ಆ ಘಟನೆ ಇನ್ನೂ ಹಸಿರಾಗಿದೆ. ಫೇಸ್ಬುಕ್ನಲ್ಲಿ ನಿಲುಮೆ ಎಂಬ ಗ್ರೂಪ್ನಲ್ಲಿ ವಿವೇಕಾನಂದರ ಕುರಿತ ಒಂದು ಲೇಖನದ ಲಿಂಕ್ಅನ್ನು ಯಾರೋ ಹಂಚಿಕೊಂಡಿದ್ದರು. ವಿವೇಕಾನಂದರು ರೋಗಿಷ್ಠರಾಗಿದ್ದರು, ಮೂವತ್ತೊಂದು ಕಾಯಿಲೆಗಳಿಂದ ನರಳುತ್ತಿದ್ದರು, ತಿಂಡಿಪೋತರಾಗಿದ್ದರು, ಮಾಂಸದಡುಗೆ ಮಾಡುತ್ತಿದ್ದರು, ಶಿಕ್ಷಕನಾಗಲು ನಾಲಾಯಕ್ ಎನ್ನಿಸಿಕೊಂಡು ಕೆಲಸ ಕಳೆದುಕೊಂಡಿದ್ದರು ಎನ್ನುತ್ತ...
Author - Rohith Chakratheertha
ಹಳ್ಳಿಗಳನ್ನು ಬೆಸೆಯುತ್ತಿರುವ ಕರ್ಮಯೋಗಿಗೆ ಪದ್ಮಪ್ರಶಸ್ತಿಯ ತುರಾಯಿ
ಕರ್ನಾಟಕದ ಕರಾವಳಿ ಭಾಗದಲ್ಲಿರುವ ಸುಳ್ಯ, ಅಲ್ಲಿನ ಮುಳ್ಳೇರಿಯ ಎಂಬ ಹೋಬಳಿಯಲ್ಲಿ ಮವಾರು ಎಂಬ ಗ್ರಾಮದ ಒಲೆಕ್ಕೆಳ ಮನೆತನದ ಮಾಣಿ, ಮಂಡ್ಯದ ಪಿ.ಇ.ಎಸ್. ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾಗಿದೆ. ಇನ್ನೇನು ಪದವಿಪತ್ರ ಹಿಡಿದು ಬೆಂಗಳೂರು ಸೇರುತ್ತೇನೆ, ಕಂಪೆನಿಯಲ್ಲಿ ಕೈ ತುಂಬಾ ಸಂಬಳ ಗಳಿಸುವ...
ತನಗೆ ತಾನೆ ತೂಗುಮಂಚ ತಾಗುತ್ತಿತ್ತು ದೂರದಂಚ
1. ಕಂಪೌಂಡ್ ಗೋಡೆಯ ಮೇಲೇ ಮನೆಯ ಲಿಂಟಲ್ ಎಬ್ಬಿಸುವ ಬೆಂಗಳೂರಲ್ಲಿ ಜನರ ಕನಸುಗಳಲ್ಲಾದರೂ ವಿಶಾಲ ಮನೆಗಳು ಕಾಣಿಸಿಕೊಂಡಾವೇ ಎಂದು ನಾನು ಅಚ್ಚರಿ ಪಡುವುದುಂಟು. ಬೆಂಗಳೂರಿಗೆ ಬಂದ ಮೊದಲಲ್ಲಿ ಮನೆ ಹುಡುಕುತ್ತಿದ್ದಾಗ ಏಳೆಂಟು ಮನೆಗಳನ್ನು ನೋಡಿಯೂ ನನಗೆ ಸಮಾಧಾನವಾಗಿರಲಿಲ್ಲ. ಕೆಲವು ಮನೆಗಳಲ್ಲಿ ಇಡೀ ಪಾಯವೇ ನಮ್ಮ ಹಳ್ಳಿ ಮನೆಯ ಪಡಸಾಲೆಗಿಂತ ಚಿಕ್ಕದಿತ್ತು. ಇನ್ನು ಕೆಲವು...
ಕಾಲೇಜು ಕಲಿಯದ ನೇಕಾರನ ಅರಸಿ ಬಂತು ಪದ್ಮ ಪುರಸ್ಕಾರ ಬಾಳೆಂಬ ನೂಲಿಗೆ ಸಾಧನೆಯ...
