X

ಮಮತಾ ಮುಲ್ಲಾ ಸಂಘ – ಹೊತ್ತಿ ಉರಿಯುತಿಹುದು ವಂಗ!

ಎರಡೂವರೆ ಲಕ್ಷಕ್ಕಿಂತಲೂ ಹೆಚ್ಚು ಜನ ನಡು ರಸ್ತೆಯಲ್ಲಿ ನಿಂತು ಕಿರುಚಾಡುತ್ತಿದ್ದರು. ಆಗ ತಾನೇ ಬಂದ ಬಸ್ಸಿಗೆ ಬೆಂಕಿ ಹಚ್ಚಿದರು. ಗಡಿ ಭದ್ರತಾ ಪಡೆಯ ವಾಹನವೂ ಸೇರಿ ಇಪ್ಪತ್ತೈದಕ್ಕೂ ಹೆಚ್ಚು ವಾಹನಗಳು ಮತಾಂಧತೆಯ ಕಿಚ್ಚಿಗೆ ಆಹುತಿಯಾದವು. ಅಂಗಡಿ-ಮನೆ, ಪೊಲೀಸ್ ಸ್ಟೇಷನ್ನಿಗೂ ಬೆಂಕಿಬಿತ್ತು. ಆಸ್ತಿ ಪಾಸ್ತಿಯ ಲೂಟಿಯೂ ನಡೆಯಿತು. ಇದೆಲ್ಲವೂ ಒಂದೇ ದಿನ ಕೆಲವೇ ಕ್ಷಣಗಳಲ್ಲಿ ನಡೆದು ಹೋಯಿತು. ಇದರ ಉರಿ ಪಕ್ಕದ ಗ್ರಾಮ, ಜಿಲ್ಲೆಗಳಿಗೂ ವ್ಯಾಪಿಸಿ ಕಾಡ್ಗಿಚ್ಚಿನಂತೆ ಮೊರೆಯುತ್ತಿದೆ. ಇದ್ಯಾವುದೋ ಸಿರಿಯಾದಲ್ಲಿ ಐಸಿಸ್ ಉಗ್ರರ ಆಟಾಟೋಪ ಅಥವಾ ನೈಜೀರಿಯಾದಲ್ಲಿ ಬೋಕೋ ಹರಾಮಿಗಳ ದೌರ್ಷ್ಟ್ಯ ಎಂದುಕೊಂಡರೆ ನಿಮ್ಮ ಊಹೆ ತಪ್ಪು. ಇದು ನಡೆದದ್ದು, ನಡೆಯುತ್ತಿರುವುದು ನಮ್ಮ ಭಾರತದಲ್ಲೇ. ಯಾವ ಭೂಮಿಯಿಂದ ದೇಶವನ್ನೇ ಮಾತೆಯೆಂದು ಕರೆದು ಕರಮುಗಿವ ರಾಷ್ಟ್ರಗೀತೆ ಮೊಳಗಿತ್ತೋ, ಯಾವ ರಾಜ್ಯ ಬ್ರಿಟಿಷರ ಗದಗುಟ್ಟಿಸಿ ಓಡಿಸಿದ ನಾಯಕನಿಗೆ ಜನ್ಮನೀಡಿತ್ತೋ ಅದೇ ಬಂಗಾಳದಲ್ಲಿ ಇಂತಹೊದೊಂದು ಉರಿ ಕಳೆದೊಂದು ವಾರದಿಂದ ದಾವಾನಲದಂತೆ ಹಬ್ಬುತ್ತಿದೆ.

