ಕೂಗು:
‘ಮೋದಿ ಮೋದಿ’ ಕೂಗುವುದು
ಕೇಳಿ ಕೇಳೀ ಬೇಜಾರಾಗಿದೆ ಅಂದೆ
ಗುಂಪಲ್ಲೊಬ್ಬರು ಕೇಳಿದರು
‘ನಮೋ ನಮೋ’ ಅಂದರೆ ಹೇಗೆ!
ಹುಮ್ಮಸ್ಸು:
ಚಾಯ್ ಚಾಯ್ ಅಂತ
ಕೂಗುವವರ ಧ್ವನಿಯಲ್ಲಿ
ಬಹಳ ಹುಮ್ಮಸ್ಸಿದೆ
ಚಾಯ್ ವಾಲಾ
ಅಂತ ಕೂಗುವುದರಲ್ಲೂ
ಬಹಳ ಗಮ್ಮತ್ತಿದೆ!
ಹೊಸ ಇರಾದೆ:
ಮೈಸೂರಲ್ಲಿ ಮೊನ್ನೆ ಆದದ್ದು
ಪುಸ್ತಕ ಜಾತ್ರೆ ಸಾಹಿತ್ಯ ಪ್ರೇಮಿಗಳಿಗೆ
ಪಕ್ಷ ಪ್ರಚಾರದ ಇರಾದೆ ಇದ್ದದ್ದು
ಪಟ್ಟ ಗಿಟ್ಟಿಸಿಕೊಂಡವರಿಗೆ!
ಅದಕ್ಷ:
ತುಂಬಾ ಬಯ್ಯಿಸಿಕೊಂಡು
ವ್ಯಂಗವಾಡಿಸಿಕೊಂಡು ಅಧ್ಯಕ್ಷನಾದರೆ
ಅದು ಸಾಹಿತ್ಯಸಮ್ಮೇಳನಕ್ಕೆ
ಸಂಬಂಧಿಸಿದ್ದು ಅನ್ನುವುದು ಸುಳ್ಳು
ಕಾಂಗ್ರೆಸ್ ಪಕ್ಷದ ಸಮಾವೇಶವೂ
ಇದೆಯಲ್ಲ ಮುಂದು!
ಹಿನ್ನಡೆ:
ಬೇರೆ ಯಾರೋ ಏರುತ್ತಾರಂತೆ
ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಗದ್ದುಗೆಗೆ
ಕೊನೆಗೂ ಕಾಂಗ್ರೆಸ್ಸಿನಲ್ಲಿ
ಹಿನ್ನಡೆಯಾಯ್ತು ಮೋದಿಗೆ !
-ಅನಂತ್ ರಮೇಶ್
Facebook ಕಾಮೆಂಟ್ಸ್