X

ತಾಳಿದವನು ಬಾಳಿಯಾನು

ಸ್ಪಾನಿಷ್ ಗಾದೆ : Con paciencia y saliva, un elefante se tiro a una hormiga.
ತಾಳಿದವನು ಬಾಳಿಯಾನು ಎನ್ನುವ ಕನ್ನಡ ಗಾದೆಗೆ ತುಂಬಾ ಹತ್ತಿರವಾದ ಸ್ಪಾನಿಷ್ ಗಾದೆಯಿದು . ತಾಳ್ಮೆಯ ನಡವಳಿಕೆಯಿಂದ ಮತ್ತು ಹೆಚ್ಚು ಮಾತನಾಡದೆ (ಅವುಡುಗಚ್ಚಿ )ಕೆಲಸ ಮಾಡುವುದರಿಂದ  ಆನೆ ಕೂಡ ಇರುವೆಯನ್ನ ಎತ್ತಿ ಬಿಸಾಡಬಲ್ಲದು ಎನ್ನುವುದು ಯಥಾವತ್ತಾದ ಅರ್ಥ . ಮನಸಿಟ್ಟು ತಾಳ್ಮೆಯಿಂದ ಕೆಲಸ ಮಾಡಿದರೆ ಆನೆ ಕೂಡ ಇರುವೆಯನ್ನ ಎತ್ತಿ ಬಿಸಾಡಬಲ್ಲದು ಎನ್ನವುದರ ಭಾವಾರ್ಥ ಇರುವೆಗೆ ಆನೆಯನ್ನ ಎತ್ತುವುದು ಹೇಗೆ ಸಾಧ್ಯವಿಲ್ಲವೂ ಹಾಗೆ ಆನೆಗೆ ಕೂಡ ಇರುವೆಯನ್ನ ಎತ್ತಿ ಬಿಸಾಡಲು ಆಗುವುದಿಲ್ಲ . ಆದರೆ ತಾಳ್ಮೆಯಿಂದ ಪ್ರಯ್ನತ್ನಿಸಿದರೆ ಖಂಡಿತ ಸಾಧ್ಯ ಎನ್ನುವುದು . ಇಲ್ಲಿ ಆನೆ ಮತ್ತು ಇರುವೆ ಭ್ರಾಮಕಗಳಾಗಿ ಉಪಯೋಗಿಸಲ್ಪಟ್ಟಿವೆ . ಮೂಲಾರ್ಥ ನಮ್ಮನ್ನ ಕುರಿತೆ ಆಗಿದೆ . ಆತುರದಿಂದ ಯಾವ ಕೆಲಸವೂ ಆಗುವುದಿಲ್ಲ, ತಾಳ್ಮೆಯಿಂದ ಯಾವ ಕೆಲಸ ಮಾಡಿದರೂ ಅದರಲ್ಲಿ ಸಿದ್ದಿ ಸಿಕ್ಕೇ ಸಿಗುತ್ತದೆ ಎನ್ನುವುದು ನಮ್ಮಲ್ಲಿ ತಾಳಿದವನು ಬಾಳಿಯಾನು ಎಂದಾಗಿದೆ .
con paciencia y con maña un elefante se comió una araña  ಅಂದರೆ ತಾಳ್ಮೆ ಮತ್ತು ಕೌಶಲ್ಯದಿಂದ ಆನೆ ಜೇಡವನ್ನ ಹಿಡಿದು ತಿನ್ನಬಹದು ಎನ್ನುವ ಅರ್ಥ ನೀಡುವ ಗಾದೆಯನ್ನ ಕೂಡ ಸ್ಪಾನಿಷ್ ಭಾಷೆಯನ್ನ ಬಳಸುವ ದೇಶಗಳಲ್ಲಿ ಬಳಸುತ್ತಾರೆ . ಸ್ಪಾನಿಷ್ ಭಾಷೆ ೨೭ ಕ್ಕೂ ಹೆಚ್ಚು ದೇಶಗಳ ಅಧಿಕೃತ ಆಡಳಿತ ಹಾಗೂ ಆಡುಭಾಷೆಯಾಗಿದೆ . ಇರುವೆಯ ಜಾಗದಲ್ಲಿ ಜೇಡವನ್ನ ಬಳಸಲಿ ಇನ್ನೇನೆ ಬಳಸಲಿ ಗಾದೆಗಳ ಅರ್ಥ ಮಾತ್ರ ಒಂದೇ ., ತಾಳ್ಮೆ ಜೀವನಕ್ಕೆ ಬಹಳ ಮುಖ್ಯ. ಅದೊಂದಿದ್ದರೆ ಎಂತಹ ಕಠಿಣ ಕೆಲಸವಾದರೂ ಸರಿಯೇ ಸುಲಭವಾಗಿ ಮಾಡಿ ಮುಗಿಸಬಹದು ಎನ್ನವುದು ನಮ್ಮೆಲ್ಲಾ ಹಿರಿಯರು ಚನ್ನಾಗಿ ಅರಿತುಕೊಂಡ ಸತ್ಯವಾಗಿದೆ .
