ಜಾತ್ರೆಗೊಂದಿಷ್ಟು ಹನಿಗಳು..
ಊರ ಜಾತ್ರೆಯಲಿ
ಬಳೆಯಂಗಡಿಯಲಿ
ಚೌಕಾಶಿ ಮಾಡುತ್ತಾ
ನನ್ನ ನಿಲ್ಲು ಅಂದಿದ್ದು..
ನಿನ್ನ ವಾರೆನೋಟವೇ ..
ಅದೊಂದು ನೋಟದಲ್ಲಿ
ಬಳೆ ಕೊಂಡು ಬಿಟ್ಟು
ಬರುವಷ್ಟು..
ಮರೆವಿದೆಯಾ.!!
****
ನಾ ಮುಂಗುರುಳು
ಸರಿಸಿ ನಕ್ಕಿದ್ದು…
ಯಾಕೆಂದುಕೊಂಡೆ..
ನೀ ಸನಿಹ ನಿಂತಿದ್ದು ಕಂಡೇ..!
****
ಅಷ್ಟು ಹುಡುಗರ ನಡುವೆ..
ನೀನ್ಯಾಕೋ ವಿಶೇಷ..
ಏನೋ ಜಾದೂ ಇದೆ..
ನಿನ್ನದೊಂದು ನೋಟದಲಿ..
ಉಳಿದೆಲ್ಲ ಶೇಷ.
****
ಜಾತ್ರೆಯೊಂದು ನೆಪ ಅಷ್ಟೇ..
ಹುಡುಗಾ ನಿನ್ಮುಂದೆ
ನೀ ಕೊಡಿಸಿದ ಸೀರೆ..
ಮಲ್ಲಿಗೆ ಘಮಗಳ
ಮೆರವಣಿಗೆಯಾಗಬೇಕಿತ್ತಷ್ಟೇ..!
****
ತೇರು ನೋಡುವುದಕ್ಕಿಂತ
ಅವನನ್ನೇ
ಕಣ್ಸನ್ನೆಯಲಿ ಮಾತಾಡಿಸಿದ
ಹುಡುಗಿ ತುಸು ಮೌನಿ..
ಹುಡುಗ ನಕ್ಕನಷ್ಟೇ..
ಅಲ್ಲಿಂದಾರಂಭ
ಜಾತ್ರೆಯ “ಪ್ರೇಮ್ ಕಹಾನಿ”
****
Facebook ಕಾಮೆಂಟ್ಸ್