X

ನಿರುಪಯೋಗಿಯ ಹನಿಗವನಗಳು

ದಿನ ಬೆಳಗಾದರೆ ಗೊಣಗುವರು
ಬೆಂಗಳೂರಲ್ಲಿ ಟ್ರಾಫಿಕ್ಕು – ಟ್ರಾಫಿಕ್ಕು
ಹೀಗೆಂದು ಕೊಳ್ಳುವುದ ನಿಲ್ಲಿಸಿಹರೇ
ಹೊಸ ಕಾರು ಬೈಕು?

ನಿರುಪಯೋಗಿ

———————————————————–

ಎಷ್ಟು ಅಂತ ಹಾರ್ನ್ ಹೊಡಿತಿಯೆ
ಒಸಿ ಸುಮ್ಕ್ ಇರ್ಲಾ

ಸಿಗ್ನಲ್ ಬಿಟ್ ಮ್ಯಾಗೂ
ಅಲ್ಲೇ ಇರಕೆ ನಮ್ಗೇನ್ ತೆವಲಾ?

ಪ್ರೈಮ್ ಲೆನ್ಸ್, ಝೂಮ್ ಲೆನ್ಸ್ ಎಂದು
ಮಾರುಕಟ್ಟೆಯಲ್ಲಿ  ಲೆನ್ಸ್’ಗಳು ಸಾವಿರ

ಆದರೆ ನಾ ಬಡವ
ನನಗೆ ಕಣ್ಣೇ ಕ್ಯಾಮರಾ

– ನಿರುಪಯೋಗಿ
——————————————-

ಗುರುತಿಲ್ಲ ಕುರುಹಿಲ್ಲ
ಎಲ್ಲಿಹುದಣ್ಣ ಬಸ್ ನಿಲ್ದಾಣ?

ಗುರುತೇತಕೆ? ನಮ್ಮ ಬೆಂಗಳೂರಿದು
ಕೈ ಚಾಚಿದಲ್ಲೆಲ್ಲಾ ಬಸ್ಸು ನಿಲ್ಲುವುದಣ್ಣ!

-ನಿರುಪಯೋಗಿ

 

  • Naresh Bhat

    nareshpatan.k@gmail.com

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post