ನನ್ನ ಆಫೀಸಿನ ಟೇಬಲ್ ಮೇಲೆ ಕಾಲು ಚಾಚಿ ಕಣ್ಮುಚ್ಚಿ ಮಲಗಿರುವಾಗ ’ಮಿಂಚಾಗಿ ನೀನು ಬರಲು’ ಎಂಬ ಹಾಡಿನ ರಿಂಗ್’ಟೋನಿನೊಂದಿಗೆ ಎಬ್ಬಿಸಿತು ನನ್ನ ಮೊಬೈಲ್ ಫೋನ್. ಇದು ನನ್ನದೇ ಆಫೀಸ್, ನಾನೊಬ್ಬನೆ ಇದ್ದಿದ್ದು, ಹಾಗಾಗಿ ನನ್ನ ಪ್ರಪಂಚ ಶಾಂತವಾಗಿದೆ ಅಂದು ಕೊಳ್ಳುತ್ತಿರುವಾಗಲೇ…ಛೆ! ಯಾರಿದು? ” ಹಲೋ, ವಿಜಯ್ ದೇಶಪಾಂಡೆಯವರು ತಾನೆ?” ಎಂದು ನನ್ನ...
Author - Guest Author
ನೂರಾರು ವರ್ಷದಿಂದ ವಾಲಿದೆ ಗೋಪುರ,ದೇವರ ದಯೆ, ಕುಸಿದಿಲ್ಲ!
ನನ್ನ ಬಿಲ್ಡಿಂಗ್ ಬ್ಲಾಕ್ ಸೊಟ್ಟಕ್ಕಿಟ್ರೇನೇ ನಿಲ್ಲಲ್ಲ ಅದು ಹೇಗೆ ಇಟಲಿಯಲ್ಲಿರುವ ಈ ಪೀಸಾ ಟವರ್ ಸೊಟ್ಟಕ್ಕಿದ್ದರೂ ಬೀಳದೆ ನಿಂತಿದೆ ಅಂತ ಸುಮಧ್ವ ಕೇಳಿದ, ಆ ಕ್ಷಣಕ್ಕೆ ಹೇಳಲಿಕ್ಕೆ ಏನು ತೋಚಲಿಲ್ಲವಾದರು ಪೀಸಾದ ಬಗ್ಗೆ ಸ್ವಲ್ಪ ಸಂಶೋಧನೆ ಕೆಳಗಿನ ಚಿಕ್ಕ ಮಾಹಿತಿಯಾಗಿ ಪರ್ಯವಸನಗೊಂಡಿದೆ. ಇಟಲಿ ದೇಶದಲ್ಲಿ ಎಷ್ಟೋ ಯೇಸು ಮಂದಿರಗಳಿವೆ ಅದರಲ್ಲೂ ಆಶ್ಚರ್ಯಕರವಾದ...
ಭಾಮಿನಿ
ಅವ ಬಂದಾಗ ಎದಿರಾಗಬಾರದು ಎಂಬ ಹಿಂಜರಿಕೆಇತ್ತು. ಹೀಗಾಗಿಯೇ ನೆವ ಮಾಡಿ ಬಾಜೂ ಮನೆಯಶಾಮರಾಯರ ಕಡೆ ಹೋಗಿದ್ದೆ. ವಾಸು ಮಾಮಾನಜೊತೆ ಅವನ ಹರಟೆ ಜೋರಾಗಿ ನಡೆದಿತ್ತು. ಸ್ವಲ್ಪಅನ್ನುವುದಕ್ಕಿಂತ ಪೂರ್ತಿಯೇ ಬದಲಾಗಿದ್ದ. ಕೂದಲಿಗೆಢಾಳಾಗಿ ಬಣ್ಣ ಬಡಿದುಕೊಂಡಿದ್ದ. ಬೊಜ್ಜುಸ್ವಲ್ಪ ಅತೀಅನ್ನಿಸುವಂತಿತ್ತು. ಒಬ್ಬನೇ ಬಂದಿದ್ದಾನೆ. ಇದ್ದಾಗಲೇಶಾಮರಾಯರ ಮನೆಯಲ್ಲಿ ಸುದ್ದಿ ಹಬ್ಬಿತ್ತು...
ಆಗುಂಬೆಯ ಸುತ್ತಮುತ್ತ ಮತ್ತು ಸಂಸ್ಕೃತ ಗ್ರಾಮಮತ್ತೂರು.
