ಅನ್ವೇಷಣೆ ಹಾಗೂ ಸಂಶೋಧನೆ. ಬುದ್ದಿಜೀವಿ ಎನಿಸಿಕೊಂಡಿರುವ ಮಾನವನ ವಿಕಸನದ ಎರಡು ಮೆಟ್ಟಿಲುಗಳು. ಗಿಡ ಬಳ್ಳಿಗಳನ್ನು ದೇಹಕ್ಕೆ ಸುತ್ತಿಕೊಂಡು, ಹಸಿ ಹಸಿ ಮಾಂಸವನ್ನು ಗಬಗಬನೆ ತಿಂದು ಎಲ್ಲೆಂದರಲ್ಲಿ ಇದ್ದು ಬಿದ್ದು ಎದ್ದು ವಾಸಿಸುತ್ತಿದ್ದ ಜೀವಿಯೊಂದು ಇಂದು ಮೈಯ ತುಂಬೆಲ್ಲ ವಿವಿಧ ವಸ್ತುಗಳಿಂದ ಮಾಡಿದ ಬಟ್ಟೆಗಳನ್ನು ಹೊತ್ತು, ಸಾವಿರಾರು ಬಗೆಯ ಆಹಾರವನ್ನು...
Author - Sujith Kumar
ಪರಮಾಣು ವಿಜ್ಞಾನ : ಬೇಕು ಬೇಡಗಳೆಂಬ ಗೊಂದಲಗಳ ಸುಳಿಯಲ್ಲಿ..!!
ಇಪ್ಪತ್ತೊಂದನೇ ಶತಮಾನದ ಆದಿಯಲ್ಲಿರುವ ವಿಶ್ವಕ್ಕೆ ಕಂಠಕಪ್ರಾಯವಾದಂತಿರುವ ಒಂದು ವಿಷಯ ಪರಮಾಣು ವಿಜ್ಞಾನ. ಇಂದು ವಿಶ್ವದ ಅತಿ ಶಕ್ತಿಶಾಲಿ ದೇಶಗಳ್ಯಾವುದೆಂದು ಪಟ್ಟಿ ಮಾಡ ಹೊರಟರೆ ಅದು ಹೆಚ್ಚು ಧನ ಸಂಪತ್ತಿರುವ ದೇಶಗಳಾಗಿರುವುದಿಲ್ಲ, ಬದಲಾಗಿ ಹೆಚ್ಚು ಪರಮಾಣು (Nuclear) ಬಾಂಬ್’ಗಳನ್ನು ಹೊಂದಿರುವ ದೇಶಗಳಾಗಿರುತ್ತವೆ! ಆ ದೇಶ ಅದೆಷ್ಟೇ ಸಣ್ಣದೆನಿಸಿದರೂ, ವಿಶ್ವದ...
‘ಮೇಕ್-ಇನ್-ಇಂಡಿಯ’ ಬಂದಾಯ್ತು ಆದರೆ, ‘ಮೇಡ್-ಇನ್-ಇಂಡಿಯಾ’ಗಳ ಕತೆ ಏನಾಯ್ತು...
Bharathi Shipyard HMT (Watch Division) UB Groups BPL Sahara Housing Corporation And many more… ಒಂದು ಕಾಲದಲ್ಲಿ ದೇಶದ ಟಾಪ್ ರೇಟೆಡ್ ಕಂಪನಿಗಳ ಪಟ್ಟಿಯಲ್ಲಿ ಈ ಎಲ್ಲಾ ಹೆಸರುಗಳಿದ್ದಿದ್ದನ್ನು ಗಮನಿಸಿರಬಹುದು. ಕೆಲವು ಹೆಸರುಗಳು ಪಟ್ಟಿಯಲ್ಲಿ ಕೆಲದಿನಗಳು ಮಾತ್ರ ಕಂಡರೆ, ಕೆಲವು ದಶಕಗಳವರೆಗೂ ರಾರಾಜಿಸಿದ್ದವು. ಅಂದು ದೇಶದ ಪ್ರತಿಯೊಬ್ಬ ಪ್ರಜೆಯೂ...
