X

ಕಲ್ಪ ದುರಂತ

ಅದು 1898ನೇ ಇಸವಿ. ‘ಮಾರ್ಗನ್ ರಾಬರ್ಟ್ ಸನ್’ ಎನ್ನುವ ಅಮೇರಿಕಾದ ಕಥೆಗಾರ ಕಾದಂಬರಿಯೊಂದನ್ನು ಬರೆಯುತ್ತಾನೆ. ಎಲ್ಲದರ ಹಾಗೆ ಅದೂ ಒಂದು ಕಾಲ್ಪನಿಕ ಕಾದಂಬರಿಯಷ್ಟೇ. ಆದರೆ ಅದಕ್ಕೆ ಮಹತ್ತ್ವ ಬಂದಿದ್ದು ಸುಮಾರು ಹದಿನಾಲ್ಕು ವರ್ಷಗಳ ನಂತರ. ಅಂದರೆ 1912ನೇ ಇಸವಿಯ ನಂತರ. ಕಾರಣ ಈತ ಬರೆದ ಆ ಕಾಲ್ಪನಿಕ ಕಥೆಯೇ ಮುಂದೆ ಒಂದು ದಿನ ನೈಜಘಟನೆಯಾಗಿ ಬಿಡುತ್ತದೆ! ನೈಜಘಟನೆಯನ್ನಾಧರಿಸಿದ ಕಥೆಗಳು ಬಹಳಷ್ಟು ಸಿಗುತ್ತವೆ. ಆದರೆ ಕಾಲ್ಪನಿಕ ಕಥೆಯೇ ಮುಂದೊಂದು ದಿನ ಜರುಗಿದ ನೈಜಘಟನೆಗೆ ಸಾಮ್ಯತೆ ಹೊಂದುತ್ತದೆ ಎಂದರೆ? ಆ ಕಾರಣವೇ ಆತನ ಕಾದಂಬರಿಯು ಬಹಳಷ್ಟು ಓದುಗರನ್ನು ಮೂಗಿನ ಮೇಲೆ ಬೆರೆಳಿಡುವಂತೆ ಮಾಡಿದ್ದು.

‘ಟೈಟಾನಿಕ್’ ಚಲನಚಿತ್ರ ಹಾಲಿವುಡ್ ನ ಬಹುಪ್ರಖ್ಯಾತ ಚಲನಚಿತ್ರ. ಪ್ರಪಂಚದ ಮೂಲೆ ಮೂಲೆಯಲ್ಲಿಯೂ ಜನ ನೋಡಿದ ಚಲನಚಿತ್ರ. ಇದು ‘RMS Titanic’ ಎಂಬ ಹಡಗಿನ ದುರಂತದ ಕುರಿತಾದ ಚಲನಚಿತ್ರ. 1997ನೇ ಇಸವಿಯಲ್ಲಿ ಬಂದ ಚಲನಚಿತ್ರವಿದು. 1912ರಲ್ಲಿ ಸಮುದ್ರದಲ್ಲಿ ಮುಳುಗಿದ RMS Titanic ಎಂಬ ಹಡಗಿನ ದುರಂತದ ಮೇಲೆ ಹೆಣೆಯಲ್ಪಟ್ಟ ಕಥೆಯನ್ನೊಳಗೊಂಡ ಚಲನಚಿತ್ರವಿದು. ‘RMS titanic’ ಹಡಗು ದುರಂತಕ್ಕೂ, ಅದಕ್ಕಿಂತ 14 ವರ್ಷ ಮುಂಚಿತವಾಗಿ ಬರೆದ ಆತನ ಕಾದಂಬರಿಗೂ ಬಹಳಷ್ಟು ಸಾಮ್ಯತೆಗಳು ಇರುವುದೇ ಇಲ್ಲಿನ ಕುತೂಹಲ. ಆತನ ಕಾದಂಬರಿಯ ಹೆಸರು ‘The wreck of the Titan’ ಎಂದು. ‘Futility’ ಎಂದು ಪ್ರಸಿದ್ಧವಾಯಿತು. ದುರಂತಕ್ಕೀಡಾದ ಹಡಗಿನ ಹೆಸರು  ‘RMS TITANIC’ ಎಂದು. ಕಾದಂಬರಿಯಲ್ಲಿನ ಹಡಗು ಉತ್ತರ ಅಟ್ಲಾಂಟಿಕ್ ಸಮುದ್ರದಲ್ಲಿ ಏಪ್ರಿಲ್‌ ತಿಂಗಳಲ್ಲಿನ ರಾತ್ರಿಯಲ್ಲಿ ಮಂಜುಗಡ್ಡೆಯೊಂದಕ್ಕೆ ಢಿಕ್ಕಿ ಹೊಡೆದು ಮುಳುಗಿಹೋಗುತ್ತದೆ.

