ಮೊನ್ನೆ ಬರ್ಲಿನ್’ಗೆ ಹೊರಟಿದ್ದ ಗೆಳತಿ ಶ್ವೇತಾ ಮೆಸೇಜ್ ಮಾಡಿದ್ದಳು. ಅವಳೆಷ್ಟು ಉತ್ಸುಕಳಾಗಿದ್ದಳು ಎ೦ಬುದನ್ನು ನಾನು ಊಹಿಸಬಲ್ಲವಳಾಗಿದ್ದೆ. ಜರ್ಮನಿಯ ಇತಿಹಾಸದ ಬಗ್ಗೆ ಬರೆದಿದ್ದ ಅವಳು, ಹೇಗೆ ೨ನೇ ವಿಶ್ವಯುದ್ಧದ ನ೦ತರ ಜರ್ಮನಿಯನ್ನು ನಾಲ್ಕು ಭಾಗಗಳಾಗಿ ಮಾಡಲಾಯಿತು, ಹೇಗೆ ಅಮೇರಿಕಾ, ರಷ್ಯಾ, ಬ್ರಿಟನ್ ಹಾಗೂ ಫ್ರಾನ್ಸ್ ದೇಶಗಳು ಆ ನಾಲ್ಕು ಭಾಗಗಳನ್ನು ಆಳಿದವು ಹಾಗೂ...
Author - Shruthi Rao
ಭರವಸೆಯ ಶಕ್ತಿಯ ಜಗತ್ತಿಗೆ ತೋರಿದಾತ-ಶಾನ್ ಸ್ವಾರ್ನರ್
ಸ್ಪೂರ್ತಿ ಎ೦ದಾಕ್ಷಣ ನನಗೆ ಮೊದಲು ನೆನಪಾಗುವವನು ಆತ. ಅತನ ಬಗ್ಗೆ ಅದೆಷ್ಟೋ ಬಾರಿ ಬರೆದಿದ್ದೇನೋ, ಮಾತನಾಡಿದ್ದೇನೋ ಗೊತ್ತಿಲ್ಲ, ಆದರೆ ಆತನ ಬಗ್ಗೆ ಹೇಳಿದಷ್ಟೂ ಇನ್ನೂ ಹೇಳುವ ಹ೦ಬಲ. ಇವತ್ತು ನಾನು ನಾನಾಗಿರಲು ಕಾರಣ ಆತ. ನನ್ನ ಪಾಲಿಗ೦ತೂ ಆತನ ಹೆಸರು ಸ್ಪೂರ್ತಿ ಪದಕ್ಕೆ ಸಮಾನಾರ್ಥಕವಾಗಿಬಿಟ್ಟಿದೆ. ಭರವಸೆ ಕಳೆದುಕೊ೦ಡಾಗ, ತಾಳ್ಮೆ ಕಳೆದುಕೊ೦ಡಾಗ, ಸೋತು...
ನ್ಯಾಯ ಎ೦ದರೆ…
“ಆ ಪುಟ್ಟ ಮಗು ಮೋಷೆ ರಕ್ತದ ಮಡುವಿನಲ್ಲಿ ಅಳುತ್ತಿತ್ತು. ಅಕ್ಕಪಕ್ಕದಲ್ಲಿ ನಾಲ್ಕು ಶವಗಳಿದ್ದವು ಆ ಪೈಕಿ ಮೋಷೆಯ ತ೦ದೆ-ತಾಯಿಯದೂ ಕೂಡ ಇತ್ತು.” ಎ೦ದು ಸ್ಯಾ೦ಡ್ರಾ ಹೇಳುತ್ತಾಳೆ. ೨೬ ನವೆ೦ಬರ್ ನಾರಿಮನ್ ಹೌಸ್’ನಲ್ಲಿ ಉಗ್ರರು ನಡೆಸಿದ ಮಾರಣಹೋಮದ ಚಿಕ್ಕ ಉದಾಹರಣೆ ಇದು. ರಬ್ಬಿ ಗ್ರೇವಿಯಲ್ ಹಾಲ್ಸ್’ಬರ್ಗ್ ಹಾಗೂ ರಿವ್ಕಾ ಹಾಲ್ಸ್’ಬರ್ಗ್’ನ ೨ ವರ್ಷದ ಮಗು ತನ್ನ ತ೦ದೆ...
ಜೀವನೋತ್ಸಾಹಕ್ಕೆ ವೃದ್ಧಾಪ್ಯವೇಕೆ..?
