ಬದುಕಿನಲ್ಲಿ ಎಷ್ಟೊಂದು ಜನ ಬಂದು ಹೋಗುತ್ತಾರೆ ಅಲ್ಲವೇ? ಹಾಗೆ ನಮ್ಮ ಬದುಕಿನಲ್ಲಿ ಬಂದವರಲ್ಲಿ ಹಲವರು ಬಹಳ ಸರಳವಾಗಿ ಸುಲಭವಾಗಿ ಬೆರೆತು ಹೋಗುತ್ತಾರೆ. ಇನ್ನು ಕೆಲವರು ಮನಸ್ಸಿಗೆ ಕಿರಿಕಿರಿ ಮಾಡಲೆಂದೇ ಬರುತ್ತಾರೆ. ಹಾಗೆ ನೋಡಲು ಹೋದರೆ ಹಾಗೆ ನಮ್ಮ ಬದುಕಿಗೆ ಬಂದವರು ಯಾರು ಬೇಕಾದರೂ ಆಗಿರಬಹುದು. ಗೆಳೆಯ, ಸಹೋದ್ಯೋಗಿ, ಸಹೋದರ, ಸಹೋದರಿ ಕೊನೆಗೆ ಹೆತ್ತವರು ಯಾರಾದರೂ...
ಸ್ಪ್ಯಾನಿಷ್ ಗಾದೆಗಳು
ಆಡಿದಷ್ಟು ಸುಲಭವಲ್ಲ ಮಾಡುವುದು
ಜಗತ್ತಿನ ಬಹುತೇಕ ಜನ ಬಹಳ ಸುಲಭವಾಗಿ ಯಾವುದಾದರೊಂದು ಕೆಲಸವನ್ನ ಮಾಡಬಲ್ಲೆ ಎಂದು ಹೇಳುತ್ತಾರೆ. ಹೌದೇ ಸರಿ ಮಾಡಿ, ಎಂದಾಗ ಮಾತ್ರ ಮಾಡುವುದು ಹೇಳಿದಷ್ಟು ಸುಲಭವಲ್ಲ ಎನ್ನುವುದು ತಿಳಿಯುತ್ತದೆ. ಕಣ್ಣಿಗೆ ಹತ್ತಿರ ಇದೆ ಎನ್ನಿಸುವ ಕಟ್ಟಡವನ್ನು ತಲುಪಲು ನಡೆಯಲು ಶುರುಮಾಡಿದ ಮೇಲೆ ತಿಳಿಯುತ್ತದೆ, ಇದು ಕಣ್ಣಿಗೆ ಮಾತ್ರ ಹತ್ತಿರ. ಆದರೆ ಇದು ಕಂಡಷ್ಟು ಹತ್ತಿರವಿಲ್ಲ ಎಂದು...
ಪಾಪಿ ಸಮುದ್ರ ಹೊಕ್ಕರೂ ಮೊಣಕಾಲುದ್ದ ನೀರು
ಈ ಗಾದೆ ಮಾತು ಹಣೆಬರಹ, ಫೇಟ್ (fate )ಡೆಸ್ಟಿನಿಗಳ ಬಗ್ಗೆ ಮಾತಾಡುತ್ತದೆ. ಜಗತ್ತಿನಲ್ಲಿ ಇಷ್ಟೊಂದು ಜನರಿದ್ದೇವೆ, ಒಬ್ಬಬ್ಬರ ಬದುಕು ಒಂದೊಂದು ತರ. ಒಂದೇ ತಾಯಿಯ ಹೊಟ್ಟೆಯಲ್ಲಿ ಜನಿಸಿದ ಮಕ್ಕಳಲ್ಲಿ, ಅವರ ಬದುಕಲ್ಲಿ ಬಹಳಷ್ಟು ಅಂತರವಿರುತ್ತದೆ. ಹೀಗೇಕೆ? ಅವರು ಬೆಳೆದ ವಾತಾವರಣ, ನೀಡಿದ ಶಿಕ್ಷಣ, ಪ್ರೀತಿ, ಸುರಕ್ಷತಾ ಭಾವ ಎಲ್ಲವೂ ಒಂದೇ ಇದ್ದೂ, ಬೆಳೆಯುತ್ತಾ ಅವರ...
