Author - Rohith Chakratheertha

Featured ಅಂಕಣ

ಮತ್ತೆಂದೂ ಬರದಣ್ಣ ಇಂಥಾ ಪೈ ದಿನ!

ಕೈಯ ಬಳೆ, ಹಣೆಯ ಬಿಂದಿ, ಬಕೆಟ್’ನ ಬಾಯಿ, ಅಡುಗೆ ಮನೆಯಲ್ಲಿರುವ ಪಾತ್ರೆ ಪರಡಿಯ ತಳ, ಚಕ್ಕಡಿಯ ಚಕ್ರ, ಗಾಣದೆತ್ತಿನ ಪಥ, ಹುಣ್ಣಿಮೆಯ ಚಂದ್ರನ ಮೋರೆ – ಎಲ್ಲೆಡೆಗಳಲ್ಲೂ ಕಾಣುವ ಸಾಮಾನ್ಯಾಂಶ ವೃತ್ತ. ಅಂಕೆ-ಅಕ್ಷರಗಳನ್ನು ಬರೆಯಲು ಕಲಿಯುವ ಮೊದಲು ನಾವೆಲ್ಲ ಸ್ಲೇಟಲ್ಲಿ ಗೀಚಿದ ಮೊದಲ ಆಕೃತಿಯೂ ವೃತ್ತವೇ. ಅಂಥದೊಂದು ವೃತ್ತವನ್ನು ತೆಗೆದುಕೊಳ್ಳಿ. ಅದರ ಕೇಂದ್ರವನ್ನು...

Featured ಅಂಕಣ

ಮಾನ್ಯ ಮುಖ್ಯಮಂತ್ರಿಗಳೇ, ಇಲ್ಲಿವೆ ಸಪ್ತಸೂತ್ರಗಳು

ಮುಖ್ಯಮಂತ್ರಿಗಳು ಸುದ್ದಿಯಲ್ಲಿದ್ದಾರೆ. ಸಣ್ಣದಾಗಿ ಶುರುವಾದ ಕೈಗಡಿಯಾರದ ಟಿಕ್ಟಿಕ್ ಸದ್ದು ದೊಡ್ಡದಾಗುತ್ತಾ ಬಂದು ಟೈಂಬಾಂಬ್’ನ ಸದ್ದಿನಂತಾಗಿ ಇನ್ನೇನು ತನ್ನನ್ನು ಕುರ್ಚಿಯಿಂದ ಎತ್ತಿ ಒಗೆದೇ ಬಿಡುತ್ತದೆ ಎಂಬುದು ಖಾತರಿಯಾದ ಮೇಲೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅದನ್ನು ಸಂತನಂತೆ ಕಳಚಿ ಸರಕಾರದ ಖಜಾನೆಯ ಹುಂಡಿಗೆ ಹಾಕಿದ್ದಾರೆ. ಈಗ ಅವರು ಅದೇನೇ ಸ್ಪಷ್ಟೀಕರಣ...

Featured ಅಂಕಣ

ಕನ್ನಡದ ಅಂಕೆ ಮರೆಯದಿರು ಮಂಕೆ!

ಲೆಕ್ಕ ಮಾಡುವುದು ಮನುಷ್ಯನಿಗೆ ಮಾತ್ರ ಸಿದ್ಧಿಸಿದ ಜ್ಞಾನವಲ್ಲ. ನಿಮ್ಮ ಮನೆಯ ಬೆಕ್ಕು ಐದು ಮರಿ ಹಾಕಿದ್ದರೆ, ಅವುಗಳಲ್ಲೊಂದನ್ನು ತಮಾಷೆಗಾಗಿ ಸ್ವಲ್ಪ ಹೊತ್ತು ಅಡಗಿಸಿಡಿ. ಬೆಕ್ಕು ಅದೊಂದು ಕಳೆದುಹೋದ ಮರಿಗಾಗಿ ಮನೆಯಿಡೀ ಪ್ರದಕ್ಷಿಣೆ ಹಾಕುವುದನ್ನು ನೋಡಬಹುದು. ಹೀಗೆ ಅಲ್ಪಸ್ವಲ್ಪ ಯೋಚಿಸುವ ಸಾಮರ್ಥ್ಯ ಇರುವ ಎಲ್ಲ ಪ್ರಾಣಿಪಕ್ಷಿಗಳೂ ಲೆಕ್ಕ ಮಾಡುತ್ತವೆ. ಆದರೆ, ಹಾಗೆ...

Featured ಅಂಕಣ

ಖಗೋಳ: ನಾವು ತಿಳಿದದ್ದೆಷ್ಟು? ಅವುಗಳಲ್ಲಿ ತಪ್ಪೆಷ್ಟು!