ಮಾಲ್ಡಾ…ಭಾರತವನ್ನು ಬಾಂಗ್ಲಾದ ಜೊತೆ ಬೆಸೆದ ಬಂಗಾಳದ ಜಿಲ್ಲೆ! ಕೇವಲ ಭೂಪ್ರದೇಶ ಮಾತ್ರವಾಗಿದ್ದರೆ ಯಾವುದೇ ಸಮಸ್ಯೆಗಳೇ ಇರಲಿಲ್ಲ. ಅತ್ತಣ ಜನ ಇತ್ತ ಬಂದು ಭರ್ಜರಿ ವ್ಯಾಪಾರ ಮಾಡಿ ಹೋಗಲು, ಇತ್ತ ಬಂದು ರಿಕ್ಷಾ ಓಡಿಸಿ ತಮ್ಮ ಅನ್ನ ಸಂಪಾದಿಸಿಕೊಳ್ಳಲು ನೆರವಾಗುತ್ತಿರುವ ಜಿಲ್ಲೆ. ಮನೆಗೆ ಬಂದ ಶತ್ರುವಿಗೂ ಹೊಟ್ಟೆ ತುಂಬಾ ಉಣಬಡಿಸುವ ಗುಣಗ್ರಾಹೀ ದೇಶದಲ್ಲಿ ಅನ್ನ ಸಂಪಾದನೆಗೆ ಯಾವ ಅಡ್ಡಿ ಬಂದೀತು? ಆದರೆ ಬಂದ ಜನ ಸುಮ್ಮನುಳಿಯಬೇಕಲ್ಲ! ವ್ಯಾಪಾರದ ಜೊತೆಗೆ ಬಂದದ್ದು ನಕಲಿ ನೋಟಿನ ಮೂಟೆ! ಬಂದವರು ಎಂದಿನಂತೆ ತಮ್ಮ ಸುತ್ತ ಕಟ್ಟಿಕೊಂಡದ್ದು ಮತೀಯ ಕೋಟೆ! ನುಗ್ಗಿದವರು-ನುಗ್ಗುತ್ತಿರುವವರು ಸೇರಿ ಐವತ್ತು ಪ್ರತಿಶತಕ್ಕೂ ಅಧಿಕ ಮುಸ್ಲಿಂ ಜನಸಂಖ್ಯೆ ಇರುವ ಮಾಲ್ಡಾದಲ್ಲಿ ಲೂಟಿ-ದರೋಡೆ, ಮಕ್ಕಳ ಹತ್ಯೆ, ಹಿಂದೂಗಳ ಮೇಲಿನ ಅತ್ಯಾಚಾರ, ಕಳ್ಳಸಾಗಣೆ, ಬಾಂಬು ಸ್ಫೋಟಗಳೆಲ್ಲಾ ಮಾಮೂಲು ಸುದ್ದಿ. ಇದು ಕಚ್ಛಾ ಬಾಂಬ್ ತಯಾರಿಸುವವರ ಅಡ್ಡೆಯೂ ಹೌದು. ಮನೆಯಲ್ಲೇ ಹೆಂಡತಿ ಮಕ್ಕಳ ಸಹಕಾರದಿಂದ ಬಾಂಬ್ ತಯಾರಿಸಿ ಜಾತ್ರೆ ಗದ್ದೆಯಲ್ಲೋ, ರೈಲಿನಡಿಯೋ, ಗಡಿಭದ್ರತಾಪಡೆಯ ಮೇಲೋ ದಾಳಿ ಮಾಡುವ “ತಂತ್ರಜ್ಞಾನಿ”ಗಳಿಗೇನೂ ಇಲ್ಲಿ ಬರಗಾಲವಿಲ್ಲ.