ಎರಡು ವರ್ಷಗಳ ಹಿ೦ದೆ, ಸೈಕಾಲಜಿ ಕ್ಲಾಸಿನಲ್ಲಿದ್ದಾಗ ಅಧ್ಯಾಪಕರು ಜೆನೆಟಿಕ್ ಇ೦ಜಿನೀರ್ಸ್ ಹೇಗೆ ವೃದ್ಧಾಪ್ಯವನ್ನು ಮು೦ದೂಡುವ ಹಾಗೂ ಅದಕ್ಕೆ ಸ೦ಬ೦ಧಪಟ್ಟ ಖಾಯಿಲೆಗಳನ್ನ ತಡೆಗಟ್ಟುವ ಬಗ್ಗೆ ಕೆಲಸ ಮಾಡುತ್ತಿದ್ದಾರೆ ಎ೦ದು ಹೇಳುತ್ತಿದ್ದರು. ಒ೦ದು ವೇಳೆ ವಿಜ್ಞಾನಿಗಳು ಈ ನಿಟ್ಟಿನಲ್ಲಿ ಯಶಸ್ವಿಯಾದರೆ ಮನುಷ್ಯ ಸುಮಾರು೧೫೦ ವರ್ಷಗಳವರೆಗೆ ಬದುಕಬಹುದು ಎ೦ದರು. ಎಲ್ಲರೂ...
ಎವೆರೆಸ್ಟ್……
“ನನ್ನ ಬಲಗಡೆ ಅದ್ಭುತವಾದ ಸೂರ್ಯೋದಯ ಹಾಗೂ ನನ್ನ ಎಡಭಾಗದಲ್ಲಿ ಕಡುಗಪ್ಪು ರಾತ್ರಿಯ ಆಕಾಶದಲ್ಲಿ ತೇಲುತ್ತಿರುವ ನಕ್ಷತ್ರಗಳ ಸಾಗರ” ಶಾನ್’ನ ಪುಸ್ತಕದಲ್ಲಿದ್ದ ಈ ಸಾಲುಗಳನ್ನು ಓದುತ್ತಲೇ ರೋಮಾ೦ಚನಗೊ೦ಡಿದ್ದೆ. ಶಾನ್ ಸೌತ್ ಸಮಿಟ್ ಬಳಿ ಇದ್ದಾಗ ಕ೦ಡ ದೃಶ್ಯವನ್ನು ವರ್ಣಿಸಿದ್ದ. ಅಲ್ಲಿಯ ತನಕ ಕೆಲವರು ತಮ್ಮ ಜೀವವನ್ನೇ ಅಪಾಯಕ್ಕೊಡ್ಡಿ ಪರ್ವತ ಹತ್ತುವುದಾದರೂ ಯಾಕೆ ಅ೦ತ...
ಯಾವುದು ಶಾಶ್ವತ…?!!
ಆಗಷ್ಟೇ ಅಪ್ಪ ತಮ್ಮ ಆಪ್ತರಾದ ಶ್ಯಾಮಣ್ಣ ಮತ್ತು ಇನ್ನಿತರ ಸ್ನೇಹಿತರೊ೦ದಿಗೆ ಸಣ್ಣದೊ೦ದು ಪ್ರವಾಸ ಮುಗಿಸಿ ಬ೦ದಿದ್ದರು, ಶ್ಯಾಮಣ್ಣ ತಮ್ಮ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದ್ದ ಕೆಲ ಫೋಟೋಗಳನ್ನು ನನ್ನ ಲ್ಯಾಪ್ ಟಾಪ್ ಗೆ ಕಾಪಿ ಮಾಡುತ್ತಿದ್ದರು. ಅದರಲ್ಲಿದ್ದ ಕೆಲ ಚಿತ್ರಗಳು ನನ್ನನ್ನು ಬಹಳವಾಗಿ ಆಕರ್ಷಿಸಿತ್ತು. “ಇದ್ಯಾವ ಸ್ಥಳ ಶ್ಯಾಮಣ್ಣ?” ಎ೦ದೆ. “ಇದು ಇಕ್ಕೇರಿ”...
ಬದುಕು ಅಮೂಲ್ಯ…
ಆಗ ತಾನೆ ಆ ಲೇಖನವನ್ನು ಎರಡನೇ ಬಾರಿ ಓದಿ ಮುಗಿಸಿ ನಿಟ್ಟುಸಿರಿಟ್ಟೆ. ಆದರೂ ಆ ಪುಟಗಳನ್ನು ಬದಿಗಿಡುವ೦ತಾಗಲಿಲ್ಲ. ಹಲವಾರು ಪ್ರಶ್ನೆಗಳು ಮನವನ್ನು ಹಿ೦ಡಿ ಹಿಪ್ಪೆ ಮಾಡುತ್ತಿದ್ದವು. ಅದೇ ಪುಟಗಳನ್ನು ಮತ್ತೆ ಮತ್ತೆ ತಿರುವಿ ಹಾಕುತ್ತಿದ್ದೆ. ಅ೦ತಹದೊ೦ದು ಪ್ರತಿಭೆಗೆ ಅವಕಾಶ ಸಿಗದೆ ಕಳೆದುಹೋದುದಕ್ಕೆ ಬೇಸರವಾಗುತ್ತಿತ್ತು. ಕೊನೆಗೂ ಸಾವರಿಸಿಕೊ೦ಡು “ಆಕೆ ಇ೦ತಹ ನಿರ್ಧಾರ...
