X

ಆಮಿನ್ ಮಟ್ಟು; ಏನೀ ಆರೋಪದ ನಿಜವಾದ ಗುಟ್ಟು!

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ  ಮಾಧ್ಯಮ ಸಲಹೆಗಾರರಾಗಿದ್ದ  ದಿನೇಶ್ ಆಮಿನ್ ಮಟ್ಟು ಅವರ ತೀರಾ ಆಪ್ತರಾಗಿದ್ದ ಬಿ.ಆರ್.ಭಾಸ್ಕರ್ ಅವರ ಫೇಸ್’ಬುಕ್ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ದಿ ಮಾಡಿದೆ. ಆಮೀನ್’ಮಟ್ಟು   ಸುಪಾರಿ ಕಿಲ್ಲರ್ಸ್’ಗಳಿಗೆ ಅತ್ಯಂತ ನಿಕಟರಾಗಿದ್ದು, ವೈಚಾರಿಕ ಬಿನ್ನಾಭಿಪ್ರಾಯಗಳನ್ನು ಹೊಂದಿದ್ದ ಲೇಖಕರೊಬ್ಬರ(ರೋಹಿತ್ ಚಕ್ರತೀರ್ಥರ) ವಿಳಾಸ ಹಾಗೂ ಮಾಹಿತಿಯನ್ನು ಅವರೊಂದಿಗೆ ಹಂಚಿಕೊಂಡಿದ್ದರು ಎಂದು ಭಾಸ್ಕರ್ ಅವರು ಆರೋಪಿಸಿದ್ದಾರೆ. ತನ್ನನ್ನು ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯವೂ ಪ್ರಶ್ನಿಸುತ್ತಿದ್ದ ರೋಹಿತ್ ಚಕ್ರತೀರ್ಥರ ಹತ್ಯೆಯ ಮೂಲಕ ಅವರ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡಿದ್ದರು ಎಂದು ಆರೋಪಿಸಿದ್ದಾರೆ. ಆ ಮೂಲಕ ಭಾಸ್ಕರ್ ಪ್ರಸಾದ್ ಹಾಗು ಆಮಿನ್’ಮಟ್ಟು ನಡುವಿನ  ಕೋಳಿ ಜಗಳದಲ್ಲಿ ಕಟುಸತ್ಯವೊಂದು ಹೊರಬಂದಿದೆ.

ತಮ್ಮ ಪೋಸ್ಟ್’ನಲ್ಲಿ ದಿನೇಶ್ ಅವರು ಯಾವ ರೀತಿ ಅಪರಾಧಿಗಳಿಗೆ ಸ್ವಾತಂತ್ರ್ಯ ನೀಡಿದ್ದರು ಹಾಗೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಪೋಲಿಸರನ್ನು ನಿಯಂತ್ರಿಸುವ ಭರವಸೆ ನೀಡಿದ್ದರು ಎನ್ನುವುದರ ಬಗ್ಗೆ ಹೇಳಿದ್ದಾರೆ.

ಮಟ್ಟು ಅವರು ಲೇಖರೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರು ಹಾಗೂ ಆಗಾಗ್ಗೆ ಲೇಖಕರನ್ನು ಕಟುವಾಗಿ ಟೀಕಿಸುತ್ತಿದ್ದರು. ಮಟ್ಟು ಅವರ ಕೆಲ ಪೋಸ್ಟ್’ಗಳು ವೈಯಕ್ತಿಕವಾಗಿದ್ದಲ್ಲದೇ ಅತ್ಯಂತ ಕೆಳಮಟ್ಟದ್ದಾಗಿತ್ತು ಕೂಡ. ಆದರೆ ಇವೆಲ್ಲ ಸಾಮಾಜಿಕ ಜಾಲತಾಣಗಳಿಗೆ ಸೀಮಿತವಾಗಿರುವ ತನಕ ಸರಿ, ಆದರೆ ಇತ್ತೀಚೆಗೆ ಬೆಳಕಿಗೆ ಬಂದ ವಿಷಯಗಳು ರಾಜ್ಯದಲ್ಲಿನ ಕಾನೂನು ಹಾಗೂ ಸರ್ಕಾರವು ಕೆಲ ವಿಷಯಗಳಲ್ಲಿ ಈ ಹಿಂದೆ ನಡೆದುಕೊಂಡ ರೀತಿಯನ್ನು ಗಂಭೀರವಾಗಿ ಪ್ರಶ್ನಿಸುವಂತಾಗಿದೆ.

