X

ಏನು ಹೇಳಲಿ ಒಲವೇ ಕರೆ ಮತ್ತು ನೀನು ತಡ ಮಾಡದೆ: ಕವನಗಳು

ಏನು ಹೇಳಲಿ ಒಲವೇ

ಏನು ಹೇಳಲಿ ಒಲವೇ

ನಿನ್ನ ಕುರಿತು

ಹಾಡುತಿರಲು ನೀನು

ನನ್ನೆದೆಯಲಿ ಕುಳಿತು..

 

ನಿನ್ನ ಕಣ್ಣಸನ್ನೆಗೆ ಸೊನ್ನೆಯಾಗಿರುವೆನು

ಮುಂಗುರಳ ಸರಿಸುವ ಬೆರಳಾಗುವೆನು

ತರಲೇ ಹೊಸಗನಸೊಂದನು

ಮುಡಿಸಲೇ ನೆನಪಿನ ಹೂವಂದನು

ನೀನೆಂದರೆ ನಾನು

ನಾನೆಂದರೆ ನೀನು

ನಾವೆಂದರೆ ಪ್ರೀತಿಯಲ್ಲವೇನು

ಪ್ರೀತಿಯಲ್ಲೇ ನಾವಿಲ್ಲವೇನು..

 

ಏನು ಹೇಳಲಿ ಒಲವೇ..

 

ಏನು ಬೇಕು ಕೇಳು

ಎಲ್ಲ ಕೊಡುವೆನು

ಒಮ್ಮೆ ಹೇಳಿನೋಡು

ಜೀವ ಬಿಡುವೆನು

ಕೊನೆ ಉಸಿರಿನಲ್ಲೂ

ನಿನ್ನ ಹೆಸರನ್ನೇ ಜಪಿಸುವೆನು

ನಿನ್ನಿಂದ ದೂರಮಾಡುವ

ದೇವರನ್ನು ಒಮ್ಮೆ ಶಪಿಸುವೇನು

 

ಏನು ಹೇಳಲಿ ಒಲವೇ..

 

ಕರೆ ನೀನು ತಡ ಮಾಡದೆ

 ಕರೆ ನೀನು

ತಡ ಮಾಡದೆ

ನಿನ್ನ ಕನಸಿಗೆ..

ಬರುವೆ ನಾನು

ನಿನಗೂ ಹೇಳದೆ

ನಿನ್ನ ಮನಸಿಗೆ..

 

ಕರೆ ನೀನು ತಡ ಮಾಡದೆ

 

ನಿನ್ನ ಮೌನವನ್ನು ಕದ್ದಾಲಿಸುವೆ

ನಿನ್ನ ಮನದಲ್ಲೇ ಅವಿತು

ನೀ ನಕ್ಕರೆ ನಾನೂ ನಗುವೆ

ನಿನ್ನ ಗಲ್ಲಗುಳಿಯಲ್ಲೇ ಕುಳಿತು

 

ಕರೆ ನೀನು ತಡ ಮಾಡದೆ

 

ಎಷ್ಟು ಬರೆದರೂ ಮುಗಿಯುತಿಲ್ಲ

ಪ್ರೇಮದ ಹಾಡು ನಿರಂತರ

ಮೌನವೇ ಪ್ರೀತಿಯ ಭಾಷೆ

ಬೇಕಿಲ್ಲ ಅದುಕೆ ಭಾಷಾಂತರ

Facebook ಕಾಮೆಂಟ್ಸ್

Vinaykumar Sajjanar: Engineer by profession and Author of two poem collection books named " Enna Todalu Nudigalu " and " Bhaavasharadhi" .
Related Post