X

ಒಲವಿಗೊಂದು ಮನವಿ…

ಮಾತನಾಡು ನನ್ನ ಒಲವೇ ದಿನ,

ನಿನ್ನ ಮಾತು ಕೇಳಲೆಂದೇ ಬಂದೆ ನಾ;

ಇನ್ನೇತಕೆ ಬರಿಯ ಮೌನ…?

ನಿನ್ನ ಮಾತಲ್ಲಿನ ಪದಗಳ ಪೋಣಿಸಿ

ಕವಿತೆಯ ಹೆಣೆಯುವ ಒಬ್ಬ ಕವಿಯು ನಾ.

 

ನೀ ನನ್ನ ಕಣ್ಣಲ್ಲಿ ಒಂದು ಮುಗಿಯದ ಸವಿಗನಸು!!!

ನಿನ್ನ ಕನಸಿನ ಲೋಕಕ್ಕೆ ನನ್ನನ್ನೂ ಪರಿಚಯಿಸು.

 

ನೀನು ನಗುವ ಸಮಯದಲಿ,

ಅರಳೊ ಕೆನ್ನೆ ಗುಳಿಯಲ್ಲಿ

ಬಿದ್ದ ಒಬ್ಬ ಆಗಂತುಕ ನಾನು!!!

ಕೈಯ ಚಾಚಿ ಎಬ್ಬಿಸಿ, ವಿರಹ ಬೇನೆ ತಗ್ಗಿಸಿ

ದೂರ ಮಾಡು ನನ್ನಾತಂಕವನು.

ನಿನ್ನ ಕಣ್ಣಿನ ಮಿಂಚು ನೋಟವು

ಮನದಿ ಗುನುಗಿದೆ ಪ್ರೇಮಗೀತೆಯ

 

ನಾನಂತೂ ಅಲೆಯುತಿಹೆ, ನಿನ್ನನ್ನೇ ಅನುಸರಿಸಿ

ಬಾಳ ರಾಜ್ಯದಲಿ, ನೀನಾಗು ನನ್ನರಸಿ

 

ನನ್ನಲಿರದ ನಾನೀಗ ನಿನ್ನಲಿರುವ ನನ್ನನ್ನು

ಅರಸುತಿರುವ ಪರಿಯೇಕೋ ಹೊಸತು!

ನನ್ನ ಭಾವಲೋಕದಲಿ ಅರಿಯಲಾರೆ ಬೇರೇನೂ,

ನಿನ್ನ ಕಣ್ಣ ಸನ್ನೆಗಳ ಹೊರತು.

ನಿನ್ನ ಅದರದ ಸವಿಯ ಕಡಲಲಿ

ತೇಲುವಾಸೆಯು ನನ್ನ ಹೆಸರಿಗೆ!

 

ನೀ ಕೂಗು ನನ್ಹೆಸರ, ನಿನ್ನೊಲವಿನ ಸ್ವರದಲ್ಲಿ

ಓಗೊಡುವೆ ಪ್ರತಿ ಕರೆಗೂ, ಬಿಡುವಿರಲಿ ಇರದಿರಲಿ.

Facebook ಕಾಮೆಂಟ್ಸ್

Anoop Gunaga: ಪ್ರಸ್ತುತ ಕೋಟೇಶ್ವರದ ನಿವಾಸಿ. ಸಾಫ್ಟ್ ವೇರ್ ಇಂಜಿನಿಯರಿಂಗ್ ಉದ್ಯೋಗ. ಬರವಣಿಗೆ ಮನಸಿಗೆ ಮೆಚ್ಚು. ಯಕ್ಷಗಾನ, ಸಿನಿಮಾ, ಕನ್ನಡ ಸಾಹಿತ್ಯಾಧ್ಯಯನದ ಹುಚ್ಚು. ಪೆನ್ಸಿಲ್ ಸ್ಕೆಚ್-ಹವ್ಯಾಸ. ಶಿವರಾಮ ಕಾರಂತರ ಕೃತಿಗಳಿಂದ ಪ್ರಭಾವಿತ, ಜಯಂತ ಕಾಯ್ಕಿಣಿಯವರ ಸಾಹಿತ್ಯದೆಡೆಗೆ ಮೋಹಿತ. ಮೌನರಾಗಕ್ಕೆ ಶಬ್ದಗಳ ಪೋಣಿಸುವ, ಕನಸುಗಳನ್ನು ಕಾವ್ಯವಾಗಿಸುವ, ಭಾವಗಳಿಗೆ ಬಣ್ಣ ಬಳಿಯುವ ಒಬ್ಬ ಸಂಭಾವಿತ
Related Post