ನನ್ನ ಹೆಸರು ಚಿಂತಕಿಂದಿ ಮಲ್ಲೇಶಂ. ಹುಟ್ಟಿದ್ದು ತೆಲಂಗಾಣದ ಸಾರಿದಿಪೇಟೆಯಲ್ಲಿ. ಪೇಟೆ ಎಂಬ ಹೆಸರಿದ್ದರೂ ಅದೊಂದು ಹಳ್ಳಿ. ಕುಗ್ರಾಮ. ನಲಗೊಂಡ ಮತ್ತು ವಾರಂಗಲ್ ಎಂಬ ತೆಲಂಗಾಣದ ಎರಡು ಜಿಲ್ಲೆಗಳಲ್ಲಿರುವ ಸುಮಾರು 30,000 ನೇಕಾರರ ಪೈಕಿ ನಮ್ಮದೂ ಒಂದು ಕುಟುಂಬ. ನಮ್ಮಲ್ಲಿ ಆರೇಳು ಕ್ಲಾಸಿನ ನಂತರ ಕಲಿತವರು ಯಾರೂ ಇಲ್ಲ. ಹುಡುಗಿಯರು ಪ್ರಾಥಮಿಕ ಶಿಕ್ಷಣ ಪಡೆದು ಏಳನೇ...
ಇತಿಹಾಸದೊಂದು ಸಣ್ಣ ತುಣುಕು: ಕರ್ನಲ್ ಹಿಲ್
ಹೊನ್ನಾವರದಿಂದ ಕುಮಟಾಕ್ಕೆ ಹೋಗುವ ದಾರಿಯಲ್ಲಿ ನಿಮಗೊಂದು ತಿರುವು ಸಿಗುತ್ತದೆ. ಅಲ್ಲಿ ಬಲಭಾಗದಲ್ಲಿ ಒಂದು ಸಣ್ಣ ದಿಬ್ಬವಿದೆ. ಹಿಂದೆ ಐದಾರು ಎಕರೆ ಹರಡಿಕೊಂಡಿದ್ದ ಆ ಜಾಗ ಈಗ ಹಲವು ಅಗೆತ-ಬಗೆತಗಳಿಗೆ ಪಕ್ಕಾಗಿ ಒಂದೂವರೆ ಎಕರೆಗೆ ಇಳಿದಿದೆ. ಆ ದಿಬ್ಬದ ಬಹುಭಾಗವನ್ನು ಜೆಸಿಬಿಯ ಲೋಹದ ಹಲ್ಲುಗಳು, ರಸ್ತೆ ಅಗಲಿಸಲೆಂದು, ಕೆರೆದು ಪುಡಿಗುಟ್ಟಿವೆ. ಹಾಗೆ ಕಾಮಗಾರಿ...
ಭಾರತಕ್ಕೆ ಮೂಡುತ್ತಿವೆ ಅಗ್ನಿಯ ರೆಕ್ಕೆಗಳು
ಡಿಸೆಂಬರ್ 26ರಂದು ಭಾರತ ತನ್ನ ಅಗ್ನಿ-5 ಎಂಬ ಹೆಸರಿನ ಕ್ಷಿಪಣಿಯ ನಾಲ್ಕನೆಯ ಪರೀಕ್ಷಾರ್ಥ ಹಾರಾಟ ನಡೆಸಿತು. ಈ ಹಿಂದೆ ಮೂರು ಬಾರಿ, 2012, 2013 ಮತ್ತು 2015ರಲ್ಲಿ ಅದೇ ಕ್ಷಿಪಣಿಯನ್ನು ಅಂತರಿಕ್ಷಕ್ಕೆ ಹಾರಿಸಿ ತಂತ್ರಜ್ಞರು ಕ್ಷಮತೆಯ ಬಗೆಗಿನ ವಿವಿಧ ಪ್ರಯೋಗಗಳನ್ನು ನಡೆಸಿದ್ದರು. ಇದೀಗ ನಾಲ್ಕನೇ ಮತ್ತು ಅಂತಿಮ ಪರೀಕ್ಷೆ ನಡೆಸಿ ಎಲ್ಲವೂ ಸರಿಯಾಗಿದೆ ಎಂದು...
ನ್ಯೂಟನ್ನನ ಸೇಬಿನ ಮರವೇನೋ ವಿಶ್ವಪ್ರಸಿದ್ಧವಾಯಿತು, ಆದರೆ…
ನ್ಯೂಟನ್ ಒಮ್ಮೆ ತೋಟದಲ್ಲಿ ಕೂತು ಯೋಚಿಸುತ್ತಿದ್ದನಂತೆ. ವಿಜ್ಞಾನಿಗಳಿಗೇನು ಕೆಲಸ ಯೋಚಿಸುವುದನ್ನು ಬಿಟ್ಟರೆ! ಹಾಗೆ ಏನನ್ನೋ ಯೋಚಿಸುತ್ತಿದ್ದಾಗ ಅವನ ತಲೆ ಮೇಲೆ ಒಂದು ಸೇಬಿನ ಹಣ್ಣು ಠೊಳ್ ಎಂದು ಬಿತ್ತಂತೆ. ನಮ್ಮ ಪ್ರೈಮರಿ ಶಾಲೆಯ ಮೇಷ್ಟ್ರು ಹಾಗೆ ಅಭಿನಯಪೂರ್ವಕ ಹೇಳುತ್ತಿದ್ದರೆ ಅದೆಲ್ಲ ನಿಜವೆಂದೇ ಭ್ರಮಿಸಿದ್ದೆವು (ಸೇಬಿನ ಬದಲು ಹಲಸಿನ ಹಣ್ಣು ಬಿದ್ದಿದ್ದರೆ ಅವನ...
