X

ಬಾ ಮಳೆಯೇ ಬಾ…

ಬಸಿರೆಲೆ ಸಿಡಿದು
ಹಳದಿಯಾದ ಅಡಿಕೆ ಮರ ,
ಹೂ ಬಿಟ್ಟು ತಾಯಿಯಾಗದ
ಮಾವಿನ ಮರ,
ಏದುಸಿರು ಚೆಲ್ಲಿ ತೇಲುವ
ತೋಡಿನ ಸರು ಮೀನು,
ಪೊರೆ ಕಳಚಿ ನಗ್ನವಾದರೂ
ಸೆಕೆ ತಾಳದ ನಾಗರಹಾವು,
ಬೆವರಿ ಬೆಂಡಾದ
ಪಾರಿವಾಳದ ಟೊಳ್ಳು ರೆಕ್ಕೆಗಳು,
ಜೊತೆಗೆ
ಸಿರಿ-ಮುಡಿ ಕಳಚಿ,
ಬೆಂಡೋಲೆ ಕಿವಿಯ ಹರಿಸಿಕೊಂಡು  ಭೂಮಿಕಾ,
ಮತ್ತೆ ಮತ್ತೆ ಕಾಯುತ್ತಿದ್ದಾಳೆ,
ಕಾದು ಕಾದು ಅವಿಯಾಗುತ್ತಿದ್ದಾಳೆ,
ಯಾವಾಗ
ಮೇಘರಾಜ ಮಳೆಯ ಹೊತ್ತು ತರುವನೆಂದು ….!!!!!

Facebook ಕಾಮೆಂಟ್ಸ್

Bharatesha Alasandemajalu: ನಾನೊಬ್ಬ ಹೆಮ್ಮೆಯ ಹ್ಯಾಮ್ - VU3NNV ಕರೆ ಸಂಕೇತ , ರೇಡಿಯೋ ಕೇಳೋದು , ಊರೂರು ಸುತ್ತೋದು , ಬೆಟ್ಟ ಹತ್ತುವುದು , ಚಿತ್ರ ಸೆರೆಹಿಡಿಯುವುದು, ಪುಟಾಣಿ ಮಕ್ಕಳೊಂದಿಗೆ ಆಡೋದು, ಪ್ರಾಯದವರೊಂದಿಗೆ ಹರಟೋದು, ಮತ್ತೆ ತಲೆ ತಿನ್ನೋದು ಇವೆಲ್ಲ ಅಂದ್ರೆ ತುಂಬಾ ಇಷ್ಟ... ಕುಡ್ಲದ ಪುತ್ತೂರಿನವ , ನನ್ನ ತುಳುನಾಡು, ನನ್ನ ಕನ್ನಡ , ನನ್ನ ಭಾರತವನ್ನು ಒಂದಿಚು ಬಿಟ್ಟು ಕೊಡುವವನಲ್ಲ, ನಾಡು , ನುಡಿ , ದೇಶದ ಬಗೆಗೆ ಗರ್ವ , ಅಹಂಕಾರ , ಸ್ವಾರ್ಥಿ ನಾನು . ಯಾಕೋ ಓದಿದ ತಪ್ಪಿಗೆ ದೂರದ ಮಸ್ಕಟ್ ನಲ್ಲಿ ಯಾಂತ್ರಿಕ ತಂತ್ರಜ್ಞನಾಗಿ ನೌಕರಿ.... ಒಟ್ಟಾರೆ ಪಿರಿಪಿರಿ ಜನ !!
Related Post