ಒಲಿಂಪಿಕ್ಸ್ : ಕ್ಷಣಾರ್ಧದಲ್ಲಿ ಭಗ್ನವಾದ ಕನಸುಗಳು…
ವಿಶ್ವದ ಘಟಾನುಘಟಿ ಕ್ರೀಡಾಪಟುಗಳ ನಡುವೆ ಓಟಕ್ಕೆ ಅಣಿಯಾಗುತ್ತಿದ್ದ ಆಕೆಗಿನ್ನು ೨೦ ರ ಹರೆಯ. ಆಕೆಯ ಜೀವನದ ಸರ್ವಶ್ರೇಷ್ಠ ಓಟಕ್ಕೆ ಕ್ಷಣಗಣನೆ ಆರಂಭವಾಗಿತ್ತು. ದೇಶದ ಕೋಟ್ಯಂತರ ಜನರ ಶುಭ ಆರೈಕೆಯೂ ಅವಳ ಮೇಲೆ. ಓಟ ಶುರುವಾಯಿತು.. ಇನ್ನೇನು ಗುರಿ ತಲುಪಲು ಕೆಲವೇ ಹೆಜ್ಜೆಗಳು ಬಾಕಿ ಇವೆ. ಅದಷ್ಟು ಭಾರತೀಯರ ಕನಸು ನನಸಾಗಲು ಇನ್ನು ಕೆಲವೇ ಕ್ಷಣಗಳು ಉಳಿದಿವೆ. ತನ್ನೆಲ್ಲ...
ಭಾವಗಳೂ ಚೆಲುವನ್ನು ಬೀರುತ್ತಿದ್ದವು ಈಕೆಯ ಮೊಗದ ಮೇಲೆ…
ಹುಣ್ಣಿಮೆಯ ಚಂದ್ರನ ಹೊಳಪಿನ ಕಿರಣ, ಅದು ಆಕೆಯ ನಯನ. ಅದು ಮಲ್ಲಿಗೆಯೇ ನಾಚುವಂತಹ ಅಂದ. ಆಕೆ ನಕ್ಕರೆ ಮುತ್ತು ಸುರಿದಂತೆ . ಮುನಿದರೆ ಮುನಿಸೂ ನಾಚುವಂತೆ. ಅತ್ತರೆ ನೋಡುಗನೂ ಜೊತೆಗೆ ಅತ್ತಂತೆ. ನಲಿದರಂತೂ ನವಿಲೇ ಕುಣಿದಂತೆ. ಆಕೆ ಪರದೆಯ ಮೇಲಿನ ಪ್ರಜ್ವಲಿಸುವ ಕಮಲ. ಹೆಸರು ಮಧುಬಾಲ. ಮಧುಬಾಲ. ನಲವತ್ತು ಹಾಗು ಐವತ್ತನೇ ದಶಕದ ಅದೆಷ್ಟೋ ಯುವಕರ ಡ್ರೀಮ್ ಗರ್ಲ್...
ಬಾಲಿವುಡ್ ಬಡಾ ಜೋಡಿ : ಸಲಿಂ-ಜಾವೇದ್.
ಅದು ಎಪ್ಪತ್ತರ ದಶಕದ ಆರಂಭದ ವರ್ಷಗಳು. ಭಾರತದಲ್ಲಿ ವಾಕ್ ಚಿತ್ರಗಳು ಶುರುವಾಗಿ ಅದಾಗಲೇ ನಾಲ್ಕು ದಶಕಗಳು ಕಳೆದಿದ್ದವು. ಶಾಂತಿ ಪ್ರಿಯ, ಕಾದಂಬರಿ ಆಧಾರಿತ, ಪ್ರೀತಿ ಪ್ರೇಮಗಳ ತ್ಯಾಗಮಯಿ ಚಿತ್ರಗಳಷ್ಟೇ ಹೆಚ್ಚು ಹೆಚ್ಚಾಗಿ ಮೂಡುತ್ತಿದ್ದವು. ಪ್ರೇಕ್ಷಕರು ತದೇಕ ಚಿತ್ತದಿಂದ ಚಿತ್ರವನ್ನು ನೋಡಿ ಕೊನೆಗೆ ಚಿತ್ರದಲ್ಲಿರುವ ಸಂದೇಶವನ್ನು ಅರಿಯಬೇಕಿತ್ತು. ಇಂದಿನಂತೆ...