ಹಾಡುವ ಹಾಲಕ್ಕಿ: ಸುಕ್ರಜ್ಜಿ
ನಮ್ಮ ದೇಶದಲ್ಲಿ ಪುರಾಣ, ಕಾವ್ಯಗಳೆಲ್ಲ ಜನಪದ ಕಥನಗಳಾದಾಗ ಪಡೆಯುವ ರೂಪಾಂತರಗಳು ವಿಚಿತ್ರವಾಗಿರುತ್ತವೆ. ರಾಮಾಯಣದ ಮಾಯಾಜಿಂಕೆಯ ಪ್ರಸಂಗ ನಮ್ಮೂರ ಜನಪದ ಕತೆಯಲ್ಲಿ ಅಂಥದೊಂದು ವಿಶಿಷ್ಟ ರೂಪ ಪಡೆದಿತ್ತು. ಮಾರೀಚ ತನ್ನ ವೇಷ ಮರೆಸಿ ಚಿನ್ನದ ಜಿಂಕೆಯ ರೂಪ ತಾಳಿ ಸೀತೆಯ ಕಣ್ಣಿಗೆ ಕಾಣಿಸಿಕೊಳ್ಳುತ್ತಾನೆ. ಆ ಮಾಯಾಜಿಂಕೆಯನ್ನು ತಂದು ಕೊಡುವಂತೆ ಆಕೆ ಶ್ರೀರಾಮನನ್ನು...
ಆ ಊರಿನ ಮನೆಗಳಿಗೆ ಬೀಗವೇ ಇಲ್ಲ!
ನೋಟು ಅಮಾನ್ಯ ಮಾಡಿರುವ ಕ್ರಮ ವಿರೋಧಿಸಿ ದೇಶಾದ್ಯಂತ ಹರತಾಳ ಮಾಡುತ್ತಿದ್ದಾರೆ ಇವತ್ತು ಒಂದು ಗುಂಪಿನ ಮಂದಿ. ಆ ಸುದ್ದಿ ಬಂದಾಗ, ನನ್ನ ಗಮನವನ್ನು ಮೊದಲು ಸೆಳೆದದ್ದು ಹರತಾಳವೆಂಬ ಶಬ್ದ. ತಾಳವೆಂಬುದು ವಿಷ್ಣು ಭಕ್ತರ, ಅಂದರೆ ವೈಷ್ಣವರ ವಾದ್ಯ. ಹರನದೇನಿದ್ದರೂ ಡಮರು, ಡೋಲು ಮುಂತಾದ ಚರ್ಮ ವಾದ್ಯಗಳು. ಹಾಗಿದ್ದ ಮೇಲೆ ಹರನಿಗೂ ತಾಳಕ್ಕೂ ತಾಳ ಮೇಳ ಕೂಡಿ ಬಂದದ್ದು ಹೇಗೆ...
ಪೂರ್ಣಚಂದ್ರ, ತೇಜಸ್ವಿ!
ಪಬ್ಲಿಕ್ ಮೆಮೊರಿ ಈಸ್ ಶಾರ್ಟ್ ಎನ್ನುವ ಮಾತುಂಟು ಆಂಗ್ಲಭಾಷೆಯಲ್ಲಿ. ಜನರಿಗೆ ಸುದ್ದಿ ಬೇಕು. ಹಿಂದೆಲ್ಲ ದಿನಕ್ಕೊಮ್ಮೆ ಮಾತ್ರ ವೃತ್ತ ಪತ್ರಿಕೆಗಳು ಬರುತ್ತಿದ್ದುದರಿಂದ ಬೆಳಗಿನಿಂದ ಸಂಜೆಯವರೆಗೆ ಜನ ಪತ್ರಿಕೆಗಳ ಸುದ್ದಿಗಳನ್ನು ಜಗಿಯುತ್ತಿದ್ದರು. ಅಂದರೆ ಆಯಾ ದಿನದ ಸುದ್ದಿ ಇಡೀ ದಿನ ಜನರ ಬಾಯಲ್ಲಿ ನಲಿಯುತ್ತಿತ್ತು. ಆದರೆ ಈಗ ಜಾಲತಾಣಗಳ, ಅಂತರ್ಜಾಲ ಸುದ್ದಿ...