X

ಕಾಲಾಯ ತಸ್ಮೈನಮಃ….

ಮೊನ್ನೆ ಮಳೆಯಲ್ಲಿ ವಿಧಿ ಇಲ್ಲದೆ ಒದ್ದೆ ಆಗಬೇಕಾಯಿತು ದರಿದ್ರ ಮಳೆಯನ್ನು ಮನಸಾರೆ ಶಪಿಸಿದೆಕಾಲೇಜಿನ ದಿನಗಳಲ್ಲಿ ಮಳೆಯ ಪ್ರತಿಹನಿಯನ್ನು ಮನಃಪೂರ್ವಕವಾಗಿ ಆಹ್ವಾನಿಸುತ್ತಿದ್ದವಳು ಮಳೆಯನ್ನು ಶಪಿಸುತ್ತಿರುವುದು ಮೊದಲನೆಯ ಬಾರಿ

 ತುಂಬ ಮುಖ್ಯವಾದ ಕೆಲಸಕ್ಕೆ ಶ್ರದ್ಧೆಯಿಂದ ಸಿಂಗರಿಸಿ ಹೊರಟವಳಿಗೆ ಅರ್ಧ ದಾರಿಯಲ್ಲಿ ಮಳೆ ಬಂದಾಗ ಆಶಾ ಭಂಗವಾಯಿತುಮಳೆಯಿಂದ ನನ್ನ್ನ ಕೆಲಸ ಕೆಟ್ಟಿತು ಅನ್ನೋ ದುಗುಡ ಬೇರೆ ಆಯಿತುಮಳೆಗಾಲದಲ್ಲಿ ಛತ್ರಿ ಇಲ್ಲದೆ ಮನೆಯಿಂದ ಹೊರಟಿದ್ದು ನನ್ನ ತಪ್ಪುಆದರು ಮಳೆಯದೇ ದೋಷ ಹೆಚ್ಚಾಗಿ ಕಂಡಿತು. ಕೆಲಸದ ಮನೆ ಹಾಳಾಯಿತು ಅಂತ ಮನೆಗೆ ವಾಪಾಸ್ಸಾದೆ

ಮನಸಿನ ಅಸಹನೆ ಶಾಂತ ಗೊಳಿಸಲು ಕಾಫಿಯ ಮೊರೆ ಹೋದೆತೆರೆದ ಕಿಟಕಿಯಿಂದ ತಂಪಾದ ಗಾಳಿಯ ಜೊತೆ ಬಿಸಿ ಬಿಸಿ ಕಾಫಿಸೇವಿಸಿದಾಗ ಅಸಹನೆ, ರೋಷವೆಲ್ಲ ತನಗರಿವಿಲ್ಲದೆ ಮಾಯವಾಯಿತು

