X

ಅಭಿವೃದ್ಧಿಯ ಹೆಗ್ಗಳಿಕೆ – ಪಳೆಯುಳಿಕೆ

ಮನುಜ ಏಳಿಗೆಯ ಹೆಗ್ಗಳಿಕೆ

ಗಿರಿಕಾನನ ನದಿನೆಲ ಕಬಳಿಕೆ

ಮರಕಡಿದು ಮಾಡು ಬತ್ತಳಿಕೆ

ಹೊಳೆಹರಿವು ಉಸುಕಿನ ಸವಕಳಿಕೆ

ಇರಿದು ಮೃಗ ಸಂತತಿಯ ಇಳಿಕೆ              

 

ನೆಲಮಾಡಿ ನೀ ಸಮತಟ್ಟು

ವಸತಿ-ವ್ಯಾಪಾರ ನೀ ಕಟ್ಟು

ಮಾನುಷ-ಆವಾಸ ದುಪ್ಪಟ್ಟು

ಕಾರ್ಖಾನೆ-ಯಂತ್ರ ಇನ್ನಷ್ಟು

ಕೊಳಕು-ಮಾಲಿನ್ಯ ಮತ್ತಷ್ಟು              

 

ಅಭಿವೃದ್ಧಿ ನೆಪದ ದಬ್ಬಾಳಿಕೆ

ರದ್ಧಿ ಯೋಜನೆಗಳ ಮರುಕಳಿಕೆ

ಆಯೋಗಗಳ ಸುಳ್ಳಿನ ಪ್ರಣಾಳಿಕೆ

ಪರಿಸರ ಶೋಷಣೆಯ ನಡವಳಿಕೆ

ವೃಥಾ ವ್ಯಯ ಕೋಶದ ಗಳಿಕೆ                

                    

ವಿಕಾಸ ಬಯಸುವುದು ಸರಿಯೆ!

ಸಂಪನ್ಮೂಲ ದುರ್ಬಳಕೆ ತರವೆ?

ಬಳಸಿ-ಬಿಸಾಡು ಸಂಸ್ಕೃತಿ ಬೇಕೆ?

ಮರುಬಳಕೆ ಇರಲಿ ಒತ್ತೊಟ್ಟಿಗೆ!

ಸ್ವದೇಶಿ-ಸಾವಯವ ಜೊತೆ ಜೊತೆಗೆ!        

 

ಪ್ರಕೃತಿಯೊಟ್ಟಿಗಿನ ಸಹಬಾಳ್ವಿಕೆ

ಅಚಾತುರ್ಯ ತಪ್ಪು ನಡೆಯ ಅರೆವಳಿಕೆ

ನಿಸರ್ಗ ಪ್ರಕೋಪ-ವಿಕೋಪದ ತೆಗಳಿಕೆ

ಮಾನವ ಸೃಷ್ಟಿ ವಿನಾಶದ ಬಿಕ್ಕಳಿಕೆ

ಶೇಷ ಅದುವೇ ಬರಿಯ ಪಳೆಯುಳಿಕೆ     

 

  • Suresh Balachandran   

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post