ನಕಲಿ ನೋಟು ಚಲಾವಣೆಯ ಮೂಲ ಇರುವುದು ಈ ಮಾಲ್ಡಾದಲ್ಲೇ. ಪಾಕಿಸ್ತಾನದ ಮುಜಾಫರಬಾದಿನಲ್ಲಿ ಮುದ್ರಣಗೊಂಡ ನಕಲಿ ನೋಟುಗಳನ್ನು ಕರಾಚಿ ವಿಮಾನ ನಿಲ್ದಾಣದ ಮೂಲಕ ಬಾಂಗ್ಲಾದೇಶಕ್ಕೆ ರವಾನಿಸಲಾಗುತ್ತದೆ. ಬಾಂಗ್ಲಾದಿಂದ ಅಕ್ರಮವಾಗಿ ಗಡಿಯೊಳಕ್ಕೆ ನುಸುಳುವವರು ಹಾಗೂ ಕೆಲಸ ಅರಸಿ ಭಾರತಕ್ಕೆ ತೆರಳುವವರ ಮೂಲಕ ನಕಲಿ ನೋಟುಗಳ ಕಂತೆಗಳನ್ನು ಮಾಲ್ಡಾ ಜಿಲ್ಲೆಗೆ ತಲುಪುವಂತೆ ನೋಡಿಕೊಳ್ಳಲಾಗುತ್ತದೆ. ಮಾಲ್ಡಾದಲ್ಲಿ ನಕಲಿ ನೋಟುಗಳನ್ನು ವಿಂಗಡಿಸಿ ಅಸ್ಸಾಂ ಹಾಗೂ ದಕ್ಷಿಣ ಭಾರತಕ್ಕೆ ರವಾನಿಸಲಾಗುತ್ತದೆ. ಕಳೆದ ವರ್ಷವೇ 1500 ಕೋಟಿ ರೂಪಾಯಿ ಮೊತ್ತದ ನಕಲಿ ನೋಟು ಭಾರತದೊಳಕ್ಕೆ ಪ್ರವೇಶಿಸಿತ್ತು. ಜೂನ್’ನಲ್ಲಿ ಈ ಖದೀಮತನ ಬಯಲಾಗುವವರೆಗೂ ರಾಜಾರೋಷವಾಗಿ ನಡೆದಿತ್ತು ಈ ದಂಧೆ. ನವೆಂಬರಿನಲ್ಲಿ ಮುಂಬಯಿಯಲ್ಲಿ 550 ರೂ. ಪಡೆದು 1000 ರೂಪಾಯಿ ಖೋಟಾ ನೋಟು ವಿತರಿಸುತ್ತಿದ್ದ ಬಾಂಗ್ಲಾದೇಶೀಯನೊಬ್ಬ ಬಲೆಗೆ ಬಿದ್ದಾಗ ಇಡೀ ದೇಶದಲ್ಲಿ ಹರಡಿರುವ ಈ ವಿಷಜಾಲ ಬೆಳಕಿಗೆ ಬಂದಿತ್ತು.

ಹೀಗೆ ಸದಾ ಅಶಾಂತಿ-ಹಿಂಸೆಗಳಿಂದಲೇ ಸದ್ದು ಮಾಡುತ್ತಿದ್ದ ಮಾಲ್ಡಾ ಕಳೆದೊಂದು ವಾರದಿಂದ ಹೊತ್ತಿ ಉರಿಯುತ್ತಿದೆ. ಒಂದು ತಿಂಗಳ ಹಿಂದೆ ಅಖಿಲ ಭಾರತ ಹಿಂದೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಕಮಲೇಶ್ ತಿವಾರಿಯವರು ನೀಡಿದ ಹೇಳಿಕೆಯನ್ನು ವಿರೋಧಿಸಿ ಹೇಳಿಕೆ ನೀಡಿದ ಒಂದು ತಿಂಗಳ ಬಳಿಕ ಪ್ರತಿಭಟನೆಯನ್ನು ಮುಸಲ್ಮಾನ ಸಂಘಟನೆಯೊಂದು ಹಮ್ಮಿಕೊಂಡಿತ್ತು. ಸುಮಾರು ಎರಡೂವರೆ ಲಕ್ಷಕ್ಕೂ ಅಧಿಕ ಮುಸಲರು ಮಾರಕಾಯುಧ, ದೊಡ್ಡ ದೊಡ್ಡ ಹಸಿರು ಬಾವುಟಗಳನ್ನು ಹಿಡಿದು ರಾಷ್ಟ್ರೀಯ ಹೆದ್ದಾರಿ 34ನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡಿದ್ದರು. ಪ್ರತಿಭಟನೆ ಮಾಡುತ್ತಿದ್ದವರಲ್ಲಿ ಹೆಚ್ಚಿನವರಿಗೆ ತಿವಾರಿ ಏನು ಹೇಳಿದ್ದರೆಂದೇ ತಿಳಿದಿರಲಿಲ್ಲ. ಜಿಲ್ಲೆಯ ಮುಖ್ಯ ರಸ್ತೆಗಳನ್ನೆಲ್ಲಾ ಆವರಿಸಿಕೊಂಡು ಮಾರ್ಗ ಮಧ್ಯದಲ್ಲಿ ಸಿಕ್ಕಿದ ಬಸ್ಸಿನ ಚಾಲಕನ ಜೊತೆ ವಾಗ್ವಾದ ನಡೆಸಿ ಬಸ್ಸಿಗೆ ಬೆಂಕಿ ಹಚ್ಚಿದರು. ಅಷ್ಟರಲ್ಲೇ ಆ ದಾರಿಯಾಗಿ ಗಡಿಭದ್ರತಾ ಪಡೆಯ ವಾಹನವನ್ನೂ ಈ ಮತಾಂಧರು ಬಿಡಲಿಲ್ಲ. ಶನಿ, ದುರ್ಗಾ ದೇವಾಲಯ ಸೇರಿದಂತೆ ಹತ್ತಾರು ಹಿಂದೂ ದೇವಾಲಯಗಳನ್ನು ಸುಡಲಾಯಿತು. ಇಪ್ಪತ್ತೈದಕ್ಕು ಹೆಚ್ಚು ಹಿಂದೂಗಳ ಮನೆ, ಅಂಗಡಿಗಳು ಬೆಂಕಿಗೆ ಆಹುತಿಯಾದವು. ಕಾಲಿಯಾಚಾಕ್ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ ಅಲ್ಲಿದ್ದ ಕಡತಗಳನ್ನೆಲ್ಲಾ ಸುಟ್ಟು ಹಾಕಿದರು. ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವ ಮುನ್ನ ನರೇಂದ್ರ ಮೋದಿ ವಿರುದ್ಧ ಘೋಷಣೆಯನ್ನೂ ಕೂಗಿದ್ದರು ಈ ಪ್ರತಿಭಟನಾಕಾರರು. ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ವಾಹನಗಳು ಬೆಂಕಿಗೆ ಆಹುತಿಯಾದವು. ಮನೆಗಳನ್ನೆಲ್ಲಾ ದೋಚಲಾಯಿತು. ಹಿಂದೂ ಹುಡುಗಿಯರಿಗೆ ಕಿರುಕುಳ ನೀಡಲಾಯಿತು. ಬಿಡಿಓ ಕಛೇರಿಯಲ್ಲಿದ್ದ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಲಾಯಿತು. ಬಾಂಬೆಸೆಯಲಾಯಿತು. ರೈಲ್ವೇ ನಿಲ್ದಾಣಗಳಲ್ಲಿ, ರೈಲ್ವೇ ಪಟರಿಗಳ ಮೇಲೆ ಕೂತು ಪ್ರತಿಭಟನೆ ನಡೆಸುವಾಗ ತಡೆಯಲು ಬಂದ ಪೊಲೀಸರ ಮೇಲೆ ಹಲ್ಲೆ ನಡೆಸಲಾಯಿತು. ಇಪ್ಪತ್ತಕ್ಕೂ ಹೆಚ್ಚು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಲಾಯಿತು.

