X

ತುಳುನಾಡಿನ ಭೂತಾರಾಧನೆ.

ತುಳುನಾಡು ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಮತ್ತು ಕೇರಳದ ಕಾಸರಗೋಡು ಜಿಲ್ಲೆಯನ್ನು ಒಳಗೊಂಡಿರುವ ಪ್ರದೇಶವಾಗಿದೆ. ಇಲ್ಲಿಯ ಜನರು ವ್ಯಾವಹಾರಿಕವಾಗಿ ತುಳು ಭಾಷೆಯನ್ನು ಮಾತನಾಡುತ್ತಾರೆ ಈ ಕಾರಣದಿಂದ ಈ ಪ್ರದೇಶ ತುಳುನಾಡು ಎಂದು ಗುರುತಿಸಿಕೊಂಡಿದೆ. ತುಳುನಾಡಿನ ವ್ಯಾಪ್ತಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಮತ್ತು ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಹರಿಯುವ ಚಂದ್ರಗಿರಿ ನದಿಯವರೆಗಿನ ವಿಸ್ತಾರವಾಗಿದೆ. ಪುರಾಣಗಳ ಪ್ರಕಾರ “ಪರಶುರಾಮ ತನ್ನ ತಾಯಿಯನ್ನು ಕೊಂದ ಪಶ್ಚಾತ್ತಾಪಕ್ಕಾಗಿ ಕೊಲ್ಲಲು ಬಳಸಿದ ಕೊಡಲಿಯನ್ನು ದೂರ ಎಸೆದಾಗ ಸಮುದ್ರ ಭಾಗ ಸರಿದು ಒಂದು ಭೂಭಾಗ ಸೃಷ್ಟಿಯಾಗುತ್ತದೆ, ಹಾಗೆ ಸೃಷ್ಟಿಯಾದ ಪ್ರದೇಶವೇ ನಮ್ಮ ತುಳುನಾಡು. ಈ ಕಾರಣದಿಂದ ತುಳುನಾಡನ್ನು ಪರಶುರಾಮ ಸೃಷ್ಟಿ ಎಂದೂ ಕರೆಯಲಾಗುತ್ತದೆ.

ತುಳುನಾಡಿಗೆ ತನ್ನದೆಯಾದ ಸಂಸ್ಕೃತಿ, ಆಚರಣೆ, ವ್ಯವಹಾರ, ತನ್ನದೆಯಾದ ಭಾಷೆ, ಪ್ರಮುಖವಾದ ಆಚರಣೆ ಭೂತಾರಾಧನೆಯನ್ನು ಆರಾಧಿಸಿಕೊಂಡು ಬದುಕುವ ಜನರ ಜೀವನ ಶೈಲಿ. ಇಂತಹ ಸಾಂಸ್ಕೃತಿಕ ನೆಲೆಕಟ್ಟನ್ನು ಹೊಂದಿರುವ ನಮ್ಮ ತುಳುನಾಡು ಇಂದು ಜಗತ್ತಿನಲ್ಲೇ ವಿಶೇಷವಾದ ಸ್ಥಾನವನ್ನು ಹೊಂದಿದೆ. ತುಳುನಾಡಿನ ಆಚರಣೆಯಲ್ಲಿ ಮುಖ್ಯವಾಗಿ ಭೂತಾರಾಧನೆ. ಇಲ್ಲಿಯ ಜನರು ಭೂತಾರಾಧನೆ(ದೈವ) ಮತ್ತು ದೇವರು ಬೇರೆಬೇರೆ ಎಂದು ನೋಡುವುದಿಲ್ಲ. ದೈವ ಮತ್ತು ದೇವರು ಎರಡನ್ನು ಭಿನ್ನ ನೆಲೆಯಲ್ಲಿ ನಂಬಿ ಆರಾಧಿಸಿಕೊಂಡು ಬದುಕುತ್ತಿದ್ದಾರೆ. ಭೂತಾರಾಧನೆ ಎಂಬ ಪದ ಆರಾಧನಾ ಪರಂಪರೆಯಿಂದ ಹುಟ್ಟಿದ ಪದವಲ್ಲ. ಅದು ತುಳು ಸಂಸ್ಕೃತಿಯನ್ನು ಒಟ್ಟಾಗಿ ಸೂಚಿಸುವ ಪದ. ಇಂದು ತುಳುನಾಡಿನ ಸಾಂಸ್ಕೃತಿ ನಾಶವಾಗಿ ಹೋಗದೆ ಇರುವುದಕ್ಕೆ ಮೂಲ ಕಾರಣ ಇಲ್ಲಿಯ ಜನರು ನಂಬಿಕೊಂಡು ಬಂದಿರುವ ಭೂತಾರಾಧನೆ. ಭೂತ(ದೈವ)ವನ್ನು ನಂಬಿದವರಿಗೆ ಜಯ ಕೊಡುತ್ತದೆ, ನಂಬದವನಿಗೆ ಅಪಜಯವಾಗುತ್ತದೆ ಎಂಬ ನಂಬಿಕೆಯಿದೆ.