Titanic ಹಡಗಿನ ದುರಂತವೂ ನಡೆದಿದ್ದು ಏಪ್ರಿಲ್‌ ತಿಂಗಳ 14ರಂದು ರಾತ್ರಿ ಅದೇ ಉತ್ತರ ಅಟ್ಲಾಂಟಿಕ್ ಸಮುದ್ರದಲ್ಲಿನ ಮಂಜುಗಡ್ಡೆಯೊಂದಕ್ಕೆ ತಗುಲಿ. ಆತನ ಕಾಲ್ಪನಿಕ ಹಡಗು 800 ಅಡಿ ಉದ್ದವಿರುತ್ತದೆ. 25 ನಾಟ್ಸ್ ವೇಗದಲ್ಲಿ ಚಲಿಸುತ್ತಿರುತ್ತದೆ. ದುರಂತಕ್ಕೀಡಾದ ಹಡಗು ಸುಮಾರು 22.50 ನಾಟ್ಸ್ ವೇಗದಲ್ಲಿ ಚಲಿಸುತ್ತಿದ್ದು, 880 ಅಡಿ ಉದ್ದವಿತ್ತು.  ಆತನ ಕಾದಂಬರಿಯ ಕಾಲ್ಪನಿಕ ಹಡಗು ಉತ್ತರ ಅಟ್ಲಾಂಟಿಕ್ ಸಾಗರದ ‘ನ್ಯೂ ಫೌಂಡ್ ಲ್ಯಾಂಡ್’ ದ್ವೀಪದಿಂದ 400 ನಾವಿಕ ಮೈಲು ದೂರದಲ್ಲಿ ಮಂಜುಗಡ್ಡೆಗೆ ಡಿಕ್ಕಿ ಹೊಡೆದು ಮುಳುಗುತ್ತದೆ.

Titanic ಹಡಗಿನ ದುರಂತ ಸಂಭವಿಸಿದ್ದೂ ಸಹ ಅದೇ ಉತ್ತರ ಅಟ್ಲಾಂಟಿಕ್ ಸಾಗರದ ‘ನ್ಯೂ ಫೌಂಡ್ ಲ್ಯಾಂಡ್’ ದ್ವೀಪದಿಂದ 400 ನಾವಿಕ ಮೈಲು ದೂರದಲ್ಲಿ.

ಕಥೆಯ ಹಡಗಿನಲ್ಲಿ 3000 ಜನ ಪ್ರಯಾಣಿಕರಿರುತ್ತಾರೆ. ತರ್ತುದೋಣಿಗಳ ಕೊರತೆಯ ಕಾರಣದಿಂದ ಅದರಲ್ಲಿನ ಬಹುಪಾಲು ಜನ ನೀರಿನಲ್ಲಿ ಮುಳುಗಿ ಸಾಯುತ್ತಾರೆ. ಅದರಲ್ಲಿ ಕೇವಲ 24 ತುರ್ತು ದೋಣಿಗಳಿರುತ್ತದೆ. Titanic ಹಡಗಿನಲ್ಲೂ ಸಹ ಕೇವಲ 20 ತುರ್ತು ದೋಣಿಗಳಿದ್ದು, 2200 ಜನ ಪ್ರಯಾಣಿಕರಲ್ಲಿ ಬಹುಪಾಲು ಜನ ಪ್ರಯಾಣಿಕರು ಸಾವಿಗೀಡಾಗುತ್ತಾರೆ.

ಅತ್ಯಂತ ದೊಡ್ಡದಾದ ಐಷಾರಾಮಿ ಹಡಗುಎಂದು ಪ್ರಖ್ಯಾತವಾದ Titanic ಹಡಗು ಕಾದಂಬರಿಯಲ್ಲಿನ ದುರಂತಕ್ಕೀಡಾಗುವಮುಳುಗದ ಅತ್ಯಂತ ದೊಡ್ಡ ಹಡಗುಎಂದು ಕಥೆಗಾರನಿಂದ ಕರೆಸಿಕೊಂಡ ಕಾಲ್ಪನಿಕ ಹಡಗಿನ ಹಾಗೆ ಜಲಸಾಗರದಲ್ಲಿ ಲೀನವಾಗಿದ್ದು ವಿಪರ್ಯಾಸ.

Facebook ಕಾಮೆಂಟ್ಸ್

Vikram Jois:
Related Post