ವಿಷಯ ಯಾವುದೇ ಇರಲಿ; ಅದರಲ್ಲಿ ಪರಿಣಿತರಲ್ಲವಾದರೆ ನಮಗದರಲ್ಲಿ ಕೆಲವೊಂದು ತಪ್ಪು ಕಲ್ಪನೆಗಳಿರುತ್ತವೆ. ಉದಾಹರಣೆಗೆ ಗಣಿತದ ಬಗ್ಗೆ ಕೆಲವರು ಹೇಳುವುದನ್ನು ಕೇಳಿದ್ದೇನೆ. ಚೆನ್ನಾಗಿ ಗಣಿತ ಕಲಿಯಬೇಕು ಅಂದರೆ ಮಗ್ಗಿ ನಾಲಗೆಯ ತುದಿಯಲ್ಲಿ ಕುಣಿಯಬೇಕು. ಲೆಕ್ಕಗಳನ್ನು – ಅದರಲ್ಲೂ ಗುಣಿಸು ಭಾಗಾಕಾರಗಳನ್ನು ತುಂಬಾ ವೇಗವಾಗಿ ಮಾಡುವ ಕೌಶಲ ಇರಬೇಕು. ಮತ್ತು ಯಾವುದೇ...

ಅಂಕಣ

ಯೂ ಡೋಂಟ್ ನೋ ಇಂಗ್ಲೀಷಾ? ಛೇ ಪಾಪ!

ಬಸ್‍ಸ್ಟಾಪಿನಲ್ಲಿ ಮೆಜೆಸ್ಟಿಕ್ ಬಸ್ ಹಿಡಿಯಲು ನಿಂತಿರುತ್ತೀರಿ. ಹತ್ತಿರ ಬಂದ ಒಬ್ಬ “ಯೂ ಗೆಟ್ ಮೆಜೆಸ್ಟಿಕ್ ಬಸ್ ಹಿಯರ್?” ಎಂದು ಬಟ್ಲರ್ ಇಂಗ್ಲೀಷಿನಲ್ಲಿ ಕೇಳುತ್ತಾನೆ. “ಹೌದು, ಹನ್ನೆರಡನೇ ನಂಬರ್ ಬಸ್ ಬರುತ್ತಲ್ಲ, ಅದು ಮೆಜೆಸ್ಟಿಕ್ಕಿಗೇ ಹೋಗೋದು” ಅಂತ ನೀವೇನಾದರೂ ಶುದ್ಧ ಕನ್ನಡದಲ್ಲಿ ಉತ್ತರ ಹೇಳಲು ಹೋದರೆ “ಅಯ್ಯೋ ಪಾಪ...

ಅಂಕಣ

ಬೇಂದ್ರೆ ಬದುಕಲ್ಲಿ ಸೆರೆ ಸಿಕ್ಕ ಹತ್ತು ಚಿತ್ರಗಳು

1.ದತ್ತಾತ್ರೇಯ ರಾಮಚಂದ್ರ ಬೇಂದ್ರೆ, ಒಮ್ಮೆ ಗೆಳೆಯರ ಜೋಡಿ ಕೂಡಿಕೊಂಡು ಒಬ್ಬ ಹಿರಿಯರನ್ನು ನೋಡಲು ಹೋದರಂತೆ. ಮನೆಗೆ ಹೋದರೆ ಅವರಿನ್ನೂ ಬಂದಿಲ್ಲ ಎನ್ನುವುದು ತಿಳಿಯಿತು. ಕಾಯುವ ಬದಲು ನಾವು ನಗರ ಅಡ್ಡಾಡಿಕೊಂಡು ಬರುತ್ತೇವೆ ಎಂದು ಗೆಳೆಯರೆಲ್ಲ ಹೊರಟುನಿಂತರು. ಬೇಂದ್ರೆಯವರು ಮಾತ್ರ ಅಲ್ಲಿ ಮನೆಯಲ್ಲೇ ಉಳಿದರು. ಆಗ, ಬೇಂದ್ರೆಯವರಿಗೆ ಬಾಯಾಡಿಸಲು ಇರಲಿ ಎಂದು ಆ ಹಿರಿಯರ...

ಅಂಕಣ

ಹೆಣ ಬಿದ್ದಾಗ ಗರಿಗೆದರುವುದು ರಣಹದ್ದುಗಳು ಮಾತ್ರ…

ಮತ್ತೊಂದು ಹೆಣ ಬಿದ್ದಿದೆ. ರೋಹಿತ್ ವೇಮುಲ ಎಂಬ ಯುವಕ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಹಾಗೆ ತನ್ನ ಜೀವನ ಮುಗಿಸಿಕೊಳ್ಳುವ ಮೊದಲು “ನಾನು ಕಾರ್ಲ್ ಸಾಗಾನ್’ನಂಥ ಮಹೋನ್ನತ ವಿಜ್ಞಾನ ಬರಹಗಾರನಾಗಬೇಕೆಂದು ಕನಸು ಕಂಡಿದ್ದೆ. ನನ್ನ ಕನಸುಗಳೆಲ್ಲ ಮುರುಟಿಹೋದ ದುಃಖದಲ್ಲಿ ಸಾವಿಗೆ ಶರಣಾಗುತ್ತಿದ್ದೇನೆ” ಎಂದು...