ಒಂದು ವೇಳೆ ಭಾಸ್ಕರ್ ಅವರು ಹೇಳಿದ್ದನ್ನು ನಂಬುವುದಾದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಮಾಧ್ಯಮ ಸಲಹೆಗಾರರಾಗಿದ್ದ ದಿನೇಶ್ ಅಮಿನ್ ಮಟ್ಟು ಅವರು ರಾಜ್ಯದ ಜನತೆಯ ಕೆಲ ಕಠಿಣ ಪ್ರಶ್ನೆಗಳಿಗೆ ಉತ್ತರಿಸಲೇಬೇಕು.

೧. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರು ತಮ್ಮ ರಾಜಕೀಯ ಸಿದ್ಧಾಂತಗಳನ್ನ ವಿರೋಧಿಸಿದ್ದವರ ಧ್ವನಿ ಹತ್ತಿಕ್ಕಲು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದರೆ?

೨. ಈ ಹಿಂದಿನ ಕೆಲ ಕೇಸ್’ಗಳಲ್ಲಿ ಪೋಲಿಸರು ನಡೆದುಕೊಂಡು ರೀತಿ ಹಾಗೂ ತನಿಖಾ ವಿಚಾರಗಳಲ್ಲಿ ಮಟ್ಟು ಅವರು ಹಸ್ತಕ್ಷೇಪ ಮಾಡುತ್ತಿದ್ದರೆ?

೩. ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಜನರ ಮೂಲಭೂತ ಹಕ್ಕು ಅಪಾಯದಲ್ಲಿತ್ತೆ?

೪. ಲೇಖಕರು ಹಾಗೂ ಸಾಮಾಜಿಕ ಕಾರ್ಯಕರ್ತರಾಗಿದ್ದ ಗೌರಿ ಲಂಕೇಶ್, ಕಲಬುರ್ಗಿಯವರ ಹತ್ಯೆಯ ತನಿಖೆಯಲ್ಲಿ ಈ ರೀತಿಯ ರಾಜಕೀಯ ಹಸ್ತಕ್ಷೇಪ ಪ್ರಮುಖ ಅಂಶವಾಗಿತ್ತೆ?

೫. ಐ.ಎ.ಎಸ್ ಅಧಿಕಾರಿ ಹತ್ಯೆಯ ವಿಷಯದಲ್ಲಿ ಹಾಗೂ ಆ ಕೇಸ್’ನಲ್ಲಿ ಸುಪಾರಿ ಕಿಲ್ಲರ್ಸ್’ಗಳ ಕೈವಾಡದ ಕುರಿತು ಹಲವು ಗಂಭೀರ ಪ್ರಶ್ನೆಗಳು ಉದ್ಭವಿಸಿತ್ತು. ನಂತರ ಅದನ್ನು ತಳ್ಳಿಹಾಕಲಾಯಿತು. ಅಲ್ಲಿ ಅಧಿಕಾರದ ದುರ್ಬಳಕೆಯಾಗಿತ್ತೆ?

