X

ಟಿಪ್ಪುವಿನ ಅದ್ಯಾವ ಗುಣ ನಿಮಗೆ ಆದರ್ಶವೆನಿಸಿತು?

ಕರ್ನಾಟಕದ ರಾಜಕೀಯ ವಲಯದಲ್ಲಿಎಲ್ಲಾ ಪಕ್ಷಗಳು ಭಾರಿ ವಿವಾದಿತ ವಿಷಯವೊಂದರ ಚರ್ಚೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿವೆ. ಅದು ರಾಜ್ಯದ ಹಿತ ಕಾಪಾಡುವ ನೆಲ-ಜಲ, ನಾಡು-ನುಡಿಯ ಸಂಬಂಧಿತ ಅಥವಾ ರಾಜ್ಯಕ್ಕೆ ಲಾಭದಾಯಕವಾಗುವಂತಹ ಯಾವ ವಿಷಯವೂ ಅಲ್ಲ, ಬದಲಾಗಿ ವಿವಾದಿತ ವ್ಯಕ್ತಿ ಮತಾಂದ ಟಿಪ್ಪುವಿನ ಕೇಂದ್ರಿಕೃತವಾದ ರಾಜಕೀಯ ಪಕ್ಷಗಳಿಗೆ ಅನುಕೂಲವಾಗುವಂತಹ ಓಲೈಕೆ ರಾಜಕಾರಣ. ಭಾರತ ಪ್ರಜಾಪ್ರಭುತ್ವವಾದ ನಂತರದಲ್ಲಿ ಈ ಒಲೈಕೆ ರಾಜಕಾರಣಕ್ಕೆ ಬಹು ದೊಡ್ಡಇತಿಹಾಸವಿದೆ, ಸ್ವತಂತ್ರಾ ನಂತರದಲ್ಲಿಅಧಿಕಾರ ವಹಿಸಿದ ರಾಷ್ಟ್ರೀಯ ರಾಜಕಾರಣಿಗಳಿಂದ ಆದಿಯಾಗಿ ಇಂದಿನ ಗ್ರಾಮ ಮಟ್ಟದ ರಾಜಕಾರಣಿಗಳವರೆಗೂ ಎಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ತುಷ್ಠಿಕರಣಕ್ಕೆ ಮುಂದಾಗಿದ್ದಾರೆ. ಭಾರತದಲ್ಲಿ ಸುಮಾರು 14-18% ಪ್ರತಿಶತ ಜನಸಂಖ್ಯೆಯನ್ನು ಹೊಂದಿದ ಮುಸ್ಲಿಂ ಸಮುದಾಯ ರಾಜಕೀಯವಾಗಿ ನಿರ್ಣಾಕವಾಗಿದೆ. ಈ ನಿರ್ಣಾಯಕ ಮತಗಳ ನಿರ್ಲಕ್ಷ್ಯಯಾವ ಪಕ್ಷಗಳಿಗಾದರೂ ಸರಿಯೇ ಅದು ಬಹುದೊಡ್ಡ ಕೊಡಲಿ ಪೆಟ್ಟೆ.

ಇಸ್ಲಾಂನಲ್ಲಿ ವ್ಯಕ್ತಿ ಪೂಜೆ ಸಲ್ಲ:

ಇಸ್ಲಾಂನಲ್ಲಿ ಅಲ್ಲಾಹನನ್ನು ಬಿಟ್ಟು ಅನ್ಯರ ಪೂಜೆ ಸಲ್ಲದು, ಹೀಗಾಗಿಯೇ 2015ರಲ್ಲಿ ವಿಶ್ವಸಂಸ್ಥೆ ಯೋಗವನ್ನು ಜಗತ್ತಿನಾದ್ಯಂತ ಆಚರಿಸಲು ಕರೆ ನೀಡಿದಾಗ ಸೂರ್ಯ ನಮಸ್ಕಾರದಲ್ಲಿ ‘ಓಂ ಮತ್ತು ಸೂರ್ಯ’ನನ್ನು ದೇವನೆಂದು ಜಪಿಸಿದರೆ ಅದು ಅಲ್ಲಾಹನಿಗೆ ಮಾಡಿದ ದ್ರೋಹವೆಂದು ನಂಬಿ ಬಹುತೇಕ ಮುಸ್ಲಿಮರು ತಿರಸ್ಕರಿಸಿದ್ದರು. ಅದಲ್ಲದೇ ‘ವಂದೇ ಮಾತರಂ’ ಹೇಳುವದು ಕೂಡಾ ಧರ್ಮ ವಿರೋಧಿ ಎಂದು ನಂಬಿರುವ ಹಲವರಿದ್ದಾರೆ. ಉತ್ತರ ಭಾರತಕ್ಕೆಇಸ್ಲಾಂ ಅನ್ನು ತಂದ ಆಜ್ಮೇರದ ಖ್ವಾಜಾ ಮೋಹಿನುದ್ದಿನ್ ಚಸ್ತಿ, ಕೇರಳದ ಮೂಲಕ  ದಕ್ಷಿಣ ಭಾರತಕ್ಕೆ ಇಸ್ಲಾಂ ಅನ್ನು ಪರಿಚಯಿಸಿದ ಮಾಲಿಕ್ ದಿನಾರ್, ಸ್ವತಂತ್ರ ಹೋರಾಟಗಾರ ಅಸ್ಫಾಕುಲ್ಲಾ ಖಾನ್, ಕರ್ನಾಟಕದ ಕಭೀರ್ ಖ್ಯಾತಿಯ ಹಿಂದೂ-ಮುಸ್ಲಿಂರ ಭಾವೈಕ್ಯತೇಯ ಪ್ರತೀಕ ಶಿಶುವಿನಹಾಳದ ಶರೀಫ ಸಾಹೇಬ, ಮಿಸೈಲ್ ಮ್ಯಾನ್ ಖ್ಯಾತಿಯ ಡಾ||ಅಬ್ದುಲ್ ಕಲಾಂರಂತಹ ಸಾಧಕರ ಜಯಂತಿಯನ್ನು ಯಾವ ಮುಸ್ಲಿಮರು ಆಚರಿಸುವ ಸಂಪ್ರದಾಯ ಇಲ್ಲ, ಏಕೆಂದರೆ ಇದು ಧರ್ಮ ವಿರೋಧ ಚಟುವಟಿಕೆ ಎಂಬುದು ಬಹುತೇಕ ಮುಸ್ಲಿಮರ ನಂಬಿಕೆ, ಆಚರಿಸಿದರೂ ಬಹುಷಃ ಯಾರ ವಿರೋಧವು ಇರುತ್ತಿರಲಿಲ್ಲವೇನೊ! ಇವರೆಲ್ಲರಿಗೂ ಇಲ್ಲದ ವ್ಯಕ್ತಿ ಪೂಜೆಯನ್ನು ಕೇವಲ ಟಿಪ್ಪೂವಿಗಾಗಿ ಮಾಡುವುದನ್ನೂ ಮತ್ತು ಯಾವೊಬ್ಬ ಮುಸಲ್ಮಾನನಿಗೂ ನಯಾಪೈಸೆ ಲಾಭವಿಲ್ಲದ ಈ  ಜಯಂತಿಯನ್ನು ಮುಸ್ಲಿಮರು ಹೇಗೆ ತಾನೆ ಒಪ್ಪಿಯಾರು? ರಾಜಕೀಯ ಕಾರಣಗಳಿಗಾಗಿ ನಮ್ಮ ಧರ್ಮೀಯನೆಂದು ಒಪ್ಪಿದರೂ, ಅದು ಧರ್ಮಭ್ರಷ್ಟತೆಯಾಗುವದಿಲ್ಲವೇ? ಯಾರಿಗೂ ಬೇಡವಾಗಿದ್ದ ಟಿಪ್ಪುಜಯಂತಿ ಇಂದು ಕಾಂಗ್ರೇಸ್ ಪಕ್ಷದ  ಅಸ್ಥಿತ್ವಕ್ಕಾಗಿ ಬೇಕಾಗಿರುವುದು ಮಾತ್ರ ವಿಷಾದನೀಯ, ಟಿಪ್ಪು ಹಳೇ ಮೈಸೂರು ಭಾಗದವನೆಂಬ ಒಲವು, ಆತ್ಮಿಯತೇ, ಅಭಿಮಾನಕ್ಕಾಗಿ ಜಯಂತಿಯನ್ನು ಆಚರಿಸಿಯೇ ಸಿದ್ದ ಎನ್ನುವ ಮುಖ್ಯಮಂತ್ರಿಗಳೇ, ನಿಮ್ಮ ಮೈಸೂರು ಭಾಗದ ಮುಸ್ಲಿಮರನ್ನೇ ವೈಭವಿಸುಕರಿಸಬೇಕೆನ್ನುವ ಹಪಹಪಿಯಿದ್ದರೇ ಮೈಸೂರು ಸಂಸ್ಥಾನಕ್ಕೆ ಉದಾತ್ತ ಕೊಡುಗೆ ನೀಡಿದ ಮೈಸೂರಿನ ಆರ್ಕಿಟೆಕ್ಟ್ ಸರ್.ಮಿರ್ಜಾ ಇಸ್ಲ್ಮಾಯಿಲ್ ಅವರು ನೆನಪಿಗೆ ಬರಲಿಲ್ಲವೇಕೆ?

