ನಿನ್ನ ಕಂಡಾಗ ಮೊದಲು ಕಾಣುವುದೇ
ಆ ನಿನ್ನ ಮುಖದ ಮಿಂಚಿನಂತ ನಗು,
ಅದನ್ನು ಕಂಡಾಗ ಅನಿಸುವುದೇ
ಇದು ಯಾವುದೋ ಮುದ್ದು ಮನಸ್ಸಿನ ಮಗು.
ಕಾಣುತ್ತಿದ್ದೆ ನೀನು ಎಲ್ಲರನ್ನೂ ಗೌರವದಿಂದ,
ಅದಕ್ಕೆ ಎಲ್ಲರೂ ನಿನ್ನನ್ನು ಕಾಣುತ್ತಿದ್ದರು ಪ್ರೀತಿಯಿಂದ,
ಸ್ನೇಹಿತನಾಗಿ, ಅಣ್ಣನಾಗಿ,ಮಾರ್ಗದರ್ಶಕನಾಗಿ ನಾ ಕಂಡೆ ನಿನ್ನನ್ನು…
ದಿನ ನಿನ್ನ ಮುದ್ದು ಮಾತುಗಳಿಂದ ಖುಷಿಯಾಗಿ ಇಡುತ್ತಿದ್ದೆ ನಮ್ಮನ್ನು.
ಪಟ ಪಟ ಸದಾ ಮಾತಾನಾಡುತ್ತಿದ್ದಿ ನೀನು,
ಎಲ್ಲರಲ್ಲೊಂದಾಗಿ ನಗುವನ್ನು ಚೆಲ್ಲುತ್ತಿದ್ದಿ ನೀನು,
ಅದೆಷ್ಷೋ ಪ್ರತಿಭೆಗಳನ್ನು ಹೊತ್ತಿದೆ ನೀನು,
ಅದರಲ್ಲಿ ಹಲವು ಕಡೆ ಮಿಂಚುತ್ತಿದ್ದೆ ನೀನು.
ಅಂತರಂಗದಲ್ಲಿ ಸುಂದರ ಅರಮನೆಯನ್ನೇ ಕಟ್ಟಿಕೊಂಡಿದ್ದೆ ನೀನು,
ಅದೆಷ್ಷು ನಿರ್ಮಲ ಭರಿತವಾಗಿ ಇಟ್ಟುಕೊಂಡಿದ್ದೆ ನೀನು,
ಪ್ರೀತಿಯೆಂಬುದನ್ನು ಚೆಲ್ಲಿ ಹಂಚುತ್ತಿದ್ದೆ ನೀನು,
ಇದನ್ನು ಬೇರೆ ಯಾರಿಂದಲೂ ಬಯಸಲು ಸಾಧ್ಯವಿಲ್ಲ ನಾನು.
ನಿನ್ನ ಜೊತೆ ಕಳೆದ ಆ ದಿನಗಳನ್ನು ಮರೆಯಲು ಸಾಧ್ಯವಿಲ್ಲ,
ನೀ ಕೊಟ್ಟ ಸಿಹಿ ನೆನಪುಗಳನ್ನು ಅಳಿಸಲು ಸಾಧ್ಯವಿಲ್ಲ,
ನಿನಗಾಗಿ ಮನ ಮಿಡಿಯದ ಮನಸುಗಳು ಇರಲು ಸಾಧ್ಯವಿಲ್ಲ,
ನಿನ್ನ ಆ ಪ್ರೀತಿಯ ಸ್ನೇಹ ಬಾಂಧವ್ಯವನ್ನು ಬಣ್ಣಿಸಲು ಸಾಧ್ಯವೇ ಇಲ್ಲ..
ಈ ಎಲ್ಲವನ್ನೂ ಹೊಂದಿದ ಮುತ್ತು ಮಾಣಿಕ್ಯ ನೀನು,
ಅದಕ್ಕೆ ಆ ಪರಮಾತ್ಮನಿಗೂ ಇಷ್ಷವಾದಿಯೇನು ನೀನು,
ನಮ್ಮೆಲ್ಲರಿಂದ ದೂರ ಕರೆದುಕೊಂಡ ನಿನ್ನನ್ನು,
ಊಹಿಸಲು ಸಾಧ್ಯವಾಗುತ್ತಿಲ್ಲ ನಮ್ಮ ಜೊತೆಗಿಲ್ಲ ಎಂದು ನೀನು,
ಸದಾ ನಮ್ಮ ಹೃದಯದಲ್ಲಿ ಅಮರವಾಗಿರುತ್ತಿ ನೀನು.
ಒಬ್ಬ ಅಣ್ಣನಾಗಿ, ಗೆಳೆಯನಾಗಿ ಕಂಡೆ ನಾ ನಿನ್ನನ್ನು,
ಆ ವಿಧಿ ತನ್ನ ಕ್ರೂರ ಲೀಲೆಗೆ ಬಲಿಯಾಗಿಸಿದನು,
ಮುತ್ತು ಮಾಣಿಕ್ಯ ಒಂದನ್ನು ಕಳೆದುಕೊಂಡೆ ನಾನು,
ಮುತ್ತಿನ ಮುತ್ತಾಗಿ ಮತ್ತೆ ಬಂದು ಸೇರು ಅಣ್ಣ ನಮ್ಮನ್ನು,
ನನ್ನ ನೆಚ್ಚಿನ ‘ ಶಿಶಿರ್’ ಅಣ್ಣಾ ನೀನು….
-ರಾಜೇಶ್ವರಿ ಬೆಳಾಲು
Facebook ಕಾಮೆಂಟ್ಸ್