ಮೋದಿಯವರು ಇಡೀ ದೇಶದ ಪ್ರಧಾನಿ.. ಕೇವಲ ಕರ್ನಾಟಕ ಅಥವಾ ತಮಿಳುನಾಡಿಗಷ್ಷೇ ಸೀಮಿತರಲ್ಲ.. ದೇಶದ ಗಡಿ ಭಾಗದಲ್ಲಿ ಪಾಪಿ ಪಾಕಿಸ್ಥಾನ ನಮ್ಮ ಭಾರತವನ್ನು ನುಂಗಲು ಉಗ್ರರನ್ನು ಕಳುಹಿಸಿ ಪರೋಕ್ಷ ಯುದ್ಧವನ್ನು ಸಾರಿದ ಈ ಸಂದರ್ಭದಲ್ಲಿ ದೇಶದ ಪ್ರಧಾನಿಯವರನ್ನು ಕಾವೇರಿ ವಿಷಯದಲ್ಲಿ ಎಳೆದು ತರುವುದು ಸಮಂಜಸವಲ್ಲ… ಮೋದಿಯವರೇ ನಿಮಗೆ ವಿದೇಶ ಪ್ರವಾಸ ಮಾಡಲು ಸಮಯವಿದೆ ಆದರೆ ಕಾವೇರಿ ವಿಷಯದಲಿ ಮಧ್ಯಸ್ಥಿಕೆ ಸಮಯವಿಲ್ಲ ಏಕೆ ಎಂದು ಪ್ರಶ್ನಿಸುತ್ತಿದ್ದಾರೆ ನಮ್ಮೊಳಿಗಿನ ಕೆಲವರು . ಮೋದಿಯವರು ಅಂದು ದೇಶಗಳನ್ನು ಸುತ್ತಿದ್ದರಿಂದಲೇ ಭಾರತಕ್ಕೆ ಇಂದು ವಿಶ್ವಮಟ್ಟದಲ್ಲಿ ಭಾರೀ ಬೆಂಬಲ ದೊರಕಿದ್ದು.
ನಮ್ಮ ರಾಜ್ಯದ ಭಾಜಪ, ದಳ ಕಾಂಗ್ರೆಸ್’ನವರಿಗೆ ಸ್ವಲ್ಪವಾದರೂ ಕಾಳಜಿಯಿದ್ದರೆ ನೇರ ಜಯಲಲಿತರನ್ನು ಮಾತುಕತೆಗೆ ಆಹ್ವಾನಿಸಬಹುದಿತ್ತು.. ನೀರು ಕೊಡುವುದನ್ನು ನಿಲ್ಲಿಸಬಹುದಿತ್ತು… ಪ್ರತಿ ಬಾರಿಯೂ ಮೋಸವಾಗುತ್ತಿರುವುದು ನಮ್ಮ ವಕೀಲರು ದುರ್ಬಲ ವಾದ ಮಂಡನೆಯಿಂದ ಹೊರತು ಮೋದಿಯವರಿಂದ ಅಲ್ಲ… ಆರು ಕೋಟಿ ಕನ್ನಡಿಗರಲ್ಲಿ ಒಬ್ಬ ಸಮರ್ಥ ವಕೀಲ ಇಲ್ಲವೇ? ಅವರನ್ನೇಕೆ ಕರೆತಂದು ನ್ಯಾಯಾಲಯದಲ್ಲಿ ವಾದಕ್ಕಿಳಿಸಬಾರದು…? ಸಿದ್ಧರಾಮಯ್ಯನವರ ಮನೆಯಲ್ಲಿಯೇ ಇಂತಹುದ್ದು ನಡೆದಿದ್ದರೆ ಹೀಗೆ ನಡೆದುಕೊಳ್ಳುತ್ತಿದ್ದರೆ.?? ವಕೀಲರನ್ನು ಬದಲಾಯಿಸುತ್ತಿದ್ದರಲ್ಲವೇ? ಇದೇಕೆ ಯಾರ ಕಣ್ಣಿಗೂ ಕಾಣಿಸುತ್ತಿಲ್ಲ. ಸತತ ಸೋಲಿನಿಂದ ನಾವು ಮಾಡಿದ್ದಾದರೂ ಏನು? ಬರೀ ಶೂನ್ಯ … ಪ್ರತಿ ಬಾರಿಯೂ ನೀರು ಮಾತ್ರ ತಮಿಳುನಾಡಿನ ಪಾಲಾಗುತ್ತಿದೆ.. ನಮ್ಮ ರಾಜ್ಯದೊಳಗೆ ನಮ್ಮ ರಾಜಕೀಯ ಪಕ್ಷದಲ್ಲಿಯೇ ಒಗ್ಗಟ್ಟಿಲ್ಲ.
