Author - Sudeep Bannur

ಅಂಕಣ

‘ಮಾಯ’ವಾಗುತ್ತಿರುವ ಆನೆಯ ಹೆಜ್ಜೆಗುರುತು…

ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಸಮೀಕ್ಷೆಗಳೆಲ್ಲವನ್ನೂ ಮೀರಿಸಿ ಗೆಲುವು ಸಾಧಿಸಿದ್ದ ಬಿಜೆಪಿ ಬಹಳ ದೊಡ್ಡ ಹೊಡೆತ ನೀಡಿದ್ದು ಮಾಯಾವತಿಯವರ ರಾಜಕೀಯ ಬದುಕಿಗೆ. ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ಕೂಡಾ ಹೀನಾಯವಾಗಿ ಮುಖಭಂಗ ಅನುಭವಿಸಿದ್ದರೂ ಅವರಿಬ್ಬರೂ ಇನ್ನೂ ಯುವಕರು. ಜನ ಬಯಸಿದರೆ ಹತ್ತೋ ಹದಿನೈದು ವರ್ಷಗಳ ಬಳಿಕವಾದರೂ ಗೆಲುವಿನ ಕೇಕೆ ಹಾಕಲೂಬಹುದು...

Featured ಪ್ರಚಲಿತ

ಉಘೇ ಉಘೇ ನಮೋ…. ಮೋದಿ ಸರ್ಕಾರದ ಬಗೆಗಿನ ಎಲ್ಲಾ ಪ್ರಶ್ನೆಗಳಿಗೆ...

ಪಂಚರಾಜ್ಯ ಚುನಾವಣೆಗಳಲ್ಲಿ ದೇಶದ ರಾಜಕೀಯ ಪ್ರಿಯರಲ್ಲಿ ಬಹಳ ಕುತೂಹಲವನ್ನು ಮನೆ ಮಾಡಿಸಿದ್ದ, ಹಾಗೂ ೨೦೧೯ರ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಭಾವಿಸಲಾಗಿದ್ದ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಾಗಿದೆ. ಉತ್ತರಪ್ರದೇಶದಲ್ಲಿ ಬಿಜೆಪಿ ಪರ ಅಲೆ ಇತ್ತಾದರೂ ಇಷ್ಟೊಂದು ಬೃಹತ್ ಮಟ್ಟದಲ್ಲಿ ಗೆಲುವು ದಕ್ಕುತ್ತದೆಂದು ಸ್ವತಃ ಕೇಸರಿ ಬ್ರಿಗೇಡ್...

ಅಂಕಣ

ಆಜಾದಿ ಗ್ಯಾಂಗ್ ಪ್ರೇರಕ ಶಕ್ತಿಗಳು ಇಂತವರೇ ಅಲ್ಲವೇ?

“ಕಾಶ್ಮೀರದ ಯುವಕರು ಶಸ್ತ್ರಾಸ್ತ್ರ ಹಿಡಿದಿರುವುದು ಒಂದು ಒಳ್ಳೆಯ ಉದ್ದೇಶಕ್ಕಾಗಿ ಮತ್ತು ಅವರ ಹಕ್ಕುಗಳನ್ನು ಪಡೆಯುವುದಕ್ಕಾಗಿ. ಅವರನ್ನು ಯಾವುದೇ ಬೆದರಿಕೆಗಳಿಂದ ಮಟ್ಟ ಹಾಕಲಾಗದು. ಅವರು ಸಾವಿಗೆ ಅಂಜುವವರಲ್ಲ. ಅವರು ಶಾಸಕ ಅಥವಾ ಮಂತ್ರಿಯಾಗಲು ಹೋರಾಡುತ್ತಿಲ್ಲ. ಅವರು ಹೋರಾಡುತ್ತಿರುವ ಉದ್ದೇಶ ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ!”  ಇಂತಹ ಅಣಿಮುತ್ತು ಉದುರಿದ್ದು...

ಅಂಕಣ

ಮಹಾರಾಷ್ಟ್ರದ ಮೋದಿಯಾಗುವತ್ತ ಫಡ್ನಾವೀಸ್ ಚಿತ್ತ!

೨೦೧೪ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಭಾರತೀಯ ಜನತಾ ಪಕ್ಷದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯ ಹುಡುಕಾಟ ಶುರುವಾಗಿತ್ತು. ದಿವಂಗತ ಪ್ರಮೋದ್ ಮಹಾಜನ್, ದಿವಂಗತ ಗೋಪಿನಾಥ್ ಮುಂಡೆ ಬಳಿಕ ಮಹಾರಾಷ್ಟ್ರ ಬಿಜೆಪಿಯಲ್ಲಿ ಪ್ರಾಬಲ್ಯ ಸಾಧಿಸಿದ್ದ ನಿತಿನ್ ಗಡ್ಕರಿ ಕೇಂದ್ರ ಸಚಿವ ಸ್ಥಾನದಲ್ಲೇ ಮುಂದುವರಿಯುವ ಇಂಗಿತ...

