X

ಗೌರಿಯ ಕೊಂದವನು ಹಣೆಗೆ ಕುಂಕುಮ ಇಟ್ಟಿದ್ನಾ?

ಗೌರಿ ಹತ್ಯೆಯಾದಾಗ ಕೊಲೆಗಾರರ ಮುಖ ಸಿಸಿ ಕ್ಯಾಮೆರಾದಲ್ಲಿ ಕಂಡಿರಲಿಲ್ಲ. ಸುತ್ತಮುತ್ತಲಿನ ಮನೆಯವರು ಮಾತ್ರವಲ್ಲ, ಆ ರಸ್ತೆಯಲ್ಲಿ ಪ್ರತಿ ದಿನ ವಾಕಿಂಕ್ ಹೋಗುವವರು, ಆಕೆಯ ಕಚೇರಿಯ ಸಿಬ್ಬಂದಿ ಹೀಗೆ ಯಾರೂ ಕೂಡ ಹಂತಕರನ್ನು ಕಂಡಿಲ್ಲ. ಕಡೇ ಪಕ್ಷ ‘ಹಂತಕರನ್ನು ನಾನು ಹಿಂದಿನಿಂದ ನೋಡಿದ್ದೇನೆ’ ಎನ್ನುವವರಾದರೂ ಯಾರಾದರೂ ಸಿಕ್ಕಿದ್ರಾ..? ಊಹೂಂ… ಇಲ್ಲ!

ಈ ನಡುವೆ ಅ.14ರಂದು ವಿಶೇಷ ತನಿಖಾ ದಳ (SIT) ಹಂತಕರ ಮೂರು ರೇಖಾಚಿತ್ರಗಳನ್ನು ಬಿಡುಗಡೆಗೊಳಿಸಿದೆ. ಅದರಲ್ಲಿ ಒಂದು ಚಿತ್ರದ ಹಣೆಯಲ್ಲಿ ಕುಂಕುಮವುಂಟು! ಹೌದು, ನೀವು ಸರಿಯಾಗಿಯೇ ಓದಿದಿರಿ. ಯಾವ ಹಂತಕನನ್ನು ಈವರೆಗೆ ಯಾರೂ ನೋಡಿಲ್ಲವೋ, ಯಾವ ಹಂತಕನ ಬಗ್ಗೆ ಏನೂ ತಿಳಿದಿಲ್ಲವೋ, ಯಾವ ಹಂತಕನ ಬಗ್ಗೆ ಕನಿಷ್ಠ ಮಾಹಿತಿಯೂ ಇಲ್ಲವೋ, ಆ ಹಂತಕನ್ನು “ಹಿಂದು” ಎಂದು ರಾಜ್ಯಸರ್ಕಾರ ಪರೋಕ್ಷವಾಗಿ ಘೋಷಣೆ ಮಾಡಿದೆ.

ಬಿಜೆಪಿಯನ್ನು ಸಿಕ್ಕಿಸುವುದೇ ಸಿಎಂ ಬಯಕೆ?

