ಹಿಂದಿ ಚಿತ್ರ ಗೋಲ್ಮಾಲ್ ನಲ್ಲಿ ಹಾಸ್ಯಕಾರನ ಪಾತ್ರ ನಿರ್ವಹಿಸಿದ ಉತ್ಪಾಲ್ ಸಿಂಗ್ ಎಂಬುವವರನ್ನು ಪಶ್ಚಿಮ ಬಂಗಾಳ ಸರ್ಕಾರಡಿಸೆಂಬರ್ 27 1965 ರಂದು ಬಂಧಿಸಿದರು. ಪಶ್ಚಿಮ ಬಂಗಾಳ ಸರ್ಕಾರ ಇವರಿಗೆ ಹೆದರಿತ್ತು! ಕಾರಣವೇನು ಗೊತ್ತೇ?? ಉತ್ಪಾಲ್ ಸಿಂಗ್ ನಮ್ಮ ಇತಿಹಾಸ ತಿಳಿಸದ ಭಾರತ ಸ್ವಾತಂತ್ರ್ಯ ಸಂಗ್ರಾಮ ದ ಬಹುಮುಖ್ಯ ಅಧ್ಯಾಯದ ಕುರಿತು ಒಂದು ನಾಟಕವನ್ನು ಬರೆದಿದ್ದರು. ಆ ಅಧ್ಯಾಯವೇ ಭಾರತೀಯ ನೌಕಾ ದಂಗೆ.
1946ರಲ್ಲಿ ಬ್ರಿಟಿಷರು ಬಹಳ ಸಂಕಷ್ಟದಲ್ಲಿ ಸಿಲುಕಿದರು. ಭಾರತೀಯ ಸೈನಿಕರು ತಮ್ಮ ನಿಷ್ಠೆಯನ್ನು ಬದಲಿಸಿದ್ದರು, ಭಾರತೀಯ ಸೇನೆಬ್ರಿಟಿಷರ ಹಿಡಿತದಿಂದ ಕೈತಪ್ಪಿತ್ತು. 25೦ ವರ್ಷಗಳಲ್ಲಿ ಇಂತಹ ಕಠಿಣ ಪರಿಸ್ಥಿತಿ ಬ್ರಿಟಿಷರಿಗೆ ಎದುರಾಗಿರಲಿಲ್ಲ. ಯಾವುದೇ ಕ್ರಮತೆಗೆದುಕೊಳ್ಳುವ ಆಯ್ಕೆಯೂ ಬ್ರಿಟಿಷರಿಗೆ ಇರಲಿಲ್ಲ. 1945 ರಲ್ಲಿ ಸುಭಾಷ್ ಚಂದ್ರ ಬೋಸ್ ಮಡಿದರು ಎಂಬ ವರದಿ ಪ್ರಕಟವಾಯಿತು.ಸುಭಾಷರ ಕಣ್ಮರೆಯ ನಂತರ ಇಂಡಿಯನ್ ನ್ಯಾಷನಲ್ ಆರ್ಮಿ ಪತನವಾಯಿತು. ಐ. ಎನ್. ಎ ಮುಖ್ಯ ಅಧಿಕಾರಿಗಳಾದ ಷಾ ನವಾಜ್ಖಾನ್, ಪ್ರೇಮ್ ಸೆಹಗಲ್, ಗುರ್ಭಶ್ ಸಿಂಗ್ ಮುಂತಾದವರನ್ನು ಯುದ್ದ ಕೈದಿಗಳಂತೆ ಬಂಧಿಸಿ ಕೆಂಪುಕೋಟೆಯಲ್ಲಿ ವಿಚಾರಣೆಗೆಒಳಪಡಿಸಲಾಯಿತು. ಈ ಸಂದರ್ಭದಲ್ಲಿ ನಮ್ಮ ನೆಹರೂ ಮೂವರನ್ನು ಸಮರ್ಥಿಸಿಕೊಳ್ಳುವ ಕೆಲಸದಲ್ಲಿ ನಿರತರಾಗಿದ್ದರು. ಅವರೇಮಹಾತ್ಮಾ ಗಾಂಧಿ, ಅಬ್ದುಲ್ ಕಲಾಂ ಅಜಾದ್ ಮತ್ತು ಮೊಹಮ್ಮದ್ ಅಲಿ ಜಿನ್ನಾ. ಈ ನಾಲ್ಕು ಜನ ಬ್ರಿಟಿಷರೊಂದಿಗೆ ರಹಸ್ಯ ಒಪ್ಪಂದವನ್ನು ಮಾಡಿಕೊಂಡಿದ್ದರು. ಅದೇನು ಗೊತ್ತೇ? ನೇತಾಜಿ ಇನ್ನು ಬದುಕಿದ್ದಾರೆಂದು ಅನೇಕರು ನಂಬಿದ್ದರು, ನೇತಾಜಿ ಭಾರತಕ್ಕೆ ಮರಳಿದರೆ ಅವನ್ನು ನಿಮಗೆ ಒಪ್ಪಿಸುತ್ತೇವೆಂದು ಗಾಂಧಿ ಮತ್ತು ನೆಹರೂ ಬ್ರಿಟಿಷರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು.
ಐ. ಎನ್. ಎ ಅಧಿಕಾರಿಗಳ ವಿಚಾರಣೆಯನ್ನು ಸಾರ್ವಜನಿಕವಾಗಿ ನಡೆಸಲಾಯಿತು. ನೇತಾಜಿಯ ಮೇಲಿದ್ದ ಪ್ರೀತಿ, ಅನುಕಂಪ ಐ. ಎನ್.ಎ ಸೈನ್ಯದ ಸಾಹಸಗಳು ಭಾರತೀಯರಲ್ಲಿ ದೇಶಭಕ್ತಿಯ ಕಿಚ್ಚನ್ನು ಹತ್ತಿಸಿತು. ಇದರಿಂದ ಸ್ಫೂರ್ತಿಯಾದ ನೌಕಾದಳದ ನಾವಿಕರು ಸಂಪರ್ಕ ಸಾಧನಗಳ ಮೂಲಕ ಐ.ಎನ್. ಎ ಕತೆಗಳನ್ನು ಎಲ್ಲ ಸಿಬ್ಬಂದಿಗಳಿಗೂ ಮುಟ್ಟಿಸಿದರು. ನೌಕಾ ದಳದಲ್ಲಿ ಸರಿಯಾದ ಸೌಕರ್ಯಗಳಿಂದ ವಂಚಿತರಾಗಿದ್ದ ನಾವಿಕರು ಬ್ರಿಟಿಷರ ವಿರುದ್ದ ಬಂಡಾಯದ ಭಾವುಟ ಹಾರಿಸಿದರು.
