X

ಚೀನಾದ ಭೂದಾಹದಂತಿರುವ ಬೌದ್ಧಿಕ ಆಸ್ತಿ ಕಳ್ಳತನ

ಚೀನಾದ ಬೌದ್ಧಿಕ ಆಸ್ತಿಯ ಕಳ್ಳತನದ ವಿರುದ್ಧ ಸಮರ ಸಾರಿದ ಟ್ರಂಪ್ ಆಡಳಿತ

ಹೆಸರಲ್ಲೇನಿದೆ? ಇಂದು ಭಾರತದಲ್ಲಿ ಬಹಳ ಕಂಪನಿಗಳು ತಮ್ಮ ಬೌದ್ಧಿಕ ಆಸ್ತಿಯನ್ನು ರಕ್ಷಿಸುವ ಕಾರ್ಯವನ್ನು ಮಾಡುವ ಕಾಲ ಬಂದಿದೆ. ಉದಾಹರಣೆಗೆ: ಪತಂಜಲಿ ಇಂದು ಅದರ ಸಾಕಷ್ಟು ಉತ್ಪನ್ನಗಳು ಮಾರುಕಟ್ಟೆಯಲ್ಲಿದೆ.ಆ ಕಂಪನಿಯ ಹೆಸರಿನಲ್ಲಿ ನಕಲಿ ವಸ್ತುಗಳನ್ನು ಮಾರುಕಟ್ಟೆಗೆ ಬಾರದ ಹಾಗೆ ಅವರು ಎಚ್ಚರದಿಂದ ತಮ್ಮ ಉತ್ಪನ್ನಗಳನ್ನು ಪರೀಕ್ಷೆಗೆ ನಿರಂತರವಾಗಿ ಒಳಪಡಿಸುತ್ತಿರಬೇಕು. ಸರ್ಕಾರ ನಕಲಿ ವಸ್ತುಗಳಿಂದ ಕಂಪನಿ ಹಾಗೂ ಗ್ರಾಹಕರ ಮೇಲಾಗುವ ಅನ್ಯಾಯದ ಬಗ್ಗೆ ಒಂದು ಸಮಿತಿ ರಚಿಸಿ ಹೊಸ ನಿಯಮವನ್ನು ರೂಪಿಸುವ ಬಗ್ಗೆ ಕಾರ್ಯ ಪ್ರವೃತ್ತವಾಗಬೇಕು. ಮುಂದೆ ಸಾಗುತ್ತ ಕಂಪನಿಗಳಮುಂದಿರುವ ಬಹಳ ದೊಡ್ಡ ಸವಾಲುಗಳು, ತಮ್ಮ ಬೌದ್ಧಿಕ ಆಸ್ತಿ, ಟ್ರೇಡ್ ಸೀಕ್ರೆಟ್  ರಕ್ಷಣೆ ಹಾಗೂ ಅದನ್ನು ದುರುಪಯೋಗ ಮಾಡುವ ವ್ಯಕ್ತಿ ಮತ್ತು ಸಂಸ್ಥೆಯ ವಿರುದ್ಧ ಕಾನೂನಾತ್ಮಕವಾಗಿ ಮಾಡಬೇಕಿರುವ ಹೋರಾಟ-ಬೌದ್ಧಿಕ ಆಸ್ತಿಯ ದುರುಪಯೋಗದ ಬಗ್ಗೆ ನಮ್ಮ ದೇಶದಲ್ಲಿ ಅರಿವು ಮೂಡಿಸುವ ಕೆಲಸವನ್ನು ಕೈಗೊಳ್ಳಬೇಕು. ಇದು ಸರ್ಕಾರ ಹಾಗೂ ಕಂಪನಿ ಜೊತೆ ನಾಗರಿಕರು ಕೈ ಜೋಡಿಸಿ ಈ ಕೆಲಸವನ್ನು ಮಾಡಬೇಕಾಗುತ್ತದೆ.