ಸಾವಿರಾರು ವರುಷಗಳ ಇತಿಹಾಸ ಹೊಂದಿರುವ ಭೂತಾರಾಧನೆಯನ್ನು ತುಳುನಾಡಿನ ಜನರು ಭಕ್ತಿ ಶ್ರದ್ದೆಯಿಂದ ಇಂದಿಗೂ ಆಚರಿಸಿಕೊಂಡು ಬಂದಿರುತ್ತಾರೆ. ತುಳುನಾಡಿನ ಜನರಿಗೆ ಭೂತ ಕೋಲ ಸಾಮಾಜಿಕ-ಸಾಂಸ್ಕೃತಿಕ ಜೀವನದ ಅನಿವಾರ್ಯ ಭಾಗವಾಗಿ ಕಾಣುತ್ತದೆ. ತಮ್ಮ ಜೀವನದಲ್ಲಿ ಬರುವ ದುಃಖ, ಕಷ್ಟ ಮತ್ತು ದುಷ್ಟ ಶಕ್ತಿಗಳಿಂದ ಬರುವ ಸಮಸ್ಯೆಗಳಿಂದ ತಮ್ಮನ್ನು ರಕ್ಷಿಸುವಂತೆ ದೈವಗಳಲ್ಲಿ ಪ್ರಾಥಿಸುತ್ತಾರೆ, ಇದಕ್ಕೆ ಮುಖ್ಯ ಕಾರಣ ದೈವಾರಾಧನೆಯು ಇಲ್ಲಿಯ ಜನರ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ. ಇವೆಲ್ಲ ಇಲ್ಲಿಯ ಜನರ ಭಕ್ತಿ, ಸ್ಫೂರ್ತಿಯಾಗಿದೆ. ಇಂದಿನ ಆದುನಿಕ ಜಗತ್ತಿನ ಜೀವನದಲ್ಲಿ ಜನರು ಎಷ್ಟೇ ಮುಂದುವರಿದರು ತುಳುನಾಡಿನ ಜನರು ಮಾತ್ರ ದೈವಾರಾಧನೆಯನ್ನು ಮೀರಿ ಎಂದು ಹೋಗುದಿಲ್ಲ. ತಮ್ಮ ಹಿರಿಯರು ಆರಾಧಿಸಿಕೊಂಡು ಬಂದಿರುವಂತ ದೈವ ಶಕ್ತಿಯನ್ನು ಇಂದಿನ ಪೀಳಿಗೆ ಮುಂದುವರಿಸಿಕೊಂಡು ಹೋಗುತಿದ್ದರೆ. ಮತ್ತು ದೈವಾರಾಧನೆಯಲ್ಲಿ ದೈವವು ನೀಡಿದ ಅಭಯ ಹಸ್ತವನ್ನು ಜನರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ. ಇಲ್ಲವಾದರೆ ತಮಗೆ ಕೆಟ್ಟದಾಗುವುದು ಎನ್ನುವ ಭಯ ಜನರಿಗೆ ಇರುವುದರಿಂದ ದೈವವನ್ನು ಭಕ್ತಿಯಿಂದ ಪೂಜಿಸುತ್ತಾರೆ. ಈ ಎಲ್ಲ ವಿಷಯಗಳಿಂದ ತುಳುನಾಡಿನಲ್ಲಿ ಭೂತಾರಾಧನೆಯು ತುಂಬಾ ಮಹತ್ವವಾಗಿದೆ.