ಗೌರಿ ಹತ್ಯೆಯಾದ ಮರುಕ್ಷಣದಿಂದಲೇ ಅದನ್ನು ಆರೆಸ್ಸೆಸ್ ಬಿಜೆಪಿ ತಲೆಗೆ ಕಟ್ಟುವ ಪ್ರಯತ್ನ ನಡೆಯಿತು. ಎಡಪಂಥೀಯ ಇತಿಹಾಸ ಲೇಖಕ ರಾಮಚಂದ್ರ ಗುಹಾರಿಂದ ಹಿಡಿದು ಮಾಜಿ ನಕ್ಸಲ್ ಉಗ್ರರವರೆಗೆ ಎಲ್ಲರೂ ಬಾಯಿಗೆ ಬಂದಂತೆ ಮಾತನಾಡಿದ್ದರು. ಬಿಜೆಪಿಯವರು ರಾಮಚಂದ್ರ ಗುಹಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ನಂತರವೇ ಎಲ್ಲರೂ ಬಾಯಿಮುಚ್ಚಿಕೊಂಡದ್ದು. ಆರೆಸ್ಸೆಸ್ ಅಥವಾ ಬಿಜೆಪಿ ವಿರುದ್ಧ ಈವರೆಗೆ ಒಂದೇ ಒಂದು ಸಾಕ್ಷಿ ಸಿಕ್ಕಲ್ಲವೆಂಬುದನ್ನು ಗಮನಿಸಬೇಕು. ಸಂಘವನ್ನು ದೂಷಿಸಿದ್ದ ಹಾಗೂ ಆರೋಪಿಸಿದ್ದ ಇಂತಹ ಹಲವಾರು ಪ್ರಕರಣಗಳಿವೆ. ಆ ಎಲ್ಲ ಅಗ್ನಿ ಪರೀಕ್ಷೆಗಳನ್ನು ಸಂಘ ಜಯಿಸಿಬಂದಿದೆ. ಈವರೆಗೆ ಒಂದೇ ಒಂದು ಪ್ರಕರಣಗಳಲ್ಲಿ ತಪ್ಪಿತಸ್ಥ ಎಂದು ಸಾಬೀತಾಗಿಲ್ಲ. ಆದರೆ ರಾಜ್ಯ ಸರ್ಕಾರ ಮಾತ್ರ ತನ್ನ ಚಾಳಿ ಮುಂದುವರೆಸಿದಂತಿದೆ. ಹೇಗಾದರೂ ಮಾಡಿ ಆರೆಸ್ಸೆಸ್-ಬಿಜೆಪಿಯನ್ನು ಪ್ರಕರಣದಲ್ಲಿ ಗುರುತಿಸಬೇಕೆಂಬ ಹೆಬ್ಬಯಕೆಯೊಂದು ಸಿದ್ದರಾಮಯ್ಯನವರ ಕಮ್ಯುನಿಸ್ಟ್ ಮನಸ್ಸಿನಲ್ಲಿ ಇದೆಯೇ ಎಂಬ ಸಂಶಯ ಮೂಡುತ್ತಿದೆ. ಈ ಹಿಂದೆ ಇಂತಹ ಬೇಜವಾಬ್ದಾರಿ ಹೆಡ್ಡತನಗಳಿಂದಲೇ ಕಲ್ಬುರ್ಗಿ ಹಂತಕರನ್ನು ಹಿಡಿಯಲಾಗದೇ ಸೋತಿದ್ದರು. ಈಗ ಗೌರಿ ಲಂಕೇಶ್ ಸರಣಿ.