೬. ಸರ್ಕಾರ ಹಾಗೂ/ಅಥವಾ ಮಾಧ್ಯಮ ಸಲಹೆಗಾರರು ತಮ್ಮ ಅಧಿಕಾರವನ್ನು ವೈಯಕ್ತಿಕ ಲಾಭಗಳಿಗೆ ಹಾಗೂ ವೈಯಕ್ತಿಕ ದ್ವೇಷ ಸಾಧನೆಗೆ ದುರ್ಬಳಕೆ ಮಾಡಿಕೊಂಡಿದ್ದರೆ?

ದಿನೇಶ್ ಅಮಿನ್ ಮಟ್ಟು  ಈ ಕುರಿತು ಇಲ್ಲಿಯ ತನಕ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.  ಎಲ್ಲರೂ ಆರೋಪ ಹೊರಿಸಿರುವ ಭಾಸ್ಕರ್ ಪ್ರಸಾದ್ ಅವರ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತಿದ್ದಾರೆ, ಆಮಿನ್’ಮಟ್ಟು ಅವರನ್ನು ಸಮರ್ಥಿಸಲು ಪ್ರಯತ್ನಿಸುತ್ತಿದ್ದಾರೆಯೇ ಹೊರತು ಯಾರೊಬ್ಬರೂ ಆಮಿನ್’ಮಟ್ಟು ಅವರು ಹಾಗೆ ಮಾಡಿರಲು ಸಾಧ್ಯವೇ ಇಲ್ಲ ಅಂತ ಹೇಳುತ್ತಿಲ್ಲ ಎನ್ನುವುದೇ ಸೋಜಿಗದ ಸಂಗತಿ. 

ಸೈದ್ಧಾಂತಿಕ ದ್ವೇಷದ ಕಾರಣಕ್ಕಾಗಿಯೇ ಕೊಲೆಗೀಡಾಗಿದ್ದಾರೆ ಅಂತ ಹೇಳಲಾಗುತ್ತಿರುವ ಪ್ರಕರಣಗಳನ್ನು(ಕಲ್ಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆ) ನಾವು ಇತ್ತೀಚೆಗಿನ ದಿನಗಳಲ್ಲಿ ಕಂಡಿದ್ದೇವೆ, ಹಾಗಾಗಿ ಭಾಸ್ಕರ್ ಪ್ರಸಾದ್ ಆಮಿನ್’ಮಟ್ಟು ಅವರ ಮೇಲೆ ಮಾಡಿರುವನ್ನು  ಆರೋಪ ಗಂಭೀರವಾಗಿ ಪರಿಗಣಿಸಬೇಕಿದೆ.  ಮೊನ್ನೆ ಮೊನ್ನೆಯಷ್ಟೇ ಕೊಲೆಗೆ ಸುಪಾರಿ ನೀಡಿದ್ದರು ಎನ್ನುವ ಕಾರಣಕ್ಕೆ  ರವಿ ಬೆಳಗರೆಯವರನ್ನು ಸ್ವಯಂಪ್ರೇರಿತ ದೂರು ದಾಖಲಿಸಿ ಬಂಧಿಸಲಾಗಿತ್ತು. ಈಗ ಅಂತಹದೇ ಕೆಲಸವನ್ನು ಪೋಲೀಸರು ಕೈಗೆತ್ತಿಕೊಳ್ಳಬೇಕಿದೆ. ಅದಿಲ್ಲಾ ಅಂದರೆ ದೂರು ದಾಖಲಿಸಿಯಾದರೂ ತನಿಖೆ ನಡೆಯಬೇಕಿದೆ. ಆ ಮೂಲಕ ಜೀವಪರ, ಸಂವಿಧಾನಪರ, ಪ್ರಜಾಪ್ರಭುತ್ವದ ಪರ ಅಂತ ದಿನಾಲೂ ಪರ ಪರ ಕೆರೆದುಕೊಳ್ಳುವ ಸೋಗಲಾಡಿಗಳ ಬಣ್ಣ ಬಯಲು ಮಾಡಬೇಕಿದೆ!

Facebook ಕಾಮೆಂಟ್ಸ್

Readoo Staff: Tailored news content, just for you.
Related Post