಿರಲಿಲ್ಲ; ಪರಿವೆಯಿದ್ದರೂ ಅವನ ಹಿಡಿತದಲ್ಲಿಯೇ ಅಲ್ಲವೇ ಹಸಿವೆ ನಿದ್ದೆಗಳು? ಇನ್ನೊಂದು ಘಂಟೆಯಲ್ಲಿ ಅವನ ಸೃಷ್ಟಿ, ಅವನ ಸ್ವಂತಕ್ಕೊಂದು ಜೀವ, ಉಸಿರಾಡತೊಡಗಲು ಇನ್ನು ಕೆಲವೇ ನಿಮಿಷಗಳು ಬಾಕಿ . ಅವಳಿಗೆ ಏನೆಂದು...

ಕಾದಂಬರಿ

ಆತ್ಮ ಸಂವೇದನಾ ಅಧ್ಯಾಯ 9

ಯಜ್ಞಾ ಭಟ್ಟರು ಕೊನೆಯುಸಿರೆಳೆದು ತಿಂಗಳುಗಳೇ ಕಳೆದಿದ್ದವು. ಮತ್ತೆ ಒಂಟಿತನದ ಕತ್ತಲಿನ ರಾತ್ರಿಗಳೇ ವರ್ಷಿಗೆ ಶಾಶ್ವತವಾಯಿತು. ವರ್ಷಿಯ ಜೀವನ ಏರಿಳಿತಗಳಿಲ್ಲದೆ ನಡೆಯುತ್ತಲೇ ಇತ್ತು. ಪ್ರತಿದಿನದ ಕೆಲಸಗಳು, Routine ಬದುಕಿಗೆ ಒಗ್ಗಿ ಹೋಗಿದ್ದ. ಕೆಲ ಹೊತ್ತು ಸಾಕು ದೈನಂದಿನ ದಿನಚರಿಗೆ. ಇನ್ನುಳಿದ ಸಮಯ ತಂದೆಯ ಮಮತೆಯ ನೆನಪಿನಲ್ಲಿ, ಕಳೆದು ಹೋದ ಗೆಳತಿಯ ಪ್ರೀತಿಯ...

ಕಥೆ ಕಾದಂಬರಿ

ಆತ್ಮ ಸಂವೇದನಾ. ಅಧ್ಯಾಯ 8

ಆತ್ಮ ಸಂವೇದನಾ. ಅಧ್ಯಾಯ 7 ವರ್ಷಿ ತನ್ನ ಪ್ರಯೋಗಾಲಯದಲ್ಲಿ ಕಾರ್ಯನಿರತನಾಗಿದ್ದ. ಅದೊಂದೇ ಅವನ ಪ್ರಪಂಚ. ಆತನ ಮಹಾಕಲ್ಪನೆ ಅದು, ಕನಸುಗಳಲ್ಲಿನ ನಿರಂತರ ಕನವರಿಕೆ ಅದು; ನಿರಂತರ ಬೆಳಕಿನ ಹಾದಿಯ ಕನಸು ಅವನದು. ಬೆಲಕೆಂಬುದು ಎಲ್ಲದಕ್ಕೂ ಬೇಕು. ರಾತ್ರಿಯಾದರೆ ಕರಾಳ ಕತ್ತಲೆ. ಹಗಲುಗಳೇ ಚಿಕ್ಕವು; ರಾತ್ರಿಯ ಕತ್ತಲೆ ದೀರ್ಘ. ವರ್ಷಿಗೆ ಕತ್ತಲೆಂದರೆ ಜಿಗುಪ್ಸೆ, ಕತ್ತಲು...

ಕಥೆ ಕಾದಂಬರಿ

ಆತ್ಮ ಸಂವೇದನಾ. ಅಧ್ಯಾಯ 7

ಆತ್ಮ ವರ್ಷಿ ಸೃಷ್ಟಿಸಿದ ಮನುಷ್ಯ. ಕಲಿಯುವಿಕೆಯಿಂದಲೇ ಜ್ಞಾನ ಪಡೆಯುವುದು ಕಳೆದ ಕಾಲ; ಈಗ ಜ್ಞಾನ ಕೂಡ ಹುಟ್ಟುತ್ತಲೇ ಬಂದಿರುತ್ತದೆ. ಆದ್ದರಿಂದಲೇ ಆತ್ಮ ಕೂಡ ವರ್ಷಿಯಷ್ಟೇ ಚುರುಕಾಗಿದ್ದ. ವರ್ಷಿ ತಿಳಿದಿರುವ ಪ್ರತಿಯೊಂದೂ ವಿದ್ಯೆಯೂ ಆತ್ಮನಿಗೆ ಗೊತ್ತು. ಆದರೆ ಒಂದು ವಿಷಯದಲ್ಲಿ ಮಾತ್ರ ವರ್ಷಿ ಆತ್ಮನಿಗಿಂತ ಶಕ್ತಿವಂತ, ಆತ ವಿಶ್ವಾತ್ಮನನ್ನು ನೋಡಬಲ್ಲ. ವಿಶ್ವದ ಅತ್ಯಂತ...