ಜಾಗತಿಕವಾಗಿ ದೊಡ್ಡ ಪ್ರಮಾಣದಲ್ಲಿ ಬೌದ್ಧಿಕ ಆಸ್ತಿಯ ದುರುಪಯೋಗದಿಂದ ನಷ್ಟ ಅನುಭವಿಸುತ್ತಿರುವ ದೇಶ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ. ಈ ದುರುಪಯೋಗದ ವಿರುದ್ಧ 2013 ರಲ್ಲಿ ಮೊದಲಬಾರಿಗೆ ಒಂದು ರಿಪೋರ್ಟ್ ಅನ್ನು ಅಂದಿನ ಪ್ರೆಸಿಡೆಂಟ್ ಬರಾಕ್ ಒಬಾಮಾಗೆ ಸಲ್ಲಿಸಲಾಗಿತ್ತು. ಹಾಗೆಯೇ ಅದರ ಮುಂದಿನ ಭಾಗವಾಗಿ ಇಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 14/08/2017 ರಂದು ಯುನೈಟೆಡ್ ಸ್ಟೇಟ್ಸ್ ಟ್ರೇಡ್ ರೆಪ್ರೆಸೆಂಟೇಟಿವ್ಸೃ್ ಕಚೇರಿ ಚೀನಾ ವಿರುದ್ಧ ಬೌದ್ಧಿಕ ಆಸ್ತಿಯ ದುರುಪಯೋಗದ ಕುರಿತು ತನಿಖೆ ನಡೆಸಲು ಸೂಚಿಸಿದ್ದಾರೆ. ಬಹಳ ತಡವಾಗಿ ಅಮೆರಿಕ ದೇಶ ಬೌದ್ಧಿಕ ಆಸ್ತಿಯ ದುರುಪಯೋಗದ ಕುರಿತು ಚೀನಾ ವಿರುದ್ಧ ತನಿಖೆ ನಡೆಸಲು ಮುಂದಾಗಿದೆ. ಒಂದು ವರದಿಯ ಪ್ರಕಾರ ಅಮೆರಿಕ ದೇಶಕ್ಕೆ ಬೌದ್ಧಿಕ ಆಸ್ತಿಯ ದುರುಪಯೋಗದಿಂದ ಆಗುತ್ತಿರುವ ನಷ್ಟ 600 ಬಿಲಿಯನ್ ಡಾಲರ್(39 ಲಕ್ಷ ಕೋಟಿ ರೂಪಾಯಿಗಳು). ಇದು ಒಂದು ಅಂದಾಜಿನ ಮೊತ್ತ. ಇನ್ನೂ ಬಹಳ ಅಂಶಗಳನ್ನು ಪರಿಗಣಿಸಿದರೆ ಮೊತ್ತ ಹೆಚ್ಚುತ್ತದೆ.