ಕನ್ನಡಿಯಲ್ಲಿನ ಗಂಟಿಗಿಂತ ಕೈಯಲ್ಲಿರುವ ದಂಟೆ ವಾಸಿ
ಆಸೆ ಎನ್ನುವುದು ಮನುಷ್ಯನ ಅತ್ಯಂತ ಸಹಜ ಗುಣಗಳಲ್ಲಿ ಒಂದು; ಹುಟ್ಟಿನಿಂದ ಸಾಯುವವರೆಗೆ ಮನುಷ್ಯನನ್ನ ಬಿಡದೆ ಹಿಂಬಾಲಿಸುವ ನಕ್ಷತ್ರಿಕ. ಆಸೆಯೆ ದುಃಖಕ್ಕೆ ಮೂಲ ಕಾರಣ ಎಂದರು ಮಹಾತ್ಮರು. ಆಸೆಯೇ ಇರದಿದ್ದರೆ ಇಂದಿನ ಪ್ರಪಂಚ ಸೃಷ್ಟಿಯೇ ಆಗುತ್ತಿರಲಿಲ್ಲ, ಇಷ್ಟೆಲ್ಲಾ ಸಂಶೋಧನೆ, ಉನ್ನತಿ, ಪ್ರಗತಿ ಯಾವುದೂ ಆಗುತ್ತಲೇ ಇರಲಿಲ್ಲ ಎನ್ನುವುದು ಕೂಡ ಸತ್ಯ. ಆಸೆ ಇರುವುದು...
ಕೂತು ತಿಂದರೆ ಕುಡಿಕೆ ಹೊನ್ನು ಸಾಲದು
ಈ ಗಾದೆ ಯಾವ ಶತಮಾನದಲ್ಲಿ ಮತ್ತು ಯಾವ ಸಂದರ್ಭದಲ್ಲಿ ಹುಟ್ಟಿರಬಹುದು? ಈ ಗಾದೆ ಅಂದಿನ ದಿನದಲ್ಲಿ ಬಳಕೆಗೆ ಬಂದಿದೆಯೆಂದರೆ, ಅಂದೂ ಸಮಾಜದಲ್ಲಿ ತನ್ನದೇ ಆದ ಒತ್ತಡಗಳು ಇದ್ದವು ಅಂದಾಯಿತು ಅಲ್ಲವೇ? ಇವತ್ತಿನ ದಿನದ ಮಾತು ಬಿಡಿ; ಇಂದು ಜೀವನ ಟ್ವೆಂಟಿ ಟ್ವೆಂಟಿ ಕ್ರಿಕೆಟ್ ಇದ್ದಹಾಗೆ ವಿರಮಿಸುವಂತಿಲ್ಲ. ಗೆದ್ದೆವು ಎಂದು ಕೊನೆಯ ಚಂಡಿನ ತನಕ ಬೀಗುವಂತಿಲ್ಲ. ಈ ಗಾದೆ ಮಾತು...
ಏರಿದ್ದು ಇಳಿಯಲೇಬೇಕು ಇದು ಪ್ರಕೃತಿ ನಿಯಮ
ಕತ್ತಲ ನಂತರ ಬೆಳಕಾಗಲೇ ಬೇಕಲ್ಲವೇ? ಇದೆಂತಹ ಪ್ರಶ್ನೆ ಅದು ಸಹಜವಲ್ಲವೇ? ಹಾಗೆಯೇ ಬದುಕಿನಲ್ಲಿ ಏರಿಳಿತಗಳು ಕೂಡ! ಇಂದಿನ ದಿನದ ಸ್ಥಿತಿ ಸದಾ ಇರುವುದಿಲ್ಲ. ಬದುಕಿನಲ್ಲಿ ಬದಲಾವಣೆಯೊಂದೇ ನಿರಂತರ . ಬದುಕಿನ ಹಾದಿಯಲ್ಲಿ ನಮಗೆ ತೀರಾ ಬೇಕಾದವರನ್ನ ಕಳೆದುಕೊಳ್ಳುತ್ತೇವೆ. ಅಂದಿನ ದಿನದ ದುಃಖ ಸದಾ ಇದ್ದಿದ್ದರೆ? ನಾವು ಜೀವನದಲ್ಲಿ ಹೆಚ್ಚಿನದನ್ನು ಸಾಧಿಸಲಾಗದೆ ಅದೇ ದುಃಖದಲಿ...
ಪ್ರಾರಂಭಿಸದಿದ್ದರೆ ಕೊನೆಯಾಗುವುದಾದರೂ ಹೇಗೆ?