ಹೀಗೆ ಭಾರತೀಯ ನೌಕಾ ದಂಗೆ ಫೆಬ್ರವರಿ 18 1946ರಂದು ಆರಂಭವಾಯಿತು. ಅದೇ ದಿನ ಸಂಜೆ ದಂಗೆಯ ಸಮಿತಿಯನ್ನು ರೂಪಿಸಲಾಯಿತು. ಎಂ. ಎಸ್ ಖಾನ್ ಮತ್ತು ಮದನ್ ಸಿಂಗ್ ಸಮಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಬಾಂಬೆಯಲ್ಲಿ ಆರಂಭವಾದ ದಂಗೆ ಕರಾಚಿ, ಕಲ್ಕತ್ತಾ, ಕೊಚ್ಚಿ ಮತ್ತು ವಿಶಾಖಪಟ್ಟಣ ಮುಂತಾದ ಕಡೆಗೆ ಹರಡಿತು. 78ಕ್ಕೂ ಹೆಚ್ಚು ನೌಕೆಗಳು, 20,೦೦೦ಕ್ಕೂ ಹೆಚ್ಚು ನಾವಿಕರು ದಂಗೆಗೆ ಸಂಪೂರ್ಣ ಬೆಂಬಲ ನೀಡಿದರು. ನೌಕಾ ದಂಗೆಯಿಂದ ಪ್ರೇರಿತರಾದ ವಾಯುಸೇನೆ ದಂಗೆಗೆ ಬೆಂಬಲ ವ್ಯಕ್ತ ಪಡಿಸಿತು. ಪೊಲೀಸರು ದಂಗೆಗೆ ಸಂಪೂರ್ಣ ಸಹಾಯ ಮಾಡಿದರು. ಭೂದಳದ ಸೈನಿಕರು ಈ ದಂಗೆಯಿಂದ ಪ್ರೇರಿತರಾಗಿ ಬ್ರಿಟಿಷರ ಆಜ್ಞೆಯನ್ನು ಪಾಲಿಸದೆ ಧಿಕ್ಕರಿಸಿದರು. ಹಲವು ನೌಕೆಗಳಲ್ಲಿ ಭಾರತೀಯ ತಿರಂಗಾ ಹಾರಿತು. ಈ ಹೋರಾಟಕ್ಕೆ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಯಿತು. ನೌಕಾ ದಳ, ವಾಯು ಸೇನೆ, ಭೂ ದಳ ಮತ್ತು ಪೊಲೀಸರು ಬ್ರಿಟಿಷರ ವಿರುದ್ದ ತಿರುಗಿ ಬಿದ್ದರು.
ದೇಶ ವಿಭಜನೆಯ ಚರ್ಚೆಯಲ್ಲಿ ಮುಳುಗಿದ್ದ ಕಾಂಗ್ರೆಸ್ ಈ ನೌಕಾ ದಂಗೆಯನ್ನು ಬೆಂಬಲಿಸುವ ಬದಲು ವಿರೋಧಿಸಿ ಸೈನ್ಯದ ನಡೆಯನ್ನು ಖಂಡಿಸಿದರು. ಯಾವ ರಾಷ್ಟೀಯ ನಾಯಕರೂ ನೌಕಾ ದಂಗೆಯನ್ನು ಬೆಂಬಲಿಸಲಿಲ್ಲ. ನೌಕ ದಳದ ನಾವಿಕರು ಬ್ರಿಟಿಷರನ್ನು ಎದುರು ಹಾಕಿಕೊಂಡಿದ್ದರು ಸಂಬಳ ಕೊಡುವ ಧಣಿಯ ವಿರುದ್ದವೇ ತಿರುಗಿಬಿದ್ದಿದ್ದರು. 25೦ ವರ್ಷಗಳ ಇತಿಹಾಸದಲ್ಲಿ ಸಾಧಿಸದಿದ್ದ ಶೌರ್ಯವನ್ನು ನಮ್ಮ ಸೈನಿಕರು ಸಾಧಿಸಿದ್ದರು. ಸುಭಾಷರು ಇಂತಹ ಸನ್ನಿವೇಶವನ್ನು ಊಹಿಸಿದ್ದರು ತನ್ನ ಐ. ಎನ್ . ಎ ಭಾರತೀಯರಿಗೆ ಪ್ರೇರಣೆಯಾಗುವುದರಲ್ಲಿ ಅನುಮಾನವೇ ಇಲ್ಲವೆಂದು ಅವರು ನಂಬಿದ್ದರು. ಅವರ ನಂಬಿಕೆ ಸುಳ್ಳಾಗಲಿಲ್ಲ.