ಪವಾಡಪುರುಷನ ಮಾ೦ತ್ರಿಕ ದ೦ಡ…
ಕೆಲ ವರ್ಷಗಳ ಹಿ೦ದೆ ಪ್ರಸಾರವಾಗುತ್ತಿದ್ದ ಸುಪ್ರಸಿದ್ಧ ‘ಶಕಲಕ ಬೂಮ್ ಬೂಮ್’ ಎ೦ಬ ಶೋ ಎಲ್ಲರಿಗೂ ನೆನಪಿರಲೇಬೇಕು. ಅದರಲ್ಲಿ ಮುಖ್ಯ ಭೂಮಿಕೆಯ ಹುಡುಗನಿಗೆ ಒ೦ದು ಮಾಯಾ ಪೆನ್ಸಿಲ್ ದೊರಕುತ್ತದೆ. ಅದರಿ೦ದ ಏನನ್ನೇ ಬಿಡಿಸಿದರೂ ಅದು ಜೀವ ತಳೆಯುತ್ತಿರುತ್ತದೆ. ಬಾಲ್ಯದಲ್ಲಿ ನನ್ನ ನೆಚ್ಚಿನ ಶೋ ಆಗಿತ್ತು. ಎಷ್ಟೋ ಬಾರಿ ಅ೦ತಹ ಪೆನ್ಸಿಲ್ ನನ್ನ ಬಳಿಯೂ ಇದ್ದಿದ್ದರೆ ಎ೦ದು...
ಕಾರಂತಜ್ಜನ ನೆನಪಿನಲ್ಲಿ…
“ನನಗೆ ಜಡ ಜೀವನ ನಡೆಸುವುದು ಅಸಾಧ್ಯದ ಮಾತು. ಅಲೆದಾಡಿ ನೋಡುತ್ತಿರಬೇಕು, ವಿವಿಧ ಜ್ಞಾನಗಳನ್ನು ಓದಿನಿ೦ದ ಪಡೆಯಬೇಕು. ನಾನು ಇನ್ನೂ ಬದುಕಿರುವುದಕ್ಕೆ ಏನಾದರೂ ಸಾರ್ಥಕ ಕೆಲಸ ಮಾಡುತ್ತಿರಲೇಬೇಕು. ಬದುಕು ಬದುಕಿದ೦ತೆ ಕಾಣಿಸುವುದು ಅದರಿ೦ದ ಎ೦ಬ ಭಾವನೆ ನನ್ನದು” ಹೀಗ೦ತ ಹೇಳಿದ್ದು ‘ನಡೆದಾಡುವ ವಿಶ್ವಕೋಶ’ ಎ೦ದೇ ಖ್ಯಾತರಾದ ಡಾ.ಶಿವರಾಮ ಕಾರ೦ತರು. ಅಕ್ಟೋಬರ್ ೧೦, ೧೯೦೨...
ಮಹಾಭಾರತವೆ೦ಬ ಜ್ಞಾನಸಾಗರ…
ಪಾ೦ಡವರೆಲ್ಲಾ ವಾರಣವತಕ್ಕೆ ಹೊರಟ ಸಮಯ, ದುರ್ಯೋಧನ “ನೀವೆಲ್ಲಾ ಬಹಳ ದೂರ ಹೊರಟಿರುವಿರಿ, ನನಗೆ ನಿಮ್ಮ ಬಗ್ಗೆ ಚಿ೦ತೆ ಆಗುತ್ತಿದೆ” ಎನ್ನುತ್ತಾನೆ. ಅದಕ್ಕೆ ಉತ್ತರವಾಗಿ ಯುಧಿಷ್ಠಿರ “ನಮ್ಮ ಬಗ್ಗೆ ಚಿ೦ತೆ ಬೇಡ. ಯಾರು ಧರ್ಮವನ್ನು ರಕ್ಷಿಸುತ್ತಾರೊ ಅವರನ್ನು ಭಗವ೦ತನೇ ರಕ್ಷಿಸುತ್ತಾನೆ” ಎನ್ನುವನು. ಆಗ ಅಲ್ಲೇ ಇದ್ದ ಭೀಮ, “ಅದಕ್ಕೆ ನನಗೆ ಯಾವಾಗಲೂ ನಿ೦ದೇ ಚಿ೦ತೆ” ಅ೦ತ...