ಮಾಲ್ಡಾ ಜಿಲ್ಲೆಯ ಬಾಲಿಯಾದಂಗಾ, ಮೊದಾಬರಿ, ಡಂಗಾ, ಕಾಳಿಯಾಚಕ್ ಹಾಗೂ ಮೊಹಬ್ಬತ್ ಪುರ್ ಮೊದಲಿನಿಂದಲೂ ಭಾರತವಿರೋಧಿ ಚಟುವಟಿಕೆಯ ಕೇಂದ್ರ ಸ್ಥಾನಗಳು. ಪೊಲೀಸರಿಗೆ ದೊರಕಿದ ಸಾಕ್ಷ್ಯಾಧಾರಗಳ ಪ್ರಕಾರ ಇದೊಂದು ವ್ಯವಸ್ಥಿತ ದಂಗೆ. ತೃಣಮೂಲ ಕಾಂಗ್ರೆಸ್, ಕಾಂಗ್ರೆಸ್ ಹಾಗೂ ಕಮ್ಯೂನಿಸ್ಟ್ ಪಕ್ಷಗಳ ನೇತಾರರು ಸೇರಿಕೊಂಡು ಹಿಂದೂಗಳ ಮೇಲೆ ಹಾಗೂ ಪೊಲೀಸ್-ಭದ್ರತಾ ಪಡೆಯ ಮೇಲೆ ದಾಳಿ ನಡೆಸಲು ನಡೆಸಿದ ವ್ಯವಸ್ಥಿತ ಪಿತೂರಿ. ಕಾಳಿಯಾಚಕ್ ಪೊಲೀಸ್ ಠಾಣೆಯನ್ನು ಸುಡುವಾಗ ದಂಗೆಕೋರರು ಮೊದಲು ಬೆಂಕಿ ಇಕ್ಕಿದ್ದು ಅಪರಾಧಗಳ ಪಟ್ಟಿ ಇರುವ ಮಹತ್ವದ ಕಡತಗಳಿರುವ ಜಾಗಕ್ಕೆ! ಇದಕ್ಕೆ ಕಾರಣವೂ ಇಲ್ಲದಿಲ್ಲ. ಜಿಲ್ಲಾ ಪೊಲೀಸ್ ಗಡಿ ಭದ್ರತಾ ಪಡೆಯ ನೆರವಿನಿಂದ ನಕಲಿ ನೋಟು ದಂಧೆ, ಕಳ್ಳ ಸಾಗಣೆ, ಅಕ್ರಮ ನುಸುಳುವಿಕೆ, ಬಾಂಬ್ ತಯಾರಿಕೆಗೆ ಕಡಿವಾಣ ಹಾಕಿತ್ತು. ಇದರಲ್ಲಿ ತೊಡಗಿಸಿಕೊಂಡವರ ಪಟ್ತಿಯೊಂದನ್ನೂ ತಯಾರಿಸಲಾಗಿತ್ತು. ಹೀಗಾಗಿ ಕಳೆದೊಂದು ವರ್ಷದಿಂದ ಜಿಲ್ಲೆಯಲ್ಲಿ ಶಾಂತಿ-ಸುವ್ಯವಸ್ಥೆ ನೆಲೆಸಿತ್ತು. ತಮ್ಮ ಆದಾಯ ಹಾಗೂ ಮತಬ್ಯಾಂಕಿಗೆ ಪೆಟ್ಟುಬೀಳುತ್ತಿರುವುದನ್ನು ಮನಗಂಡ ನೇತಾರರು ಇಂತಹುದೊಂದು ವ್ಯವಸ್ಥಿತ ಷಡ್ಯಂತ್ರ ಹೆಣೆದರು. ಮುಸ್ಲಿಮರು 50% ಗಿಂತ ಜಾಸ್ತಿಯಾದರೆ ಏನಾಗುತ್ತೆ ಎನ್ನುವುದಕ್ಕೆ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆ ಜ್ವಲಂತ ನಿದರ್ಶನ!