ಪ್ರಚಲಿತ

ಅಷ್ಟಕ್ಕೂ ಜನರಲ್ ರಾವತ್ ಹೇಳಿಕೆಯಲ್ಲಿ ತಪ್ಪೇನಿದೆ?

ಕಳೆದ ವಾರದ ಸುದ್ದಿ ಚಾವಡಿಯಲ್ಲಿ ಉತ್ತರ ಪ್ರದೇಶದ ಚುನಾವಣೆಯ ಭರಾಟೆ, ತಮಿಳ್ನಾಡಿನ ರಾಜಕೀಯದ ಹೈಡ್ರಾಮಾ ಮತ್ತು ಜಗತ್ತನ್ನೇ ನಿಬ್ಬೆರಗಾಗಿಸಿದ ನಮ್ಮ ಹೆಮ್ಮೆಯ ಇಸ್ರೋದ ಸಾಧನೆಯ ಜೊತೆಜೊತೆಗೆ ಕಾಶ್ಮೀರ ಕಣಿವೆಯಲ್ಲಿ ನಮ್ಮ ಸೈನಿಕರ ವಿರುದ್ಧ ಸದಾ ಕಲ್ಲು ತೂರಾಟ ನಡೆಸಿ ಭಯೋತ್ಪಾದಕರಿಗೆ ಸಹಾಯ ಮಾಡುವ ದೇಶದ್ರೋಹಿ ಕುನ್ನಿಗಳಿಗೆ ಸೇನಾ ಮುಖ್ಯಸ್ಥ ಮೇಜರ್ ಜನರಲ್ ಬಿಪಿನ್...

Featured ಅಂಕಣ

ಸ್ವಚ್ಚವಾಗಬೇಕಾದದ್ದು ಮನಸ್ಥಿತಿಯೇ ಹೊರತು ಸಾಮಾಜಿಕ ಜಾಲತಾಣವಲ್ಲ!!

ಸಾಮಾಜಿಕ ಜಾಲತಾಣ ಮತ್ತೆ ಸುದ್ದಿಯಲ್ಲಿದೆ. ಸದಾ ಒಂದಲ್ಲ ಒಂದು ಹಾಟ್ ಟಾಪಿಕ್ ಚರ್ಚಿಸಲ್ಷಡುವ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸುವ ಅಭಿಪ್ರಾಯ ಮತ್ತು ಕಾಮೆಂಟ್’ಗಳನ್ನಾಧರಿಸಿ ಕೆಲವೊಂದು ವ್ಯಕ್ತಿ ಮತ್ತು ಸಂಸ್ಥೆಗಳ ಮೇಲೆ ಕೇಸು ಜಡಿದು ಅವರನ್ನು ಹಣಿಯುವ ಪ್ರಯತ್ನ ಇತ್ತೀಚಿಗೆಯಂತೂ ಬಹಳ ಎಗ್ಗಿಲ್ಲದೇ ಸಾಗುತ್ತಿದೆ. ಎಡ, ಬಲ, ಜಾತಿ, ಧರ್ಮಗಳ ಆಧಾರದಲ್ಲಿ ಸಾಮಾಜಿಕ...

ಅಂಕಣ

ಮುಳುಗುತ್ತಿರುವ ಹಡಗಿಗೆ ಹೊಸ ನಾವಿಕರಾಗುತ್ತಾರೆಯೇ ಪ್ರಿಯಾಂಕಾ?

ಪ್ರಿಯಾಂಕಾ ರಾಬರ್ಟ್ ವಾದ್ರಾ ಉರುಫ್ ಪ್ರಿಯಾಂಕಾ ಗಾಂಧಿ!!   ದೇಶದ ರಾಜಕೀಯದ ದಿಕ್ಸೂಚಿ ಎಂದೇ ಭಾವಿಸಲಾಗಿರುವ ಉತ್ತರಪ್ರದೇಶದ ಚುನಾವಣೆಯ ಅಖಾಡದಲ್ಲಿ ಪ್ರಚಾರದ ಭರಾಟೆ ಜೋರಾಗಿರುವಾಗ ಸತತ ಸೋಲುಗಳಿಂದ ಕಂಗೆಟ್ಟಿರುವ ಕಾಂಗ್ರೆಸ್ ಪಾಳಯದಲ್ಲಿ ಬಹಳ ದೊಡ್ದ ಸದ್ದು ಮಾಡುತ್ತಿರುವ ಹೆಸರಿದು. ಪ್ರಿಯಾಂಕರನ್ನು ಕರೆತನ್ನಿ ಕಾಂಗ್ರೆಸ್ ಉಳಿಸಿ ಅನ್ನೋ ಕೂಗು ಈ ಬಾರಿ ಬಹಳ...