ಆಗುಂಬೆ ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಲೊಂದು, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿಗೆ ಒಳಗೊಂಡಿರುವ ಪ್ರದೇಶವಾಗಿದೆ. ಪುರಾಣಗಳ ಪ್ರಕಾರ ಆಗುಂಬೆಯು ಜಮದಗ್ನಿ-ರೇಣುಕಾದೇವಿಯರ ಮಗನಾದ ಪರಶುರಾಮನ ಊರು ಎಂಬ ನಂಬಿಕೆಯಿದೆ. ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಸ್ಥಳಗಳಲ್ಲಿ ಆಗುಂಬೆಯೂ ಒಂದು. ಈ ಕಾರಣಕ್ಕಾಗಿಯೆ ಆಗುಂಬೆಯನ್ನು “ದಕ್ಷಿಣದ...
ಧ್ವಜ ಹಾರಿಸಿ ಬರುವವರು ಇಲ್ಲವೇ ಧ್ವಜ ಹೊದ್ದು ಬರುವವರು
ತಮಗೆಲ್ಲ ಗೊತ್ತಿರುವ ಒಂದು ಸಣ್ಣ ವಿಷಯದಿಂದ ಲೇಖನ ಶುರು ಮಾಡೋಣ. ಫ್ರಿಜ್’ನಲ್ಲಿ ಒಂದು ಬಲ್ಬ್ ಇರುತ್ತೆ. ಫ್ರಿಜ್ ತೆಗೆದಾಗ ಮಾತ್ರ ಅದು ಆನ್ ಆಗಿ ಮುಚ್ಚಿದ ತಕ್ಷಣ ಆಫ್ ಆಗುತ್ತೆ. ಅದರ ಅವಶ್ಯಕತೆ ಅಷ್ಟೆ. ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದ ಜನರ ದೇಶಪ್ರೇಮವು ಹಾಗೇ ಆಗಿದೆ. ಸ್ವಾತಂತ್ರ್ಯ ದಿನ, ನಾಯಕರ ಭಾಷಣ,ಗಣರಾಜ್ಯೋತ್ಸವ ಇಂಥ ಸಂದರ್ಭಗಳಲ್ಲಿ...
ನಗೆಮುಗಿಲು
ಘೋರ ಶೋಕದಿ ನೀನು ಜೊತೆಯಾಗಿ ನಿಂದೆ! ಕಂಗೆಡದೆ ಜೀವಿಸುವ ಧೃತಿಯ ನೀ ತಂದೆ! ಬದುಕ ವೀಣೆಯ ಭಾವ ತಂತಿಗಳ ಮೀಟುತಲಿ ಒಲವ ವಾಣಿಯನುಲಿದೆ ಮೌನ ಶ್ರುತಿಯಲ್ಲೇ.. ಕಂಗಳಲಿ ಇಂಗದಾ ಕಂಬನಿಯು ತುಂಬಿರಲು ಬೆಂಗಡೆಯೆ ನೀ ನಿಂದೆ ಸಂಗಡಿಗನಂತೆ. ಮೌನ ತಾ ಧುಮ್ಮಿಕ್ಕಿ ಮಡುವಿನಿಂ ಬರುತಿರಲು ತಂಪಿನಿಂ ಮೈದಡವಿ ಸಾವರಿಸಿ ನಿಂದೆ. ತಾಯಿ ಕಂದನ ತೆರದಿ ಸಂತೈಸಿದೆ… ಎನ್ನ ಕರಗಳ...
ಸತ್ಯದ ಡಮರುಗ
ಸತ್ಯದ ಡಮರುಗ ಬಡಿಯುವ ಜಂಗಮ, ನಡೆದಿಹ ಮಸಣದ ಓಣಿಯೊಳು! ಜೀವವೆ ಇಲ್ಲದ ದೇಹಕೆ ಮಾಡುತ, ಬೆಳಕಿನ ಪಾಠ ಇರುಳಿನೊಳು..! ಸುಳ್ಳಿನ ಸಾವಿಗೆ ಮೋಕ್ಷವ ನೀಡಿ, ಮಸಣವ ಮಂದಿರವಾಗಿಸುತ, ಢಂ!ಢಂ!ಘಂಟೆಯಿಂ ಬಡಿದೆಬ್ಬಿಸುತ, ಪ್ರತಿಮಿಸಿ ಸತ್ಯವ ಗರ್ಭದೊಳು! ಮೋಸಗಳೆಲ್ಲವೂ ಮುಳ್ಳುಗಳು, ಮೋಹವೆ ಗಾಜಿನ ಚೂರುಗಳು! ಪಾದಕೆ ಪ್ರೇಮದ ರಕ್ಷೆಯ ಧರಿಸಿ, ಗುಡಿಸಿಹ ಕೆಡುಕಿನ ಕುರುಹುಗಳು...
