X

ಕಳ್ಳರ ಸಂತೆ

 ಉದ್ಯೋಗ ಖಾತ್ರಿ  ಕೊಳ್ಳೆ ಹೊಡೆದರು ರಾತ್ರೋ ರಾತ್ರಿ

ಕಂಟ್ರಾಕ್ಟರ್ ಮೆಂಬರ್ ಗಳು ಬಲು ಛತ್ರಿ

ಚೆಂದಿದ್ದ ರೋಡ್ ನ ಕೆರೆದರು ದಿನ ಪೂರ್ತಿ

ಕಾರ್ಯದರ್ಶಿ ಇಂಜಿನಿಯರ್ ಗೆ ಕಾರು ಬಾರು ಖಾತ್ರಿ

ತಹಸಿಲ್ದಾರ್, ಎಂ ಎಲ್ ಎ  ಗೊ ಕಳಿಸಿದರು ಬುತ್ತಿ ||

ಶೋ ಕೊಡಲು ಬರ್ತಾರೆ ಜನನಾಯಕರು

ಹೇಳ್ತಾರೆ ರೈತರ ನಾಯಕ ನಾನೆಂದು

ಇವ್ರು ಬರೋದು ಅ ರೈತ ಸತ್ತಾಗ ಮಾತ್ರ

ಅಲ್ಲೂ  ಬೊಳ್ಳು ಬರವಸೆಗಳ ಮಹಾಪೂರ

ತಾಕತ್ತಿದ್ದರೆ ಕೊಡಲಿ ಬದುಕಿರುವಾಗಲೇ ಶಕ್ತಿ ||

ಸಣ್ಣ ಸರ್ಟಿಫಿಕೇಟ್ ಗೆ  ತಾಲ್ಲೂಕ್  ಆಫೀಸ್ಗೆ ಹೋದ್ರೆ

ಇವರ್ ಮೊದಲು ನೋಡೋದ್ ನಮ್ ಜೇಬು

ಅದರಾದರ ಮೇಲೆ ನಮ್ ಕೆಲಸ, ಜೇಬು ತೂತಿದ್ದರೆ ಕಷ್ಟ

ಸಂಬಳ ತಕೊಳ್ತಾರೆ ತಿಂಗಳಿಗೊಮ್ಮೆ , ಅದ್ ಇವರಿಗ್ ಲೆಕ್ಕಕ್ಕಿಲ್ಲ

ದಿನಾ ದಿನಾ ಬರುತ್ತಲ್ವ ಬಡವರ ಕಾಸು ||

ನೀವ್ ಇವರಲ್ಲ ಬಿಡಿ ನೀವ್ ತುಂಬಾ ಒಳ್ಳೇವ್ರು

  ಮಂಜುನಾಥ್ ರಾಮಚಂದ್ರಪ್ಪ

           ಹುಲಿಕುಂಟೆ

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post