Author - Guest Author

ಕವಿತೆ

ಆಹಾ! ಹೊಸ ಮಳೆಯ ಹಸಿ ಮಣ್ಣು…

ಆಹಾ! ಹೊಸ ಮಳೆಯ ಹಸಿ ಮಣ್ಣು… ಮನಸು ಹಿಗ್ಗುತ್ತದೆ…ನಾಸಿಕವರಳುತ್ತದೆ ಹೊಸ ಮಣ್ಣಿನ ಹಸಿ ಘಮದ ನೆನಪು ಮರುಕಳಿಸಿ ಬ೦ದು! ಅ೦ದೆಲ್ಲ ಆಘ್ರಾಣಿಸಿದ ಆ ಪರಿಮಳವು, ಆ ಹಸಿಯು ಇ೦ದೂ ಅಷ್ಟೇ ಹೊಸದೆ೦ದು, ಅದು ಹೇಗೆ೦ದು? ಯಾಕಿರಬಹುದೆ೦ದು ಅಚ್ಚರಿಪಡುತ್ತದೆ ಮನ! ಬೆರಗುವಡೆಯುತ್ತದೆ.. ಅ೦ದಿನ ಮಳೆಗೂ ಇ೦ದಿನ ಮಳೆಗೂ ವ್ಯತ್ಯಾಸವು೦ಟೆ? ಇರಬಹುದೇ? ಇಲ್ಲ..ಅದೇ ಆಕಾಶ, ಅದೇ...

ಕಥೆ

ಶಾಸ್ತ್ರೋಕ್ತ ಭಾಗ ೪

ಶಾಸ್ತ್ರೋಕ್ತ ಭಾಗ ೩ ನಡುಗುತ್ತಿರುವ ಕೈಯ್ಯನ್ನು ಕಷ್ಟ ಪಟ್ಟು ಸಂಭಾಳಿಸಿಕೊಂಡು ಓದ ತೊಡಗಿದೆ… ನಮಸ್ಕಾರಗಳು… ನನ್ನ ಹೆಸರು ವಿಶ್ವೇಶ ಜೋಯಿಸ. ಈಶ್ವರ ಜೋಯಿಸರ ಮಗ. ವೃತ್ತಿಯಲ್ಲಿ ಪುರೋಹಿತ ಇಲ್ಲಿಯತನಕ. ಆತ್ಮಹತ್ಯೆಗಿಂತ ಹೇಯ ಕೃತ್ಯ ಇನ್ನೊಂದಿಲ್ಲ ಎಂದು ನಾನು ಕೂಡ ಕೇಳಿದ್ದೆ, ನಂಬಿದ್ದೆ. ಆತ್ಮಹತ್ಯೆಗಯ್ಯುವವರಿಗಿಂತ ಹೇಡಿಗಳು ಬೇರಿಲ್ಲ ಎಂಬುದು ನನ್ನ ನಿಲುವಾಗಿತ್ತು...

ಸಿನಿಮಾ - ಕ್ರೀಡೆ

ಗೋಧಿ ಬಣ್ಣ, ಸಾಧಾರಣ ಮೈಕಟ್ಟು ಹಾಗೂ ಅಸಾಧಾರಣ ಹಾಡುಗಳು

ಕೆಲವೊಮ್ಮೆ ದಟ್ಟ ಮರುಭೂಮಿಯಲ್ಲಿಯೂ ಓಯಸಿಸ್ ಸಿಕ್ಕಿಬಿಡುತ್ತದೆ.ಹಾಗೇ ಆಗಿದೆ ಈಗಿನ ಕನ್ನಡ ಸಿನಿಮಾ ಹಾಡುಗಳ ಅವಸ್ಥೆ  ಕೂಡ. ಮೊದಲೇ ಪೈರಸಿಯಿಂದಾಗಿ ಕಂಗೆಟ್ಟು ಹೋಗಿರುವ ಮ್ಯೂಸಿಕ್ ಇಂಡಸ್ಟ್ರಿ ಒಂದೆಡೆ ಆದರೆ, ಒಂದೇ ತೆರನಾದ ಗೆದ್ದೆತ್ತಿನ ಬಾಲ ಹಿಡಿದು ಬರುತ್ತಿರುವಂತಹ ಕ್ಲೀಷೆ ಭರಿತ ಹಾಡುಗಳು ಇನ್ನೊಂದೆಡೆ. ಸಿನೆಮಾ ಹಾಡುಗಳ ಮಟ್ಟಿಗೆ ಇದು ಯಾವುದೇ ಮರುಭೂಮಿಗೂ ಕಮ್ಮಿ...

ಅಂಕಣ

ನೆನಪಿನ ಬುತ್ತಿ..