ಒಂದು ವಾರದಿಂದ ಮಾಲ್ಡಾ ಹಾಗೂ ಅದರ ಸುತ್ತಲಿನ ನಾಲ್ಕು ಜಿಲ್ಲೆಗಳು ಸುಡುತ್ತಿದ್ದರೆ ಮಾಧ್ಯಮಗಳು ಪಠಾಣ್ ಕೋಟ್ ದಾಳಿಯ ನೆಪ ಹೂಡಿ ನರೇಂದ್ರಮೋದಿಯವರನ್ನು ಹಣಿಯುವುದರಲ್ಲಿ ವ್ಯಸ್ತವಾಗಿದ್ದವು. ಝೀ ಸುದ್ದಿ ವಾಹಿನಿಯೊಂದನ್ನು ಬಿಟ್ಟರೆ ಉಳಿದವರಿಗೆಲ್ಲಾ ಮಾಲ್ಡಾ ನೆನಪಾದದ್ದು ಸುಟ್ಟುರಿದ ಮೇಲೆಯೇ. ದಾದ್ರಿ ಘಟನೆಯಾದ ತಕ್ಷಣ ಅಲ್ಲಿಗೆ ಓಡಿದ್ದ ಯಾವ ರಾಜಕೀಯ ನೇತಾರನೂ ಬಂಗಾಳಕ್ಕೆ ಕಾಲಿಡಲಿಲ್ಲ. ದಾದ್ರಿ ಘಟನೆಯನ್ನು ಅಸ್ತ್ರವಾಗಿರಿಸಿ ಸರಕಾರವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಮುಜುಗುರ ಅನುಭವಿಸುವಂತೆ ಮಾಡಿದ ಯಾವುದೇ ಸುದ್ದಿ ಮಾರಾಟಗಾರರು ಮಾಲ್ಡಾ ಹೊತ್ತಿ ಉರಿಯುತ್ತಿರುವ ಬಗ್ಗೆ ಕನಿಷ್ಠ ಟ್ವೀಟೂ ಮಾಡಲಿಲ್ಲ! ತಮ್ಮ ಐಷಾರಾಮಿ ಜೀವನಕ್ಕೆ ಬೆಂಕಿ ಬಿದ್ದಾಗ ದಾದ್ರಿಯ ನೆಪ ಹೂಡಿ ಅಸಹಿಷ್ಣುತೆಯ ನಾಟಕವಾಡಿದ ಪ್ರಶಸ್ತಿ ವಾಪಸಿಗರ ಪ್ರಶಸ್ತಿಗಳೆಲ್ಲಾ ಮಾಲ್ಡಾಕ್ಕೆ ಬರುವಾಗ ಬರಿದಾಗಿದ್ದವು.

ಲಾಸ್ ವೇಗಾಸ್’ನಲ್ಲಿ ನಡೆವ ಘಟನೆಗಳಾವುವು ಹೊರಜಗತ್ತಿಗೆ ತಿಳಿಯುವುದಿಲ್ಲ ಎನ್ನುವ ಮಾತಿದೆ. ಅದೇ ರೀತಿ ಬಂಗಾಳದಲ್ಲಿ ನಡೆಯುವ ಘಟನೆಗಳು ಮಮತಾರ ಮುಲ್ಲಾ ಮಮತೆಯ ಅಡಿಯಲ್ಲಿ ಹೂತುಹೋಗುತ್ತಿವೆ. ಲಾಲೂವಿನ ಬಿಹಾರ “ಜಂಗಲ್ ರಾಜ್” ಆದರೆ ಮಮತಾರ ಬಂಗಾಳ “ದಂಗಾ ರಾಜ್” ಆಗಿ ಬದಲಾಗಿದೆ. ತೂಕ್ತುಕಿ ಮಂಡಲ್ ರೇಪ್ ಜಿಹಾದ್ ಪ್ರಕರಣವನ್ನು ಸಂಘದ ಗಿಮಿಕ್ ಎಂದು ಬಿಂಬಿಸಹೊರಟ ತೃಣಮೂಲ ಕಾಂಗ್ರೆಸ್ಸಿನದ್ದು ಪ್ರತಿದಿನ-ಪ್ರತಿಕ್ಷಣ ಮುಸ್ಲಿಂ ಓಲೈಕೆ ರಾಜಕಾರಣವೇ. ಮಹಿಳಾ ಫೂಟ್ ಬಾಲ್ ಟೂರ್ನಿ ನಡೆಸದಂತೆ ಫತ್ವಾ ಹೊರಡಿಸಿದ ಪ್ರಕರಣವಾಗಲೀ, ತಸ್ಲಿಮಾ ನಸ್ರೀನ್ ಮೇಲಿನ ಹಲ್ಲೆ ನಡೆಸಿದ, ಫತ್ವಾ ಹೊರಡಿಸಿದ ಪ್ರಕರಣವಾಗಲೀ ಮಮತಾರ ಮುಸ್ಲಿಂ ಮಮತೆಯನ್ನು ರಾಜಾರೋಷವಾಗಿ ತೋರಿಸಿದವು. ಜೊತೆಗೆ ಶಾರದಾ ಚಿಟ್ ಫಂಡ್ ಹಗರಣದಲ್ಲಿ ಭಯೋತ್ಪಾದಕ ಸಂಘಟನೆಗೆ ಮಮತಾರ ಪಕ್ಷದಿಂದ ಹರಿದ ಹಣದ ಹೊಳೆ ಭಾರತದ ನ್ಯಾಯ ವ್ಯವಸ್ಥೆ ಗಟ್ಟಿಯಾಗಿದ್ದಿದ್ದರೆ ಮಮತಾರನ್ನು ಕಂಬಿಗಳ ಹಿಂದೆ ನಿಲ್ಲಿಸುತ್ತಿತ್ತು. ವಿಜಯದಶಮಿ ಹಾಗೂ ಈದ್ ಒಂದೇ ದಿನ ಬಂತೆಂದು ವಿಜಯದಶಮಿಯನ್ನೇ ಒಂದು ದಿನ ಮುಂದೂಡಿದ ಮಮತಾ ಹಿಂದೂ ಹೌದೋ ಎಂದು ಎಲ್ಲರೂ ಪ್ರಶ್ನಿಸುವಂತಾಗಿತ್ತು. ಕಳೆದ ಮೂರು ವರ್ಷದಿಂದ ಬಂಗಾಳದಲ್ಲಿ ಹಿಂದೂಗಳು ದುರ್ಗಾಪೂಜೆ ಆಚರಿಸುವಂತಿಲ್ಲ. “ಪ್ರಧಾನಿಯವರಿಗೆ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕವಿದೆ” ಎಂಬ ಅರ್ಥಹೀನ ಆರೋಪ ಮಾಡುವ ಇದ್ರಿಸ್ ಆಲಿಯಂಥ ಸಂಸದ, ಮನೆಯಲ್ಲೇ ಬಾಂಬು ತಯಾರಿಸುವ, ಭಯೋತ್ಪಾದಕರಿಗೆ ಬಹಿರಂಗವಾಗಿಯೇ ಬೆಂಬಲ ನೀಡುವ, ನುಸುಳುಕೋರರಿಗೆ, ಕಳ್ಳಸಾಗಣಿಕೆಗಾರರಿಕೆ, ನಕಲಿನೋಟುಜಾಲಕ್ಕೆ ಸುವ್ಯವಸ್ಥೆ ಒದಗಿಸಿಕೊಡುವ ಸಂಸದರನ್ನು ಹೊಂದಿರುವ ತೃಣಮೂಲ ಕಾಂಗ್ರೆಸನ ಆಡಳಿತ ಕಮ್ಯೂನಿಸ್ಟ್ ಪಕ್ಷದ ಮುಂದುವರಿದ ಅಧ್ಯಾಯದಂತಿದೆ. ಬಂಗಾಳದ ತಲಕುಪುರದ ಮದ್ರಸಾವೊಂದರಲ್ಲಿ ಶಿಕ್ಷಕ ಮಾಸೂಮ್ ಅಖ್ತರ್ ರಾಷ್ಟ್ರಗೀತೆ ಹೇಳಿಕೊಟ್ಟ ಎಂಬ ಒಂದೇ ಒಂದು ಕಾರಣಕ್ಕೆ ತನ್ನದೇ ಬಾಂಧವರಿಂದ ಹಿಗ್ಗಾಮುಗ್ಗ ಹೊಡೆಸಿಕೊಂಡು ಮನೆಯಲ್ಲಿ ಮಲಗಬೇಕಾಯ್ತು. ಆತ ರಕ್ಷಣೆಗಾಗಿ ಪೊಲೀಸರನ್ನು ಬೇಡಿದರೆ ಪೊಲೀಸರು ಮುಸಲರಿಗೆ ಹೆದರಿ ತಮ್ಮಿಂದ ರಕ್ಷಣೆ ನೀಡಲಾಗದು ಎನ್ನುವ ಲಿಖಿತ “ಭರವಸೆ” ನೀಡಿದ್ದಾರೆ. ಒಬ್ಬ ಮುಸ್ಲಿಮನ ಪರಿಸ್ಥಿತಿಯೇ ಹೀಗಾದರೆ ಹಿಂದೂಗಳ ಪರಿಸ್ಥಿತಿ ಹೇಗಿರಬಹುದು?