ನಿರ್ಲಜ್ಜ ಬುದ್ದಿಜೀವಿಗಳು

15 ದಿನಗಳೊಳಗೆ ಹಂತಕರನ್ನು ಹಿಡಿಯುತ್ತೇವೆಂದು ಆಶ್ವಾಸನೆ ಕೊಟ್ಟಿದ್ದ ರಾಜ್ಯ ಸರ್ಕಾರ, 30 ದಿನಗಳಾದರೂ ಬಾಯಿ ಬಿಡುತ್ತಿಲ್ಲ. “ನಾನು ಗೌರಿ” ಎಂದು ಘೋಷಣೆ ಕೂಗಿದ ಎಡಪಂಥೀಯ ಹೋರಾಟಗಾಗರು ಬಾಯಲ್ಲಿ ಮೊಟ್ಟಿಯಿಟ್ಟುಕೊಂಡವರಂತೆ ಕೂತಿದ್ದಾರೆ. ಬುದ್ದಿಜೀವಿಗಳ ಈ ಮೌನವನ್ನು ಪ್ರಶ್ನಿಸುತ್ತಿರುವ ಸಾಮಾಜಿಕ ತಾಣಗಳಲ್ಲಿನ ಸಾಮಾನ್ಯ ಜನರು “ಗಂಜಿ ಗಿರಾಕಿಗಳ ಗಂಟಲಿಗೆ ಸಿದ್ದರಾಮಯ್ಯ ಲೀಟರ್ ಗಟ್ಟಲೆ ಗಂಜಿಸುತಿದಿದ್ದಾರೆ. ಹಾಗಾಗಿ ಎಲ್ಲರೂ ಹೆಣಗಳಂತೆ ಸ್ತಬ್ಧವಾಗಿದ್ದಾರೆ” ಎಂದು ಬರೆಯುತ್ತಿದ್ದಾರೆ. ಗೌರಿ ಸತ್ತ ದಿನ ಹುಟ್ಟಿಕೊಂಡಿದ್ದ “ನಾನು ಗೌರಿ”, “I am Gauri” ಎಂಬ ಹೆಸರಿನಲ್ಲಿ ಹುಟ್ಟಿದ್ದ ನೂರಾರು what’s app ಗ್ರೂಪ್ ಗಳು ಇಂದು ತಟಸ್ಥವಾಗಿವೆ. ಗೌರಿಯಾಗಿ ಕಂಬನಿ ಮಿಡಿಯಬೇಕಾಗಿದ್ದ ಅವುಗಳು ಮೋದಿ, ಯೋಗಿಯರನ್ನು ಬೌಯುವುದರಲ್ಲಿ ವಿಕೃತ ಆನಂದ ಪಡೆಯುತ್ತಿವೆಯೇ ಹೊರತು, ಸಿದ್ದರಾಮಯ್ಯನನ್ನು ಪ್ರಶ್ನಿಸುತ್ತಿಲ್ಲ. ಗೌರಿ ಹತ್ಯೆಯನ್ನು ರಾಜಕೀಯ ಉದ್ದೇಶಗಳಿಗಾಗಿ ಉಪಯೋಗಿಸಿದ ಎಡಪಂಥೀಯ ಮತ್ತು ಮತೀಯ ಸಂಘಟನೆಗಳು, ತಮ್ಮ ಸಂಪೂರ್ಣ ಹೋರಾಟವನ್ನು ಮೋದಿ ವಿರೋಧಿಯಾಗಿ ತಿರುಗಿಸಿದವೇ ವಿನಃ ಸಿದ್ದರಾಮಯ್ಯನನ್ನು ಪ್ರಶ್ನಿಸಲಿಲ್ಲ.

ಇರಲಿ, ಇವೆಲ್ಲದರ ನಡುವೆ ಇಂದು ಬಿಡುಗಡೆಯಾದ ರೇಖಾ ಚಿತ್ರದಲ್ಲಿ ಹಣೆಗೆ ತಿಲಕ ಹಚ್ಚಿರುವುದು ಎಷ್ಟು ಸರಿ ಎಂಬುದನ್ನು ಯೋಚಿಸಬೇಕು. ಕೊಲೆ ಮಾಡಲು ಬರುವವರು ತಮ್ಮ ನೈಜ್ಯ ಅವಕಾರದಲ್ಲಿ ಬರುತ್ತಾರೆಯೇ? ತಿಲಕವಿಡುವುದು, ಇಸ್ಲಾಂ ಟೋಪಿ ಧರಿಸುವುದು ವ್ಯಕ್ತಿಯನ್ನು ಬೇಗ ಗುರುತುಹಿಡಿಯುವಂತೆ ಮಾಡುತ್ತವೆ. ಹಂತಕರು ಅವೆಲ್ಲವನ್ನು ಚೆನ್ನಾಗಿ ಆಲೋಚಿಸಿರುತ್ತಾರೆ. ಹಾಗಿದ್ದ ಮೇಲೆ ಸಿದ್ದರಾಮಯ್ಯನವರ ಸಿಟ್ಟು ಹಿಂದುಗಳ ಮೇಲ್ಯಾಕೆ? ತನ್ನ ಹೆಸರಿನಲ್ಲೇ ರಾಮನನ್ನು ಜೋಡಿಸಿಕೊಂಡಿರುವ ಅವರು ಹಿಂದುಗಳನ್ನು ವೈರಿಗಳಂತೆ ಏಕೆ ಕಾಣುತ್ತಾರೆ?

ಇವೆಲ್ಲಕ್ಕೂ ಅವರೇ ಉತ್ತರಿಸಬೇಕು.

 

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post