ಈ ಕಾವೇರಿ ನೀರಿನ ವಿಷಯದಲ್ಲಿ ರಾಜಕೀಯ ಮಾಡುಡುತ್ತಿರುವವರು ವಿಕೃತ ಮನಸ್ಸಿನವರಲ್ಲವೇ….ಇಂತಹಾ ವಿಕೃತರಿಂದ ದಿಕ್ಕು ತೋಚದೆ ಆದವರು ಮಾತ್ರ ನಮ್ಮ ಅನ್ನದಾತ ರೈತರು. ಅವರ ಸಂಕಷ್ಟಕ್ಕೆ ಯಾರು ಇಲ್ಲ. ಪ್ರತಿ ಬಾರಿಯೂ ರೈತರಿಗೆ ಮಾತ್ರ ಅನ್ಯಾಯವೇ ಆಗುತ್ತಿದೆ.. ಬೆಳೆ ಬೆಳೆಯಲು ನೀರಿಲ್ಲ ..ನೀರು ಕೇಳಲು ಬಂದರೆ ಅವರ ಮೇಲೆ ಕೇಸ್ ದಾಖಲಿಸಿ ಜೈಲಿಗಟ್ಟುತ್ತೀರಿ.. ರೈತರ ಮೇಲೆ ಲಾಠಿ ಬೀಸುತ್ತೀರಿ.. ಅನ್ನ ನೀಡಿದ ತಪ್ಪಿಗೆ ಲಾಠಿಯ ರುಚಿಯನ್ನೂ ಸವಿಯಬೇಕಾಗುತ್ತದೆ… ಚುನಾವಣೆಯಲ್ಲಿ ಮೊಸಳೆ ಕಣ್ಣೀರು ಸುರಿಸಿ ಏನೂ ಅರಿಯದ ಮುಗ್ಧ ಮನಸ್ಸಿನ ರೈತರನ್ನು ತನ್ನತ್ತ ಸೆಳೆದು ತಮ್ಮ ಅಧಿಕಾರದ ಗದ್ದುಗೆಗೆ ಏರುತ್ತಾರೆ.. ಈಗ ಅರಿವಾಯಿತಾ ರೈತರೇ ನಮ್ಮ ರಾಜಕಾರಣಿಗಳ ಬಗ್ಗೆ?? ಮತ ಕೇಳಲು ಬರುತ್ತಾರಲ್ಲಾ ಆಗ ನಿಮ್ಮ ಶಕ್ತಿ ಪ್ರದರ್ಶಿಸಿ. ಎಲ್ಲರೂ ಸಮಸ್ಯೆಯ ದಿಕ್ಕು ತಪ್ಪಿಸಿ ಮೋದಿಯವರನ್ನು ತಪ್ಪಿತಸ್ಥರನ್ನಾಗಿ ಮಾಡುವ ಪ್ರಯತ್ನವಿದು . ಮೋದಿಯವರು ಒಂದು ಸಾಮಾನ್ಯ ಟ್ವೀಟ್’ಗೆ ಸ್ಪಂದಿಸುತ್ತಾರೆ. ಹಾಗಿದ್ದರೂ ನಮ್ಮ ಮುಖ್ಯಮಂತ್ರಿಗಳು ಬರೆದ ಏಳು ಪತ್ರಗಳಿಗೆ ಉತ್ತರಿಸಲಿಲ್ಲವಂತೆ …ಇದು ನಂಬುವಂತಹಾ ಮಾತೆ ?