ಆರಾಧನೆಯ ವಿಭಾಗ

ಭೂತಾರಾಧನೆಯಲ್ಲಿ ಮುಖ್ಯವಾಗಿ ಜನರು ಹಲವು ದೈವಗಳನ್ನು ಆರಾಧಿಸಿಕೊಂಡು ಬಂದಿರುತ್ತಾರೆ. ಒಂದೊಂದು ಪ್ರದೇಶಕ್ಕೆ ಭೂತಾರಾಧನೆಯಲ್ಲಿ ಬದಲಾಗುತ್ತದೆ, ಆ ಸ್ಥಳದ ಇತಿಹಾಸಕ್ಕೆ ತಕ್ಕಂತೆ ಅಲ್ಲಿ ಆಚರಣೆಯನ್ನು ಮಾಡುತ್ತಾರೆ. ಸೀಮೆಯ ಭೂತಗಳು, ಮಾಗಣೆ ಭೂತಗಳು, ಗ್ರಾಮ ಭೂತಗಳು, ಕುಟುಂಬದ ಭೂತಗಳು ಹೀಗೆ ತುಳುನಾಡಿನಲ್ಲಿ ಭೂತಗಳನ್ನು ವಿಂಗಡಿಸಿ ಆರಾಧಿಸಿಕೊಂಡು ಬಂದಿರುತ್ತಾರೆ. ಭೂತ ನೇಮ ಉತ್ಸವಗಳು ಒಂದು ಊರಲ್ಲಿ ನಡೆಯುತ್ತೆ ಅಂದರೆ ಅಲ್ಲಿನ ಜನತೆಗೆ ಸಂಭ್ರಮವಾಗಿರುತ್ತೆ. ಗೊನೆ ಕಡಿಯುವುದರಿಂದ ಉತ್ಸವ ಆರಂಭವಾಗಿ ಭೂತಾರಾಧನೆ ಮುಗಿಯುವವರೆಗೆ ಊರಿನಲ್ಲಿ ಸಂಭ್ರಮ ಆಚರಣೆಗಳು ನಡೆಯುತ್ತಿರುತ್ತೆ.

ಧರ್ಮ ಸಾಮರಸ್ಯ

ತುಳುನಾಡು ಧರ್ಮ ಸಾಮರಸ್ಯದ ನೆಲವಾಗಿದೆ, ತುಳುನಾಡಿನಲ್ಲಿ ಭೂತಾರಾಧನೆಯನ್ನು ಹಿಂದೂ, ಮುಸ್ಲಿಂ ಧರ್ಮ ಭೇದವಿಲ್ಲದೆ ಜನರು ಆರಾಧನೆಯನ್ನು ಮಾಡುತ್ತಾರೆ, ಮುಸ್ಲಿಂ ಸಮುದಾಯದ ಆಲಿಚಾಮುಂಡಿ, ಬೊಬ್ಬರಿಯ ಭೂತವನ್ನು ಇಲ್ಲಿಯ ಜನರು ಆರಾಧಿಸುತ್ತಾರೆ ಮತ್ತು ಕ್ಷೇತ್ರ ಕೂಡ ನಿರ್ಮಾಣವಾಗಿದೆ. ಇನ್ನೂ ಅನೇಕ ಕ್ಷೇತ್ರಗಳು ಇವೆ ಎರಡು ಸಮುದಾಯದವರು ಜತೆ ಸೇರಿ ಭೂತಾರಾಧನೆಯನ್ನು ಇಲ್ಲಿಯ ಜನರು ಧರ್ಮ ಭೇದವಿಲ್ಲದೆ ಆರಾಧಿಸುತ್ತಾರೆ. ಇಂತಹ ವಿಶಿಷ್ಟ ಸಂಪ್ರಾದಯದಿಂದ ನಮ್ಮ ನೆಲ ಗುರುತಿಸಿಕೊಂಡಿದೆ.