ಅಮೆರಿಕದಲ್ಲಿ ಸಿಕ್ಕ 87% ನಕಲಿ ಭೌತಿಕ ವಸ್ತುಗಳ ಮೂಲ ಚೀನಾ (ಹಾಂಕಾಂಗ್ ಸೇರಿ). ಅಮೆರಿಕ ಅಲ್ಲದೆ ಕೆನಡಾ ದೇಶದಲ್ಲಿ ಸಿಕ್ಕ  80% ನಕಲಿ ವಸ್ತುಗಳ ಮೂಲ ಚೀನಾ.  ಅಮೆರಿಕಗೆ ಬೌದ್ಧಿ ಆಸ್ತಿ ಕಳ್ಳತನದಿಂದ ಬಹಳ ಪ್ರಮಾಣದ ಹಣದ ನಷ್ಟವಾಗುತ್ತಿದೆ . ಅಲ್ಲಿಯ ಅನೇಕ ಖಾಸಗಿ ಕಂಪನಿಯ ಮೌಲ್ಯ ಹಾಗೂ ಲಾಭ ಬೌದ್ಧಿಕ ವಸ್ತುಗಳಿಂದಾಗಿರುತ್ತದೆ. ಅಧ್ಯಕ್ಷ ಟ್ರಂಪ್ ತಮ್ಮ ಚುನಾವಣೆಯ ಪ್ರಚಾರ  ಭಾಷಣದಲ್ಲಿ ಇದರ ಬಗ್ಗೆ ಮಾತನಾಡಿದ್ದರು. 14 ಆಗಸ್ಟ್ ರಂದು ಟ್ರಂಪ್ ಇದರ ವಿರುದ್ಧ ತನಿಖೆ ನಡೆಸಲು ಆದೇಶಿಸಿದ್ದಾರೆ. ತನಿಖೆಯ ರೀತಿ ಹಾಗೂ ಇದನ್ನು ಕೊನೆಯ ಹಂತಕ್ಕೆ ಕೊಂಡೊಯ್ಯಲು ಬಹಳಷ್ಟು ಕಷ್ಟವಾಗುತ್ತದೆ. ತನ್ನ ದೇಶದಲ್ಲಿರುವ ಕಂಪನಿಯ ವಿರುದ್ಧ ಅಮೆರಿಕ ತನಿಖೆ ನಡೆಸಲು ಚೀನಾ ದೇಶ ಎಷ್ಟರಮಟ್ಟಿಗೆ ಸಹಕರಿಸುತ್ತದೆ ಎಂಬುದನ್ನು ನೋಡಬೇಕಾಗುತ್ತದೆ. ನಮ್ಮ ದೇಶದಲ್ಲಿ ಚೀನಾ ವಸ್ತು ಎಂದರೆ ಅದರ ಬಾಳಿಕೆಯ ಬಗ್ಗೆ ಸಂದೇಹ ಮೂಡುತ್ತದೆ. ಹೀಗೆ ಮುಂದುವರೆದರೆ ಚೀನಾ ತಮ್ಮ ದೇಶದಲ್ಲಿ ಉತ್ಪನ್ನ ಮಾಡುವ ವಸ್ತುವಿನ ಮೌಲ್ಯವನ್ನು ಕಳೆದುಕೊಳ್ಳುತ್ತದೆ. ಚೀನಾ ದೇಶದ ಕಂಪೆನಿಯೊಂದಿಗಿನ ವ್ಯವಹಾರದಲ್ಲೂ ಹೊರಗಿನ ಸಾಕಷ್ಟು ಕಂಪನಿಗಳು ತಮ್ಮ ಬೌದ್ಧಿಕ ಆಸ್ತಿಯ ಕಳುವಿನ ಬಗ್ಗೆ ದೂರು ನೀಡಿದ್ದಾರೆ.

ಜಾಗತಿಕವಾಗಿ ಬಳಸುವ ಸಾಫ್ಟ್‌ವೇರ್ ಪ್ರಮಾಣದಲ್ಲಿ 39% ನಕಲಿ ಸಾಫ್ಟ್‌ವೇರ್ ಎಂದು ಒಂದು ವರದಿ ಹೇಳುತ್ತದೆ. ಇದು 2013ರ 43%ಗಿಂತ ಕಡಿಮೆಯಾಗಿದೆ. ಆದರೆ ಏಷ್ಯಾದಲ್ಲಿ ಬಳಸುವ 61% ಸಾಫ್ಟ್‌ವೇರ್ ನಕಲಿ ಹಾಗೂ ಜಾಗತಿಕವಾಗಿ 36% ಕೊಡುಗೆ ಏಷ್ಯಾ ಖಂಡದಿಂದ ಬರುತ್ತದೆ.

ಅಮೆರಿಕದ ಡಿಪಾರ್ಟ್‌ಮೆಂಟ್ ಆಫ್  ಜಸ್ಟಿಸ್ ತನಿಖೆಯೊಂದು  ಚೀನಾ  ಕಂಪನಿಗಳು ಜಾಗತಿಕವಾಗಿ ದರದಲ್ಲಿ ಸ್ಪರ್ಧೆನೀಡಲು ಬಹಳ ಮುಖ್ಯ ಕಾರಣಗಳನ್ನು ತಿಳಿಸಿದ್ದಾರೆ.