ಜೀವನ ಅನ್ನೋದು ಅತ್ಯಂತ ಅಮೂಲ್ಯವಾದದ್ದು.  ಹುಟ್ಟಿನಿಂದ ಸಾಯುವವರೆಗೂ  ಅನುಭವಿಸುವ  ಒಂದೊಂದು  ಕ್ಷಣಗಳೂ ಆಗಾಗ ನೆನಪಿಗೆ ಬರುವಂಥವುಗಳು.  ಅವು ನಮ್ಮ ನೆರಳಿನಂತೆ ಹಿಂಬಾಲಿಸುತ್ತಿರುತ್ತವೆ.  ಎಷ್ಟೋ ನೆನಪುಗಳು ಸುಖ ತರಬಹುದು; ಇನ್ನು ಕೆಲವು ದುಃಖ ತರಬಲ್ಲವುಗಳು.  ಆದರೆ ಎಲ್ಲವೂ ನೆನಪುಗಳೇ ತಾನೆ! ಈ ನೆನಪನ್ನು ಉಳಿಸಿ ಹೋಗುವಂಥ ಮನುಷ್ಯ, ವಸ್ತು, ಘಟನೆ ಅಥವಾ ಪ್ರಾಣಿ...

ಸಿನಿಮಾ - ಕ್ರೀಡೆ

ಸ್ಟಿಲ್‌ ಫ್ರೇಮಿನ ‘ತಿಥಿ’

ವಾಟ್ಸಾಪು… ಫೇಸ್‌ಬುಕ್… ಟ್ವಿಟರ್‌ಗಳಲ್ಲೆಲ್ಲಾ ಈಗ ತಿಥಿಯದ್ದೇ ಮಾತು. ಇಂಥಾ ಸಿನಿಮಾ ಮಿಸ್‌ ಮಾಡ್ಕೊಳೋದಾ ಅಂದ್ಕೊಂಡು ನಾನೂ ಸಿನಿಮಾಗೆ ಹೋಗಿದ್ದಾಯ್ತು. ಲಿಫ್ಟಲ್ಲಿ ಹೋಗ್ತಿದ್ದ ಹಾಗೇ ಅದ್ಯಾವುದೋ ಮೂಲೆಯಿಂದ ಮುರಿದು ಬೀಳುತ್ತಿದ್ದ ಕರ ಕರ ಕರ ಸೌಂಡು ಕೇಳಿ ತಿಥಿ ಈಗ್ಲೇ ಶುರುವಾಗೋಯ್ತಾ ಅನ್ಸಿತ್ತು. ಆಮೇಲೆ 5.15ಕ್ಕೆ ತಿಥಿ ಶುರುವಾಗತ್ತೆ ಅಂದಿದ್ದ ಸಿನೆಪೊಲಿಸ್‌ನವರು...

ಕಥೆ

ಶಾಸ್ತ್ರೋಕ್ತ : ಭಾಗ ೩

ಶಾಸ್ತ್ರೋಕ್ತ ಭಾಗ-೨ ಬೆಳಗಾದದ್ದು ತಿಳಿಯದಷ್ಟು ಮೋಡಭರಿತವಾದ ಬೆಳಗು. ರಾತ್ರಿಯಿಂದೆಂಬಂತೆ ಬಿಡದೆ ಸುರಿಯುತ್ತಿರುವ ಮಳೆಯ ಸದ್ದಿನ ಲಾಲಿ. ಕೇಳುವವರಿಲ್ಲದಿದ್ದರೆ ಇಡೀ ದಿನ ಹೊದಿಕೆಯಡಿ ಅಡಗಿ ಬಿಡಬಹುದು. ಆದರೆ ನಮ್ಮೂರಿನ ಮಳೆಗಾಲದ ಮುಂಜಾವಿನ ಸೌಂದರ್ಯ ಸವಿಯದಿದ್ದರೆ ರಜೆ ಹಾಕಿ ಇಲ್ಲಿಗೆ ಬಂದದ್ದೆ ವ್ಯರ್ಥ. ಹಾಗೆಂದುಕೊಂಡೇ ಹಾಸಿಗೆಯಿಂದೆದ್ದು, ಹಲ್ಲುಜ್ಜಿ, ಅಮ್ಮ...

ಕಥೆ

ಶಾಸ್ತ್ರೋಕ್ತ ಭಾಗ-೨

ಬೈಕ್ ನಿಲ್ಲಿಸಿದ್ದನ್ನು ನೋಡಿ ಅವರ ಮುಖ ಪ್ರಸನ್ನವಾಗಿದ್ದು ಬೈಕಿನ ಹೆಡ್ ಲೈಟಿನ ಮಂದ ಬೆಳಕಿನಲ್ಲಿ ಸ್ಪಷ್ಟವಾಗಿ ಗೋಚರಿಸಿತು. ನಾನು ಏನನ್ನಾದರೂ ಕೇಳುವ ಮೊದಲೇ ಅವರೇ ಶುರು ಮಾಡಿದರು. “ನಮಸ್ಕಾರ, ಯಾವ್ ಕಡೆಗೆ ಹೊರ್ಟಿದ್ರಿ ನೀವು?” “ನಾನು ಬೆಳ್ಯಾಡಿ ಕಡಿಗೆ. ನಿಮ್ಗೆಲ್ಲಿ ಹೋಯ್ಕು?” ನಾನು ಉತ್ತರಿಸಿದೆ. “ನಂಗ್ ಸಮೇತ ಬೆಳ್ಯಾಡಿ ಕಡೆಗೇ ಹೋಯ್ಕು. ಇಲ್ಲಿಂದ ನಡ್ಕಂಡು...

ಕವಿತೆ

ಕಳ್ಳರ ಸಂತೆ

 ಉದ್ಯೋಗ ಖಾತ್ರಿ  ಕೊಳ್ಳೆ ಹೊಡೆದರು ರಾತ್ರೋ ರಾತ್ರಿ ಕಂಟ್ರಾಕ್ಟರ್ ಮೆಂಬರ್ ಗಳು ಬಲು ಛತ್ರಿ ಚೆಂದಿದ್ದ ರೋಡ್ ನ ಕೆರೆದರು ದಿನ ಪೂರ್ತಿ ಕಾರ್ಯದರ್ಶಿ ಇಂಜಿನಿಯರ್ ಗೆ ಕಾರು ಬಾರು ಖಾತ್ರಿ ತಹಸಿಲ್ದಾರ್, ಎಂ ಎಲ್ ಎ  ಗೊ ಕಳಿಸಿದರು ಬುತ್ತಿ || ಶೋ ಕೊಡಲು ಬರ್ತಾರೆ ಜನನಾಯಕರು ಹೇಳ್ತಾರೆ ರೈತರ ನಾಯಕ ನಾನೆಂದು ಇವ್ರು ಬರೋದು ಅ ರೈತ ಸತ್ತಾಗ ಮಾತ್ರ ಅಲ್ಲೂ  ಬೊಳ್ಳು...

ಕಥೆ

ಶಾಸ್ತ್ರೋಕ್ತ – ೧

ಈ ಮಳೆಗೂ ನಾನು ಹೊರಡುವ ಸಮಯಕ್ಕೂ ಏನೋಅವಿನಾಭಾವ ಸಂಬಂಧವಂತೂ ಖಂಡಿತ ಇದೆ. ಶಾಲೆಗೆ  ಹೋಗುವಸಮಯದಿಂದ ಹಿಡಿದು ಇಂದಿನ ತನಕವೂ ಅದು ತಪ್ಪಿಲ್ಲ.ಮಳೆಗಾಲದಲ್ಲಿ ಇಡೀ ದಿನ ಬಿಸಿಲಿದ್ದರೂ ಶಾಲೆ ಬಿಟ್ಟು ಮನೆಗೆಹೋಗುವ ಸಮಯಕ್ಕೆ ಸರಿಯಾಗಿ ಜಡಿ ಮಳೆ ತಪ್ಪಿಲ್ಲದೇ ಹಾಜರು.ಉದ್ದನೆಯ ನಿಲುವಂಗಿ ತರದ, ಮೇಲೊಂದು ಟೊಪ್ಪಿಸಿಕ್ಕಿಸಿಕೊಂಡಿರುವ ಬಣ್ಣದ ರೈನ್ ಕೋಟ್ ಹಾಕಿಕೊಂಡುಶಾಲೆಯಿಂದ...

ಕವಿತೆ

ಹೇ ವರ್ಷದಾಯೀನಿ

ಎದೆನೋವು ಏನಿದರ ಅರ್ಥ? ನಿನ್ನ ಪ್ರೀತಿಯ ಮಾಯೆಯೋ ಇದು ವ್ಯರ್ಥ! ಸೋತೆ ನಾ ನಿನ್ನ ಜಾಲಕೇ. ಬಳಿ ಬಂದು ಹೋಗು ಒಮ್ಮೆ ನನ್ನ ಮನದ ಕುಲಕ್ಕೆ . ಕೂಗಿದರು ಕೇಳಿಸದು ನಿನಗೀಗ! ನಾ ಬೇಡ! ಅವ ಬಂದ ನಿನ್ನ ಜೀವಕೀಗ. ನಾನಾರು ನಿನಗೆ ಮಾತನಾಡಿಸಲು ? ಕೇವಲ ಕೆಲವು ದಿನದ ಪ್ರೇಮಿ ಅಲ್ಲವೇ. ಸ್ವಾರ್ಥ ತೊರೆದು ತ್ಯಾಗ ಮಾಡಿ ಹೋದರೆನಾಯ್ತು. ಪ್ರೀತಿ ತೊರೆದಮೇಲೆ ಜೀವನವೇ ಇಲ್ಲವಾಯ್ತು...