Homepageಕವಿತೆ Guest Author 9 years ago Categories: ಕವಿತೆ ವರ್ಷ-ಹರ್ಷ ಕಾದಿದೆ ಇಳೆಯು ಮಳೆಯ ಆಗಮನಕೆ ಎಲ್ಲರ ಬಾಯಲ್ಲೂ ಒಂದೇ ಮಾತು ಅಬ್ಬಬ್ಬಾ ಎಂಥಾ ಸೆಕೆ ! ಗ್ರೀಷ್ಮ ಕಳೆದು ವರ್ಷ ಬಂತು || ದೂರದಿ ಕೇಳುವ ಕಡಲ ಭೋರ್ಗರೆತ ಧಾವಿಸಿತು ನೈಋತ್ಯ ಮಾರುತ | ಯಾರೋ ಅತ್ತಿಸಿ ಬಂದಂತೆ ಓಡುವ ಮೋಡಗಳು ನೀರ ಹನಿಗೆ ಹಾತೊರೆದಿವೆ ಜೀವ ಸಂಕುಲಗಳು || ಝಲ್ಲನೆ ಆಗಸ-ಭುವಿಯ ಬೆಳಗಿತು ಮಿಂಚು ಅದನು ಮೀರಿಸಲು ಗುಡುಗಿನ ಸಂಚು | ಬಾನಿನ ತುಂಬಾ ಕವಿಯಿತು ಕಾರ್ಮೋಡ ಸುರಿಯಿತು ವರ್ಷಧಾರೆ ಧೋ ಎಂದು ನೋಡಾ || ಬಾಡಿದ ರೈತನ ಮೊಗದಲ್ಲಿ ಹರುಷ ಮಾಡುವನು ಬಿತ್ತನೆ ತಡೆಯದೇ ನಿಮಿಷ | ಹಚ್ಚಹಸಿರ ಚಾದಿರ ಧರೆಯ ಮುಚ್ಚಿತು ಬಾಗಿ ನಿಂತವು ಗಿಡಗಳು ಹನಿಮುತ್ತ ಹೊತ್ತು || ವಿದ್ಯಾಶ್ರೀ ಹೆಬ್ಬಾರ್ Facebook ಕಾಮೆಂಟ್ಸ್ ಐದೇ ನಿಮಿಷಗಳಲ್ಲಿ ಯಾರನ್ನಾದರೂ ಅರ್ಥ ಮಾಡಿಕೊಳ್ಳುವುದು ಹೇಗೆ! » « ಪಗೋಡ/ ರಥ ಹೂವು Guest Author: Joining hands in the journey of Readoo.in, the guest authors will render you stories on anything under the sun. Related Post ಗೆದ್ದಲು ಚಿಗುರುವುದನ್ನೇ ಮರೆತ ಬೋಳುಮರ ಹೂವು ಹಣ್ಣು ತಳೆದು ಹಕ್ಕಿಗಳ ಹೊಟ್ಟೆ ತಣಿಸಿ ಎಷ್ಟು ಯುಗವಾಯ್ತು ಕಾದಿರುವೆ ಹಗಲಿರುಳು ಬೇರುಗಳ ನೆನೆಸಿ… ಅದೊಂದು ದಿನ ಅದೊಂದು ದಿನ- ಅಂದೂ ತೊಳೆದಿಟ್ಟ ಹಾಗೆ ಆಕಾಶ ಅಥವಾ ಅಲ್ಲಿ ಇಲ್ಲಿ ಒಂದೆರಡು ಖಬರುಗೇಡಿ ಮೋಡ ಸುಮ್ಮನೆ ರೆಕ್ಕೆಯೂ ಅಲುಗದೆ… ನಡೆ ನೀನು ನಡೆ! ಭಾವ ಬಂಧನದ ಮೇರೆ ಮೀರಿ, ನೂರಾರು ಕನಸುಗಳ ಕೋಟೆ ದಾಟಿ, ಹೊರಟಿದೆ ಪಯಣ, ಗಮ್ಯದ ಕಡೆ ಗಮನ! ಅಂತ್ಯವ…