ಕೊನೆಯೆಂದು ಇರದ ಪರದಾಟದಲ್ಲಿ
ಕಳೆದೊದುದೆನೋ ಸಿಕ್ಕಂತೆ ಈಗ
ನನಗಾರು ಎಂಬ ಹುಡುಕಾಟದಲ್ಲಿ
ಸಿಗಬಾರದಿತ್ತೇ ನೀ ಸ್ವಲ್ಪ ಬೇಗ!
ಮೊಗದಲ್ಲಿ ನಿನ್ನ ಸಿಹಿ ನಗುವ ತರುವ
ನಾ ಸಣ್ಣ ನೆನಪಾಗಿ ಇರಲೆ
ಇರುವೆಲ್ಲ ಸಮಯ ನಿನ್ನೊಡನೆ ಕಳೆವ
ನೆಪವೆಲ್ಲ ನಾ ಹುಡುಕಿ ತರಲೆ!
ಯಾರಲ್ಲೂ ಹೇಳಿರದ ನೂರಾರು ಮಾತು
ನೀ ಕೇಳಬೇಕು ಜತೆಯಲ್ಲಿ ಕುಳಿತು
ಒಂದಿಷ್ಟು ಮುನಿಸು ಒಂದಷ್ಟು ಒಲವು
ನೀ ತೋರಬೇಕು ಜಗವೆಲ್ಲ ಮರೆತು!
ಅಮಿತ್ ಭಟ್
Facebook ಕಾಮೆಂಟ್ಸ್