೧. ಚೀನಾ ಸರ್ಕಾರದಿಂದ ಆದ್ಯತೆಯ ಹಣಕಾಸು ವ್ಯವಸ್ಥೆಗಳು ಹಾಗೂ ರಾಜ್ಯಸ್ವಾಮ್ಯದ ಉದ್ಯಮ.

೨. ಬೌದ್ಧಿಕ ಆಸ್ತಿಯ ಕಳ್ಳತನ

ಹೀಗೆ ಚೀನಾದ ಇಂಡಸ್ಟ್ರಿಯಲ್ ಪಾಲಿಸಿ ಹೊರದೇಶದ ಪರಿಣಿತಿಯನ್ನು ತಾನು ಕದಿಯಲು ಸಹಾಯ ಮಾಡುತ್ತದೆ ಎಂದು ತಿಳಿಯಲು ಸಾಕಷ್ಟು ಉದಾಹರಣೆ ಸಿಗುತ್ತದೆ. ಯುನೈಟೆಡ್ ಕಿಂಗ್ಡಮ್  ಹಿಂಕ್ಲೆಯ್ ಪಾಯಿಂಟ್ನಲ್ಲಿ ಒಂದು ಸೂಕ್ಷ್ಮ ಪರಮಾಣು  ಪ್ರಾಜೆಕ್ಟೃ್ನ್ನು ಸಹ ಅಭಿವೃದ್ಧಿ ಪಡಿಸುತ್ತಿದ್ದ  ಚೀನಾ ಜನರಲ್ ನ್ಯೂಕ್ಲಿಯರ್ ಪವರ್  ಕಂಪನಿಯ ಕೆಲಸವನ್ನು ಸ್ಥಗಿತಗೊಳಿಸುತ್ತಾರೆ. ಈ ಚೀನಾ ಕಂಪನಿಯ ಮೇಲೆ ಹಾಗೂ ಅದರ ಸೀನಿಯರ್ ಹುದ್ದೆಯಲ್ಲಿದ್ದ ಅಲೆನ್ ಹೊ ವಿರುದ್ಧ ಕಾನೂನು ಬಾಹಿರವಾಗಿ ಪರಮಾಣು ವಸ್ತುಗಳನ್ನು ಅಮೆರಿಕದ ಹೊರಗೆ ಉತ್ಪಾದನೆ ಮತ್ತು ಅಭಿವೃದ್ಧಿಪಡಿಸಿದ ಆರೋಪವಿತ್ತು. ಹೀಗೆ ಸ್ಯಾಟಲೈಟ್, ಪರಮಾಣು, ಮೊಬೈಲ್, ಬೌದ್ಧಿಕ ಆಸ್ತಿ, ಸಾಫ್ಟ್‌ವೇರ್ ಎಲ್ಲ ರಂಗದಲ್ಲೂ ಚೀನಾದ ಕೆಲವು ಕಂಪನಿಗಳು ಕಾನೂನು ಬಾಹಿರ  ಕೆಲಸದಲ್ಲಿ ತೊಡಗಿವೆ.