ಕಾಲೇಜಿನ ದಿನಗಳಲ್ಲಿ ಮಳೆ ಯಾವುದೇ ಕ್ಷಣ ಬಂದರೂ ತುಂಬು ಸಂತೋಷದಿಂದ ಆಹ್ವಾನಿಸುತಿದ್ದೆಮಳೆಯಲ್ಲಿ ನೆನೆಯುವುದೇ ಸಂಭ್ರಮಮಳೆಗಾಲ ನಂಗೆ ಬಾಲ್ಯದಿಂದಲೂ ತುಂಬ ಇಷ್ಟವಾಗಿತ್ತುಅಮ್ಮ ಮಾಡಿದ ಬಿಸಿ ಬಿಸಿ ಕಾಫಿಯ ಜೊತೆ ಮಳೆಯನ್ನು ನೋಡುವುದೋ, ಪುಸ್ತಕಓದುವುದೋ…. ಇಲ್ಲ ಅಮ್ಮನ ಕಣ್ಣು ತಪ್ಪಿಸಿ ಮಳೆಯಲ್ಲಿ ನೆನೆಯುದೆಂದರೆ ತುಂಬ ಪ್ರಿಯವಾದ ಕೆಲಸವಾಗಿತ್ತು.. ಬಹುಶಃ ಮಳೆಯಲ್ಲಿನೆನೆಯುವ ಚಾವಳಿ ಬಂದಿದ್ದು ಅಪ್ಪನಿಂದಲೇ ಎನ್ನಬಹುದುಅವರು ಅಷ್ಟೇಮಳೆ ಇಲ್ಲದ್ದಿದ್ದಾಗ ಹೊರ ಹೋಗಲು ಹಿಂದೆ ಮುಂದೆನೋಡುತ್ತಿದ್ದವರು, ಮಳೆಯಲ್ಲಿ ಎಲ್ಲ ಮುಖ್ಯವಾದ ಕೆಲಸಗಳಿಗೆ ಕೈ ಹಾಕುತಿದ್ದರುಇದೆ ನೆಪಮಾಡಿಕೊಂಡು ತೋಟಕ್ಕೆ ಹೊರಡುತ್ತಿದ್ದರು…  ಅಮ್ಮನ ಗೊಣಗಾಟದಿಂದ ದೂರವಿಡಲು ಅವರ ಕಣ್ಣು ತಪ್ಪಿಸಿ  ಮಳೆಯಲ್ಲಿ ಮನಃಪೂರ್ತಿಯಾಗಿ ನೆನೆದು ಸಂಜೆ ಮಳೆ ನಿಂತ ಮೇಲೆಹರ್ಷಚಿತ್ತರಾಗಿ ವಾಪಾಸ್ಸಗುತಿದ್ದರು…. ಸಮಯದಲ್ಲಿ ಮಳೆಯಲ್ಲಿ ನೆನೆದು ತೊಪ್ಪೆಯಾದ ಸೂರ್ಯನೂ ಹೊಂಬಣ್ಣ ಬೀರುತ್ತ ತನ್ನ ಸೌಂದರ್ಯವನ್ನು ಪ್ರದರ್ಶಿಸುತ್ತಕರೆಂಟು ಹೋದಾಗಲಂತೂ ಅಂತ್ಯಾಕ್ಷರಿ ಆಡುತ್ತಿದ್ದ ನೆನಪು ಇನ್ನೂ ಅಚ್ಚಳಿಯದೆ ಉಳಿದುಕೊಂಡಿದೆಅಪ್ಪನೂ ನಮ್ಮೊಂದಿಗೆ ಸೇರುತಿದ್ದರು…. ಅಮ್ಮ ಅಡುಗೆ ಮನೆಯಿಂದಲೇ ಸಾಥ್ ಕೊಡುತಿದ್ದರುಮಳೆಯೊಂದಿಗೆ ಅವಿನಾಭಾವ ಸಂಬಂಧಬೆಳೆದು ಬಿಟ್ಟಿತ್ತು ಆಗ

 ಇದೆಲ್ಲ ಕಳೆದು ಬರೀ ಆರು ಮಳೆಗಾಲ ಕಳೆದರೂ  ಯಾಕೋ ಮೊನ್ನೆ ಅರಿವಿಲ್ಲದೆ ಮಳೆಯ ಮೇಲೆ ಕೋಪ ಬಂದುಬಿಟ್ಟಿತ್ತು.. ಬಹುಶಃ ಕಲಾಯತಸ್ಮೈನಮಃ ಅನ್ನೋದು ಇದ್ದಕ್ಕೆನೇಆಗಿನ ಚಿಕ್ಕ ಚಿಕ್ಕ ವಿಷಯಗಳು, ಅವು ತರುತಿದ್ದ ಸಂತೋಷ ಇವತು ಪ್ರಾಮುಖ್ಯತೆ ಕಳೆದು ಕೊಂದುಬಿಟ್ಟಿದೆ

ಬಿದ್ದು ಬಿದ್ದು ನಗುತಿದ್ದ ನಗೆ ಚಟಾಕೆಗಳು ಇವತ್ತು  PJ ಅಂತ ಅನ್ಸುತ್ತೆಹಿಂದೆ ಅಜ್ಜಿ ಮನೆಗೆ ಹೋಗಲು ಕಾತರಿಸುತಿದ್ದ ನಮಗೆ ಇವತ್ತು ಅದೇಮನೆ ಅದೇ ಜನ old fashioned ಆಗಿದ್ದಾರೆ

ಹಳೆ ಗೆಳೆಯರು ಇವತ್ತು Facebook ನಲ್ಲಿ ಮಾತ್ರ ಫ್ರೆಂಡ್ಸ್ ಆಗಿದ್ದಾರೆಮನುಷ್ಯ ಬೆಳೆದಂತೆಲ್ಲ ಕೆಲವು ನೆನಪುಗಳನ್ನು ಡಿಲೀಟ್ಮಾಡುತ್ತಾನೆಬಹುಶಃ ಸಂಬಂಧಗಳನ್ನು ಕೂಡ..

  • Preethi Bhat

    bhatpree@gmail.com

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post