ಇಂಗಿಷ್ ಭಾಷಿಕರು Little strokes fell great oaks ಎನ್ನುವ ಗಾದೆ ಮಾತನ್ನ ಹೇಳುತ್ತಾರೆ . ಅರ್ಥ ಮಾತ್ರ ಸೇಮ್ ! ತಾಳ್ಮೆಯ ಸಣ್ಣ ಹೊಡೆತಗಳು ಹೆಮ್ಮರವನ್ನೂ ಬೀಳಿಸುತ್ತದೆ .  ನಮ್ಮ ಹಿರಿಯರಿಗೆ ತಾಳ್ಮೆಯ ಮಹತ್ವ ತಿಳಿದಿತ್ತು . ತಾಳ್ಮೆಯಿಂದ ಅಸಾಧ್ಯ ಎನಿಸುವ ಕಾರ್ಯಕೂಡ ಸಿದ್ಧಿಸಿಕೊಳ್ಳಬಹದು ಎನ್ನುವ ಅರಿವಿತ್ತು . ಇಂದು ನಮಗೆ ಎಲ್ಲಾ ಬೇಗ ಆಗಬೇಕು . ವೇಗ ಮತ್ತು ಬೇಗ ಇಂದಿನ ಬದುಕಿನ ಎರಡು ಕಂಟಕಗಳು . ಇಷ್ಟಾಗಿಯೂ ವೇಳೆ ಇಲ್ಲ ಎಂದು ಗೊಣಗುವ ಯುವಕರ ಸಂಖ್ಯೆಯೇ ಹೆಚ್ಚು . ನಮ್ಮ ಹಿರಿಯರ ನುಡಿಗಳಿಂದ ಒಂದಷ್ಟು ತಾಳ್ಮೆ ಕಲಿಯೋಣವೇ ?
ಸ್ಪಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ .
೧) CON   = ಜೊತೆ , ಜೊತೆಗೆ ಎನ್ನುವ ಅರ್ಥ ಕೊಡುತ್ತೆ . ಕೊನ್  ಎನ್ನುವುದು ಉಚ್ಚಾರಣೆ .
೨)paciencia  = ತಾಳ್ಮೆ ಎನ್ನುವ ಅರ್ಥ ಕೊಡುತ್ತದೆ . ಪಾಸನ್ಸಿಯ ಎನ್ನುವುದು ಉಚ್ಚಾರಣೆ .
೩)saliva  = ಉಗುಳು ಎನ್ನುವುದು ನಿಗಂಟಿನ ಅರ್ಥ . ಉಗುಳು ನುಂಗಿ ಅಥವಾ ಹೆಚ್ಚು ಮಾತನಾಡದೆ ಎನ್ನುವ ಅರ್ಥ ಕೊಡುತ್ತದೆ . ಸಲೈವಾ ಎನ್ನವುದು ಉಚ್ಚಾರಣೆ .
೪)un elefante  = ಒಂದು ಆನೆ . ಎಲಿಫ್ಯಾಂತೆ ಎನ್ನುವುದು ಉಚ್ಚಾರಣೆ .
೫)se tiro   = ಎಸಿ ., ಎತ್ತಿ  ಎಸಿ ಎನ್ನುವ ಅರ್ಥ ಕೊಡುತ್ತದೆ . ತಿರೋ ಎನ್ನುವುದು ಉಚ್ಚಾರಣೆ .
೬)una hormiga.  = ಒಂದು ಇರುವೆ ಎನ್ನುವ ಅರ್ಥ ಕೊಡುತ್ತದೆ . ಹೋರ್ಮಿಗ ಎನ್ನುವುದು ಉಚ್ಚಾರಣೆ .
೭)maña   : ಸ್ಕಿಲ್ ., ಕೌಶಲ್ಯ ಎನ್ನುವ ಅರ್ಥ ಕೊಡುತ್ತದೆ . ಮಾನ್ಯ ಎನ್ನವುದು ಉಚ್ಚಾರಣೆ .
೮)araña  : ಸ್ಪೈಡರ್,  ಜೇಡರ ಹುಳ ಎನ್ನುವ ಅರ್ಥ ಕೊಡುತ್ತದೆ . ಅರಾನ್ಯ ಎನ್ನುವುದು ಉಚ್ಚಾರಣೆ .

Facebook ಕಾಮೆಂಟ್ಸ್

Rangaswamy mookanahalli: ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .
Related Post