X

ಆಧುನಿಕ ‘ಅರ್ಥ’ಸಮೀಕ್ಷೆ

ಬದಲಾವಣೆಯೊಂದು ಅದರ ಮೂಲ ಅರ್ಥದ ಚೌಕಟ್ಟನ್ನು ಮೀರಿ ನಡೆದರೆ ಅಲ್ಲಿ ಅಪಾರ್ಥ, ಅನರ್ಥಗಳು ಹುಟ್ಟುವುದು ಸಹಜ. ಬದಲಾವಣೆ ಬವಣೆಯೂ ಆಗಬಹುದು. ಇಲ್ಲಿ ಅಂಥ ಕೆಲವೊಂದಷ್ಟು ಪದಗಳ ಆಧುನಿಕ ಅರ್ಥ ವಿಸ್ತಾರವನ್ನು ಪಟ್ಟಿಮಾಡಲಾಗಿದೆ. ಹಾಗಂತ ಇದು ಅನರ್ಥ ವ್ಯಾಖ್ಯಾನಗಳ ಸಾರ್ವತ್ರೀಕರಣವಲ್ಲ. ಇವುಗಳಿಗೆ ಹೊರತಾದ ಪ್ರಶಂಸನೀಯ ಉದಾಹರಣೆಗಳೂ ಇವೆಯೆನ್ನಿ. ಇಲ್ಲಿ ಒಂದಷ್ಟು ಕಟು ವಾಸ್ತವಗಳನ್ನು ತುಸು ವ್ಯಂಗ್ಯ, ವಿಡಂಬನೆಯ ಒಗ್ಗರಣೆಯೊಂದಿಗೆ ನೀಡಲಾಗಿದೆಯಷ್ಟೇ!

ಜಾತ್ಯತೀತ: ಜಾತಿ ಸಮಾವೇಶಗಳಲ್ಲಿ ಪಾಲ್ಗೊಂಡು, ಜಾಸ್ತಿಯೇ ಭರವಸೆ ನೀಡಿ ಎಲ್ಲದಕ್ಕೂ ಜಾತಿ ನೋಡಿ ಮಣೆಹಾಕುವವರು.

ದೌರ್ಜನ್ಯ: ಸೈನಿಕರ ಮೇಲೆ ಕಲ್ಲೆಸೆದು ಹಿಂಸೆಗಿಳಿಯುವವರಲ್ಲೇ ಒಬ್ಬನನ್ನು ಹಿಡಿದು ಜೀಪಿಗೆ ಕಟ್ಟುವ ಮೂಲಕ ಸೈನಿಕರು ತಮ್ಮನ್ನು ತಾವು ಈ ಹಿಂಸಾವಾದಿಗಳಿಂದ ರಕ್ಷಿಸಿಕೊಳ್ಳುವುದು.

ವಿರೋಧ ಪಕ್ಷ: ಎಲ್ಲವನ್ನೂ ವಿರೋಧಿಸುತ್ತಾ ಅಥವಾ ಯಾವುದನ್ನೂ ವಿರೋಧಿಸದೇ, ಮುಂದಿನ ಅವಧಿಗೆ ಗದ್ದುಗೆಯೇರುತ್ತೇವೆಂಬ ಕನಸು ಕಾಣುವ ರಾಜಕಾರಣಿಗಳ ಬಳಗ.

ಭಕ್ತ: ಮೋದಿ ಅಭಿಮಾನಿ ಎಂದು ಹೇಳಿಕೊಂಡು ಮೋದಿಯ ಸಾಧನೆಗಳಿಗೆ ತುಸು ಹೆಚ್ಚೇ ಪ್ರಚಾರ ನೀಡುತ್ತಾ ಕೆಲವೊಮ್ಮೆ ಅಂಗೈಯಲ್ಲೇ “ಅಚ್ಛೆ ದಿನ್” ತೋರಿಸಿಬಿಡುವವರು.

ಮಾಧ್ಯಮ ಸ್ವಾತಂತ್ರ್ಯದ ಹರಣ: ಭ್ರಷ್ಟಾಚಾರದಂತಹ ಅಧಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಆರೋಪ ಹೊತ್ತ ಮಾಧ್ಯಮಪತಿಯ ಮನೆ ಮೇಲೆ, ವಿಚಾರಣೆಗಾಗಿ ಸಿ.ಬಿ.ಐ ದಾಳಿ ನಡೆಯುವುದು.

ಮಾನವ ಹಕ್ಕುಗಳ ಉಲ್ಲಂಘನೆ: ನೂರು ಅಮಾಯಕ ಜೀವಗಳನ್ನ  ಬಲಿತೆಗೆದುಕೊಂಡ ಮೂರು ಕಟುಕರ ಗೋಣಿಗೆ ನೇಣು ಬಿಗಿಯುವುದು.

ಮೊಟ್ಟೆ: ಜಾತಿಸೂಚಕ

ಪ್ರಗತಿಪರ ಚಿಂತಕ: ವೈಯಕ್ತಿಕ ‘ಪ್ರಗತಿ’ಗಾಗಿ ‘ಪರ’ದಾಡುವ, ಇಲ್ಲದ ಚಿಂತೆಯನ್ನೆಲ್ಲಾ ಸಮಾಜದಲ್ಲಿ ಹರಡುವ ಮೂಲಕ ತಮ್ಮ ‘ಖಾತೆ’ಯನ್ನು ಸುಭೀಕ್ಷವಾಗಿರುವಂತೆ ನೋಡಿಕೊಳ್ಳುವವರು.

ಟೌನ್ ಹಾಲ್: ಪ್ರತಿಭಟನೆಗಳ ತವರು.