ಬೌದ್ಧಿಕ ಆಸ್ತಿ, ಸಾಫ್ಟ್‌ವೇರ್ ಪೈರಸಿ ಜೊತೆಗೆ ವ್ಯಾಪಾರ ರಹಸ್ಯ ಕಳ್ಳತನವು ಅಮೆರಿಕ ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತಿದೆ. 2014 ರಲ್ಲಿ ನಡೆಸಿದ ಒಂದು ಅಧ್ಯಯನದ ಪ್ರಕಾರ, ವ್ಯಾಪಾರ ರಹಸ್ಯ ಕಳ್ಳತನದಿಂದ  1 ರಿಂದ 3% ಅಮೆರಿಕದ ಜಿಡಿಪಿ ಮೇಲೆ ಪರಿಣಾಮ ಬೀರುತ್ತಿದೆ. ಈ ಅಂದಾಜಿನ ಪ್ರಕಾರ 2015ರಲ್ಲಿ  ಅಮೆರಿಕದ ಆರ್ಥಿಕತೆಯ ಮೇಲೆ 180 ಬಿಲಿಯನ್ (11,70,000ಕೋಟಿ) ರಿಂದ 540 (35,10,000 ಕೋಟಿ) ಬಿಲಿಯನ್ ಡಾಲರ್ ನಷ್ಟವನ್ನು ಅಂದಾಜಿಸಲಾಗಿದೆ. ಚೀನಾದ ಕಂಪನಿಗಳ ಈ ಕಳ್ಳತನದ ವಿರುದ್ಧ ಟ್ರಂಪ್ ಆಡಳಿತ, ತನಿಖೆಗೆ ಘೋಷಿಸುವ ಮೂಲಕ  ಪ್ರಥಮ ಹೆಜ್ಜೆ ಇರಿಸಿದೆ. ಚೀನಾ ವಿಶ್ವದ ಅತಿದೊಡ್ಡ ಎಪಿಐ ಗಳನ್ನು ತಯಾರಿಸುತ್ತದೆ. ಕ್ರಿಯಾತ್ಮಕ ಔಷಧಿಯ ಪದಾರ್ಥಗಳು ಮತ್ತು ಈ ಎಪಿಐ ಗಳು ನಕಲಿಗಳಾಗಿವೆ. ವಿಶ್ವದಾದ್ಯಂತದ ಅಮೆರಿಕದ ದೂತಾವಾಸಗಳು ತಮ್ಮ ದ್ವಿಪಕ್ಷೀಯ ನೀತಿ ಮಾತುಕತೆಯಲ್ಲಿ ಬೌದ್ಧಿಕ ಆಸ್ತಿಯ ರಕ್ಷಣೆಯನ್ನು  ಮುಖ್ಯ ಅಂಶವಾಗಿ ಮಾತನಾಡಲು ಪ್ರಾರಂಭಿಸಿವೆ.

ನಕಲಿ ಉತ್ಪನ್ನಗಳ ಮಾರಾಟ ಮತ್ತು ಇಂಟರ್ನೆಟ್ ಆಧಾರಿತ ಕಳ್ಳತನ ವ್ಯಾಪ್ತಿಯನ್ನು ಕಡಿಮೆ ಮಾಡಲು ದೊಡ್ಡ ನಿಗಮಗಳು ತಮ್ಮ ಕೈಗಾರಿಕೆಗಳ ಅತ್ಯುತ್ತಮ ಅಭ್ಯಾಸಗಳನ್ನು ಸ್ವಯಂಪ್ರೆರಣೆಯಿಂದ ಅಳವಡಿಸಿಕೊಂಡವು. ಉದಾಹರಣೆಗೆ, ಕ್ರೆಡಿಟ್ ಕಾರ್ಡ್ ವಿತರಕರು ಅಮೆರಿಕನ್ ಎಕ್ಸ್ಪ್ರೆಸ್,  ಮಾಸ್ಟರ್ ಕಾರ್ಡ್ ಮತ್ತು ವಿಸಾ, ಆನ್‌ಲೈನ್ ಪೇಮೆಂಟ್. ಅನರ್ಹ ಅಂತರ್ಜಾಲ ವಾಣಿಜ್ಯಕ್ಕಾಗಿ ಪಾವತಿ ಸೇವೆಗಳನ್ನು ಹಿಂತೆಗೆದುಕೊಳ್ಳಲು ಅವಕಾಶ ಮಾಡಿಕೊಟ್ಟವು. ಅಂತರ್ಜಾಲ ಸೇವೆಯನ್ನು ಒದಗಿಸುವ AT  T, ಕಾಮ್ಕ್ಯಾಸ್ಟ್, ಟೆಮ್ ವಾನರ್ ಕೇಬಲ್ ಮತ್ತು ವೆರಿಝೊನ್ ಸಂಸ್ಥೆಗಳು ಹಾಲಿವುಡ್ ಚಲನಚಿತ್ರ ಹಾಗೂ ಸಂಗೀತದ ಆನ್‌ಲೈನ್ ಕಳತನ ಹಾಗೂ ನಕಲಿ ಮಾರಾಟದ ವಿರುದ್ಧ ತನಿಖೆ ಹಾಗೂ ಅಂತಹ ವೆಬ್‌ಸೈಟ್ಅನ್ನು ಬ್ಲಾಕ್ ಮಾಡುವ ಮೂಲಕ ತಮ್ಮ ಹೋರಾಟ ಮಾಡುತ್ತಿವೆ.