ಅಂದು ಮುಖ್ಯಮಂತ್ರಿಗಳ ಸಭೆ ಆಹ್ವಾನವಿದ್ದರೂ ತಮ್ಮ ಅಹಂ ಸ್ವಭಾವ ಮತ್ತು ರಾಜಕೀಯದ ದ್ವೇಷದಿಂದ ಹೋಗಿರಲಿಲ್ಲ. ಚೀನಾ ದೇಶಕ್ಕೆ ಮೋದಿಯವರ ಜೊತೆ ಹೋಗಲು ಸ್ವತಃ ಮೋದಿಯವರೇ ವಿಶೇಷವಾಗಿ ಆಹ್ವಾನಿದ್ದರು. ಆಗಲೂ ತಮ್ಮ ಉದ್ಧಟತನ ಪ್ರದರ್ಶಿಸಿ ಚೀನಾ ಪ್ರವಾಸಕ್ಕೆ ಹೋಗಿರಲಿಲ್ಲ.. ಸಿದ್ದರಾಮಯ್ಯನವರೇ ತಮ್ಮ ಮಗ ರಾಕೇಶ್’ರವರು ಅಸುನೀಗಿದ ಸಂದರ್ಭದಲ್ಲಿ ಮೋದಿಯವರನ್ನು ನೇರವಾಗಿ ದೂರವಾಣಿಯಲ್ಲಿ ಸಂಪರ್ಕಿಸಿದ್ದರು . ಈಗ ಏಕೆ ಅಸಾಧ್ಯವಾಯಿತು ಈ ದೂರವಾಣಿ ಸಂಪರ್ಕ ??? ಕಾವೇರಿ ಎನ್ನುವುದು ರಾಜ್ಯದ ವಿಷಯ ಅಲ್ಲವೇ ಅದಕ್ಕೆ ಈ ನಿರ್ಲಕ್ಷ್ಯ . ಅದೇ ಸ್ವಂತ ವಿಷಯವಾಗಿದ್ದರೆ .. . ಪತ್ರ ಬರೆಯುತ್ತಿದ್ದರೇ ? ಕಾವೇರಿ ನೀರು ಬಿಡದಿರಲು ಇಷ್ಟು ಸಮಯ ಯಾಕೆ ನಾಟಕವಾಡಿದ್ದು ?
ತಮ್ಮ ಸಮಸ್ಯೆ ಏನೇ ಇರಲಿ ನಮಗೆ ನ್ಯಾಯಬೇಕು. ರಾಜ್ಯಕ್ಕೆ ನ್ಯಾಯ ಸಿಗುವಂತೆ ಮಾಡಿ. ರೈತರ ಜೀವನದೊಂದಿಗೆ ಚಲ್ಲಾಟವಾಡದಿರಿ. ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸದಿರಿ ಪರಿಹಾರವನ್ನು ಕಂಡು ಹಿಡಿಯುವ ಪ್ರಯತ್ನ ಮಾಡಿ.. ಆಗ ನೀವು ನಿಜವಾಗಿಯೂ ಹೀರೊ ಆಗುತ್ತೀರಿ. ಅದು ಬಿಟ್ಟು ಇನ್ನೊಬ್ಬರ ಮೇಲೆ ಗೂಬೆ ಕೂರಿಸಿ ವಿವಾದದಿಂದ ದೂರ ಸರಿಯು ಪ್ರಯತ್ನವನ್ನು ಮಾಡದಿರಿ. ಯಾಕೆಂದರೆ ನೀವೊಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವಿರಿ. ತಮಿಳುನಾಡಿನ ಮುಖ್ಯಮಂತ್ರಿಯನ್ನು ಮಾತುಕತೆಗೆ ಆಹ್ವಾನಿಸಿ ಅಥವಾ ತಾವೇ ಅಲ್ಲಿಗೆ ಹೋಗಿ… ಇದರಿಂದ ತಮಗೆ ಏನಾದರೂ ನಷ್ಟವಾಗುವುದೇ? ಈಗ ಮೋದಿಯವರನ್ನು ದೂಷಿಸುವ ಬದಲು ಅವರನ್ನೇ ತಾವು ಭೇಟಿ ಮಾಡಬಹುದಿತ್ತು..ನಿಜವಾಗಿಯೂ ನಿಮಗೆ ರಾಜ್ಯದ ಪರ ಕಾಳಜಿ ಇದ್ದಿದ್ದರೆ ರಾಜಕೀಯದ ನಾಟಕವಾಡುತ್ತಿರಲ್ಲ ಎನ್ನುವುದು ತಮ್ಮ ನಡೆಯಿಂದಲೇ ತಿಳಿಯುತ್ತದೆ. ವಿರೋಧ ಪಕ್ಷ ಸಹಕರಿಸದಿದ್ದರೆ ಬಿಡಿ .. ನೇರವಾಗಿ ನಾನೇ ಹೋರಾಡುತ್ತೇನೆ ಎಂದು ದಿಟ್ಟತನ ತೋರಿಸಬಹುದಿತ್ತು. ಅದು ನಿಜವಾದ ಜನನಾಯಕನ ಲಕ್ಷಣ.
ಮೋದಿಯವರು ಪ್ರಧಾನಿ ಗದ್ದುಗೆಗೆ ಏರಿದ ತಕ್ಷಣ ತನ್ನ ರಾಜಕೀಯದ ದ್ವೇಷವನ್ನು ಬದಿಗಿಟ್ಟು ಜಯಲಲಿತಾ ಪ್ರಧಾನಿ ಬಳಿಗೆ ಹೋಗಿ ತನ್ನ ರಾಜ್ಯದ ಸಮಸ್ಯೆಯನ್ನು ಹೇಳಿಕೊಳ್ಳಲಿಲ್ಲವೇ ? ಅಂತಹಾ ಪ್ರಯತ್ನವನ್ನು ತಾವೂ ಮಾಡಬಹುದಿತ್ತಲ್ಲವೇ? ಯಾಕೆ ಹಿಂಜರಿದಿರಿ? ಆಳಾಗ ಬಲ್ಲವನೇ ಅರಸನಾಗಬಲ್ಲ ಎನ್ನುವುದು ಗೊತ್ತಿಲ್ಲವೇ ತಮಗೆ? ಕಳೆದ ಲೋಕ ಸಭೆಯಲ್ಲಿ ಮೋದಿಯವರು ಗೆದ್ದರೆ ರಾಜ್ಯ ಬಿಡುವೆ ಎಂದಿದ್ದ ದೇವೇಗೌಡರೇ ಮೋದಿಯವರನ್ನು ಭೇಟಿ ಮಾಡಿದ್ದರು. ಅಂತಾಹುದ್ದರಲ್ಲಿ ಸಿದ್ಧರಾಮಯ್ಯನವರೇ ತಾವೇಕೆ ರಾಜ್ಯದ ಸಮಸ್ಯೆಗಳನ್ನು ಹೊತ್ತು ಪ್ರಧಾನಿಯವರ ಬಳಿ ತೆರಳಲಿಲ್ಲ. ?
ಇದೀಗ ಸಮಸ್ಯೆಗಳು ಜಟಿಲವಾದಾಗ ಅದಕ್ಕೆ ಕಾರಣ ಮೋದಿಯವರೇ ???
Facebook ಕಾಮೆಂಟ್ಸ್