ಭಾರ ಹದವ ಮೀರಿದೆದೆಯಲಿ
ಹೊರಲಾರೆ ನಾನೀ ಕವಿತೆ
ಕೃಪೆಯ ತೋರೆ ಎನ್ನ ಒಲುಮೆದಾತೆ
ಇಳಿದು ಬಂದೀ ಬಿಳಿಯ ಹಾಳೆಯಲ್ಲಿ
ನಿದಿರೆ ಹತ್ತುವ ಹೊತ್ತು
ಮನದಿ ನಿನ್ನದೇ ಗಸ್ತು
ನಿದಿರೆ ಕಾಣದ ಮನಕೆ
ನಿನ್ನ ಕನಸು ಸರಣಿಯ ಮಾಲೆ
ಪ್ರೇನಮ ಶಾಪವೋ..? ವರವೋ…?
ದಿನವು ನಿನ್ನದೇ ರಗಳೆ….!!
ಮುಂದೆ ಬಂದಿಹೆನಲ್ಲ ಈಗ
ಕೇಳೆಯಾ ಈ ಕರೆಯ
ಬಲು ಶಾಂತವಾಗಿಹೆಯಲ್ಲ
ಬಿರುಧಾವಳಿಗೇನು ರಜೆಯ…?
ಬಾಯಿ ಬಾರದು ಚೆಲುವೆ
ಹೇಳಲೆಂತಲೋ ಆಸೆ
ಕನಸಿನಲ್ಲಿಯ ತರಹವೇ
ನೀನೆ ಬಂದು ಹೇಳಿಸೆ…
ಇಲ್ಲಿ ದಟ್ಟ ಮೋಡದ ಹೊರತು
ಮಳೆ ಹನಿಗೆ ಇಹುದು ಬರ
ತಡೆದು ನಿಲ್ಲಿಸೋ ಬೆಟ್ಟ
ಇಂದು ಎತ್ತಲಾರದು ಸ್ವರ
ಕರೆದು ಮೆರೆಸುವುದಿಲ್ಲ, ಭೋರ್ಗರೆದು ಬೆದರಿಸುವುದಿಲ್ಲ
ಕಾದು ಕುಳಿತಿರುವೆ ನಾನು…
ಹರಿದು ಬರುವೆಯೋ ನೀನು
ಇಳಿದು ಬರುವೆಯೋ ಕಾಣೆ,
ಪ್ರೇಮ ನೆರೆಯಲಿ ಮುಳುಗದೆ ಈ ಉಸಿರಿಗೆಲ್ಲಿಯ ಕೊನೆ……….??
– ಪ್ರಕೃಜ
Facebook ಕಾಮೆಂಟ್ಸ್