ಕಾದಂಬರಿ

ಆತ್ಮ ಸಂವೇದನಾ: ಅಧ್ಯಾಯ 6

ಭೂಮಿಯಿಂದ ಸುಮಾರು ಜ್ಯೋತಿವರ್ಷಗಳ ದೂರದಲ್ಲಿ ಕತ್ತಲು. ಬೆಳಕೆ ಇಲ್ಲದ ಕತ್ತಲು. ಸಾವಿರಾರು ವರ್ಷಗಳಿಂದ ಅಲ್ಲಿ ಬೆಳಕು ಕಂಡೇ ಇಲ್ಲ. ಕತ್ತಲಲ್ಲಿಏನೂ ಕಾಣುವುದಿಲ್ಲ. ನಕ್ಷತ್ರವೊಂದು ಸತ್ತು ಕಪ್ಪು ವಲಯದಲ್ಲಿ ಸೇರಿದ ಜಾಗ. ಸ್ಮಶಾನ ಬೆಂಕಿಯಂತೆ ಸುಡುತ್ತಿದ್ದ ಬೆಂಕಿಯ ಚೆಂಡೊಂದು ತನ್ನ ಜೀವನಮುಗಿಸಿ ವಿಶ್ವಾತ್ಮನಲ್ಲಿ ಲೀನವಾಗಿ ಅದೆಷ್ಟು ಕಾಲವಾಯಿತೋ, ಆ ದಿನದಿಂದ ಆ...

ಕಥೆ ಕಾದಂಬರಿ

ಆತ್ಮ ಸಂವೇದನಾ: ಅಧ್ಯಾಯ 5

ಆತ್ಮನಿಗೂ ತಿಳಿಯದ, ಅರ್ಥವಾಗದ ವಿಷಯವೊಂದಿತ್ತು. ಭಾವನೆಗಳು, ಸಂಬಂಧಗಳ ಚೌಕಟ್ಟಿನಲ್ಲಿ ಬದುಕುತ್ತಿದ್ದ ಮನುಷ್ಯ ಹೇಗೆ ಇಷ್ಟೊಂದು ಬದಲಾದ…? ಒಬ್ಬರು ಇನ್ನೊಬ್ಬರ ಜೊತೆ ಮಾತನಾಡುವುದಿಲ್ಲ. ಎರಡು ಮನಸುಗಳ ನಡುವೆ ಸೂಕ್ಷ್ಮ ಸಂಬಂಧದ ಎಳೆಯೇ ಇಲ್ಲ. ಯಾರೂ ಇನ್ನೊಬ್ಬರಿಗಾಗಿ ಕೆಲಸ ಮಾಡುವುದಿಲ್ಲ. ಎಲ್ಲರೂ ಸ್ವತಂತ್ರರೇ, ಎಲ್ಲರಿಗೂ ಸ್ವೆಚ್ಛೆಯೇ. ರಾಜ್ಯ, ದೇಶ, ಖಂಡ...

ಕಾದಂಬರಿ

ಆತ್ಮ ಸಂವೇದನಾ: ಅಧ್ಯಾಯ 4

ಯಜ್ಞಾ ಆಚಾರ್ಯರು ನಗರದ ಹೆಸರುವಾಸಿ ಪೂಜಾರಿ. ನೋಡಿದರೆ ಕೈಮುಗಿದು ಬಿಡಬೇಕೆಂಬ ವ್ಯಕ್ತಿತ್ವ. ಎತ್ತರದ ಮೈಕಟ್ಟು, ದೀರ್ಘ ಪ್ರಾಣಾಯಾಮದ ಗತ್ತಿನ ಮುಖ ಮುದ್ರೆ. ಹಣೆಯ ಮೇಲೊಂದು ಗಂಧ ಚಂದನ ಮಿಶ್ರಿತಬೊಟ್ಟು. ದೇವಸ್ಥಾನದ ಪೂಜೆಗೆಂದು ಯಜ್ಞಾ ಆಚಾರ್ಯರು ತುಂಬ ತಡವಾಗಿ ಅಲ್ಲಿಂದ ಹೊರಟಿದ್ದರಿಂದ ಮನೆಗೆ ಬರಲು ಎರಡು ಘಂಟೆಯ ತಡ ರಾತ್ರಿ. ಚಿಕ್ಕ ಓಣಿಯಲ್ಲಿ ಮನೆಯ ಕಡೆ ಹೆಜ್ಜೆ...

ಕಾದಂಬರಿ

ಆತ್ಮ ಸಂವೇದನಾ: ಅಧ್ಯಾಯ 3

ಆತ್ಮ ಯೋಚಿಸುತ್ತಾ ಮಲಗಿದ್ದ. ಕತ್ತಲ ರಾತ್ರಿಯಲ್ಲಿ ನಕ್ಷತ್ರಗಳ ಎಣಿಕೆ; ದಿವ್ಯ ಬೆಳದಿಂಗಳ ಮಾದಕತೆಯ  ಲೆಕ್ಕಾಚಾರ, ಮನಸು ಮಂದಾರವಾಗಿದ್ದರೆ ಯೋಚನೆ ಕಡಿವಾಣವಿಲ್ಲದ ಕುದುರೆ, ಓಡುತ್ತಲೇ ಇತ್ತು. ಆತ್ಮನ ಯೋಚನೆಗಳಿಗೆ ಲಗಾಮು ಹಾಕಿದ್ದು ವರ್ಷಿ.ನಾಳೆಯೇನಾದರೂ ವರ್ಷಿಯ ಪ್ರಯತ್ನ ಫಲ ನೀಡಿದರೆ…?? ‘ಅದೊಂದು ಹೊಸ ಪ್ರಪಂಚ, ಕತ್ತಲೆಯೇ ಇಲ್ಲದ ಭೂಮಿಯನ್ನು...

ಕಥೆ ಕಾದಂಬರಿ

ಆತ್ಮ ಸಂವೇದನಾ: ಅಧ್ಯಾಯ 2

” ಹತ್ತು ಶತಮಾನಗಳ ಹಿಂದೆ.. ಇಂದಿಗೆ ಸಾವಿರ ವರ್ಷಗಳ ಮೊದಲು..” ರಾತ್ರಿ ಒಂದು ಘಂಟೆ, ಬಿಸಿ ಗಾಳಿ ಮೆಲ್ಲನೆ ಬೀಸುತ್ತಿತ್ತು. ರಸ್ತೆ ದೀಪಗಳ ಮಂದ ಬೆಳಕು. ವಾಹನಗಳ ಭರಾಟೆ. ದೊಡ್ಡ ನಗರದ ವಾಸನೆಗಳಿಂದ ಕೂಡಿದ ದಾರಿಯ ಚಿಕ್ಕ ಗಲ್ಲಿಯ ಮುರಿದು ಬೀಳಲೆಂದೇ ಕಟ್ಟಿದಂತಿರುವ ಸಣ್ಣ ಮನೆಯಲ್ಲಿ ಅಷ್ಟೇ ಹರೆಯ ತುಂಬಿರುವ ತರುಣಿಯೊಬ್ಬಳು ಪ್ರಸವ ವೇದನೆಯಿಂದ...

ಕಾದಂಬರಿ

ಆತ್ಮ ಸಂವೇದನಾ: ಅಧ್ಯಾಯ ೧

ಆತ್ಮ ಸಂವೇದನಾ ಕಾರ್ಗತ್ತಲ ನೀರವ ನಿಶೆ. . ಆಕಾರವಿಲ್ಲದ ಮನಸೆಂಬ ನೆರಳ ಬಿಂಬದ ಸಜೆ. . ಕಲ್ಪನೆಗಳ ಮಾಯೆ. . ಕಾಡುತಿದೆ ಭಾವನೆಗಳ ಜಟಕಾ ಬಂಡಿ. . ದೂರದವರೆಗೆ ಸಾಗುತಿದೆ ಕಣ್ಣಿನ ನೋಟ. . ದೃಷ್ಟಿಯ ಅಂತ್ಯ. . ಆಕಾಶ ಭೂಮಿಗೆ ಸೇರಿದ ಪರಿಧಿಯ ಜಾಗ. . ಮತ್ತದೇ ಮುಸ್ಸಂಜೆ. . ಮತ್ತದೇ ಮುಂಜಾನೆ. . ಸಾಗುತಿದೆ ಮುಗ್ಧ ಬದುಕಿನ ಜೀವನದ ಚರಮಗೀತೆ. . ಗೀತೆಯಲೂ ಇಲ್ಲದ ಅಂತ್ಯ. ...