X

ನವ್ಹೆಂಬರ್ ೯,೨೦೧೬ರ ಮೊದಲು

ಕಪ್ಪು ಕಾಂಚಾಣಾ ಕುಣಿಯುತಲಿತ್ತೊ

ಕಾಲಿಗೆ ಬಿದ್ದವರ ತುಳಿಯುತಲಿತ್ತೊ

ಬಡವರ ಧಮಣಿಯ ರಕುತವ ಹೀರಿತ್ತೊ

ಧನಿಕರ ಬೊಜ್ಜಲ್ಲಿ ಬಚ್ಚಿಕೊಂಡಿತ್ತೊ

ಮೇಜಿನ ಅಡಿಯಲ್ಲಿ ಸರಿದಾಡುತಿತ್ತೊ

ವಿದೇಶಿ ಬ್ಯಾಂಕಿನ ಖಾತೆಯಲ್ಲಿತ್ತೊ

  ಕಪ್ಪು ಕಾಂಚಾಣಾ….!

“ಯುವರಾಜ”ನ ಗದ್ದುಗೆಲಿ ಸದ್ದು ಮಾಡಿತ್ತೊ

“ಅಮ್ಮ”ನ ಸೆರಗಿನ “ಗಂಟ”ಲ್ಲಿ ಇತ್ತೊ

ಕುರಿ ತಿನ್ನೊ “ಮೇವ”ಲ್ಲಿ ಅವಿತು ಕುಂತಿತ್ತೋ

“ಅದಿರಿ”ನ ಮಣ್ಣಲ್ಲಿ ಬೆರೆತು ಹೋಗಿತ್ತೊ

ಕಪ್ಪು ಕಾಂಚಾಣಾ…!

“ಗೊರಕೆ” ಹೊಡೆಯೋರ “ನಿದ್ದೆ”ಲು ಇತ್ತೊ.

“ಪೊರಕೆ” ಹಿಡಿದವರ “ಕೈ”ಯಲ್ಲಿ ಇತ್ತೊ.

“ಭೂಮಿ”ಯಲ್ಲಿ “ಭೂಗತ”ವಾಗಿತ್ತೊ.

“ಎಣ್ಣೆ ರಾಜ”ನ ನಶೆಯಲ್ಲಿ ಇತ್ತೊ…

ಕಪ್ಪು ಕಾಂಚಾಣಾ……!

ನವ್ಹೆಂಬರ್ ೯,೨೦೧೬ ರ ನಂತರ

————————————————————————-

ಸಾವಿರದ ಸಾವಿರ ಸಾವು ಕಂಡಿತ್ತೊ

ಐಸಿರಿಯ ಐನೂರು ಅಯ್ಲುಪೈಲಾಯ್ತೊ

ಹತ್ತು ಇಪ್ಪತ್ತು ನಸುನಗುತಲಿತ್ತೊ

ಐವತ್ತು ನೂರೇ ಗತಿಯಾಗಿ ಹೋಯ್ತೋ

ಕಪ್ಪು ಕಾಂಚಾಣಾ….!

ಧನಿಕನ ತಿಜೋರಿ ಕಂಪಿಸುತಿತ್ತೊ

ಬಡವನ ಬೀದೀಲಿ ಜಾತ್ರೆ ಶುರುವಾಯ್ತೊ

ಕಾಳಸಂತೇಲಿ ಕಣ್ಣೀರು ಹರಿದಿತ್ತೊ

ಗಾಂಧಿಯ ಮೊಗದಲ್ಲಿ ಹೊಸಕಳೆ ಬಂದಿತ್ತೊ

ಕಪ್ಪು ಕಾಂಚಾಣಾ….!

ಭಾರತದ ಭವಿತವ್ಯ ಭವ್ಯವಾಗಿತ್ತೊ

ಕೊಳಕಾದ ಐತಿಹ್ಯ ಸ್ವಚ್ಚಗೊಂಡಿತ್ತೊ

ಮಹಾಮನ್ವಂತರ ಶುರುವಾಗಿ ಹೊಯ್ತೋ

ಮೋದಿಗೆ ಜೈಕಾರ ಎಲ್ಲೆಡೆ ಮೊಳಗಿತ್ತೊ ..

ಕಪ್ಪು ಕಾಂಚಾಣಾ….!

Facebook ಕಾಮೆಂಟ್ಸ್

Rahul Hajare: ಬಾಹುಬಲಿ ತಾಂತ್ರಿಕ ವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯನಿಕೇಶನ್ ಇಂಜನೀಯರಿಂಗ್ ಪದವಿ ಸದ್ಯಕ್ಕೆ ಮಂಗಳೂರಿನ ಬ್ಯಾಂಕ್'ನಲ್ಲಿ ಉದ್ಯೋಗ ಕತೆ,ಲೇಖನ, ಕವಿತೆ ಬರೆಯುವುದು ಪ್ರವೃತ್ತಿ. ಚೆಸ್,ಕ್ರಿಕೆಟ್ ಹವ್ಯಾಸ.
Related Post