ನಮ್ಮಲ್ಲಿ ಒಂದು ಗಾದೆ ಮಾತು ‘ನಡೆಯುವ ಕಾಲೇ ಎಡುವುದು’ ಎನ್ನುತ್ತದೆ. ಅಂದರೆ ಯಾರು ನಡೆಯುತ್ತಾರೆ ಅವರು ಎಡವುವ ಸಾಧ್ಯತೆ ಹೆಚ್ಚಾಗಿರುತ್ತದೆ. ಬಿದ್ದರೂ ಕೊನೆಗೆ ಗುರಿ ಮುಟ್ಟುವುದು ಮಾತ್ರ ನಡೆಯುವನೇ ಹೊರತು, ಕುಳಿತು ಬರಿ ಮಾತಲ್ಲಿ ಕಾಲ ಕಳೆಯುವನಲ್ಲ ಎನ್ನುವುದು ಅರ್ಥ. ನಡೆಯದೆ ಇರುವವನು ಬೀಳದೆ ಇರಬಹುದು, ಆದರೇನು ಗೆಲುವಿಗೂ ಅಥವಾ ಸೋಲಿಗೂ ಆತ...
ಲೋಕೋ ಭಿನ್ನ ರುಚಿಃ
ಯಾವ ಪುಸ್ತಕ ಎನ್ನುವುದು ನೆನಪಿಲ್ಲ ಆದರೆ ನಮ್ಮ ಹೆಚ್ ನರಸಿಂಹಯ್ಯನವರು ಹಲವಾರು ವರ್ಷ ಮೂರು ಹೊತ್ತು ಉಪ್ಪಿಟ್ಟು ತಿಂದುಕೊಂಡು ಜೀವಿಸಿದ್ದರು ಎನ್ನುವುದು ಓದಿದ್ದು ಮಾತ್ರ ನೆನಪಿನಲ್ಲಿದೆ . ಬಾರ್ಸಿಲೋನಾಗೆ ಬಂದ ಹೊಸತು ನನಗೆ ಅಡುಗೆ ಮಾಡಿ ಅಭ್ಯಾಸವಿಲ್ಲ . ಮೊದಲು ಮಾಡಲು ಕಲಿತದ್ದು ಉಪಿಟ್ಟು! ನಂತರ ಹಾಗೂ ಹೀಗೂ ಮಾಡಿ ಹೊಟ್ಟೆಯೆಂಬ ಎಂದೂ ತುಂಬದ ಉಗ್ರಾಣವ ತುಂಬಿಸಲು...
ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಿಗೆ ಹೋಗಿ ಮೊಳ ಹಾಕಿದರಂತೆ!
ಈವತ್ತಿನ ಸಮಾಜದಲ್ಲಿ ಹಿಂದಿನ ಒಂದು ನೈತಿಕತೆ ಉಳಿದಿಲ್ಲ ಎಂದು ಬೊಬ್ಬೆ ಹಾಕುವ ಮುನ್ನ, ನಮ್ಮ ಗಾದೆ ಮಾತುಗಳನ್ನು ಒಮ್ಮೆ ನೋಡಿದರೆ ಸಾಕು. ತಿಳಿಯುವ ವಿಚಾರ ಇಷ್ಟೇ, ಮನುಷ್ಯನ ಮೂಲ ಸ್ವಭಾವ ಅಂದಿಗೂ ಇಂದಿಗೂ ಎಂದೆಂದಿಗೂ ಒಂದೇ! ಗಾದೆ ಮಾತುಗಳು ಅಂದಿನ ಸಮಾಜದ ಹುಳುಕನ್ನ ಸ್ಪಷ್ಟರೂಪದಲ್ಲಿ ತೋರಿಸುತ್ತದೆ. ಜನರ ಸ್ವಭಾವ ಅಂದಿನ ಸಮಾಜದ ಪದ್ದತಿಗಳನ್ನು ಹೇಳುವುದರೊಂದಿಗೆ ...
ಬೆಳ್ಳಗಿರುವುದೆಲ್ಲ ಹಾಲಲ್ಲ!
ನಾವು ಬದುಕಿನಲ್ಲಿ ನೂರಾರು ಜನರ ಸಂಪರ್ಕಕ್ಕೆ ಬರುತ್ತೇವೆ. ಹಲವರು ಒಳ್ಳೆಯವರು, ಹಲವರು ಕೆಟ್ಟವರು. ಎಲ್ಲರನ್ನೂ ಒಳ್ಳೆಯವರು ಎಂದು ತೀರ್ಮಾನಿಸುವ ಹಾಗಿಲ್ಲ. ನೋಡಲು ಸುಭಗರಂತೆ ಕಂಡರೂ ಕೆಲವೊಮ್ಮೆ ಮೋಸ ಹೋಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ನಮ್ಮ ಹಿರಿಯರು ಈ ರೀತಿ ಸಂಪರ್ಕಕ್ಕೆ ಬಂದವರನೆಲ್ಲ ಒಳ್ಳೆಯವರು ಎಂದುಕೊಂಡು ಬೇಸ್ತು ಬಿದ್ದಿರುವುದು ಸತ್ಯ. ನಾವು ಮಾಡಿದ ತಪ್ಪು...