X

‘ಹನಿ ಬರಹ’ – ೫ ಹನಿಗವನಗಳ ಸಂಗ್ರಹ

ಕಳ್ಳಿ ಇವಳು

ಕದಿಯಬಂದಿಹಳಿವಳು

ನನ್ನ ಕನಸುಗಳ.

ಅವಳಿಗೇನು ಗೊತ್ತು?

ನನ್ನ ಕನಸುಗಳಲೆಲ್ಲ

ಅವಳೇ ಇರುವವಳೆಂದು!

ನಾ ನಗುತ್ತಿದ್ದೆ;

ಅವಳನೇ ಅವಳು

ಕದಿಯಬಂದಿಹ ಪರಿಯ ಕಂಡು

 

ಅರಿಯದ ನಗು

ಗೊತ್ತಿಲ್ಲ ಏಕೋ

ಅರಿವಿಲ್ಲದಂತೆಯೇ

ನಗುವೊಂದು ಮೂಡುವುದು

ಅವಳ ಕಂಡಾಗ

ಎದೆಬಡಿತ ಏರುವುದು;

ಅವಳು ಕೂಡ ನನ್ನ ಕಂಡು, ನಕ್ಕು

ಗೆಳತಿಯ ಹಿಂದೆ ಬಚ್ಚಿಕೊಂಡಾಗ.

 

ಕಾಡಿಗೆ

ಅವಳ ಕಣ್ಣಿನ ಕಾಡಿಗೆ ಕಾಡುತಿದೆ,

ಪ್ರತಿಬಾರಿ ಕಣ್ಮುಚ್ಚಿದಾಗಲೆಲ್ಲ.

ಕವಿಯಾಗುವೆ ಅವಳ ಕಂಡಾಗಿನಿಂದ,

ಬರೆಯಬೇಕೆಂದೆಣಿಸಿದಾಗಲೆಲ್ಲ.

 

ಬಿಂಬ

ನನ್ನ ನಾ ಕಾಣುವ ಕನ್ನಡಿಯಲ್ಲಿ

ನನಗಿಂದು ಕಂಡಿದ್ದು ನಿನ್ನ ಬಿಂಬ!!!

ಆಮೇಲೆ ಅರಿವಾಯ್ತು;

ಕನ್ನಡಿಯಲ್ಲಲ್ಲ,

ನೀನಿದ್ದದ್ದು ನನ್ನ ಕಣ್ಣ ತುಂಬ

 

ರಸಿಕ ಶಶಿ

ಚಂದ್ರನ ಚುಂಬಿಸಬಯಸಿಹ ಅಲೆಗಳು

ನೆಗೆದಿವೆ ಬಾನೆಡೆ ಮುಖಮಾಡಿ.

ಹಾಲ್ಬೆಳಕಿನ ತೋಳಲಿ ಅಲೆಗಳ ಬಳಸಿಹ,

ಶಶಿಯೂ ಕೂಡ ಎಂಥಾ ರಸಿಕ ನೋಡಿ!!!

 

 

Facebook ಕಾಮೆಂಟ್ಸ್

Anoop Gunaga: ಪ್ರಸ್ತುತ ಕೋಟೇಶ್ವರದ ನಿವಾಸಿ. ಸಾಫ್ಟ್ ವೇರ್ ಇಂಜಿನಿಯರಿಂಗ್ ಉದ್ಯೋಗ. ಬರವಣಿಗೆ ಮನಸಿಗೆ ಮೆಚ್ಚು. ಯಕ್ಷಗಾನ, ಸಿನಿಮಾ, ಕನ್ನಡ ಸಾಹಿತ್ಯಾಧ್ಯಯನದ ಹುಚ್ಚು. ಪೆನ್ಸಿಲ್ ಸ್ಕೆಚ್-ಹವ್ಯಾಸ. ಶಿವರಾಮ ಕಾರಂತರ ಕೃತಿಗಳಿಂದ ಪ್ರಭಾವಿತ, ಜಯಂತ ಕಾಯ್ಕಿಣಿಯವರ ಸಾಹಿತ್ಯದೆಡೆಗೆ ಮೋಹಿತ. ಮೌನರಾಗಕ್ಕೆ ಶಬ್ದಗಳ ಪೋಣಿಸುವ, ಕನಸುಗಳನ್ನು ಕಾವ್ಯವಾಗಿಸುವ, ಭಾವಗಳಿಗೆ ಬಣ್ಣ ಬಳಿಯುವ ಒಬ್ಬ ಸಂಭಾವಿತ
Related Post