ಅಂಕಣ

ವಿಶ್ವೇಶರಿಗೆ ವಿಶ್ವೇಶರೇ ಪರ್ಯಾಯ!

ಉಡುಪಿಯ ಕೃಷ್ಣಮಠದ ಎದುರು ದೊಡ್ಡ ಗೋಪುರವೊಂದನ್ನು ನಿರ್ಮಿಸುವ ಕೆಲಸಕ್ಕೆ ಅದಮಾರು ಶ್ರೀಗಳು ಕೈಹಾಕಿದ್ದರು. ಅದು ಹೇಗೋ ಕನಕದಾಸರ ವಿಷಯಕ್ಕೆ ತಳುಕು ಹಾಕಿಕೊಂಡು ವಿವಾದ ಸೃಷ್ಟಿಯಾಗಿತ್ತು. ಕುರುಬ ಸಮುದಾಯವನ್ನು ಬೆನ್ನಿಗೆ ಕಟ್ಟಿಕೊಂಡ ರಾಜಕೀಯ ನಾಯಕರೊಬ್ಬರು “ಪೇಜಾವರರು ಇದನ್ನು ಕೂಡಲೇ ಕೈಬಿಡಬೇಕು” ಎಂದು ಹುಕುಂ ಜಾರಿಮಾಡಿದರು. ಅದುವರೆಗೆ ವಿವಾದದಿಂದ...

ಅಂಕಣ

ದೇಹಿ ದೇಹಿ ಎಂಬ ದಾಹ ಮತ್ತು ಬೇಡವೆಂಬ ನಿರ್ಮೋಹ

ಒಮ್ಮೆ ಯು.ಆರ್. ಅನಂತಮೂರ್ತಿಯವರ ಜೊತೆ ಮಾತಾಡುತ್ತಿದ್ದಾಗ ಅವರು ಹೇಳಿದ ಮಾತು: “ನಾನು ಪ್ರಶಸ್ತಿಗಳಿಂದ ಯಾವುದನ್ನೂ ಅಳೆಯುವುದಿಲ್ಲ. ನಮ್ಮ ದೇಶದ ಗಾಂಧಿಗೆ ನೊಬೆಲ್ ಪ್ರಶಸ್ತಿ ಬರಬೇಕಾಗಿತ್ತು. ಅಡಿಗರಿಗೆ ಜ್ಞಾನಪೀಠ ಬರಬೇಕಾಗಿತ್ತು. ಕಾರಂತ, ಕುವೆಂಪು, ಮಾಸ್ತಿ ಮುಂತಾದವರೆಲ್ಲ ನೊಬೆಲ್ ಪ್ರಶಸ್ತಿಯ ಮಟ್ಟದ ಸಾಹಿತಿಗಳು. ಆದರೆ ಇವರಾರಿಗೂ ಆ ಗೌರವಗಳು ದೊರಕಲಿಲ್ಲ...

ಅಂಕಣ

ಮಾಧ್ಯಮ ಮತ್ತು ಸಹಿಷ್ಣುತೆ

ಮೊನ್ನೆ ಡಿಸೆಂಬರ್ 30ರಂದು ರಾತ್ರಿ ಅರ್ನಬ್ ಗೋಸ್ವಾಮಿಯ ಕಾರ್ಯಕ್ರಮ ನೋಡುತ್ತಿದ್ದೆ. ಜಾಕಿರ್ ನಾಯ್ಕ್ ಮಂಗಳೂರಲ್ಲಿ ಕಾರ್ಯಕ್ರಮ ನಡೆಸುವುದಕ್ಕೆ ಅನುಮತಿ ಕೊಡಬೇಕೋ ಬೇಡವೋ ಎನ್ನುವುದರ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ, “ಆತ ಇಲ್ಲಿಗೆ ಬಂದರೆ ಪರಿಸರದ ಸೌಹಾರ್ದತೆ ಕದಡುತ್ತದೆ ಎಂದು ಹಿಂದೂ ವಿಧ್ವಂಸಕರು ದೂರು ಕೊಟ್ಟಿದ್ದಾರೆ” ಎಂಬ ವಾಕ್ಯ ಪ್ರಸಾರವಾಯಿತು...