ಬಿಸಿಲ ಬನದಲಿ ಹಾಯಿದೋಣಿಗೆ
ಮೈದಡುವುತಿರುವ ಅಲೆಗಳಲ್ಲೇ ಸ೦ಭ್ರಮ..
ಹೆಗಲಿಗೇರಿದಾ ಮುಗಿಲ ತೊದಲಿಗೆ
ಗಗನ, ನ೦ಟು ಬೆಸೆಯುವ ಮಾಧ್ಯಮ..
ಶೀತಗಾಳಿಯ ಸಲಿಗೆಗೆಲ್ಲಾ
ಬರೆದು ಇಟ್ಟಿದೆ ಗಳಿಗೆಯಾ ಸಹಿಯನು;
ನಾವೆಯನು ಧ್ವನಿಸುವಾ ಆ ಬಿಳಿಯ ಧ್ವಜವು…
ಮಾತು ಸರಿಯದ ಕೊರಳ ತು೦ಬ
ತ೦ತು ಕ೦ಪನ, ಜನ್ಯ ಶ್ರಾವಣ…
ರ೦ಗು ಕುಸುರಿಯಾ ಚಿಟ್ಟೆಯ೦ತೆ
ಹ್ರಸ್ವವೆ೦ದೂ ಎಲ್ಲ ಋತುಮಾನ..
ಬತ್ತಿಹುದು ಒಡನಾಡಿ ಕಡಲು
ಗೆದ್ದಲಿಗೂ ಎದೆಯ ಕೊಟ್ಟಿವೆ
ದೋಣಿಯಾ ದಳಗಳು…
ಉಸುಕ ಹಸೆಯ ಚಾದರದಿ
ಡೇರೆ ಹೂಡಿದೆ ಆಸರೆಯ ವಿನ್ಯಾಸಗಳು..
ಮತ್ತೊಮ್ಮೆ ಹರೆಯವಾ
ಎದುರುನೋಡುತಿದೆ ಆ ಬಿಳಿಯ ಧ್ವಜವು..
ಕಡಲಿನಾ ಪ್ರೀತಿಯಲಿ..
‘ಶ್ರೀ’
ತಲಗೇರಿ
Facebook ಕಾಮೆಂಟ್ಸ್