ಟಿಪ್ಪು ಕಾಂಗ್ರೆಸ್ಸಿನ ಅನ್ನಭಾಗ್ಯ :

120ಕ್ಕೂ ಅಧಿಕ ವರ್ಷಗಳ ಇತಿಹಾಸ ಹೊಂದಿ ಜನರನ್ನು ಒಡೆದಾಳುವ ರಾಜಕೀಯದಿಂದಾಗಿ 60ಕ್ಕೂ ಹೆಚ್ಚು ವರ್ಷ ಅಧಿಕಾರದ ರುಚಿ ಅನುಭವಿಸಿದ ಕಾಂಗ್ರೆಸ್ ಪಕ್ಷಕ್ಕೆ ಓಲೈಕೆ ರಾಜಕಾರಣ ಹೊಸತೇನಲ್ಲ. ನರೇಂದ್ರ ಮೋದಿ ಪ್ರಧಾನಿಯಾದ ನಂತರದ ದಿನಗಳಲ್ಲಿನ ಕಾಂಗ್ರೆಸ್ಸಿನ ಸ್ಥಿತಿ ದಯನೀಯವಾಗಿ ಕುಂಠಿತಗೊಂಡು ಒಂದೊಂದೇ ರಾಜ್ಯಗಳಲ್ಲಿ ತನ್ನಅಧಿಕಾರ ಕಳೆದುಕೊಳ್ಳುತ್ತಾ ರಾಷ್ಟ್ರೀಯ ಪಕ್ಷವೊಂದು ಪ್ರಾದೇಶಿಕ ಪಕ್ಷಗಳಿಗಿಂತಲೂ ಕೆಳ ಹಂತಕ್ಕೆ ತಳ್ಳಲ್ಪಟ್ಟಿದೆ. ಈಗ ತನಗೊಂದು ಭದ್ರ ನೆಲೆಯಿಲ್ಲದೆ ಅಧಿಕಾರದ ದಾಹಕ್ಕಾಗಿ ಹಪಹಪಿಸುತ್ತಿದೆ, ಕೊಂಚ ಸಮಾಧಾನವೆಂಬಂತೆ ಕರ್ನಾಟಕದಂತಹ ದೊಡ್ಡರಾಜ್ಯದಲ್ಲಿ ಆಡಳಿತವಿರುವದು. ಮುಸ್ಲಿಮರ ತುಷ್ಠೀಕರಣಕ್ಕಾಗಿ ಕರ್ನಾಟಕವನ್ನು ಪ್ರಯೋಗಶಾಲೆಯಾಗಿ ಮಾಡಿಕೊಂಡು ರಾಷ್ಟ್ರದಾದ್ಯಂತ ಮುಸ್ಲಿಂರ ಗಮನ ಸೆಳೆಯುವದಕ್ಕಾಗಿ ಮತ್ತೆ ತನ್ನ ಅಸ್ಥಿತ್ವ ಸ್ಥಾಪನೆಗಾಗಿ ಕೈಗೆತ್ತಿಕೊಂಡ ವಿಷಯವೇ ಮತಾಂಧ ಟಿಪ್ಪುವಿನ ಜಯಂತಿ, ಹೀಗಾಗಿ ಟಿಪ್ಪು ಕಾಂಗ್ರೆಸ್ಸಿನ ಅನ್ನಭಾಗ್ಯ, ಭರವಸೆಯ ಬೆಳಕು ಎಂದರೆ ತಪ್ಪಾಗಲಾರದು.