Mr.ತ್ಯಾಗಿ
ಕೇರಳದ ಅಲಪಿ ಸಮುದ್ರ ತೀರದ ಪ್ರಶಾಂತ ದಂಡೆಯನ್ನು ಹಿಂದಕ್ಕೆ ತಳ್ಳುವಂತೆ ಅಲೆಗಳು ಒಂದರ ಹಿಂದೊಂದು ಅಪ್ಪಳಿಸತೊಡಗಿದ್ದವು. ಅದಕ್ಕೆ ಸಾಥ್ ಕೊಡುವಂತೆ ಅದೇ ದಿಕ್ಕಿನಲ್ಲಿ ಬೀಸುವ ಗಾಳಿ. ಬಿಸಿಲಿನ ಧಗೆ ಹರಿದು ಸಂಜೆಯ ತಂಪನ್ನು ಸವಿಯಲು ಪ್ರೇಮಿಗಳು, ನವ ದಂಪತಿಗಳು, ಮಕ್ಕಳನ್ನೊಳಗೊಂಡ ದಂಪತಿಗಳು, ವಯೋ ವೃದ್ದರು, ಕೆಲ ಒಬ್ಬಂಟಿಗರು ಹೀಗೆ ಹಲವು ಬಗೆಯ ನೂರಾರು ಜನ ಈ ಸಮುದ್ರ...
ಅಳುತ್ತಾ ಬಂದಳು…ಅಳುತ್ತಲೇ ಹೋದಳು…ಈಕೆ ನಟನಾ ಜಗತ್ತಿನ ಶಿರೋಮಣಿ!
Chand tanha hai asman tanha Dil mila hai kahan kahan tanha Bujh gai aas chup gaya tara Thartharata raha dhuan tanha ಸುಂದರ ಚಂದಿರ, ಶಾಂತ ಅಂಬರ, ಜೊತೆಗೆ ಪ್ರೀತಿಸುವ ಹೃದಯ. ಇವಿಷ್ಟೂ ಇದ್ದರೂ ಒಂಟಿತನವನ್ನು ಕಾಣುವ ಮನ. ಬೆಳದಿಂಗಳ ಶಾಂತ ರಾತ್ರಿಯಲ್ಲಿ ಅಗಣ್ಯ ತಾರಾರಾಶಿಗಳ ನಡುವೆ ಸವಿ ಮಧುರ ಸ್ವರದಲ್ಲಿ ಹಾಡಿರುವ ಈ ಹಾಡನ್ನು ಕೇಳುತ್ತಾ...
ಪ್ರೀತಿ ಬೆರೆತಾಗ…
‘ವಯಸ್ಸು ಅರವತ್ತಾದರೂ ಇನ್ನೂ ಬುದ್ದಿ ಬರ್ಲಿಲ್ಲ ಇವಕ್ಕೆ … ಪ್ರಾಣಿಗಳ ಹಾಗೆ ಕಿತ್ತಾಡ್ತಾರೆ. ಇವ್ರ ಜಗಳನ ಕೇಳಿ, ನೋಡಿ, ಸಮಾಧಾನ ಮಾಡಿ ಸಾಕಾಗಿದೆ .ಇನ್ನೂ ಎಷ್ಟು ಅಂತ ನೋಡೋದು..ಇದು ಆಗ್ಲಿಲ್ಲ.. ಏನಾದ್ರೂ ಒಂದು ಮಾಡ್ಲೆ ಬೇಕು.. ಇಲ್ಲ ಅಂದ್ರೆ ನಾನು ಹುಚ್ಚಿಯಾದೆನು ‘ ಎಂದು ಯೋಚಿಸುತ್ತಾ ಶಾಂತಿ ಕಣ್ಣು ಮುಚ್ಚಿದಳು. ದಿನವಿಡಿ ಅರೆ ಕ್ಷಣವೂ...