ಮನೆಗೆ ಬೆಳಕನು ತುಂಬಿ
ಬೆಳಗುತಿದೆ ಹಣತೆಗಳು
ಊರಿನ ತುಂಬ , ದೇಶದಲ್ಲೆಲ್ಲ
ಲಕ್ಷ ಲಕ್ಷ ದೀಪಗಳು ……
ಮನೆ , ಮನದಂಗಳವನ್ನು
ಗುಡಿಸಿ , ಸಾರಿಸಿ
ರಂಗವಲ್ಲಿ ಇಟ್ಟು
ಸುತ್ತಲಿನ ಕತ್ತಲು
ದಾರಿ ತಪ್ಪಿಸದಿರಲು ಹೊಸ್ತಿಲಲ್ಲಿ
ಹಣತೆಯ ದೀಪ ಹಚ್ಚಿಟ್ಟು
ಕಾಯುತಿರುವೆ ಹೂಚೆಲ್ಲಿ ನಿನಗಾಗಿ
ನಮ್ಮೊಳಗಿನ ಅಂಧಃಕ್ಕಾರವನ್ನು ಕಿತ್ತು
ಮನದಂಗಳವ ಗುಡಿಸಿ
ಕೊಳೆಯ ರಾಶಿಯ ತೊಳೆದು
ನಡೆಯೋಣ ಭವಿಷ್ಯದ ಪಥದಲ್ಲಿ
ಹೊಸ ಆಸೆಗಳ ಗಿಡನೆಟ್ಟು
ಹೊಸ ಚೈತನ್ಯ ಸ್ಫೂರ್ತಿಯಿಂದ
ಬೆಳಗು ಬೆಳಗು ಬಯಲು ತುಂಬ
ಒಲವ ತರುವ ಹೃದಯ ತುಂಬ
ಪ್ರಖರ ತರುವ ಬಿಂಬ ನೀನು
ಆದರೂ….. ,
ಮನದಲೊಳಗೆ ಕತ್ತಲೇಕೆ …..?
ಮರಳಿ ಬಾ ಜ್ಞಾನೇಶ್ವರ
ದೀಪ ಬೆಳಗಿ ಮಬ್ಬನಳಿಸಿ
ಜ್ಞಾನ ಜ್ಯೋತಿ ಮನದಲ್ಲಿರಿಸಿ
ನಿನ್ನ ಹೆಜ್ಜೆಯ ಸದ್ದಿನಿಂದಲೇ
ನನ್ನ ಹೃದಯದಲ್ಲಿ
ಸಂತಸದ ಹಣತೆ ಬೆಳಗೀತು !
ಈ ಹಬ್ಬದ ರಾತ್ರಿಯಲ್ಲಿ
ತನ್ನೊಡಲ ಕಿಡಿಯಿಂದ
ಸಾಲು ಸಾಲು ಹಣತೆಗಳೊಡಲ ಬೆಳಗಿಸುವ
ಕಿರು ಹಣತೆ
ಮನ ಬೆಳಗಿಸಬೇಕು !
Facebook ಕಾಮೆಂಟ್ಸ್