ಭೂತ(ದೈವ)ದ ವೇಷಭೂಷಣ

ಭೂತಾರಾಧನೆ ಸಮಯದಲ್ಲಿ ಭೂತದ ವೇಷ ಹಾಕುವವನು ಮೈಗೆ ಅಲಂಕಾರಯುಕ್ತವಾದ ವೇಷಭೂಷಣ ತೊಡುತ್ತಾರೆ. ಸ್ತ್ರೀ ಪುರುಷ ಭೂತಗಳಿಗೆ ಪ್ರತ್ಯೇಕವಾದ ವೇಷಭೂಷಣಗಳಿರುತ್ತವೆ. ಅಣಿ ಕಟ್ಟಿಕೊಂಡು ಮುಗೊ ಕಟ್ಟಿಕೊಂಡು, ಕೈಯಲ್ಲಿ ಸುರಿಯ(ಕತ್ತಿ) ಹಿಡಿದುಕೊಂಡು, ಬಿಲ್ಲ್ ಪಗರಿ(ಬಿಲ್ಲುಬಾಣ) ಹಿಡಿದುಕೊಂಡು, ಕಾಲಿಗೆ ಗಗ್ಗರ ಇವೆಲ್ಲ ಧರಿಸುತ್ತಾರೆ. ಆದರೆ ಎಲ್ಲ ಭೂತಕ್ಕೆ ಒಂದೇ ರೀತಿಯ ವೇಷಭೂಷಣಗಳು ಇರುವುದಿಲ್ಲ. ಆರಾಧನೆ ಮಾಡುವ ಸ್ಥಳದಲ್ಲಿ ಯಾವ ದೈವರಾಧನೆ ಇರುತ್ತೋ ಅದಕ್ಕೆ ಸರಿಯಾಗಿ ಭೂತದ ವೇಷಭೂಷಣ ಬದಲಾಗುತ್ತದೆ.

ಭೂತಾರಾಧನೆ ಮತ್ತು ಪಾಡ್ದನ

ಭೂತಾರಾಧನೆಯಲ್ಲಿ ಪ್ರಮುಖವಾಗಿ ಪಾಡ್ದನವಾಗಿದೆ(ಸಂದಿ), ಭೂತ ಕಟ್ಟಿದ ದೈವ ಪಾತ್ರಿಗೆ ತನ್ನ ಮೈಮೇಲೆ ಆವೇಶವಾಗಲು ದೈವದ ಗುಡಿಯ ಮುಂದೆ ಪಾಡ್ದನವನ್ನು ಹಾಡುತ್ತಾರೆ. ಪಾಡ್ದನದಲ್ಲಿ ಭೂತಗಳ ಹುಟ್ಟು, ಪ್ರಸರಣ, ಕಾರಣಿಕವನ್ನು ನಿರೂಪಣೆ ಮಾಡುವ ಪದ್ಯ ರೂಪದ ಕಥನ ಕವನಗಳಾಗಿವೆ. ಪ್ರತಿಯೊಂದು ಭೂತಕ್ಕೂ ತನ್ನದೆಯಾದ ಪಾಡ್ದನಗಳಿವೆ.

ಭೂತಾರಾಧನೆಯಲ್ಲಿ ವಾದ್ಯಗಳು ದೈವ ಪಾತ್ರದಾರಿಗೆ ತನ್ನ ಮೈಮೇಲೆ ಆವೇಶವಾದ ಸಮಯದಲ್ಲಿ ನೃತ್ಯದ ಮುಖಾಂತರ ಆಡಿ ತನ್ನ ಕಾರಣಿಕವನ್ನು ತೋರಿಸುತ್ತದೆ, ಆ ಸಮಯದಲ್ಲಿ ನಾಗಸ್ವರ, ತಾಸೆ, ಡೋಲು, ಬ್ಯಾಂಡ್ ವಾಲಗ ಮುಂತಾದ ವಾದ್ಯಗಳಿಂದ ದೈವದ ಆವೇಶದ ಸಮಯದಲ್ಲಿ ನುಡಿಸುತ್ತಾರೆ. ಇದಕ್ಕೆ ಅನುಗುಣವಾಗಿ ದೈವ ಪಾತ್ರಿ ನರ್ತನಾವಾಡುತ್ತ ತನ್ನ ನಂಬಿ ಬಂದ ಭಕ್ತರಿಗೆ ಅಭಯವನ್ನು ಕೊಡುತ್ತದೆ. ಇದರಿಂದ ಭೂತಾರಾಧನೆಯಲ್ಲಿ ವಾದ್ಯಗಳು ಪ್ರಮುಖವಾಗಿದೆ.