ಫೋಬಿಯಾ..
“ಇಡ್ಲಿ,ವಡಾ….” ಕಿವಿಯ ಹತ್ತಿರವೇ ಕೂಗಿದಂತಾಗಿ ಎದ್ದು ಕುಳಿತೆ. ಗಂಟೆ ಆಗಲೇ ಆರೂವರೆ. ಕಿಟಕಿ ತೆರೆಯುತ್ತಿದ್ದಂತೆ ಸುಷ್ಮಾ ಮಲಗಿದಲ್ಲಿಂದಲೇ ಕೇಳಿದಳು, “ಯಾವೂರು ಬಂತ್ರೀ?”. “ಗದಗ, ಏಳಿನ್ನು ಚಾ ಕುಡಿಯೋಣು”, ನಾನು ಹೆಳಿದೆ. “ಅಪ್ಪಾ, ನಂಗ ವಡಾ ಬೇಕು”, ಮಿಡಲ್ ಬರ್ಥ್’ನಲ್ಲಿ ಮಲಗಿದ್ದ...
ಪ್ರಕೃತಿಯೊಂದಿಗೆ ಹೆಜ್ಜೆ ಹಾಕೋಣ..ಪ್ರಶಾಂತತೆಯಿಂದ ಬಾಳೋಣ.
ಎಲ್ಲವೂ ನಾವೆಂದು ಕೊಂಡಂತೆ ಆಗುವುದೇ ಇಲ್ಲ. ಏನು ಗತಿಸಬೇಕೋ ಅದೇ ಗತಿಸುತ್ತದೆ. ಯಾರಿಂದಲೂ ಯಾವುದನ್ನೂ ಪರಿಪೂರ್ಣವಾಗಿ ಬದಲಿಸಲು ಸಾಧ್ಯವಿಲ್ಲ. ಆದರೂ ನಮಗೆ ಸರಿ ಹೊಂದಿಕೊಳ್ಳುವಂತೆ ಕೆಲವರನ್ನು ಅಥವಾ ಕೆಲವನ್ನು ಬದಲಿಸಲು ಮುಂದಾಗುತ್ತೇವೆ. ಆದರೆ ಆ ಬದಲಾವಣೆ ಎಷ್ಟರ ಮಟ್ಟಿಗೆ ಗಟ್ಟಿಯಾಗಿ ನಿಲ್ಲಲು ಸಾಧ್ಯ?ಅದರಲ್ಲಿ ನಿರಂತರ ಸ್ಥಿರತೆಯನ್ನು ಕಾಪಾಡಲು ಸಾಧ್ಯವೇ...
ಇದ್ದರೂ ಚಿಂತೆ…ಇಲ್ಲದಿದ್ದರೂ ಚಿಂತೆ…
ಶಿವರಾಮ ಕಾರಂತರ “ಇದ್ದರೂ ಚಿಂತೆಯಿಲ್ಲ” ಎಂಬ ಕಾದಂಬರಿಯನ್ನು ಇತ್ತೀಚೆಗಷ್ಟೇ ಓದಿದೆ. ಕಾರಂತರ ದೂರದರ್ಶಿತ್ವದ ನಿಖರತೆಗೆ ಇದೇ ಸಾಕ್ಷಿ ಎನ್ನಿಸಿತು. ಅವರ ಕಾದಂಬರಿಯೆಂದರೆ ಅದು ಒಂದು ಕಾಲದ ಜನ ಜೀವನವನ್ನೇ ಪ್ರತಿನಿಧಿಸುವಂಥದ್ದು, ಸ್ಪಷ್ಟವಾಗಿ ನಿರೂಪಿಸಬಲ್ಲಂಥದ್ದು. ಸ್ವಾತಂತ್ರ್ಯದ ಆಸುಪಾಸಿನ ಕಾಲದಲ್ಲಿನ ಬಾರ್ಕೂರು, ಬ್ರಹ್ಮಾವರದ...