ಯಾವುದಾದರೂ ವ್ಯಕ್ತಿಯ ಜನ್ಮದಿನವನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸುವುದಾದರೆ, ಆ ವ್ಯಕ್ತಿ ಸಮಾಜಕ್ಕೆ ನೀಡಿರುವ ಕೊಡುಗೆಗಳು, ಮೌಲ್ಯಯುತ ಜೀವನ ಹಾಗೂ ಅವರ ಆದರ್ಶಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶನ ಆಗುವಂತಹ ವ್ಯಕ್ತಿತ್ವವನ್ನು ಹೊಂದಿರಬೇಕು, ಗಾಂಧೀಜಿಯವರ ಆಹಿಂಸಾ ಮಂತ್ರ, ಬಸವಣ್ಣನವರ ಸಾಮಾಜಿಕ ಚಿಂತನೆ, ಕಿತ್ತೂರ ಚೆನ್ನಮ್ಮನ ಧೈರ್ಯ, ಅಂಬೇಡ್ಕರವರ ಸಮಾನತಾವಾದ  ವ್ಯಕ್ತಿತ್ವ ಪಸರಿಸುವ ಜಯಂತಿ ಆಚರಣೆಗಳಿಗೆ ಯಾರ ವಿರೋಧವುಇಲ್ಲ, ಇತಿಹಾಸದಲ್ಲಿ ಕ್ರೂರಿ, ಮತಾಂದ, ಮೂರ್ತಿ ಭಂಜಕ, ಸಾವಿರಾರು ಜನರ ಮಾರಣಹೋಮಗೈದ  ನರಹಂತಕ, ಕನ್ನಡ ಭಾಷಾ ವಿರೋಧಿ ಹೀಗೆ ಚಿತ್ರಿತವಾದ ವಿವಾದಿತ ವ್ಯಕ್ತಿಯ ವೈಭವೀಕರಣ ಯಾವ ಉದ್ಧಾರಕ್ಕಾಗಿ? ಟಿಪ್ಪುವಿನಲ್ಲಿ ಅದ್ಯಾವ ಗುಣ ನಿಮಗೆ ಆದರ್ಶವೆನಿಸಿತು? ಟಿಪ್ಪುವಿನ ಅದ್ಯಾವ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ  ಪರಿಚಸಲಿಚ್ಚಿಸುವಿರಿ? ಟಿಪ್ಪುವನ್ನು ಆದರ್ಶವಾಗಿರಿಸಿಕೊಂಡು ನಮ್ಮ ಮುಂದಿನ ಪೀಳಿಗೆ ಕ್ರೂರಿಗಳಾಗಬೇಕೇ? ಮತಾಂಧರಾಗಬೇಕೇ? ನರಹಂತಕರಾಗಬೇಕೇ? ಸರ್ಕಾರದಲ್ಲಿರುವ ಹಣ ನಿಮ್ಮ ಮನೆಗಳಿಂದ ತಂದದ್ದಲ್ಲ, ಅದು ಸಾರ್ವಜನಿಕರ ಶ್ರಮದ ಫಲ, ಸಾರ್ವಜನಿಕರ ಹಣವನ್ನು ನಿಮ್ಮಇಷ್ಟಾರ್ಥ ಸಿದ್ಧಿಗಳಿಗಾಗಿ ಬಳಸುವ ಯಾವ ಹಕ್ಕು ನಿಮಗಿದೆ?ನಿಮಗೆ ಟಿಪ್ಪುಆದರ್ಶಪ್ರಾಯ ಆಗಿದ್ದರೆ ಸರ್ಕಾರಿ ಹಣ ಪೋಲು ಮಾಡದೇ, ನಿಮ್ಮ ಪಕ್ಷದ ದುಡ್ಡಿನಲ್ಲಿ ವಿಜೃಂಭಣೆಯಿಂದ ಆಚರಿಸಿಕೊಳ್ಳಿ.