ವಂದೇ ಮಾತರಂ ಮಂತ್ರ ಸ್ಪುರಿಸಿದ, ರಾಮಕೃಷ್ಣ, ಅರವಿಂದ, ವಿವೇಕಾನಂದ, ಬಂಕಿಮ, ಜತೀನ್, ಸುಭಾಷ್ ಜನಿಸಿದ, ಬ್ರಿಟಿಷರ ಅಹಂಗೆ ಕೊಳ್ಳಿ ಇಟ್ಟ, ಅಸಂಖ್ಯ ಕ್ರಾಂತಿ ವೀರರಿಗೆ ಜನ್ಮ ಕೊಟ್ಟ ನೆಲ ಇಂದು ದೆವ್ವಗಳ ಬೀಡಾಗಿದೆ. ಮಮತಾರ ಮುಲ್ಲಾ ಸಂಘದಿಂದ ವಂಗ ಹೊತ್ತಿ ಉರಿಯುತ್ತಿದೆ. ಈ ಉರಿ ದೇಶವನ್ನಿಡೀ ವ್ಯಾಪಿಸಿಕೊಳ್ಳುವ ದಿನ ದೂರವಿಲ್ಲ. ರಾಜಕೀಯ ಪಕ್ಷಗಳ ಓಲೈಕೆ ರಾಜಕಾರಣಕ್ಕೆ ಬಲಿಯಾಗುತ್ತಿರುವುದು ದೇಶ. ಹೊರಗಿನಿಂದ ಬಂದು ದಾಳಿ ಮಾಡುವವರನ್ನು ಮಸಣಕ್ಕಟ್ಟುವ ಜೊತೆಗೆ ಒಳಗಿನ ಶತ್ರುಗಳಿಗೊಂದು ಗತಿ ತೋರಿಸದಿದ್ದರೆ ಭಾರತದ ಸ್ಥಿತಿ ಅಧೋಗತಿ! “ಸೆಕ್ಯುಲರ್” ಭಾವವನ್ನು ಬಿಟ್ಟು ನಿರ್ದಾಕ್ಷಿಣ್ಯವಾಗಿ “ಭಯೋತ್ಪಾದನೆಯ ಮೂಲ”ವನ್ನು ಹೊಸಕಿ ಹಾಕದಿದ್ದರೆ ಯಾವ ಅಭಿವೃದ್ಧಿಯೂ ದೇಶವನ್ನು ಉಳಿಸಲಾರದು.

Facebook ಕಾಮೆಂಟ್ಸ್

Rajesh Rao: ವೃತ್ತಿ: ವಿ ಎಲ್ ಎಸ್ ಐ ಇಂಜಿನಿಯರ್ ಪ್ರವೃತ್ತಿ: ಇತಿಹಾಸ/ಪ್ರಚಲಿತ ವಿದ್ಯಮಾನ, ಕಥೆ-ಕವನ ಬರವಣಿಗೆ
Related Post