ಪ್ರಜಾಪ್ರಭುತ್ವದ ಅಧ:ಪತನ: ಅತ್ಯಧಿಕ ಜನಮತ ಗಳಿಸಿ ಅಧಿಕಾರ ಹಿಡಿದು ಸಮರ್ಥ ಆಡಳಿತ ನಡೆಸುತ್ತಾ ದೂರದೃಷ್ಟಿತ್ವ ಜನಹಿತದ ಕಾರಣಕ್ಕಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದು.

ಪಠ್ಯಪುಸ್ತಕ ಪರಿಷ್ಕರಣೆ: ತರಾತುರಿಯಲ್ಲಿ ತಪ್ಪು ತಪ್ಪಾಗಿ ತಿದ್ದುಪಡಿಮಾಡಿ ಮತ್ತೆ ಆ ತಪ್ಪುಗಳನ್ನು ಪತ್ತೆಹಚ್ಚಿ ಸರಿಪಡಿಸಲು ಮತ್ತೊಂದು ಸಮಿತಿಯನ್ನು ರಚಿಸುವ ಮೂಲಕ ಬೊಕ್ಕಸದ ಹಣವನ್ನು ವ್ಯರ್ಥವಾಗಿ ವ್ಯಯಿಸುವುದು.

ಸರ್ವಾಧಿಕಾರ: ಸೈನಿಕರನ್ನು ಗೌರವದಿಂದ ಕಾಣುವುದು, ರಾಷ್ಟ್ರಗೀತೆ ಹಾಡುವಾಗ ಎದ್ದುನಿಲ್ಲಬೇಕು ಎಂದು ಹೇಳುವುದು.

ಆಝಾದಿ ಹೋರಾಟ: ಸಂಶೋಧನೆಯ ಹೆಸರಲ್ಲಿ ವರ್ಷಾನುಗಟ್ಟಲೆ ವಿ.ವಿಗಳಲ್ಲಿ ಜಾಂಡಾ ಊರಿ ದೇಶದ ವಿರುದ್ಧ ಘೋಷಣೆ ಕೂಗುತ್ತಾ ತಮ್ಮ ಉರಿಯನ್ನು ಹೊರಹಾಕುವುದು.

ಸಿ.ಐ.ಡಿ: ಕ್ಲೀನ್’ಚಿಟ್ ಇಶ್ಯೂಯಿಂಗ್ ಡಿಪಾರ್ಟ್’ಮೆಂಟ್

ಬಂದ್: ಬಂದು ಬಂದು ಅಂಗಡಿಯ ಶಟರ್ ಎಳೆಯುವ ಕೆಲವು ‘ಬಂದ್’ಯಗಾರರು ನಡೆಸುವ ವ್ಯರ್ಥ ಚಟುವಟಿಕೆ.

ಮಾಧ್ಯಮ ಸಲಹೆಗಾರ: ರಾಜಕೀಯಪೂರಿತ, ಲಂಗು ಲಗಾಮಿಲ್ಲದ ಹೇಳಿಕೆಗಳಿಂದ ವಿವಾದ ಸೃಷ್ಟಿಸಿ, ಸಾಮಾಜಿಕ ‘ಮಾಧ್ಯಮ’ಗಳಲ್ಲಿ ಜನರಿಂದಲೇ ತೀಕ್ಷ್ಣ ‘ಸಲಹೆ’ಗಳ ಮೂಲಕ ತಲೆಗೆ ಮೊಟಕಿಸಿಕೊಳ್ಳುವವರು.

ಕನ್ನಡ ಪ್ರೇಮ: ತಮ್ಮವರ ಮಕ್ಕಳನ್ನೆಲ್ಲಾ ಇಂಗ್ಲೀಷ್ ಮಾಧ್ಯಮದಲ್ಲಿ ಓದಿಸಿ ಪರರ ಮಕ್ಕಳು ಮಾತ್ರ ಕನ್ನಡ ಮಾಧ್ಯಮದಲ್ಲೇ ಓದಬೇಕು ಎಂದು ಆಗ್ರಹಿಸುವುದು.

ಶೃದ್ಧಾಂಜಲಿ: ಯಾರಾದರೂ ತೀರಿಕೊಂಡ ಸುದ್ದಿ ತಿಳಿದಾಕ್ಷಣ, ಕಿಂಚಿತ್ತೂ ಶೃದ್ಧೆ ಇಲ್ಲದೆ “RIP” ಎಂದು ಬರೆದು ಕೈತೊಳೆದುಕೊಳ್ಳುವುದು.

ಮಳೆ: ಮಾಜಿ ಮುಖ್ಯಮಂತ್ರಿಗಳೊಬ್ಬರ ಪೂಜೆಗೆ ಒಲಿದು ಧರೆಗಿಳಿದ ಜೀವಜಲ.

ಓವರ್ ಡೋಸ್: ನಮ್ಮದು ಒಕ್ಕೂಟ ವ್ಯವಸ್ಥೆ. ಹೇಗೆಂದರೆ, ಒಳ್ಳೆಯ ಘಟನೆ ನಡೆದರೆ ಅದರ ಶ್ರೇಯಸ್ಸು ಆಯಾ ರಾಜ್ಯದ ಮುಖ್ಯಮಂತ್ರಿಗಳಿಗೆ. ಕೆಟ್ಟದ್ದು ನಡೆದರೆ ಮಾತ್ರ

Facebook ಕಾಮೆಂಟ್ಸ್

Sandesh H Naik: ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಹಕ್ಲಾಡಿ ಹುಟ್ಟೂರು. ಪ್ರಸ್ತುತ ಶಿಕ್ಷಕರಾಗಿ ಕಾರ್ಯನಿರ್ವಹಣೆ.  ಬರವಣಿಗೆ ಮೆಚ್ಚಿನ ಪ್ರವೃತ್ತಿಗಳಲ್ಲೊಂದು.
Related Post