ಸುಪ್ರಿಂಕೋರ್ಟಿನ ಹೇಳಿಕೆ :

ಕಳೆದ ವರ್ಷ ಆಚರಣೆಯ ಸಂಧರ್ಭದಲ್ಲಿ ಹೈಕೋರ್ಟನ ನ್ಯಾಯಮೂರ್ತಿಗಳು ಟಿಪ್ಪು ಕೇವಲ ರಾಜ ಮಾತ್ರ, ಯಾವ ಸ್ವತಂತ್ರ ಹೋರಾಟಗಾರನೂ ಅಲ್ಲ ಎಂದಿದ್ದು ನೆನಪಿಲ್ಲವೇನು? ಹಾಗೇ ಒಬ್ಬರಾಜನನ್ನು ವೈಭವಿಕರಬೇಕೆನ್ನುವದಾದರೇ ವಿಜಯನಗರದ ಇಕ್ಕೆಲಗಳಲ್ಲಿ ಚಿನ್ನ, ಮುತ್ತು-ರತ್ನಗಳನ್ನುಮಾರಾಟ ಮಾಡುವಂತಹ ರಾಮರಾಜ್ಯದ ಶ್ರೀಕೃಷ್ಣದೇವರಾಯ, ಉತ್ತರ ಭಾರತದವರೆಗೂ ಕನ್ನಡ ನಾಡನ್ನು ಪಸರಿಸಿದ ವೀರ ಪುಲಿಕೇಶಿ, ಮೈಸೂರಿನ ಒಡೆಯರು, ಹೊಯ್ಸಳರು, ರಾಷ್ಟ್ರಕೂಟರು, ಚಾಲುಕ್ಯರು, ಗಂಗರು, ಪಾಳೆಗಾರರು, ಚಿತ್ರದುರ್ಗದ ನಾಯಕರಾರು ನೆನಪಿಗೆ ಬರಲಿಲ್ಲವೇ? ಕನ್ನಡ ನಾಡಿನ ಹೆಮ್ಮೆಯ ಕುಮಾರವ್ಯಾಸ, ಪಂಪ, ರಾಘವಾಂಕ, ಆಲೂರು ವೆಂಕಟರಾಯರು, ದ.ರಾ.ಬೇಂದ್ರೆಯಂತಹ ಮಹನಿಯರಾರು ನಿಮ್ಮಕಾಮಾಲೆ ಕಣ್ಣಿಗೆ ಕಾಣಿಸಲಿಲ್ಲವೇಕೇ? ಅಥವಾ ಅವರಾರು ನಿಮಗೆ ಬೇಕಾಗಿರುವ ಧರ್ಮ, ಜಾತಿಗೆ ಸಂಬಂಧಿಸಿದವರಲ್ಲವೋ?

ಟಿಪ್ಪು ಹಿಂದೂವಾಗಿದ್ದರೆ?