ಚೀನಾವು ಬೌದ್ಧಿಕ-ಆಸ್ತಿ ರಕ್ಷಣೆಯ ಯಾವುದೇ ಸಂಪ್ರದಾಯವನ್ನು ಹೊಂದಿಲ್ಲ. ಆದರೆ ಇದು ತನ್ನದೇ ಆದ ಹಿತಾಸಕ್ತಿಯನ್ನು ಸ್ಪಷ್ಟವಾಗಿ  ಗೋಚರಿಸಿದಾಗ ಬೌದ್ಧಿಕ-ಆಸ್ತಿ ಯನ್ನು ರಕ್ಷಿಸುತ್ತದೆ. ಚೀನಾದ ಸರ್ಕಾರವು ಬೌದ್ಧಿಕ-ಆಸ್ತಿ ರಕ್ಷಣೆಯನ್ನು ಕಠಿಣವಾದ ಕಾನೂನನ್ನು  ಜಾರಿಗೊಳಿಸುವ ಮೂಲಕ ಸುಧಾರಿಸಿಕೊಳ್ಳಲು ಗಣನೀಯ ಪ್ರಯತ್ನಗಳನ್ನು ಮಾಡಿದೆ. ಆದಾಗ್ಯೂ, ಇಂದು ಚೀನಾದಲ್ಲಿ ಬೌದ್ಧಿಕ ಆಸ್ತಿ ಕಳ್ಳತನ ಅತಿರೇಕವಾಗಿದೆ. ಚೀನಾದ ಬೌದ್ಧಿಕ ಆಸ್ತಿಯ ಕಳ್ಳತನ ಸದ್ಯಕ್ಕೆ ನಿಲ್ಲುವ ಸೂಚನೆ ಕಾಣುವುದಿಲ್ಲ. ಈ ಕೃತ್ಯದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೋರಾಟ ಮಾಡಲು ಅಮೆರಿಕ ಜೊತೆಗೆ ಭಾರತ ಹಾಗು ಜಪಾನ್ ದೇಶಗಳು ನಿಲ್ಲಬೇಕು. ಯಾವ ರಂಗದಲ್ಲಿ ಚೀನಾ ಸರ್ಕಾರಕ್ಕೆ ಬೌದ್ಧಿಕ ಆಸ್ತಿಯ ಕಳ್ಳತನವನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲವೋ ರಂಗದಲ್ಲಿ ಭಾರತ ಮತ್ತು ಜಪಾನ್ ತಮ್ಮ ನೀತಿ ಬದಲಾವಣೆಯನ್ನು ತ್ವರಿತವಾಗಿ ಮಾಡಿ ಅಮೆರಿಕದ ಕಂಪನಿಗಳ ಜೊತೆ ಚರ್ಚಿಸಿ ಆ ಕೆಲಸವನ್ನು ಪಡೆದು ಮೇಕ್ ಇನ್ ಇಂಡಿಯಾದಲ್ಲಿ ಕಾನೂನಾತ್ಮಕವಾಗಿ ಮಾಡಿ ನಮ್ಮ ದೇದ ಮೇಲೆ ವಿಶ್ವಾಸ ಮೂಡುವ ಕೆಲಸದಲ್ಲಿ ತೊಡಗಬೇಕು.

-ಸಂತೋಷ್ ಕೃಷ್ಣಮೂರ್ತಿ

 

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post