ದೈವಗಳ ಮುಖವರ್ಣಿಕೆ

ಭೂತಾರಾಧನೆಯಲ್ಲಿ ದೈವಗಳ ಮುಖವರ್ಣಿಕೆ ಮತ್ತು ಅದಕ್ಕೆ ತಕ್ಕಂತೆ ತೆಂಗಿನ ಗರಿಯಿಂದ ಮಾಡಿದ ಹೊದಿಕೆ ಹಾಗೆಯೇ ಮೈಗೆ ಅಲಂಕಾರಯುಕ್ತವಾದ ವೇಷಭೂಷಣ, ಇವೆಲ್ಲ ದೈವದ ಪ್ರಮುಖ ಅಲಂಕಾರವಾಗಿದೆ. ಎಲ್ಲ ಭೂತಾರಾಧನೆಯಲ್ಲಿ ವೇಷಭೂಷಣ ಬೇರೆ ಬೇರೆಯಾಗಿರುತ್ತೆ ಉದಾಹರಣೆಗೆ ರಾಜಸ ಸ್ವಭಾವದ ಅರಸು ಭೂತಗಳ ಮುಖವರ್ಣಿಕೆ, ಹೆಣ್ಣು ಭೂತಗಳ ಮುಖವರ್ಣಿಕೆ, ಒಂದಕ್ಕೊಂದು ವಿಭಿನ್ನವಾಗಿರುತ್ತೆ. ವೇಷಭೂಷಣಕ್ಕೆ ಉಪಯೋಗಿಸುವ ಪರಿಕರಗಳು ಇವೆಲ್ಲ ಪ್ರಾಕೃತಿಕವಾಗಿ ಸಿಗುವ ವಸ್ತುಗಳಾಗಿವೆ ಒಂದು ಆಚರಣೆ ಹೇಗೆ ಪ್ರಕೃತಿಯನ್ನು ಆರಾಧಿಸುತ್ತೆ, ಅದು ತುಳುನಾಡಿನ ನೆಲದಲ್ಲಿ ಮಾತ್ರ. ಅದೇ ಕಾರಣಕ್ಕೆ ತುಳುನಾಡು ಪ್ರಕೃತಿಯ ಆರಾಧಕರು ಎಂದು ಹೇಳುತ್ತಾರೆ, ಇದೆ ತುಳುನಾಡಿನ ಸಂಸ್ಕಾರ. ಅದೇ ರೀತಿ ಭೂತದ ಮುಗ(ಮುಖವಾಡ) ಹಲವಾರು ದೈವಗಳ ಅಲಂಕಾರದಲ್ಲಿ ಪಾತ್ರಿಗಳು ಧರಿಸುತ್ತಾರೆ. ಮನುಷ್ಯರನ್ನು ಹೋಲಿಕೆ ಮಾಡಿ ತಯಾರಾದ ಮುಖವಾಡ, ಪ್ರಾಣಿಗಳನ್ನು ಹೋಲಿಕೆ ಮಾಡಿ ತಯಾರಾದ ಮುಖವಾಡ ಇವೆಲ್ಲ ಭೂತಾರಾಧನೆಯ ಪ್ರಮುಖ ಅಲಂಕಾರವಾಗಿದೆ.

ಸಾವಿರಾರು ವರುಷಗಳ ಇತಿಹಾಸ ಹೊಂದಿರುವ ಭೂತಾರಾಧನೆಯನ್ನು ಜನರು ಭಕ್ತಿ ಶ್ರದ್ದೇಯಿಂದ ಇಂದಿಗೂ ಆಚರಣೆಯನ್ನು ಮಾಡಿಕೊಂಡು ಬಂದಿದುದರಿಂದ ನಮ್ಮ ತುಳುನಾಡಿನ ಸಂಸ್ಕೃತಿಗಳು, ಆಚರಣೆಗಳು ಇಂದು ಜೀವಂತವಾಗಿದೆ. ಇಂದಿನ ನಮ್ಮ ತಲೆಮಾರಿಗೆ ಹಿರಿಯರು ಕೊಟ್ಟ ನಿಧಿಯಾಗಿದೆ ಅದನ್ನು ಉಳಿಸಿಕೊಂಡು ಹೋಗುವ ಜವಾಬ್ಧಾರಿ ನಮ್ಮ ಮೇಲಿದೆ.

 – ರವಿವರ್ಮ.

www.meravivarma.com

ಚಿತ್ರಕೃಪೆ:ಪ್ರತೀಕ್ ಪುಂಚತ್ತೋಡಿ 

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post