ಚಂದದ ಊರಲಿ
ಸುಂದರ ತೇರಲಿ,
ನಡೆಯಿತು ಒಂದು ಮೆರವಣಿಗೆ |
ದೊರೆಗಳು ಕುಳಿತರು ಉಪ್ಪರಿಗೆಯಲ್ಲಿ
ಜೈಕಾರ, ಹೂಗಳ ಮಳೆಸುರಿಯಿತಲ್ಲಿ ||
ಎಲ್ಲೆಲ್ಲೂ ಹರ್ಷದ ಉದ್ಘಾರ !
ಬಂದವರೆಲ್ಲ ಸಂಭ್ರಮಿಸಿದರು
ಭೂಮಿಗಿಳಿದ ನಾಖವೆಂಬ ಉತ್ಪ್ರೇಕ್ಷೆಯಲ್ಲಿ |
ಆ ನಾಖದೊಳೊಂದು ನರಕವೂ ಇತ್ತು ?
ಅದು ಬಾಸವಾಯಿತು
ಹೊಟ್ಟೆ ಬೆನ್ನಿಗಂಟಿದ ಮನುಜರಲಿ |
ದೊರೆಗಳ ಗೊಣಗು ದಣಿಗಾಳ ಗುಡುಗು
ನೊಂದರು ಇವರು ಕೊರಗಿನಲಿ |
ದೊಳ್ಳೋಟ್ಟೆ ದಣಿಯದು ತೀರದ ಮೋಹ
ಹೆಚ್ಚಾಯಿತು ಇವರ ಹಸಿವಿನದಾಹ |
ಅತ್ತರು ಕರೆದರು ಬರಲಿಲ್ಲ ಯಾರು ?
ಬಂದರು ನಿಂತು ನೋಡಿ ಹೋದರು
ಇವರು ಹೊತ್ತ ತೇರು ||
-ಲಿವ್ಯಾ ಕುಕ್ಕುನೂರ್
Facebook ಕಾಮೆಂಟ್ಸ್