ಪ್ರಚಲಿತ

ಕೃಷ್ಣ ಪಾಂಚಜನ್ಯ ಕಹಳೆಯಿಂದ ಅಸ್ತವ್ಯಸ್ತವಾಗುತ್ತಾ ರಾಜ್ಯ ಹಸ್ತ??

೨೦೦೪ರ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ಕಾಲವದು. ಜನತಾ ಪರಿವಾರ ಒಡೆದು ಚೂರಾದ ಮೇಲೆ ದೇವೇಗೌಡರು ಕಟ್ಟಿದ್ದ ಜೆಡಿಎಸ್ ಬಿಟ್ಟು ಅಧಿಕಾರ ಹಿಡಿಯಲು ಕಾಂಗ್ರೆಸ್ ಮತ್ತು ಬಿಜೆಪಿಗೆ ಅಸಾಧ್ಯ ಅನ್ನೋ ತೀರ್ಪನ್ನು ರಾಜ್ಯದ ಮತದಾರ ಕೊಟ್ಟಿದ್ದ. ಸಹಜವಾಗಿಯೇ ಸೋಕಾಲ್ಡ್ ಜಾತ್ಯಾತೀತ ಪಕ್ಷವಾಗಿದ್ದ ಜೆಡಿಎಸ್ ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚಿಸೋ ಪ್ರಕ್ರಿಯೆ...

Featured ಅಂಕಣ

ಕೆಸರಲ್ಲಿ ಅರಳಬೇಕಾಗಿದ್ದ ಕರ್ನಾಟಕ ಬಿಜೆಪಿ ಕೊಳೆತು ಹೋಗುತ್ತಿದೆಯಲ್ಲ?

ಕರ್ನಾಟಕದ ಮುಂದಿನ ಮುಖ್ಯಮಂತ್ರಿ ನಾನೇ, ೧೫೦ ಸೀಟುಗಳನ್ನು ಗೆಲ್ಲುವುದೇ ನಮ್ಮ ಮುಂದಿನ ಗುರಿ ಅಂತ ಆನೆ ನಡೆದಿದ್ದೇ ದಾರಿ ಆನ್ನೋ ರೀತಿಯಲ್ಲಿ ಮುನ್ನುಗ್ಗುತ್ತಿರುವ ಯಡಿಯೂರಪ್ಪನವರದ್ದು ಒಂದು ಕಥೆಯಾದರೆ, ಯಡಿಯೂರಪ್ಪ ನಮ್ಮ ನಾಯಕ, ಆದರೆ ರಾಯಣ್ಣ ಬ್ರಿಗೇಡ್ ಮಾಡಿರುವುದು ಯಡಿಯೂರಪ್ಪನವರನ್ನು ಸಿಎಂ ಮಾಡಲಲ್ಲ, ಹಾಗೇ ಹೀಗೇ ಅಂತ ಕ್ಷಣಕ್ಕೊಂದು ಹೇಳಿಕೆ ನೀಡಿ ಯಡಿಯೂರಪ್ಪಗೆ...

ಪ್ರಚಲಿತ

ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯುವುದು ಸರಿಯೇ??

ಅನಾಣ್ಯೀಕರಣವಾಗಿ ಒಂದು ತಿಂಗಳ ಬಳಿಕ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನಾನು ಸಂಸತ್ತಿನಲ್ಲಿ ಮಾತನಾಡಿದರೆ ಭೂಕಂಪನವಾಗಬಹುದು ಮತ್ತು ಅನಾಣ್ಯೀಕರಣ ಭಾರತದ ಇತಿಹಾಸದಲ್ಲೇ ಬಹಳ ದೊಡ್ಡ ಹಗರಣ ಎಂಬ ಹೇಳಿಕೆಯನ್ನು ಕೊಡುತ್ತಾರೆ. ದೇಶದೆಲ್ಲೆಡೆ ರಾಹುಲ್ ಅವರ ಈ ಭೂಪಂಕನದ ಹೇಳಿಕೆಯ ಟ್ರೋಲ್ ಹರಿದಾಡತೊಡಗಿತು. ಇಷ್ಟಕ್ಕೇ ಸುಮ್ಮನಾಗದೆ ಕೆಲದಿನಗಳ ನಂತರ ಮೋದಿಯವರ ಮೇಲೆ...