ಅಹಿಂಸಾ ಸತ್ಯಾಗ್ರಹಗಳು ನಮಗೆ ಸ್ವಾತಂತ್ರ್ಯ ದೊರಕಿಸಿಕೊಟ್ಟಿತು ಎಂಬುದು ಅಪ್ಪಟ ಸುಳ್ಳು. ಸುಭಾಷ್ ಚಂದ್ರ ಬೋಸ್, ಐ. ಎನ್.ಎ ಮತ್ತು ಭಾರತೀಯ ನೌಕಾ ದಂಗೆ ನಮ್ಮನ್ನು ಬ್ರಿಟಿಷರಿಂದ ಮುಕ್ತಿಗೊಳಿಸಿತು ಎಂಬುದು ನಮ್ಮ ಇತಿಹಾಸದ ಪುಟಗಳು ತಿಳಿಸದ ಕಟು ಸತ್ಯ!. ಸೈನ್ಯದ ಸಹಾಯವಿಲ್ಲದೇ ಇನ್ನು ಭಾರತವನ್ನು ಆಳುವುದು ಅಸಾಧ್ಯ ಎಂಬುದು ಬ್ರಿಟಿಷರಿಗೆ ಮನವರಿಕೆಯಾಗಿತ್ತು.
ಒಮ್ಮೆ ಕಲ್ಕತ್ತಾದ ಹೈ ಕೋರ್ಟ್ ನ್ಯಾಯಾಧೀಶ ಪಿ. ಬಿ ಚಕ್ರಬೋರ್ತಿ ಅವರು ಬ್ರಿಟಿಷ್ ಪ್ರಧಾನಿ ಕ್ಲೆಮೆಟ್ ಅಟ್ಲಿ ಗೆ ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಕುರಿತು ಪ್ರಶ್ನಿಸಿದರು. ನೀವು ಭಾರತಕ್ಕೆ ಸ್ವಾತಂತ್ರ್ಯ ಕೊಡಲು ಗಾಂಧಿಯ ಪ್ರಭಾವ ಎಷ್ಟಿತ್ತು? ಎಂದು ಪ್ರಶ್ನೆ ಕೇಳಿದಾಗ ಕೃತಕ ನಗೆ ಬೀರಿದ ಅಟ್ಲಿ ಕನಿಷ್ಠ ಎಂದು ಉತ್ತರಿಸಿದ್ದನು. ಹಾಗಾದರೆ ನೀವು 1947 ರಲ್ಲಿ ಭಾರತವನ್ನು ಬಿಟ್ಟು ಹೋಗಲು ಕಾರಣವೇನು ಎಂದು ಮರು ಪ್ರಶ್ನೆ ಹಾಕಿದಾಗ ಅಟ್ಲಿಯ ಉತ್ತರ ಇದಾಗಿತ್ತು. “ ಭಾರತೀಯ ಸೈನಿಕರಲ್ಲಿ ಬ್ರಿಟಿಷ್ ನಿಷ್ಠೆಯ ಸಂಪೂರ್ಣ ಸವೆತ, ಐ. ಎನ್.ಎನ್.ಎ ಮತ್ತು ಸುಭಾಸ್ ಚಂದ್ರ ಬೋಸ್ ಅವರ ಮಿಲಿಟರಿ ಚಟುವಟಿಕೆಗಳು “
ಈ ಎಲ್ಲ ಸತ್ಯಗಳು ಉತ್ಪಾಲ್ ಸಿಂಗ್ ಬರೆದ ನಾಟಕದಲ್ಲಿತ್ತು. ಸತ್ಯ ಹೊರಬರುತ್ತದೆ ಎಂದು ಹೆದರಿದ ಕಾಂಗ್ರೆಸ್ ಸರಕಾರ ಉತ್ಪಾಲ್ ಸಿಂಗ್ ನನ್ನು ಬಂಧಿಸಿತು. ಈ ಯಾವ ಸತ್ಯಗಳನ್ನು ನಮ್ಮ ಇತಿಹಾಸದ ಪುಟಗಳು ತಿಳಿಸುವುದೇ ಇಲ್ಲ.
Facebook ಕಾಮೆಂಟ್ಸ್