೧. ಓದಿದ್ದು ಡಯೊಡ್ ,ಟ್ರಾನ್ಸಿಸ್ಟರ್ ,ಸರ್ಕ್ಯುಟು
ಕೆಲಸ ಮಾಡೋದು ಜಾವ, ಪಿಎಚ್ ಪಿ, ಡಾಟ್ ನೆಟು
ಯಾಕಾದ್ರು ಇಂಜಿನಿಯರಿಂಗ್ ಮಾಡಿದ್ನೋ ಅನ್ನೋ ಡೌಟು
ಐಟಿ ಸಾಕು, ಗವರ್ಮೆಂಟ್ ಕೆಲಸ ಬೇಕು ಅನ್ನೋ ಥಾಟು
ಅವನೇ ನಮ್ಮ ಗ್ರೇಟು
– ಐಟಿತಜ್ಞ
೨.ಕಸ್ಟಮರ್ ಗೆ ಕನ್ಫ್ಯೂಸ್ ಮಾಡಿಸಿ
ಡೆವೆಲಪರ್ ಗೆ ದಿಗಿಲು ಬಡಿಸಿ
ಮ್ಯಾನೇಜರ್ ಗೆ ಬಕೆಟ್ ಹಿಡಿದು
ಆನ್ ಸೈಟ್ ಹೋಗಿ ಹಾರಡೊನ
‘ಟೆಸ್ಟರ್’ ಎನ್ನೆಂದ
– ಐಟಿತಜ್ಞ
೩.ಹೆತ್ತವರನ್ನು ಅನಾಥಾಶ್ರಮದಲ್ಲಿ ಬಿಟ್ಟು
ಹೊತ್ತ ಭೂಮಿಯನ್ನೇ ಮರೆತು
ಆತ್ಮಾಭಿಮಾನವನ್ನೂ ದುಡ್ಡಿಗೆ ಬಲಿಕೊಟ್ಟು
ಪರದೇಶದಲ್ಲಿ ಪರದೇಸಿಯಾದರೂ ಅಲ್ಲೇ ಬೀಡುಬಿಟ್ಟು
ವರ್ಷಕ್ಕೆ ಒಮ್ಮೆ ಗಾಂಧಿಟೊಪ್ಪಿಗೆ ತೊಟ್ಟು
ಮಾತೃಭೂಮಿಗೆ ಮರಳುವರನ್ನು ಮರುಳರೆನ್ನೆಂದ
– ಐಟಿತಜ್ಞ
೪. ಎಂಜಿನಿಯರ್ ಎಂಬುವನು ಗರ್ವದಿಂದಾದವನೇ ?
ಸೆಮಿಸ್ಟರ್ ಗೊಂದು ಸಬ್ಜೆಕ್ಟ್ ಉಳಿಸಿ
ಕೊನೆ ಸೆಮಿಸ್ಟರ್ ಗೆ ಎಲ್ಲವೂ ಗುಡಿಸಿ
ಕ್ಯಾಂಪಸ್ಸಿನಲ್ಲೆ ನೌಕರಿ ಗಳಿಸಿ
ಜೊಯಿನಿಂಗ್ ಡೇಟ್ ಗೆ ಕಾಯುವನೇ
– ಐಟಿತಜ್ಞ
Facebook ಕಾಮೆಂಟ್ಸ್