ಊಹಿಸಲಸಾದ್ಯವಾದರು ಸುಮ್ಮನೇ ಊಹಿಸಿಕೊಳ್ಳಿ, ಟಿಪ್ಪುವೇನಾದರೂ ಹಿಂದೂವಾಗಿದ್ದರೇ, ಇವತ್ತು ಇಷ್ಟೊಂದು ಪ್ರಚಾರದಲ್ಲಿರುತ್ತಿದ್ದನೇ? ಕಾಂಗ್ರೆಸ್ಸಿಗರ ಪ್ರೀತಿಪಾತ್ರ ಅನ್ನದಾತ ಆಗಿರುತ್ತಿದ್ದನೇ? ಅವನ  ಜಯಂತಿ ಆಚರಿಸುತ್ತಿದ್ದರೇ, ವಿರೋಧ ಪಕ್ಷಗಳ ವಿರೋಧವಿರುತ್ತಿತ್ತೇ? ಶತ-ಶತಮಾನಗಳಿಂದಲೂ ಎಷ್ಟೊಂದು ಹಿಂದೂ ರಾಜ-ಮಹಾರಾಜರುಗಳು ಆಳಿ ಹೋಗಿದ್ದಾರೆ ಯಾರೊಬ್ಬರಾದರು ಕ್ರೂರಿ, ಮತಾಂಧರೆನಿಸಿದ ಇತಿಹಾಸ ಇದೆಯೇ? ಹಾಗೆಯೇ ಟಿಪ್ಪು ಹಿಂದುವಾಗಿದ್ದರೇ, ಕ್ರೂರಿಯೂ, ಮತಾಂಧನು ಆಗಿರುತ್ತಿರಲಿಲ್ಲವೇನೊ! ಅಭಿವೃದ್ದಿ, ವಿಕಾಸ, ರೈತರ ಕಲ್ಯಾಣ, ಯುವಜನರ ನಿರುದ್ಯೋಗ, ನೀರಿನ ಸಮಸ್ಯೆ, ಆರೋಗ್ಯ ಸುಧಾರಣೆ ಮುಂತಾದ ಹತ್ತು-ಹಲವು ಜ್ವಲಂತ ಸಮಸ್ಯೆಗಳತ್ತ ಗಮನ ಹರಿಸದೆ, ಅಧಿಕಾರದಾಹದ ಪಿತ್ತ ನೆತ್ತಿಗೇರಿದವರಂತೆ, ಉಪಯೋಗವಿಲ್ಲದ ಜಯಂತಿಯನ್ನಾಚರಿಸುವ ಮೂಲಕ ತುಷ್ಟೀಕರಣಕ್ಕೆ ಮುಂದಾಗಿರುವುದಂತು ಮಹಾಪಾಪವೇ ಸರಿ, ತುಷ್ಟೀಕರಣ ಹೀಗೆಯೇ ಮುಂದುವರಿದರೆ, ಈಗ ಟೋಪಿ ಹಾಕಿಸಿಕೊಳ್ಳುವ ಸೋಗಲಾಡಿ ನಾಯಕರುಗಳು ಮುಂದೆ ಬುರ್ಖಾ ಧರಿಸಿ ಓಲೈಸುವ ಕಾಲ ದೂರವೆನಿಲ್ಲ. ಇಂದು ಟಿಪ್ಪುವನ್ನು ಹೊಗಳುವ ನಾಯಕರು ಮುಂದೆ ಮುಸ್ಲಿಂರ ತುಷ್ಟೀಕರಣದ ಬರದಲ್ಲಿ ಬಿನ್ ಲಾಡೆನ್, ಹಫೀಜ್, ಅಪ್ಜಲ್’ಗುರುನಂತಹ ಮುಂತಾದ ಉಗ್ರರ ಜಯಂತಿಗಳನ್ನಾಚರಿಸಲೂ ಹಿಂಜರಿಯಲಾರರು, ಈ ರಾಜಕಾರಣಿಗಳ ನಾಟಕವು ಏನೇ ಇರಲಿ, ರಾಷ್ಟ್ರೀಯ ಚಿಂತನೆಗಳುಳ್ಳ ಮುಸ್ಲಿಮರು ಮಾತ್ರ ಇವರ ಸೊಗಲಾಡಿತನಕ್ಕೆ ಮರುಳಾಗರು. ಆದರೇ ರಾಜಕಾರಣಿಗಳ ಈ ನಾಟಕವನ್ನು ಬಹು ಕುತೂಹಲದಿಂದ ವೀಕ್ಷಿಸುತ್ತಿರುವ ಮತದಾರ ಪ್ರಭುಗಳು ಮಾತ್ರ ಮುಂಬರುವ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾನೆ.

-ಪಿ.ಎಸ್.ಶಾನವಾಡ

 

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post